ಪರಾತ್ಪರ ಗುರು ಡಾ. ಆಠವಲೆಯವರಿಗೆ ‘ಸಂಮ್ಮೋಹನ ಉಪಚಾರಗಳಿಂದ ಗುಣಮುಖರಾಗದ ಮನೋರೋಗಿಗಳು ಸಂತರು ಹೇಳಿದ ಸಾಧನೆಯಿಂದ ಗುಣಮುಖರಾಗುತ್ತಾರೆ’ ಎಂಬುದು ಅನುಭವಕ್ಕೆ ಬಂದಿತು. ಅನಂತರ ‘ಕೇವಲ ಸ್ವಭಾವದೋಷ ಮತ್ತು ಅಹಂ ಇವೇ ಎಲ್ಲ ಮನೋರೋಗಗಳಿಗೆ ಮೂಲ ಕಾರಣವಾಗಿರುವುದಿಲ್ಲ, ‘ಪ್ರಾರಬ್ಧ ಮತ್ತು ಕೆಟ್ಟ ಶಕ್ತಿಗಳ ತೊಂದರೆ’ ಈ ಅಧ್ಯಾತ್ಮದಲ್ಲಿನ ಕಾರಣಗಳೂ ಅತ್ಯಂತ ಮಹತ್ವದ್ದಾಗಿವೆ’ ಎಂಬುದು ಅವರ ಗಮನಕ್ಕೆ ಬಂದಿತು. ಆದ್ದರಿಂದ ೧೯೮೩ ರಿಂದ ೧೯೮೭ ತನಕ ಅಧ್ಯಾತ್ಮದ ಸುಮಾರು ೨೫ ಸಂತರ ಕಡೆಗೆ ಹೋಗಿ ಅಧ್ಯಾತ್ಮದ ಬಗ್ಗೆ ಅಧ್ಯಯನ ಮಾಡಿದರು ಮತ್ತು ಅಧ್ಯಾತ್ಮಶಾಸ್ತ್ರದ ಶ್ರೇಷ್ಠತೆ ತಿಳಿದ ನಂತರ ಸ್ವತಃ ಸಾಧನೆಯನ್ನು ಪ್ರಾರಂಭಿಸಿದರು. ೧೯೮೭ ರಲ್ಲಿ ಅವರಿಗೆ ಇಂದೋರಿನ ಶ್ರೇಷ್ಠ ಸಂತರಾದ ಪ.ಪೂ. ಭಕ್ತರಾಜ ಮಹಾರಾಜರ ರೂಪದಲ್ಲಿ ಗುರುಪ್ರಾಪ್ತಿಯಾಯಿತು.
‘ಸನಾತನ ಭಾರತೀಯ ಸಂಸ್ಕ್ರತಿ ಸಂಸ್ಥೆ’ಯ ಮಾಧ್ಯಮದಿಂದ ಮಾಡಿದ ಕಾರ್ಯ
೧. ಸನಾತನ ಭಾರತೀಯ ಸಂಸ್ಕ್ರತಿ ಸಂಸ್ಥೆಯ ಸ್ಥಾಪನೆ
೧೯೯೧ ರಲ್ಲಿ ನಾಸಿಕ್‌ನಲ್ಲಿ ವಾಸ್ತವ್ಯದಲ್ಲಿರುವಾಗ ಸಂತ ಭಕ್ತರಾಜ ಮಹಾರಾಜರು ಡಾ. ಆಠವಲೆಯವರಿಗೆ, ”ಅಧ್ಯಾತ್ಮದ ಶಿಕ್ಷಣ ಮತ್ತು ಪ್ರಸಾರದ ಕಾರ್ಯವನ್ನು ‘ಸನಾತನ ಭಾರತೀಯ ಸಂಸ್ಕ್ರತಿ ಸಂಸ್ಥೆ’ಯ ಹೆಸರಿನಲ್ಲಿ ಮಾಡಿ’ ಎಂದು ಹೇಳಿದರು. ಅದಕ್ಕನುಸಾರ ಪರಾತ್ಪರ ಗುರು ಡಾಕ್ಟರರು ೧.೮.೧೯೯೧ ರಂದು ಸನಾತನ ಭಾರತೀಯ ಸಂಸ್ಕ್ರತಿ ಸಂಸ್ಥೆಯ ಸ್ಥಾಪನೆ ಮಾಡಿದರು.
