೧. ಡಾಕ್ಟರರ ಸಾಧನೆಯು ಆರಂಭದಿಂದಲೇ ಜ್ಞಾನಯೋಗ ಮತ್ತು ಕರ್ಮಯೋಗ ಪ್ರಧಾನವಿರುವುದು
‘ಆಧುನಿಕ ವೈದ್ಯನಾದ ನಂತರ ನಾನು ೩೦ ರಿಂದ ೪೦ ನೇ ವಯಸ್ಸಿನವರೆಗೆ ‘ಸಂಮೋಹನ ಚಿಕಿತ್ಸಕನೆಂದು ವೃತ್ತಿ ಜೀವನ ನಡೆಸಿದೆ. ನಂತರ ನನಗೆ ಜಿಜ್ಞಾಸೆಯಿಂದ ಉಂಟಾದ ಪ್ರಶ್ನೆಗಳ ಉತ್ತರಗಳು ಸಂಮೋಹನಶಾಸ್ತ್ರದಲ್ಲಿ ಸಿಗದ ಕಾರಣ ನಾನು ಆಧ್ಯಾತ್ಮಿಕ ಗ್ರಂಥಗಳನ್ನು ಸ್ವಲ್ಪಮಟ್ಟಿಗೆ ಓದಲು ಆರಂಭಿಸಿದೆನು. ನಂತರ ‘ಅಧ್ಯಾತ್ಮದ ಮೂಲಕ ಉತ್ತರಗಳನ್ನು ಪಡೆಯಲು ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ, ಎಂದು ಗಮನಕ್ಕೆ ಬಂದುದರಿಂದ ನಾನು ಸ್ವಲ್ಪಮಟ್ಟಿಗೆ ಸಾಧನೆಯನ್ನು ಮಾಡತೊಡಗಿದೆ. ಆಗ ನನಗೆ ಅನೇಕ ಚಿಕ್ಕಪುಟ್ಟ ಪ್ರಶ್ನೆಗಳಿಗೆ ಉತ್ತರಗಳು ಸಿಗತೊಡಗಿದವು; ಆದುದರಿಂದ ನಾನು ಸಾಧಕರಿಗೆ ‘ಸಾಧನೆಯನ್ನು ಮಾಡಿ, ಎಂದು ಹೇಳತೊಡಗಿದೆ. ‘ಯಾವ ಯೋಗಮಾರ್ಗದಿಂದ ಸಾಧನೆಯನ್ನು ಮಾಡಿದರೆ ನನಗೆ ಪ್ರಶ್ನೆಗಳ ಉತ್ತರಗಳು ಸಿಗಬಹುದು ?, ಎಂದು ನಾನು ವಿಚಾರ ಮಾಡುತ್ತಿದ್ದೆ. ಜ್ಞಾನಯೋಗ ಮತ್ತು ಕರ್ಮಯೋಗಗಳಲ್ಲಿ ನನಗೆ ವಿವಿಧ ಪ್ರಶ್ನೆಗಳಿಗೆ ಬುದ್ಧಿಯ ಸ್ತರದಲ್ಲಿ ಉತ್ತರಗಳು ಸಿಗತೊಡಗಿದಾಗ ನಾನು ಅವುಗಳ ಅಧ್ಯಯನವನ್ನು ಮಾಡತೊಡಗಿದೆ. ಭಕ್ತಿಯೋಗಕ್ಕನುಸಾರ ನನ್ನ ಸಾಧನೆ ಎಂದರೆ ನಾನು ನನ್ನ ಬಳಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ದೇವರ ನಾಮಜಪವನ್ನು ಮಾಡಲು ಹೇಳತೊಡಗಿದೆ, ಇಷ್ಟೇ ಆಗಿತ್ತು; ಆದರೆ ಅಂದಿನಿಂದ ನನಗೂ ‘ಹೆಚ್ಚೆಚ್ಚು ಸಮಯ ಸಾಧನೆಯನ್ನು ಮಾಡಬೇಕು, ಎಂದು ಅನಿಸತೊಡಗಿತು. ಭಕ್ತಿಯೋಗದಲ್ಲಿ ಬಹುಶಃ ಬೌದ್ಧಿಕ (ಬುದ್ಧಿಯ ಸ್ತರದ) ಉತ್ತರಗಳು ಇರದ ಕಾರಣ ನಾನು ಜೀವನದಲ್ಲಿನ ೫೦ ರಿಂದ ೮೦ ವರ್ಷ ವಯಸ್ಸಿನವರೆಗಿನ ೩೦ ವರ್ಷಗಳನ್ನು ಜ್ಞಾನಯೋಗ ಮತ್ತು ಕರ್ಮಯೋಗಗಳ ಅಧ್ಯಯನಕ್ಕಾಗಿಯೇ ಉಪಯೋಗಿಸಿದೆ.
