ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವುದು, ಎಂಬ ಒಂದೇ ಉದ್ದೇಶದಿಂದ ಗುರುಪೂರ್ಣಿಮೆ ಮಹೋತ್ಸವವನ್ನು ಆಚರಿಸುವುದಿಲ್ಲ. ಆ ದಿನ ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನ ಇದು ಎಂದಿಗಿಂತಲೂ ಸಾವಿರ ಪಟ್ಟು ಹೆಚ್ಚಿರುತ್ತದೆ. ಮಹೋತ್ಸವದ ಕಾರ್ಯದಲ್ಲಿ ಕೃತಿಶೀಲ ಸಹಭಾಗಿಯಾಗುವವರಿಗೆ ಭಾಗವಹಿಸಿದ ಪ್ರಮಾಣದಲ್ಲಿ ಅದರ ಲಾಭವಾಗುತ್ತದೆ. ಆದಿನ ಕೇವಲ ದರ್ಶನಕ್ಕೆ ಬರುವವರಿಗೆ ಕಡಿಮೆ ಲಾಭವಾಗುತ್ತದೆ. ನಿಜವಾದ ಶಿಷ್ಯನಿಗೆ ಗುರುಗಳ ಕ್ಷಣಕ್ಷಣವೂ ಸ್ಮರಣೆಯಾಗುತ್ತದೆ. ಮೇಲುಮೇಲಿನ ಶಿಷ್ಯನಿಗೆ ಕನಿಷ್ಟಪಕ್ಷ ವರ್ಷದಲ್ಲಿ ಒಮ್ಮೆಯಾದರೂ ಗುರುಗಳ ಸ್ಮರಣೆಯಾಗಬೇಕು, ಇದಕ್ಕಾಗಿಯೂ ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ ! (ಈ ವರ್ಷ ಗುರುಪೂರ್ಣಿಮೆ ಜುಲೈ ೨೧ ರಂದು ಇದೆ)
ಗುರುಪೂಜೆಯನ್ನು ಮಾಡುವುದರ ಮಹತ್ವ
ಗುರುರೇವ ಜಗತ್ಸರ್ವಂ, ಬ್ರಹ್ಮಾವಿಷ್ಣುಶಿವಾತ್ಮಕಮ್ | ಗುರೊಃ ಪರಾತರಂ ನಾಸ್ತಿ, ತಸ್ಮಾತ್ಸಂಪೂಜಯೆದ್ ಗುರುಮ್ ||
ಅರ್ಥ : ಶ್ರೀಗುರು ಅಂದರೆ ಬ್ರಹ್ಮ, ವಿಷ್ಣು ಮತ್ತು ಶಿವ ಸ್ವರೂಪ (ಉತ್ಪತ್ತಿ, ಸ್ಥಿತಿ ಮತ್ತು ಲಯಾತ್ಮಕ) ಸಂಪೂರ್ಣ ಜಗತ್ತು ಆಗಿರುತ್ತಾರೆ. ಗುರುಗಳಿಗಿಂತ ಶ್ರೇಷ್ಠರು ಬೇರೆ ಯಾರೂ ಇಲ್ಲ. ಹಾಗಾಗಿ ಗುರುಗಳ ಪೂಜೆ ಯೋಗ್ಯ ರೀತಿಯಲ್ಲಿ ಮಾಡಬೇಕು.