ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಯ ಭಯದಿಂದ ಪೊಲೀಸರು ಮನೆಗೆ ಹೋಗುವಾಗ ಸಮವಸ್ತ್ರ ಧರಿಸದಿರಲು ಸೂಚನೆ

ಮೊಹರಂ ಸಮಯದಲ್ಲಿ ನಡೆಯುವ ಹಿಂಸಾಚಾರದ ಹಿನ್ನೆಲೆಯಲ್ಲಿನ ಸೂಚನೆ

ಇಸ್ಲಾಮಾಬಾದ್ – ಕರಾಚಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ತಾರಿಕ ಇಸ್ಲಾಂ ಇವರು ಅಧಿಕಾರಿಗಳಿಗಾಗಿ ಮಾರ್ಗಸೂಚಿಗಳನ್ನು ಪ್ರಸಾರಗೊಳಿಸಿದ್ದಾರೆ. ಸಧ್ಯ ಪೊಲೀಸರ ಮೇಲೆ ನಡೆಯುತ್ತಿರುವ ದಾಳಿಗೆ ಹಿನ್ನೆಲೆಯಲ್ಲಿ ಅವರಿಗೆ ಒಂಟಿಯಾಗಿ ಹೋಗದಿರಲು ಕರೆ ನೀಡಲಾಗಿದೆ. ಮೊಹರಂ ಸಮಯದಲ್ಲಿ ಸರಕಾರಿ ಅಧಿಕಾರಿಗಳು ಗುರಿಯಾಗಬಹುದು, ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಪೊಲೀಸರು ಕೆಲಸ ಮುಗಿಸಿ ಮನೆಗೆ ಹಿಂತಿರುಗುವಾಗ ಸಮವಸ್ತ್ರ ಮತ್ತು ಬೂಟುಗಳನ್ನು ಧರಿಸುವುದನ್ನು ತಪ್ಪಿಸುವ ಆದೇಶ ಕೂಡ ನೀಡಲಾಗಿದೆ. ಮೊಹರಂ ಕಾಲದಲ್ಲಿ ಸುನ್ನಿ ಮತ್ತು ಶಿಯಾ ಸಮುದಾಯದಲ್ಲಿ ಹಿಂಸಾಚಾರ ನಡೆಯುತ್ತದೆ. ಆ ಸಮಯದಲ್ಲಿ ಪೊಲೀಸರ ಮೇಲೆ ಕೂಡ ದಾಳಿಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಮೇಲಿನ ಆದೇಶ ನೀಡಲಾಗಿದೆ.

ಪಾಕಿಸ್ತಾನದಲ್ಲಿ ಸಶಸ್ತ್ರ ಪಡೆಗಳ ನಿಯೋಜನೆ

ಪಾಕಿಸ್ತಾನದಲ್ಲಿ ಸಿಂಧ, ಬಲೂಚಿಸ್ತಾನ್, ಖೈಬರ್-ಪಖ್ಟುನಖ್ವಾ ಮತ್ತು ಇಸ್ಲಾಮಾಬಾದ್ ಇಲ್ಲಿಯ ಅಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಮೇಲೆ ಹಿಡಿತ ಸಾಧಿಸುವುದಕ್ಕಾಗಿ ಸಶಸ್ತ್ರ ಸೈನ್ಯ ನೇಮಿಸಲು ಆಗ್ರಹಿಸಿತ್ತು. ಅದರ ಪ್ರಕಾರ ಸರಕಾರವು ಮೊಹರಂ ತಿಂಗಳಲ್ಲಿ ಸುರಕ್ಷೆ ಸುನೀಶ್ಚಿತ ಗೊಳಿಸುವುದಕ್ಕಾಗಿ ದೇಶಾದ್ಯಂತ ಸಶಸ್ತ್ರ ಪಡೆ ನೇಮಿಸಲು ಒಪ್ಪಿಗೆ ನೀಡಿದೆ.

ಪಾಕಿಸ್ತಾನದಲ್ಲಿ ೫೦೨ ಸ್ಥಳಗಳು ಸೂಕ್ಷ್ಮ ಪ್ರದೇಶ !

ಪಾಕಿಸ್ತಾನದಲ್ಲಿ ವಿವಿಧ ಕ್ಷೇತ್ರದಲ್ಲಿ ಈಗ ಬಿಗಿ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. ಪಂಜಾಬದಲ್ಲಿನ ೫೦೨ ಸ್ಥಳಗಳು ‘ಸೂಕ್ಷ್ಮ ಪ್ರದೇಶ’ವೆಂದು ಘೋಷಿಸಲಾಗಿದೆ. ಈ ಸ್ಥಳಗಳಲ್ಲಿ ಸೈನ್ಯ ನೇಮಕಗೊಳಿಸಲಾಗಿದೆ.

ಮೊಹರಂ ಸಮಯದಲ್ಲಿ ಹಿಂಸಾಚಾರ ಏಕೆ ನಡೆಯುತ್ತದೆ ?

ಮೊಹರಂ ಇದು ಶಿಯಾ ಮುಸಲ್ಮಾನರ ಹಬ್ಬವಾಗಿದೆ. ಇಸ್ಲಾಂನ ಪ್ರತಿಪಾದಕನ ಮೊಮ್ಮಗ ಹೌತಾಮ್ಯಾನ ಸ್ಮರಣೆಗಾಗಿ ಈ ಹಬ್ಬ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಶಿಯಾ ಮುಸಲ್ಮಾನರು ದೊಡ್ಡ ಜಾತ್ರೆಗಳು ಮತ್ತು ಮೆರವಣಿಗೆ ನಡೆಸುತ್ತಾರೆ. ಶಿಯಾ ಮತ್ತು ಸುನ್ನಿ ಮುಸಲ್ಮಾನರು ವೈರಿಗಳಾಗಿದ್ದಾರೆ. ಆದ್ದರಿಂದ ಮೊಹರಂ ಕಾಲದಲ್ಲಿ ಕಟ್ಟರವಾದಿ ಸುನ್ನಿ ಗುಂಪು ಶಿಯಾ ಮಸಲ್ಮಾನರ ಮೆರವಣಿಗೆಗಳನ್ನು ಗುರಿ ಮಾಡುವ ಘಟನೆಗಳು ಘಟಿಸುತ್ತವೆ. ಈ ಕಾಲಾವಧಿಯಲ್ಲಿ ಯಾವಾಗಲೂ ಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟ ಮತ್ತು ಆತ್ಮಹೂತಿ ದಾಳಿಗಳು ನಡೆಯುವ ಭಯ ಇರುತ್ತದೆ.

ಸಂಪಾದಕೀಯ ನಿಲುವು

ಮುಸಲ್ಮಾನರು ಎಲ್ಲಿ ಬಹು ಸಂಖ್ಯಾತರಿರುತ್ತಾರೆ, ಅಲ್ಲಿ ಹಿಂಸಾಚಾರ ನಡೆದು ಪರಸ್ಪರರನ್ನು ಕೊಲ್ಲುತ್ತಾರೆ, ಇದು ಇತಿಹಾಸ ಇದೆ. ಆದ್ದರಿಂದ ಪಾಕಿಸ್ತಾನದಲ್ಲಿ ಅರಾಜಕತೆ ಸೃಷ್ಟಿಯಾದರೆ ಆಶ್ಚರ್ಯ ಅನಿಸುವುದಿಲ್ಲ !