೨. ಭಕ್ತಿಯೋಗದ ಸಾಮಾನ್ಯವಾಗಿ ಆದ ಪರಿಚಯ
೨೦೦೩ ರಲ್ಲಿ ಸನಾತನದ ಸಾಧಕರ ಮೇಲೆ ಕೆಟ್ಟ ಶಕ್ತಿಗಳಿಂದ ಆಕ್ರಮಣಗಳು ಆಗತೊಡಗಿದವು. ಸಾಧಕರನ್ನು ಕೆಟ್ಟ ಶಕ್ತಿಗಳಿಂದ ರಕ್ಷಿಸಲು ನಾನು ವಿವಿಧ ಆಧ್ಯಾತ್ಮಿಕ ಸ್ತರಗಳ ಉಪಾಯಗಳನ್ನು ಶೋಧಿಸತೊಡಗಿದೆನು. ಕೆಟ್ಟ ಶಕ್ತಿಗಳೊಂದಿಗೆ ಹೋರಾಡುವಾಗ ‘ಭಾವ ಈ ಘಟಕವು ತುಂಬಾ ಪರಿಣಾಮಕಾರಿಯಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿತು. ‘ಭಾವವಿದ್ದರೆ, ಕೆಟ್ಟ ಶಕ್ತಿ ಗಳು ಸಾಧಕರಿಗೆ ತೊಂದರೆ ಕೊಡುವುದಿಲ್ಲ, ಎಂದು ಗಮನಕ್ಕೆ ಬಂದಾಗ ‘ಸಾಧಕರಲ್ಲಿ ಭಾವವು ಜಾಗೃತಿಯಾಗಬೇಕು, ಎಂಬ ಉದ್ದೇಶದಿಂದ ನಾನು ಅದಕ್ಕೆ ಸಂಬಂಧಪಟ್ಟ ಗ್ರಂಥಗಳ ಸಂಕಲನ ಮಾಡಿದೆ.
ಮುಂದೆ ಸಮಾಜಕ್ಕೆ ಧರ್ಮಶಾಸ್ತ್ರದ ಮಹತ್ವವನ್ನು ಹೇಳಲು ‘ಧರ್ಮಶಾಸ್ತ್ರ ಹೀಗೇಕೆ ಹೇಳುತ್ತದೆ ?, ಈ ಗ್ರಂಥಮಾಲಿಕೆಯ ಅಂತರ್ಗತ ‘ದೇವರಪೂಜೆಯನ್ನು ಹೇಗೆ ಮಾಡಬೇಕು ? ಆರತಿಯನ್ನು ಹೇಗೆ ಮಾಡಬೇಕು ? ಇತ್ಯಾದಿ ಗ್ರಂಥಗಳನ್ನೂ ಸಂಕಲನ ಮಾಡಿದೆ.
