ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಸಂಶೋಧನೆಯ ಬಗ್ಗೆ ದೇಶ-ವಿದೇಶಗಳಲ್ಲಿನ ತಜ್ಞರ ಕೆಲವು ಅಭಿಪ್ರಾಯಗಳು

‘ಭಾರತೀಯ ವೈದ್ಯಕೀಯ ಸಂಮ್ಮೋಹನ ಮತ್ತು ಸಂಶೋಧನೆ ಸಂಸ್ಥೆ’ಯ ವತಿಯಿಂದ ಪ್ರಕಟಿಸಿದ ನಿಯತಕಾಲಿಕೆಯ ಮೊದಲ ಸಂಚಿಕೆಯನ್ನು ಅಮೇರಿಕಾ, ಕೆನಡಾ, ಬ್ರಿಟನ್‌ ಮತ್ತು ಆಸ್ಟ್ರೇಲಿಯಾ ಈ ದೇಶಗಳ ಪ್ರಮುಖ ಸಂಮ್ಮೋಹನ ಉಪಚಾರತಜ್ಞರಿಗೆ ಉಡುಗೊರೆಯೆಂದು ಕಳುಹಿಸಲಾಗಿತ್ತು. ಆ ಸಂಚಿಕೆಯ ಬಗ್ಗೆ ಜಗತ್ತಿನ ಅನೇಕ ಮಾನಸೋಪಚಾರ ತಜ್ಞರು ಮತ್ತು ಸಂಮ್ಮೋಹನ ಉಪಚಾರ ತಜ್ಞರು ತುಂಬಾ ಪ್ರಶಂಸೆ ಮಾಡಿದರು. ಅವುಗಳ ಪೈಕಿ ಕೆಲವು ಅಭಿಪ್ರಾಯಗಳನ್ನು ಮುಂದೆ ನೀಡಲಾಗಿದೆ.

‘ತಮ್ಮ ನಿಯತಕಾಲಿಕೆ ಅತ್ಯಂತ ಉತ್ಕೃಷ್ಟವಾಗಿದೆ. ತಮ್ಮ ಸಂಚಿಕೆಯಲ್ಲಿ ಸಂಶೋಧನೆಗಳ ಬಗ್ಗೆ ಬಹಳಷ್ಟು ಮಾಹಿತಿ ಇದೆ.’

– ಡಾ. ಜೆ. ಆರ್ಥರ್‌ ಜಾಕ್ಸನ್, ಕಾರ್ಯನಿರ್ವಾಹಕ ಸಂಪಾದಕರು, ಆಸ್ಟ್ರೇಲಿಯನ್‌ ಉಪಚಾರ ಮತ್ತು ಪ್ರಾಯೋಗಿಕ ಸಂಮ್ಮೋಹನ ಶಾಸ್ತ್ರದ ನಿಯತಕಾಲಿಕೆ (ಮ್ಯಾನೇಜಿಂಗ್‌ ಎಡಿಟರ್, ಆಸ್ಟ್ರೇಲಿಯನ್‌ ಜರ್ನಲ್‌ ಆಫ್‌ ಕ್ಲಿನಿಕಲ್‌ ಆಂಡ್‌ ಎಕ್ಸ್ಪೆರಿಮೆಂಟಲ್‌ ಹಿಪ್ನೋಸಿಸ್) (೨೪.೫.೧೯೮೫)

‘ಈ ಪುಸ್ತಕವು ಸದರಿ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತದೆ ಮತ್ತು ಈ ಮಾಹಿತಿಯನ್ನು ಕೃತಿಯಲ್ಲಿ ತರುವುದು ಸುಲಭವಾಗಿದೆ. ಸದರಿ ವಿಷಯದ ಪ್ರಶ್ನೆಗಳು ಮತ್ತು ಕಾರ್ಯವಿಧಾನದ ಬಗ್ಗೆ ಲೇಖಕರು ಯೋಗ್ಯ ರೀತಿಯಲ್ಲಿ ವಿಚಾರ ಮಾಡಿದ್ದಾರೆ.’

– ಪ್ರೊ. ಕ್ಯಾಥರೀನ್‌ ವೆಲ್ಡ್ಸ್‌, ಲೈಸನ್ಸ್‌ಡ್‌ (ವ್ಯಾವಹಾರಿಕ ಪರವಾನಗಿಯಿರುವ), ಬೋರ್ಡ್ ದೃಢೀಕೃತ (ಸರಕಾರ ಮಾನ್ಯ ಸಂಸ್ಥೆಯಿಂದ ದೃಢೀಕೃತ) ಮನೋವಿಜ್ಞಾನಿಗಳು, ಕ್ಯಾಲಿಫೋರ್ನಿಯಾ.

‘ತಮ್ಮ ಪ್ರಕಟಣೆಯು ನನಗೆ ತುಂಬಾ ಇಷ್ಟವಾಯಿತು. ಮುಖ್ಯವಾಗಿ ‘ಇಯೋಸಿನೋಫಿಲಿಯಾ’ದ ರೋಗಿಯು ಗುಣವಾಗುವಲ್ಲಿ ತಮಗೆ ದೊರೆತ ಯಶಸ್ಸಿನಿಂದ ನಾನು ಪ್ರಭಾವಿತನಾದೆ. ತಮ್ಮ ಮುಂದಿನ ಪ್ರಕಟಣೆಯ ಪ್ರತಿಯನ್ನು ನನಗೆ ಖಂಡಿತ ಕಳುಹಿಸಿ. ತಮ್ಮ ಸಂಶೋಧನೆಯ ಕಾರ್ಯದ ಬಗ್ಗೆ ನನಗೆ ತಿಳಿಸುತ್ತಿರಬೇಕು ಎಂದು ವಿನಂತಿಸುತ್ತೇನೆ !’

– ಡಾ. ಜೆಫ್ರಿ ಕೆ. ಝೇಗ್, ಸಂಸ್ಥಾಪಕ ಸಂಚಾಲಕರು, ದ ಮಿಲ್ಟನ್‌ ಎಚ್. ಎರಿಕ್ಸನ್‌ ಫೌಂಡೇಶನ್, ಇನ್‌ಕಾರ್ಪೊರೇಟೆಡ್, ಅಮೇರಿಕಾ. (೧೧.೫.೧೯೮೪)

‘ಸಂಮ್ಮೋಹನಶಾಸ್ತ್ರದ ಅನೇಕ ಅನುಭವಗಳನ್ನು ಈ ಪುಸ್ತಕದಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದ್ದು, ಸಂಮ್ಮೋಹನಶಾಸ್ತ್ರವನ್ನು ಪ್ರತ್ಯಕ್ಷ ಉಪಯೋಗಿಸುವವರಿಗೆ ಇದು ಬಹಳ ಉಪಯುಕ್ತವಾಗಿದೆ.’

– ಪ್ರೊ. ಅರ್ನೆಸ್ಟ್ ಹಿಲಗಾರ್ಡ್‌, ಮನಃಶಾಸ್ತ್ರ ಪ್ರಾಧ್ಯಾಪಕ ಎಮರಿಟಸ್, ಸ್ಟ್ಯಾನ್‌ಫೋರ್ಡ್ ವಿದ್ಯಾಪೀಠ, ಅಮೇರಿಕಾ, ಹಾಗೆಯೇ ಅಂತರರಾಷ್ಟ್ರೀಯ ಸಮ್ಮೋಹನಶಾಸ್ತ್ರ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರು.