ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದ ಮಾಧ್ಯಮದಿಂದ ಸಾಧನೆಯನ್ನು ಹೇಗೆ ಮಾಡಬೇಕು ?

‘ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದ ಮಾಧ್ಯಮದಿಂದ ಸಾಧನೆಯನ್ನು ಹೇಗೆ ಮಾಡಬೇಕು ?, ಈ ಬಗ್ಗೆ ಹಿಂದುತ್ವನಿಷ್ಠರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಆಪತ್ಕಾಲದಲ್ಲಿ ಸಾಧನೆ ಮಾಡುವುದು ಬಹಳ ಕಠಿಣವಾಗಿದೆ, ಆದರೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಯತ್ನ ಮಾಡುವವರ ಆಧ್ಯಾತ್ಮಿಕ ಪ್ರಗತಿ (ಉನ್ನತಿ) ಶೀಘ್ರ ಗತಿಯಲ್ಲಿ ಆಗುವುದು !

೧. ಕಲಿಯಗದಲ್ಲಿ ಪೃಥ್ವಿಯ ಮೇಲೆ ಪುನಃ ಜನ್ಮ ಪಡೆಯುವುದಕ್ಕಿಂತ ಸಾಧನೆಯನ್ನು ಮಾಡಿ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುವುದು ಶ್ರೇಷ್ಠ !

‘ಕೇವಲ ಐದು ಸಾವಿರ ವರ್ಷಗಳ ಹಿಂದೆ ಕಲಿಯುಗವು ಆರಂಭವಾಯಿತು. ಕಲಿಯುಗದ ಆರಂಭದಲ್ಲಿಯೇ ಇಂತಹ ಸ್ಥಿತಿ ಇದೆ. ಇದನ್ನೇ ನಮಗೆ ಸಹಿಸಲು ಸಾಧ್ಯವಾಗುತ್ತಿಲ್ಲ, ಇನ್ನು ಬರುವ ಕೆಟ್ಟ ಕಾಲವನ್ನು ನಾವು ಹೇಗೆ ಸಹಿಸುವುದು. ಕಲಿಯುಗದ ಇನ್ನೂ ನಾಲ್ಕೂವರೆ ಲಕ್ಷ ವರ್ಷಗಳು ಬಾಕಿ ಇವೆ. ಇಂತಹ ಕಲಿಯುಗದಲ್ಲಿ ಪೃಥ್ವಿಯ ಮೇಲೆ ಮತ್ತೊಮ್ಮೆ ಮುಂದಿನ ಜನ್ಮವನ್ನು ತೆಗೆದುಕೊಳ್ಳುವುದಕ್ಕಿಂತ ಸಾಧನೆಯನ್ನು ಮಾಡಿ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಿ ಮುಂದೆ ಹೋಗಬೇಕು. ‘ಕಾಲಮಹಾತ್ಮೆ ಹೇಗಿರುತ್ತದೆ, ಎಂಬುದನ್ನು ತಿಳಿದುಕೊಳ್ಳಿ. ರಾತ್ರಿಯ ಎರಡು ಗಂಟೆಯಾಗಿದೆ ಮತ್ತು ಹೊರಗೆ ಬಹಳ ಕತ್ತಲಿದೆ.

ಆದುದರಿಂದ ಒಂದು ವೇಳೆ ಯಾರಿಗಾದರೂ ‘ಯಾವಾಗ ಬೆಳಗಾಗುವುದು ?, ಎಂದು ಒತ್ತಡ ಬಂದರೆ ಕೇವಲ ೪ ಗಂಟೆಗಳ ನಂತರ ೬ ಗಂಟೆಯಾಗಲಿದೆ ಮತ್ತು ಸೂರ್ಯೋದಯ ವಾಗಲಿಕ್ಕಿದೆ ! ಹೀಗಿರುವಾಗ ಏಕೆ ಚಿಂತೆ ಮಾಡಬೇಕು !

೨. ಹಿಂದೂ ರಾಷ್ಟ್ರ-ಸ್ಥಾಪನೆಯಾಗಬೇಕೆಂದು ಪ್ರಯತ್ನ ಮಾಡುವುದೇ ಸಾಧನೆ !

ಕಾಲಮಹಾತ್ಮೆಗನುಸಾರ ಹಿಂದೂ ರಾಷ್ಟ್ರ ಸ್ಥಾಪನೆ ಆಗುವುದೇ ಇದೆ; ಆದರೆ ಅದಕ್ಕಾಗಿ ನಾವು ಏಕೆ ಪ್ರಯತ್ನ ಮಾಡಬೇಕು ? ಏಕೆಂದರೆ ಅದು ನಮ್ಮ ಸಾಧನೆಯಾಗಿದೆ. ತ್ರೇತಾಯುಗದಲ್ಲಿ ಸಾವಿರಾರು ವರ್ಷಗಳ ಕಾಲ ತಪಸ್ಸನ್ನು ಮಾಡಲಾಗುತ್ತಿತ್ತು. ಅದು ಋಷಿಮುನಿಗಳ ಸಾಧನಾಮಾರ್ಗವಾಗಿತ್ತು. ಆ ಕಾಲದಲ್ಲಿ ಆ ರೀತಿ ಸಾಧನೆ ಮಾಡಲು ಪೂರಕ ವಾತಾವರಣವಿತ್ತು. ಹೀಗಿದ್ದರೂ ಅವರಿಗೆ ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಬೇಕಾಗುತ್ತಿತ್ತು. ಕಲಿಯುಗದಲ್ಲಿ ಈಗ ಆಪತ್ಕಾಲವು ಆರಂಭವಾಗಿದೆ. ಆಪತ್ಕಾಲದಲ್ಲಿ ಸಾಧನೆ ಮಾಡುವುದು ಕಠಿಣವಾಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಯಾವ ಸಾಧಕರು ಸಾಧನೆಯನ್ನು ಮಾಡುವರೋ, ಅವರ ಆಧ್ಯಾತ್ಮಿಕ ಪ್ರಗತಿಯು ಶೀಘ್ರಗತಿಯಲ್ಲಾಗುತ್ತದೆ. ಇದುವೇ ಈ ಕಾಲದಲ್ಲಿ ಸಾಧನೆ ಮಾಡುವುದರ ಮಹತ್ವವಾಗಿದೆ.