೩. ಜ್ಞಾನಯೋಗ ಮತ್ತು ಕರ್ಮಯೋಗ ಇವುಗಳಿಗನುಸಾರ ಮಾಡಿದ ಸಾಧನೆಯ ನಂತರವೇ ಸಾಧನೆಯಲ್ಲಿ ಬಾಕಿ ಉಳಿದ ಕೊರತೆಯನ್ನು ಭಕ್ತಿಯೋಗವು ತುಂಬಿಸುತ್ತದೆ
ಜ್ಞಾನಯೋಗ ಮತ್ತು ಕರ್ಮಯೋಗ ಇವುಗಳಿಂದಲೂ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಸಿಗದಿದ್ದಾಗ ಮುಂದೆ ನಾನು ‘ನನ್ನ ಬಳಿಗೆ ಇರುವ ಭಕ್ತಿಮಾರ್ಗಕ್ಕೆ ಸಂಬಂಧಿಸಿದ ಪುಸ್ತಕಗಳಲ್ಲಿ ಕೆಲವು ಉತ್ತರಗಳು ಸಿಗಬಹುದೇ ?, ಎಂಬುದರ ಅಧ್ಯಯನವನ್ನು ಆರಂಭಿಸಿದೆನು. ೧೩.೪.೨೦೨೩ ರಂದು ನನ್ನ ಗಮನಕ್ಕೆ ಬಂದುದೇನೆಂದರೆ, ನಾನು ಇಲ್ಲಿಯವರೆಗೆ ಜ್ಞಾನಯೋಗ ಮತ್ತು ಕರ್ಮಯೋಗ ಇವುಗಳ ಅಧ್ಯಯನವನ್ನೇ ಹೆಚ್ಚಾಗಿ ಮಾಡಿದ್ದೆ; ಆದರೆ ನನಗೆ ಭಕ್ತ್ತಿಮಾರ್ಗದ ಬಗ್ಗೆ ಬಹಳ ಕಡಿಮೆ ಮಾಹಿತಿ ಇದೆ; ಆದುದರಿಂದ ನಾನು ‘ಭಕ್ತಿಮಾರ್ಗದಲ್ಲಿ ಏನು ಕಲಿಸುತ್ತಾರೆ ?, ಎಂಬ ಜಿಜ್ಞಾಸೆಯಿಂದ ಅದರ ಅಧ್ಯಯನವನ್ನು ಆರಂಭಿಸಿದೆನು. ಆಗ ನನ್ನ ಗಮನಕ್ಕೆ ಬಂದುದೇನೆಂದರೆ, ಭಕ್ತಿಮಾರ್ಗದ ಗ್ರಂಥಗಳನ್ನು ಓದುವುದರಿಂದ ಜ್ಞಾನಯೋಗದಲ್ಲಿ ಸಿಕ್ಕಿದಂತೆ ಉತ್ತರಗಳು ಸಿಗುವುದಿಲ್ಲ, ಆದರೆ ಮನಸ್ಸಿನ ಸ್ತರದಲ್ಲಿ ಕಲಿಯಬಹುದು. ಎಲ್ಲಕ್ಕಿಂತ ಮಹತ್ವದ್ದೆಂದರೆ ಅದರಿಂದ ಭಾವಜಾಗೃತವಾಗಲು ಸಹಾಯವಾಗುತ್ತದೆ. ಸಾಧನೆಯಲ್ಲಿ ಭಾವಜಾಗೃತಿಗೆ ಮಹತ್ವವಿರುವುದಿಂದ ನಾನು ಭಕ್ತಿಮಾರ್ಗದ ಗ್ರಂಥಗಳನ್ನು ಹೆಚ್ಚೆಚ್ಚು ಅಧ್ಯಯನ ಮಾಡಿದಾಗ ನನಗೆ ಕೆಲವು ಅನುತ್ತರಿತ ಪ್ರಶ್ನೆಗಳಿಗೆ ಉತ್ತರಗಳು ಸಿಗತೊಡಗಿದವು; ಆದರೆ ಜ್ಞಾನದ ಬದಲು ‘ಭಾವಜಾಗೃತವಾಗುವುದು, ಇದನ್ನು ನಾನು ಅನುಭವಿಸತೊಡಗಿದೆನು. ನನಗೆ ‘ಭಾವ ಇದ್ದಲ್ಲಿ ದೇವರು ಇದು ಗೊತ್ತಿದ್ದುದರಿಂದ ಈಗ ಹೆಚ್ಚೆಚ್ಚು ಭಾವಾವಸ್ಥೆಯಲ್ಲಿರಲು ನಾನು ಜ್ಞಾನಯೋಗ ಮತ್ತು ಕರ್ಮಯೋಗ ಈ ವಿಷಯಗಳ ಗ್ರಂಥಗಳನ್ನು ಹೆಚ್ಚು ಓದದೇ ಕೇವಲ ಭಕ್ತಿಯೋಗಾನುಸಾರದ ಗ್ರಂಥಗಳನ್ನೇ ಓದುತ್ತಿದ್ದೇನೆ.
