Vaishvik Hindu Rashtra Mahotsav : ‘ಜಯತು ಜಯತು ಹಿಂದೂರಾಷ್ಟ್ರಂ’ ಘೋಷಣೆಯೊಂದಿಗೆ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಪ್ರಾರಂಭ !

ಸಂತ ಮಹಂತರ ಹಸ್ತಗಳಿಂದ ದೀಪಪ್ರಜ್ವಲನೆ

ರಾಮನಾಥಿ (ಗೋವಾ), ಜೂ.24 (ಸುದ್ದಿ) – ‘ಜಯತು ಜಯತು ಹಿಂದೂರಾಷ್ಟ್ರಂ’ ಉತ್ಸಾಹ ಭರಿತ ಘೋಷಣೆಯಿಂದ ಹಾಗೂ ಸಂತ ಮಹಂತರ ವಂದನೀಯ ಉಪಸ್ಥಿತಿಯಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜೂನ್ 24 ರಂದು ಫೋಂಡಾದ ರಾಮನಾಥಿಯಲ್ಲಿರುವ ಶ್ರೀ ರಾಮನಾಥ ದೇವಸ್ಥಾನದ ವಿದ್ಯಾಧಿರಾಜ ಸಭಾಂಗಣದಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ ಅಂದರೆ ‘ಸಮಸ್ತ ಭಾರತೀಯ ಹಿಂದು ರಾಷ್ಟ್ರ ಅಧಿವೇಶನ’ ಆರಂಭವಾಯಿತು.

ಹೀಗೆ ಜರುಗಿತು ಉದ್ಘಾಟನಾ ಸಮಾರಂಭ !

ಧರ್ಮ ಸಂಸ್ಥಾಪನೆಯ ದೇವತೆ ಶ್ರೀಕೃಷ್ಣನ ಚರಣಗಳಲ್ಲಿ ನಮಸ್ಕರಿಸಿ, ಗಣೇಶನಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಅಧಿವೇಶನ ಪ್ರಾರಂಭವಾಯಿತು. ಇದಾದ ಬಳಿಕ ಮಹಾಮಂಡಲೇಶ್ವರ ನರ್ಮದಾ ಶಂಕರಪುರಿಜಿ ಮಹಾರಾಜ, ಸ್ವಾಮಿ ನಿರ್ಗುಣಾನಂದ ಪುರಿ, ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ಪ್ರಣವಾನಂದ ಸರಸ್ವತಿ, ಶ್ರೀವಾಸದಾಸ ವನಚಾರಿ, ಸಂತ ರಾಮಜ್ಞಾನಿದಾಸ್ ಮಹಾತ್ಯಾಗಿ ಮಹಾರಾಜ್, ರಸ ಆಚಾರ್ಯ ಡಾ. ಧರ್ಮಯಶ, ಪ.ಪೂ. ಸಂತ ಸಂತೋಷ ದೇವಜೀ ಮಹಾರಾಜ್, ಸಂತವೀರ್ ಹ.ಬ.ಪ. ಬಂಡಾತ್ಯಾ ಕರಾಡಕರ್ ಮತ್ತು ಸದ್ಗುರು ಡಾ. ಚಾರುದತ್ತ ಪಿಂಗಳೆಯವರ ಹಸ್ತಗಳಿಂದ ದೀಪಪ್ರಜ್ವಲನೆ ಮಾಡಲಾಯಿತು.

ಇದಾದ ಬಳಿಕ ಸನಾತನ ಸಂಸ್ಥೆಯ ವೇದಪಾಠಶಾಲೆಯ ಪುರೋಹಿತ ಶ್ರೀ. ಸಿದ್ಧೇಶ ಕರಂದಿಕರ್ ಮತ್ತು ಶ್ರೀ. ಅಮರ ಜೋಶಿ ವೇದಗಳನ್ನು ಪಠಿಸಿದರು.