ಅಶ್ಲೀಲತೆಯನ್ನು ಹರಡಿಸಿ ಸಮಾಜದ ಮೇಲೆ ಆಘಾತ ಮಾಡುವವರ ವಿರುದ್ಧ ಅತ್ಯಾಚಾರದ ಅಪರಾಧವನ್ನು ದಾಖಲಿಸಬೇಕು ! – ಉದಯ ಮಹೂರ್ಕರ್, ಸಂಸ್ಥಾಪಕ, ಸೇವ್ ಕಲ್ಚರ್ ಸೇವ ಭಾರತ ಫೌಂಡೇಶನ್, ದೆಹಲಿ

ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ ನಾಲ್ಕನೇ ದಿನ (ಜೂನ್ 27) – ಬೋಧಪ್ರದ ಸತ್ರ

OTT ಮತ್ತು ಹಿಂದಿ ಚಲನಚಿತ್ರ ನಿರ್ಮಾಣ

ಉದಯ ಮಹೂರ್ಕರ್

ವಿದ್ಯಾಧಿರಾಜ್ ಸಭಾಂಗಣ – ಸಹೋದರ ಸಹೋದರಿಯ ಮೇಲೆ ಅತ್ಯಾಚಾರ ಮಾಡಿದ, ಶಿಕ್ಷಕ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಮಾಡಿದ, ತಂದೆ ಮಗಳ ಮೇಲೆ ಅತ್ಯಾಚಾರ ಮಾಡಿದ, ಇಂತಹ ಘಟನೆಗಳು ಸಮಾಜದಲ್ಲಿ ನಡೆಯುತ್ತಿವೆ. ನಾವು ಕಳೆದ 20 ವರ್ಷಗಳಿಂದ ಸಂಸ್ಕೃತಿಯ ಮೇಲಿನ ಈ ಆಘಾತಗಳ ವಿರುದ್ಧ ಕೆಲಸ ಮಾಡುತ್ತಿದ್ದೇವೆ. 2020 ರಲ್ಲಿ ‘OTT ಪ್ಲಾಟ್‌ಫಾರ್ಮ್‌ಗಳು’ ಆಗಮನದೊಂದಿಗೆ, ವ್ಯಭಿಚಾರದ ಎಲ್ಲಾ ಮಿತಿಗಳನ್ನು ದಾಟಿದೆ. OTT ಪ್ಲಾಟ್‌ಫಾರ್ಮ್ ‘ಆಲ್ಟ್ ಬಾಲಾಜಿ’ ನಲ್ಲಿ, ಒಬ್ಬ ವ್ಯಕ್ತಿ ತನ್ನ ಅಜ್ಜಿ, ಮಲತಾಯಿ, ಸೊಸೆಯೊಂದಿಗೆ ವ್ಯಭಿಚಾರ ಮಾಡುವುದನ್ನು ತೋರಿಸಲಾಗುತ್ತಿದೆ. ಅತ್ತೆ, ಅತ್ತಿಗೆ, ಸೇವಕಿ, ನೆರೆಹೊರೆಯವರೊಂದಿಗೆ ವ್ಯಭಿಚಾರದ ಚಿತ್ರಣಗಳನ್ನು ತೋರಿಸಲಾಗುತ್ತಿದೆ.

ಭಾರತವನ್ನು ಆಕ್ರಮಣ ಮಾಡಿ ದೇಶಕ್ಕೆ ಹೆಚ್ಚು ಹಾನಿಯಾಗಿಲ್ಲವೋ ಅಷ್ಟು ‘OTT ಪ್ಲಾಟ್‌ಫಾರ್ಮ್‌’ಗಳಲ್ಲಿ ವ್ಯಭಿಚಾರದ ವೀಡಿಯೊಗಳ ಮೂಲಕ ಮಾಡಲಾಗಿದೆ. ಶೇ. 80 ರಷ್ಟು ಅತ್ಯಾಚಾರಗಳು ಇಂತಹ ವೀಡಿಯೊಗಳನ್ನು ನೋಡಿದ ನಂತರ ಸಂಭವಿಸುತ್ತವೆ. ಇದು ಸಮಾಜ ಒಡೆಯುವ ಷಡ್ಯಂತ್ರವಾಗಿದೆ. ಇಂತಹ ವ್ಯಭಿಚಾರ ತೋರಿಸುವವರು ಜೈಲಿನಲ್ಲಿರಲೇಬೇಕು. ಇದನ್ನು ತಡೆಯಲು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಅಶ್ಲೀಲತೆಯನ್ನು ಹರಡುವ ಮತ್ತು ಸಮಾಜಕ್ಕೆ ಹಾನಿ ಮಾಡುವವರ ವಿರುದ್ಧ ಅತ್ಯಾಚಾರದ ಅಪರಾಧವನ್ನು ದಾಖಲಿಸಬೇಕು. ಇಂತಹವರಿಗೆ 3 ವರ್ಷಗಳವರೆಗೆ ಜಾಮೀನು ಪಡೆಯಬಾರದು. ಸಂಸ್ಕೃತಿಯ ಮೇಲಿನ ಈ ದಾಳಿಯನ್ನು ದೇಶದ್ರೋಹವೆಂದು ಪರಿಗಣಿಸಲಾಗುವುದು ಮತ್ತು ಅದರ ವಿರುದ್ಧ ಕಠಿಣ ಕಾನೂನು ಇರುವುದು ಅಪೇಕ್ಷಿತವಿದೆ. ನಮ್ಮ ದೂರಿನ ಮೇರೆಗೆ 57 OTT ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಲಾಗಿದೆ. ಈ ವ್ಯಭಿಚಾರವನ್ನು ತಡೆಯಲು ಸರಕಾರ ತೋರಬೇಕಾದ ಅರಿವು ತೋರದಿರುವುದು ಸತ್ಯಸಂಗತಿಯಾಗಿದೆ; ಆದರೆ ಭವಿಷ್ಯದಲ್ಲಿ ಇದನ್ನು ತಡೆಯಲು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಇದು ಕೇವಲ ಸರ್ಕಾರದ ಕೆಲಸವಲ್ಲ, ಈ ಸಾಂಸ್ಕೃತಿಕ ಆಘಾತವನ್ನು ಸಮಾಜವೂ ಅರಿತುಕೊಳ್ಳಬೇಕು ಎಂದು ಸೇವ್ ಕಲ್ಚರ್ ಸೇವ್ ಭಾರತ ಫೌಂಡೆಶನ್‌’ನ ಸಂಸ್ಥಾಪಕ ಶ್ರೀ. ಉದಯ ಮಹೂರ್ಕರ್ ಹೇಳಿದರು. ‘ಒಟಿಟಿ ಪ್ಲಾಟ್‌ಫಾರ್ಮ್‌ಗಳ ಮೂಲಕ ಹರಡುವ ಅಶ್ಲೀಲತೆ ಮತ್ತು ಅದರ ವಿರುದ್ಧ ಆರಂಭಿಸಿದ ಸೇವ್ ಕಲ್ಚರ, ಸೇವ್ ನೇಶನ್ ಮುವಮೆಂಟ್’ ಕುರಿತು ಅವರು ಮಾತನಾಡುತ್ತಿದ್ದರು.