ಈ ರೀತಿ ನನ್ನ ಗುರುಗಳ ಕೃಪೆಯಿಂದ ೧೩.೪.೨೦೨೩ ಈ ದಿನದಂದು, ಅಂದರೆ ನನ್ನ ೮೦ ನೇ ವಯಸ್ಸಿನಲ್ಲಿ ನನ್ನ ಭಕ್ತಿಯೋಗದ ಸಾಧನೆಯು ಆರಂಭವಾಯಿತು. ಇಲ್ಲಿಯವರೆಗೆ ಮುಂದಿನ ಕಾಲದಲ್ಲಿ ಪ್ರಕಾಶಿಸಬೇಕಾದ ಸುಮಾರು ೫೦೦೦ ಗ್ರಂಥಗಳಿಗಾಗಿ ಸಂಗ್ರಹಿಸಿರುವ ಬರವಣಿಗೆಯಲ್ಲಿ ಹೆಚ್ಚಿನವುಗಳನ್ನು ಜ್ಞಾನಯೋಗ ಮತ್ತು ಕರ್ಮಯೋಗ ಇವುಗಳ ಆಧಾರದಲ್ಲಿ ಬರೆಯಲಾಗಿದೆ. ಈಗ ನನ್ನಿಂದ ಬರೆಯಲಾಗುವ ಈ ಮುಂದಿನ ಅನೇಕ ಲೇಖನಗಳು ಮತ್ತು ಗ್ರಂಥಗಳು ಭಕ್ತಿಯೋಗದ ಬಗ್ಗೆಯೂ ಇರಲಿದೆ.
‘ಮಹರ್ಷಿ ವ್ಯಾಸರು ಜ್ಞಾನಯೋಗಕ್ಕನುಸಾರ ಸಾಧನೆಯನ್ನು ಮಾಡುವಾಗ ವೇದ ಮತ್ತು ಪುರಾಣಗಳನ್ನು ರಚಿಸಿದರು. ಎಲ್ಲಕ್ಕಿಂತ ಕೊನೆಗೆ ಯಾವಾಗ ಅವರು ಭಾಗವತ ಪುರಾಣವನ್ನು ಬರೆದರೋ, ಆಗ ಅವರಿಗೆ ನಿಜವಾದ ಸಮಾಧಾನದ ಪ್ರಾಪ್ತಿಯಾಯಿತು. ಇಂತಹ ಅನುಭೂತಿಯ ಅನುಭವವು ನನಗೂ ಈಗ ಅಲ್ಪಸ್ವಲ್ಪ ಬರುತ್ತಿದೆ.
‘ನನ್ನ ಗುರುಗಳು ನನಗೆ ಭಕ್ತಿಯೋಗದ ಮಹತ್ವವನ್ನು ಗಮನಕ್ಕೆ ತಂದುಕೊಟ್ಟು ಈಗ ನನ್ನ ಸಾಧನೆಗೆ ಪೂರ್ಣತ್ವವನ್ನು ಸಾಧ್ಯ ಮಾಡಿಕೊಟ್ಟರು; ಆದುದರಿಂದ ನಾನು ಗುರುಗಳ ಬಗ್ಗೆ ಕೋಟಿಶಃ ಕೃತಜ್ಞನಾಗಿದ್ದೇನೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೩.೬.೨೦೨೩)
*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |