ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ನೀಡಿದ ಹೇಳಿಕೆ ಇದು ಯೋಗಾಯೋಗವೋ ಅಥವಾ ಷಡ್ಯಂತ್ರವೋ ?

ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ !

ನವ ದೆಹಲಿ – ಇಂದು ಹಿಂದೂಗಳ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ, ಇದೊಂದು ಗಂಭೀರ ವಿಷಯವಾಗಿದೆ. ‘ಹಿಂದೂಗಳು ಹಿಂಸಕರು’, ಎಂದು ನೀವು ಹೇಳಿದ್ದೀರಿ. ಇದು ನಿಮ್ಮ ಮೌಲ್ಯಗಳು? ಇದು ನಿಮ್ಮ ಚರಿತ್ರೆ, ನಿಮ್ಮ ವೈಚಾರಿಕತೆ, ನಿಮ್ಮ ದ್ವೇಷವಾಗಿದೆಯೇ ? ಈ ದೇಶದ ಹಿಂದೂಗಳೊಂದಿಗೆ ಈ ರೀತಿ ವರ್ತನೆ ? ಈ ದೇಶ ಶತಮಾನಗಳಿಂದ ಇದನ್ನು ಮರೆಯಲಾಗದು. ನಿನ್ನೆ ಸದನದಲ್ಲಿ ನಡೆದ ದೃಶ್ಯಗಳನ್ನು ನೋಡಿದ ಹಿಂದೂ ಸಮಾಜವೂ, ಈ ಅವಹೇಳನಕಾರಿ ಹೇಳಿಕೆ ಯೋಗಾಯೋಗವೋ ಅಥವಾ ಷಡ್ಯಂತ್ರವೋ? ಎಂದು ಪ್ರಧಾನಿ ಮೋದಿ ಅವರು ವಿರೋಧಿ ಪಕ್ಷದ ನಾಯಕ ರಾಹುಲ ಗಾಂಧಿ ಇವರಿಗೆ ತರಾಟೆಗೆ ತೆಗೆದುಕೊಳ್ಳುತ್ತಾ ಪ್ರಶ್ನಿಸಿದರು. ಜುಲೈ ೧ರಂದು ಲೋಕಸಭೆಯಲ್ಲಿ ರಾಷ್ಟ್ರಪತಿಯರ ಭಾಷಣದ ಬಗ್ಗೆ ಮಾತನಾಡುವಾಗ ರಾಹುಲ್ ಗಾಂಧಿಯವರು ‘ತಮ್ಮನ್ನು ಹಿಂದೂ ಎಂದು ಕರೆಯುವವರು ೨೪ ಗಂಟೆಗಳ ಕಾಲ ಹಿಂಸಾಚಾರ ನಡೆಸುತ್ತಾರೆ’ ಎಂದು ಹೇಳಿದ್ದರು. ಹಾಗೆಯೇ ಬಿಜೆಪಿ ಸರ್ಕಾರದ ಮೇಲೆ ತೀವ್ರ ಟೀಕೆ ಮಾಡಿದ್ದರು. ಇದಕ್ಕೆ ಜುಲೈ ೨ರಂದು ಪ್ರಧಾನಿ ಮೋದಿ ಅವರು ಲೋಕಸಭೆಯಲ್ಲಿ ಉತ್ತರ ನೀಡಿದರು.

ಈ ದೇಶ ಎಂದಿಗೂ ಕ್ಷಮೆ ಮಾಡಲ್ಲ!

ಪ್ರಧಾನಿ ಮೋದಿ ಅವರು ಮಾತು ಮುಂದುವರಿಸಿ, ಕೆಲ ದಿನಗಳ ಹಿಂದೆ ಹಿಂದೂಗಳಲ್ಲಿನ ಅಧಿಕಾರದ ಪರಂಪರೆ ನಾಶಮಾಡುವ ಪ್ರಯತ್ನ ಮಾಡಲಾಗಿತ್ತು. ಈ ದೇಶ ಅಧಿಕಾರವನ್ನು ಪೂಜಿಸುತ್ತದೆ ಮತ್ತು ನೀವು ಆ ಶಕ್ತಿಯನ್ನು ನಾಶಮಾಡಲು ಯತ್ನಿಸುತ್ತೀರಿ? ಕೆಲ ದಿನಗಳ ಹಿಂದೆ ಈ ಜನರು ‘ಹಿಂದೂ ಭಯೋತ್ಪಾದನೆ’ ಎಂಬ ಪದವನ್ನು ಬಳಸಲು ಯತ್ನಿಸಿದ್ದರು. ಈ ಜನರು ಹಿಂದೂ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದೊಂದಿಗೆ ಹೋಲಿಸಿದ್ದರು. ಈ ದೇಶ ಇವರನ್ನು ಎಂದಿಗೂ ಕ್ಷಮೆ ಮಾಡಲ್ಲ.

ದೇವರ ಪ್ರತಿ ರೂಪ ದರ್ಶನಕ್ಕಾಗಿದೆ, ಪ್ರದರ್ಶನಕ್ಕಾದಿ ಅಲ್ಲ !

ರಾಹುಲ್ ಗಾಂಧಿಯವರು ತಮ್ಮ ಭಾಷಣದ ಸಮಯದಲ್ಲಿ ಭಗವಾನ್ ಶಿವನ ಚಿತ್ರವನ್ನು ತೋರಿಸಿದ್ದರು. ಅದಕ್ಕೆ ಪ್ರಧಾನ ಮಂತ್ರಿ ಮೋದಿ ಮಾತನಾಡಿ, ಭಗವಂತನ ಪ್ರತಿಯೊಂದು ರೂಪ ದರ್ಶನಕ್ಕಾಗಿದ್ದು, ಪ್ರದರ್ಶನಕ್ಕಾಗಿಲ್ಲ. ವೈಯಕ್ತಿಕ ಲಾಭಕ್ಕಾಗಿ ದೇವರ ಚಿತ್ರವನ್ನು ಪ್ರದರ್ಶಿಸಲಾಗಿತ್ತು ಎಂದು ಹೇಳಿದ್ದಾರೆ.

ನಾವು ಓಲೈಕೆಯದ್ದಲ್ಲ, ಸಮಾಧಾನವನ್ನು ಯೋಚಿಸುತ್ತೇವೆ !

ಪ್ರಧಾನಿ ಮೋದಿ ಅವರು ಮಾತು ಮುಂದುವರೆಸಿ, ಈ ದೇಶವು ದೀರ್ಘಕಾಲ ಓಲೈಕೆಯ ರಾಜಕಾರಣವನ್ನು ಕಂಡಿದೆ. ನಾವು ಸಮಾಧಾನದ ಬಗ್ಗೆ ಮಾತನಾಡುವಾಗ ಅದರ ಅರ್ಥ ಲಾಭ ಕೊನೆಯ ವ್ಯಕ್ತಿಯವರೆಗೂ ತಲುಪಬೇಕು ಎಂದು ಇರುತ್ತದೆ. ಇದರಿಂದಲೇ ದೇಶದ ಜನರು ನಮ್ಮನ್ನು ಮೂರನೆಯ ಬಾರಿ ಆಯ್ಕೆ ಮಾಡಿದ್ದಾರೆ.