೨. ಪರಾತ್ಪರ ಗುರು ಡಾ. ಆಠವಲೆಯವರ ಮುಂಬೈಯ ಚಿಕಿತ್ಸಾಲಯವು ‘ಸನಾತನ ಭಾರತೀಯ ಸಂಸ್ಕ್ರತಿ ಸಂಸ್ಥೆ’ಯ ಮೊದಲ ಆಶ್ರಮ ಮತ್ತು ಅಧ್ಯಾತ್ಮಪ್ರಸಾರದ ಮುಖ್ಯ ಕೇಂದ್ರವಾಯಿತು
‘ಅಧ್ಯಾತ್ಮದಲ್ಲಿ ಪ್ರಗತಿ ಮಾಡಿಕೊಳ್ಳಲು ತನು-ಮನ-ಧನದ ತ್ಯಾಗ ಮಾಡುವುದು ಆವಶ್ಯಕವಾಗಿದೆ’ ಎಂಬ ತತ್ತ್ವ ಗಮನಕ್ಕೆ ಬಂದ ನಂತರ ೧೯೯೩ ರಲ್ಲಿ ನಾನು ಶೀವ (ಮುಂಬೈ) ದಲ್ಲಿನ ನನ್ನ ಚಿಕಿತ್ಸಾಲಯದ ೩ ಕೋಣೆಗಳನ್ನು ನನ್ನ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರಿಗೆ ಅರ್ಪಿಸಿದೆ. ಆಗಿನಿಂದ ಸನಾತನದ ಕಾರ್ಯಕ್ಕಾಗಿ ಪೂರ್ಣವೇಳೆ ಸಮಯ ಕೊಡುವ ಸಾಧಕರು ಅಲ್ಲಿ ವಾಸಿಸತೊಡಗಿದರು.’ – (ಪರಾತ್ಪರ ಗುರು) ಡಾ. ಆಠವಲೆ (೧೩.೩.೨೦೧೭)
೩. ಸನಾತನ ಭಾರತೀಯ ಸಂಸ್ಕ್ರತಿ ಸಂಸ್ಥೆಯ ಮಾಧ್ಯಮದಿಂದ ಮಾಡಿದ ಕಾರ್ಯ
ಸನಾತನ ಭಾರತೀಯ ಸಂಸ್ಕ್ರತಿ ಸಂಸ್ಥೆಯ ಮಾಧ್ಯಮದಿಂದ ಪರಾತ್ಪರ ಗುರು ಡಾ. ಆಠವಲೆಯವರು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಅಧ್ಯಾತ್ಮದ ಅಧ್ಯಯನ ವರ್ಗಗಳನ್ನು ಆಯೋಜಿಸುವುದು, ಪ.ಪೂ. ಭಕ್ತರಾಜ ಮಹಾರಾಜರ ಗುರುಪೂರ್ಣಿಮಾ ಮಹೋತ್ಸವಗಳನ್ನು ಆಯೋಜಿಸುವುದು, ಅಧ್ಯಾತ್ಮದ ಶಿಕ್ಷಣವನ್ನು ನೀಡುವ ಗ್ರಂಥಗಳ ಸಂಕಲನ ಮಾಡುವುದು, ಹಾಗೆಯೇ ಜಿಜ್ಞಾಸು ಮತ್ತು ಸಾಧಕರ ಸಂದೇಹಗಳನ್ನು ನಿವಾರಿಸಿ ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಅವರಿಗೆ ಸಹಾಯ ಮಾಡುವುದು ಮುಂತಾದ ಕಾರ್ಯಗಳನ್ನು ಮಾಡಿದರು. ೧೯೯೬ ರಿಂದ ೧೯೯೮ ರ ವರೆಗೆ ಪರಾತ್ಪರ ಗುರು ಡಾ. ಆಠವಲೆಯವರು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಸಾಧನೆಯ ಬಗ್ಗೆ ನೂರಾರು ಬಹಿರಂಗ ಸಭೆಗಳನ್ನು ತೆಗೆದುಕೊಂಡರು. ಈ ಸಭೆಗಳಿಂದ ಸಾವಿರಾರು ಜಿಜ್ಞಾಸುಗಳು ಮತ್ತು ನೂರಾರು ಸಾಧಕರು ಸಂಸ್ಥೆಯೊಂದಿಗೆ ಜೋಡಿಸಲ್ಪಟ್ಟರು.
ಅಧ್ಯಾತ್ಮಪ್ರಸಾರದ ಕಾರ್ಯ
‘ಪರಾತ್ಪರ ಗುರು ಡಾ. ಆಠವಲೆಯವರು ಅಧ್ಯಾತ್ಮಶಾಸ್ತ್ರದ ಪ್ರಸಾರವನ್ನು ಪ್ರಾರಂಭಿಸಿದರು. ಅವರು ತಮ್ಮಲ್ಲಿಗೆ ಬರುವ ರೋಗಿಗಳಿಗೆ ಅಧ್ಯಾತ್ಮಶಾಸ್ತ್ರದ ಮಹತ್ವವನ್ನು ಹೇಳಿ ಸಾಧನೆ ಹೇಳತೊಡಗಿದರು ಮತ್ತು ಡಾಕ್ಟರರಿಗೋಸ್ಕರ ಆಯೋಜಿಸುವ ವ್ಯಾಖ್ಯಾನಗಳಲ್ಲೂ ‘ಸಂಮ್ಮೋಹನಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ’ದ ವಿಷಯವನ್ನು ಮಂಡಿಸತೊಡಗಿದರು. ೧೯೯೪ ರಲ್ಲಿ ಅವರು ಪೂರ್ಣಾವಧಿ ಅಧ್ಯಾತ್ಮಪ್ರಸಾರದ ಕಾರ್ಯವನ್ನು ಮಾಡಲು ವೈದ್ಯಕೀಯ ವೃತ್ತಿಯನ್ನು ನಿಲ್ಲಿಸಿದರು.
ಪರಾತ್ಪರ ಗುರು ಡಾ. ಆಠವಲೆಯವರು ‘ಸನಾತನ ಸಂಸ್ಥೆ’ಯ ಮಾಧ್ಯಮದಿಂದ ಸ್ವತಃ ಮಾಡಿದ ಕಾರ್ಯ
ಅಧ್ಯಾತ್ಮಪ್ರಸಾರದ ಕಾರ್ಯದ ವ್ಯಾಪ್ತಿ ಹೆಚ್ಚಾದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ೨೩.೩.೧೯೯೯ ರಂದು ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು.
೧. ಸನಾತನ ಸಂಸ್ಥೆಯ ಉದ್ದೇಶ
ಅ. ಭಕ್ತಿಯೋಗ, ಜ್ಞಾನಯೋಗ, ಧ್ಯಾನಯೋಗ ಮುಂತಾದ ವಿವಿಧ ಯೋಗಮಾರ್ಗ ಗಳಲ್ಲಿನ ಸಾಧಕರಿಗೆ ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾರ್ಗದರ್ಶನ ಮಾಡುವುದು
ಆ. ಹಿಂದೂ ಧರ್ಮದಲ್ಲಿನ ಅಧ್ಯಾತ್ಮಶಾಸ್ತ್ರವನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಪ್ರಸಾರ ಮಾಡುವುದು ಮತ್ತು ಸಮಾಜಕ್ಕೆ ಧರ್ಮಶಿಕ್ಷಣ ನೀಡುವುದು
ಇ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಮವಿಚಾರಿ ಸಂಸ್ಥೆಗಳೊಂದಿಗೆ ಹಿಂದೂ ಸಂಘಟನೆ ಮತ್ತು ಸಾಂಪ್ರದಾಯಿಕ ಐಕ್ಯತೆಗೆ ಪ್ರಯತ್ನ ಮಾಡುವುದು ೨. ಸನಾತನ ಸಂಸ್ಥೆಯ ಕಾರ್ಯ
೧. ಸತ್ಸಂಗ : ಜಿಜ್ಞಾಸುಗಳಿಗೆ ಸಾಧನೆಯ ಮಹತ್ವವನ್ನು ಹೇಳುವುದು ಮತ್ತು ‘ವ್ಯಕ್ತಿಗಳಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನಾ ಮಾರ್ಗಗಳು’ ಎಂಬ ಸಿದ್ಧಾಂತಕ್ಕನುಸಾರ ಪ್ರತಿಯೊಬ್ಬರಿಗೂ ಸಾಧನೆ ಯನ್ನು ಕಲಿಸುವುದು, ಇದಕ್ಕಾಗಿ ಅಲ್ಲಲ್ಲಿ ಸಾಪ್ತಾಹಿಕ ಸತ್ಸಂಗಗಳನ್ನು ಆಯೋಜಿಸ ಲಾಗುತ್ತದೆ. ಸಾಧಕರಲ್ಲಿ ಈಶ್ವರನ ಕುರಿತು ಭಾವ ಹೆಚ್ಚಾಗಬೇಕೆಂದು ಭಾವವೃದ್ಧಿ ಸತ್ಸಂಗವನ್ನೂ ಆಯೋಜಿಸಲಾಗುತ್ತದೆ.
೨. ವ್ಯಾಖ್ಯಾನಗಳು : ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ, ವ್ಯಕ್ತಿತ್ವ ವಿಕಸನ, ಒತ್ತಡಮುಕ್ತಿಗಾಗಿ ಅಧ್ಯಾತ್ಮ ಮುಂತಾದ ವಿಷಯಗಳ ಮೇಲೆ ಸನಾತನ ಸಂಸ್ಥೆಯ ಮೂಲಕ ಪ್ರತಿತಿಂಗಳು ಸಾಧಾರಣ ೪೫೦ ಉಚಿತ ವ್ಯಾಖ್ಯಾನಗಳನ್ನು ತೆಗೆದುಕೊಳ್ಳಲಾಗುತ್ತದೆ.
೩. ಗುರುಪೂರ್ಣಿಮಾ ಮಹೋತ್ಸವ : ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ಹೇಳಲು ಸನಾತನ ಸಂಸ್ಥೆಯು ದೇಶದೆಲ್ಲೆಡೆ ಪ್ರತಿವರ್ಷ ಸಾಧಾರಣ ೧೦೦ ಕಡೆಗಳಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ ಗಳನ್ನು ಆಯೋಜಿಸುತ್ತದೆ.
೪. ಕುಂಭಮೇಳ ಮತ್ತು ಜಾತ್ರ್ಯೋತ್ಸವ ಗಳಲ್ಲಿ ಅಧ್ಯಾತ್ಮಪ್ರಸಾರ : ಸನಾತನ ಸಂಸ್ಥೆಯು ಪ್ರಯಾಗ (೨೦೦೧, ೨೦೧೩ ಮತ್ತು ೨೦೧೯), ನಾಸಿಕ್ (೨೦೦೩ ಮತ್ತು ೨೦೧೫), ಉಜ್ಜೈನ್ (೨೦೦೪ ಮತ್ತು ೨೦೧೬) ಮತ್ತು ಹರಿದ್ವಾರ (೨೦೧೦)ಗಳಲ್ಲಿ ನಡೆದ ಕುಂಭಮೇಳಗಳಲ್ಲಿ ಬೃಹತ್ ಪ್ರಮಾಣ ದಲ್ಲಿ ಅಧ್ಯಾತ್ಮಪ್ರಸಾರವನ್ನು ಮಾಡಿತು. ಹಾಗೆಯೇ ಕುಂಭಕ್ಷೇತ್ರಗಳು, ದೇವಸ್ಥಾನ ಗಳು ಮತ್ತು ತೀರ್ಥಗಳ ಪಾವಿತ್ರ್ಯರಕ್ಷಣೆ, ಧರ್ಮಹಾನಿಯನ್ನು ತಡೆಗಟ್ಟುವುದು ಮುಂತಾದ ವಿಷಯಗಳ ಮೇಲೆ ಧರ್ಮಜಾಗೃತಿಯನ್ನೂ ಮಾಡಿತು.
ಅ. ಸನಾತನ ಸಂಸ್ಥೆಯ ಜಾಲತಾಣ sanatan.org : ಶಾಸ್ತ್ರೀಯ ಪರಿಭಾಷೆಯಲ್ಲಿ ಅಧ್ಯಾತ್ಮದ ಪ್ರಸಾರ ಮಾಡುವುದು ಈ ಜಾಲತಾಣದ ಮುಖ್ಯ ಉದ್ದೇಶವಾಗಿವೆ. ವರ್ಷದಲ್ಲಿ ೨೦ ಲಕ್ಷಕ್ಕಿಂತಲೂ ಹೆಚ್ಚು ವಾಚಕರಿರುವ ಈ ಜಾಲತಾಣವು ಕನ್ನಡ, ಮರಾಠಿ, ಹಿಂದಿ, ಗುಜರಾತಿ, ಆಂಗ್ಲ ಮತ್ತು ತಮಿಳು ಭಾಷೆಗಳಲ್ಲಿ ಕಾರ್ಯನಿರತವಾಗಿದೆ.