ಭಾರತವನ್ನು ‘ವಿಕೃತ ವಿಷಯ ಮುಕ್ತ’ ಮಾಡಲು ಪ್ರತಿಜ್ಞೆ ಮಾಡಬೇಕು !

ಶ್ರೀ. ಮಹೂರ್ಕರ್ ಮಾತು ಮುಂದುವರೆಸುತ್ತಾ, ‘ನೆಟ್‌ಫಿಕ್ಸ್’ ಮತ್ತು ‘ಎಕ್ಸ್’ ಮೂಲಕ ‘ಪೊರ್ನೊಗ್ರಾಫಿ’ ವೈಭವಿಕರಣ ಮಾಡಲಾಗುತ್ತಿದೆ. ಈ ಕುರಿತು ಅತ್ಯಂತ ವ್ಯಭಿಚಾರದ ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿದೆ. ‘ಪೊರ್ನೊಗ್ರಾಫಿ’ಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದೇವೆ. ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಕೆಲವು ಇಸ್ಲಾಮಿಕ್ ದೇಶಗಳಲ್ಲಿ ‘ಪೊರ್ನೊಗ್ರಾಫಿ’ಯನ್ನು ನಿಷೇಧಿಸಲಾಗಿದೆ. ಭಾರತವನ್ನು ‘ವಿಕೃತ ವಿಷಯಗಳಿಂದ ಮುಕ್ತ’ಗೊಳಿಸಲು ನಾವು ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯು ವಿಶ್ವದ ಅತ್ಯಂತ ಸಾತ್ವಿಕ ಸಂಘಟನೆಯಾಗಿದ್ದು, ಸಂಸ್ಕೃತಿಯ ರಕ್ಷಣೆಗಾಗಿ ಶ್ರಮಿಸುತ್ತಿದೆ !

ಹಿಂದೂ ಜನಜಾಗೃತಿ ಸಮಿತಿಯು ವಿಶ್ವದ ಅತ್ಯಂತ ಸಾತ್ವಿಕ ಸಂಸ್ಥೆಯಾಗಿದ್ದು, ಸಂಸ್ಕೃತಿಯ ರಕ್ಷಣೆಗಾಗಿ ಶ್ರಮಿಸುತ್ತಿದೆ. ಈ ಸಂಘಟನೆಯಲ್ಲಿ ಕೆಲಸ ಮಾಡುವ ಒಬ್ಬ ವ್ಯಕ್ತಿಯೂ ಅವಕಾಶವಾದಿ ಅಲ್ಲ ಎಂದು ಶ್ರೀ. ಉದಯ ಮಾಹುರರ್ಕರ ಉದ್ಘರಿಸಿದರು.

ಸನಾತನ ಸಂಸ್ಥೆ ಸಂಸ್ಕೃತಿ ರಕ್ಷಣೆಗೆ ಶ್ರಮಿಸುತ್ತಿದೆ !

ಸನಾತನ ಸಂಸ್ಥೆ ಯಾವುದೇ ಭಯೋತ್ಪಾದಕ ಚಟುವಟಿಕೆ ಮಾಡುವ ಸಂಸ್ಥೆಯಲ್ಲ, ಬದಲಾಗಿ ಸಂಸ್ಕೃತಿಯನ್ನು ರಕ್ಷಿಸುವ ಸಂಸ್ಥೆಯಾಗಿದೆ. ನಿಷೇಧ ಮಾಡಬೇಕೆಂದರೆ ದೇವಬಂದ್, ತಬ್ಲೀಘಿ ಜಮಾತ್ ಮೇಲೆ ನಿಷೇಧ ಹೇರಬೇಕು ಎಂದು ಶ್ರೀ. ಉದಯ ಮಹೂರ್ಕರ್ ಹೇಳಿದ್ದಾರೆ.