ಮಹರ್ಷಿಗಳು ವರ್ಣಿಸಿದ, ಅತ್ಯಧಿಕ ಸೂಕ್ಷ್ಮದ ಕಾರ್ಯ ಮಾಡುವ ಶ್ರೀವಿಷ್ಣುವಿನ ಕಲಿಯುಗದ ಧರ್ಮಸಂಸ್ಥಾಪಕ ವಿಭಿನ್ನ ಅವತಾರವೇ ‘ಶ್ರೀ ಜಯಂತಾವತಾರ’ !

ಪ್ರತಿಯೊಂದು ಯುಗ-ಪರಿವರ್ತನೆಯ ಸಮಯದಲ್ಲಿ ವಿವಿಧ ಅವತಾರಗಳ ಮೂಲಕ ಸೂಕ್ಷ್ಮ ಮತ್ತು ಸ್ಥೂಲದಿಂದ ಯುಗ ಪರಿವರ್ತನೆಯ ಪ್ರಕ್ರಿಯೆಯನ್ನು ಈಶ್ವರನು ತರುತ್ತಾನೆ. ಈಗಲೂ ಸೂಕ್ಷ್ಮ ಯುಗ ಪರಿವರ್ತನೆಯ ಕಾಲವು ನಡೆಯುತ್ತಿದೆ. ಈ ಕಾಲದಲ್ಲಿ ಈಶ್ವರ ಕಾರ್ಯವು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಮಾಧ್ಯಮದಿಂದ ನಡೆಯುತ್ತಿದೆ. ಹಾಗಾಗಿ ಮಹರ್ಷಿಗಳು ಅವರನ್ನು ‘ಈಶ್ವರನ ಅವತಾರ’, ‘ಶ್ರೀ ವಿಷ್ಣುವಿನ ಅವತಾರ’, ‘ಶ್ರೀಜಯಂತಾವತಾರ’ ಮುಂತಾದ ವಿಭಿನ್ನ ನಾಮಗಳಿಂದ ನಾಡಿಪಟ್ಟಿಗಳಲ್ಲಿ ಉಲ್ಲೇಖಿಸಿದ್ದಾರೆ. ಅಂತಹ ಅವತಾರದ ಕಾರ್ಯಕ್ಕಾಗಿ ನಾಡಿಪಟ್ಟಿಯಲ್ಲಿ ವಿವರಿಸಲಾದ ಗುಣವೈಶಿಷ್ಟ್ಯಗಳನ್ನು ಸಾರಾಂಶ ರೂಪದಲ್ಲಿ ಕೆಳಗೆ ನೀಡಲಾಗಿದೆ.

ಶ್ರೀ. ವಿನಾಯಕ ಶಾನಭಾಗ

೧. ಯುಗಕ್ಕೆ ಅನುಗುಣವಾಗಿ ಶ್ರೀವಿಷ್ಣುವಿನ ಅವತಾರಗಳು ಮತ್ತು ಅವುಗಳ ಕಾರ್ಯಗಳು !

೧ ಅ. ಸತ್ಯಯುಗ : ಸತ್ಯಯುಗದಲ್ಲಿ ಭಗವಂತನು ಮತ್ಸ್ಯ, ಕೂರ್ಮ, ವರಾಹ ಮತ್ತು ನರಸಿಂಹ ಈ ಪ್ರಮುಖ ೪ ಅವತಾರಗಳನ್ನು ತಾಳಿದನು. ಇವು ಪೃಥ್ವಿಯ ನಿರ್ಮಿತಿ, ಸೃಷ್ಟಿ, ಪಾಲನೆ ಮತ್ತು ಧರ್ಮಾಚರಣೆಗೆ ಸಂಬಂಧಿಸಿವೆ. ಮತ್ಸ್ಯ ರೂಪದಲ್ಲಿ ಸಪ್ತರ್ಷಿಗಳನ್ನು ರಕ್ಷಿಸಿ ಭಗವಂತನು ಪೃಥ್ವಿಯ ಬೀಜವನ್ನು ಉಳಿಸಿದನ. ಭಗವಾನ ವಿಷ್ಣುವು ಪ್ರಳಯಕಾಲದಲ್ಲಿ ಮೀನಿನ ರೂಪದಿಂದ ಆಪದ್ಬಾಂಧವನಾಗಿ ಸಪ್ತರ್ಷಿಗಳನ್ನು ರಕ್ಷಿಸಿದನು.

೧ ಆ. ತ್ರೇತಾಯುಗ : ತ್ರೇತಾಯುಗದಲ್ಲಿ ಭಗವಂತನು ‘ವಾಮನ’ ಮತ್ತು ಪರಶುರಾಮ ಅವತಾರ ತಾಳಿದನು. ಕೊನೆಗೆ ಶ್ರೀ ರಾಮಾವತಾರವನ್ನು ತಾಳಿ ರಾಮರಾಜ್ಯವನ್ನು ಸ್ಥಾಪಿಸಿದನು.

೧. ಇ. ದ್ವಾಪರಯುಗ : ದ್ವಾಪರಯುಗದ ‘ಶ್ರೀಕೃಷ್ಣಾವತಾರ’ವು ಪೂರ್ಣಾವತಾರವಾದ ಕಾರಣ ದೇವರ ಮಹಿಮೆ ಬಹಳ ಹೆಚ್ಚಾಯಿತು. ಆಶ್ಚರ್ಯವೆಂದರೆ ಶ್ರೀಕೃಷ್ಣಾವತಾರವಾದ ತಕ್ಷಣ ಕಲಿಯುಗ ಪ್ರಾರಂಭವಾಯಿತು. ಕಲಿಯ ಪ್ರವಾಹವನ್ನು ದೇವರು ತಡೆಯಲಿಲ್ಲ. ಅದು ಅವನದ್ದೇ ಇಚ್ಛೆಯಾಗಿತ್ತು !

೧. ಈ. ಶ್ರೀವಿಷ್ಣುವಿನ ಅಂಶಾವತಾರ : ೩ ಯುಗಗಳಲ್ಲಿ ಭಗವಂತ ತಾಳುವ ೮ ಪ್ರಮುಖ ಅವತಾರಗಳನ್ನು ಶಾಸ್ತ್ರ ಮತ್ತು ಋಷಿಮುನಿಗಳ ವಾಙ್ಮಯದಲ್ಲಿ ಉಲ್ಲೇಖಿಸಲಾಗಿದೆ. ಈ ಎಂಟು ಪ್ರಮುಖ ಅವತಾರಗಳ ಜೊತೆಗೆ, ದೇವರು ಅನೇಕ ಅವತಾರ ಗಳನ್ನು ತಾಳಿದ್ದಾರೆ. ಆದರೆ ಅವರ ಕಾರ್ಯ ಮತ್ತು ಪ್ರಕಟ ಶಕ್ತಿಯು ಸಿಮೀತವಾಗಿರುವುದರಿಂದ ಅವರನ್ನು ಅಂಶಾವತಾರ ಅಥವಾ ಅಂಶಾಂಶಾವತಾರ ಎಂದು ಕರೆಯಲಾಯಿತು.

೨. ಕಲಿಯುಗದ ‘ಶ್ರೀ ಜಯಂತಾವತಾರ’ !

ಈಗ ಕಲಿಯುಗ ಆರಂಭವಾಗಿ ೫ ಸಾವಿರಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ಕಳೆದ ೨ ಸಹಸ್ರ ವರ್ಷಗಳಲ್ಲಿ ಭಗವಾನ್‌ ‘ಶ್ರೀವಿಷ್ಣುವು’ ಅನೇಕ ಅಂಶಾಂಶಾವತಾರಗಳನ್ನು ತಾಳಿದ್ದಾರೆ. ಕಲಿಯುಗದ ಈ ಹಂತದಲ್ಲಿ ಸಪ್ತರ್ಷಿಗಳ ಸುಮಧುರ ವಾಣಿ ಮತ್ತು ಬರಹದ ಮೂಲಕ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಶ್ರೀವಿಷ್ಣುವಿನ ಅಂಶಾವತಾರ ‘ಶ್ರೀ ಜಯಂತಾವತಾರದ’ ರೂಪದಲ್ಲಿ ನಮ್ಮ ಮುಂದೆ ಬಂದಿದ್ದಾರೆ. ಭಗವಂತನು ಪೃಥ್ವಿಯಲ್ಲಿ ಅವತಾರ ತಾಳಿದಾಗ ‘ಅವರ ಅವತಾರ’ ಎಂದು ಸಮಾಜಕ್ಕೆ ಗೊತ್ತಿರುವುದಿಲ್ಲ. ಇದಕ್ಕೆ ಭಗವಂತನ ಮಾಯೆಯೇ ಕಾರಣವಾಗಿರುತ್ತದೆ ! ಭಗವಂತನ ಮಾಯೆಯು ಎಷ್ಟು ಪ್ರಬಲವಾಗಿದೆಯೆಂದರೆ, ‘ಗುರುವಿನ ರೂಪದಲ್ಲಿರುವ ಅವತಾರವು ಅವತಾರವಲ್ಲ, ಗುರು ಎಂದು’ ಶಿಷ್ಯರಿಗೆ ಅನಿಸುತ್ತಿರುತ್ತದೆ. ಗುರುಗಳಿಗೆ ತಾವು ಸ್ವತಃ ಅವತಾರ ಎಂದು ತಿಳಿದಿದೆ. ಆದರೆ ಆ ಭಗವಂತನ ಆಡಳಿತವೇ ಸಂಪೂರ್ಣ ಸೃಷ್ಟಿಯನ್ನು ಆಳುತ್ತಿರುವಾಗ ಶಿಷ್ಯನು ಏನು ತಾನೇ ಮಾಡಲು ಸಾಧ್ಯ ? ಭಗವಂತನ ಈ ಲೀಲೆ ಅಗಾಧವಾಗಿದೆ.

೨. ಅ. ಶ್ರೀ ಜಯಂತಾವತಾರದ ಕಾರ್ಯದ ವೈಶಿಷ್ಟ್ಯ : ಕಲಿಯುಗದಲ್ಲಿ ಶ್ರೀವಿಷ್ಣುವಿನ ಈ ‘ಶ್ರೀಜಯಂತಾವತಾರವು’ (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ) ವಿಭಿನ್ನವಾಗಿದೆ; ಏಕೆಂದರೆ ಈ ಅವತಾರದಲ್ಲಿ ಅವರ ಹೆಚ್ಚಿನ ಕಾರ್ಯವು ಸೂಕ್ಷ್ಮದ್ದಾಗಿದ್ದು ಇದರ ಕೆಲವು ಮುಖ್ಯ ಅಂಶಗಳನ್ನು ಮುಂದೆ ನೀಡಲಾಗಿದೆ.

೧. ನಿದ್ರಿಸುತ್ತಿರುವ ಹಿಂದೂ ಸಮಾಜವನ್ನು ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಜಾಗೃತಗೊಳಿಸುವುದು. (ಶಬ್ದದಿಂದ ಮಾತ್ರವಲ್ಲ, ಚೈತನ್ಯದಿಂದ ಜಾಗೃತಗೊಳಿಸಿದರೆ ಸಮಾಜವು ಮತ್ತೆ ನಿದ್ರಿಸುವುದಿಲ್ಲ.)

೨. ಪೃಥ್ವಿಯ ವಿವಿಧ ಸ್ಥಳಗಳಲ್ಲಿ ಈಶ್ವರಪ್ರಾಪ್ತಿಗಾಗಿ ತಳಮಳಿಸುತ್ತಿರುವ ಸಾಧಕರು ಆಂತರಿಕ ಪ್ರೇರಣೆಯಿಂದ ಸನಾತನ ಸಂಸ್ಥೆಯ ಮೂಲಕ ಒಂದಾಗುತ್ತಿದ್ದಾರೆ.

೩. ಕಾಲಪ್ರವಾಹದಲ್ಲಿ ಸನಾತನ ಧರ್ಮದ ಹೆಸರಿನಲ್ಲಿ ಹುಟ್ಟಿರುವ ಅಯೋಗ್ಯ ರೂಢಿ-ಪರಂಪರೆಗಳ ನಿರ್ಮೂಲನೆ, ಹಿಂದೂಗಳ ಮನಸ್ಸಿನಲ್ಲಿ ಯೋಗ್ಯ ಸಂಸ್ಕಾರವನ್ನು ಮೂಡಿಸಿ ಅದನ್ನು ಸಂರಕ್ಷಿಸಲು ಹಿಂದೂ ರಾಷ್ಟ್ರದ ಸಂಕಲ್ಪ ಮಾಡುವುದು.

೪. ಧರ್ಮಜ್ಞಾನವನ್ನು ಸರಳ ಪದಗಳಲ್ಲಿ ಜನರಿಗೆ ತಲುಪಿ ಸುವುದು, ಅದಕ್ಕಾಗಿ ನಾವೀನ್ಯಪೂರ್ಣ ಪದ್ಧತಿಯನ್ನು ಅವಿಷ್ಕರಿಸುವುದು. ಸರಳ ಪದಗಳಲ್ಲಿ ಪ್ರಸ್ತುತ ಪಡಿಸಿದ ಧರ್ಮಜ್ಞಾನವನ್ನು ಅಳವಡಿಸಿ ಹಿಂದೂ ಸಮಾಜವು ಅದನ್ನು ಆಚರಿಸುವುದು,

೫. ಸನಾತನ ಧರ್ಮ ಪಾಲಿಸುವ, ಧರ್ಮಜ್ಞಾನದ ಆಚರಣೆಗೆ ದೀಪಸ್ತಂಭವಾಗಿರುವ ಸಾಧಕರು ಸಂತರು, ಗುರುಗಳು ಮತ್ತು ಸದ್ಗುರುಗಳನ್ನು ತಯಾರಿಸಿ ಬೆಳಕಿಗೆ ತರುವುದು ಮತ್ತು ‘ಸನಾತನ ಧರ್ಮಪಾಲನೆಯಿಂದ ಈಶ್ವರಪ್ರಾಪ್ತಿಯಾಗುತ್ತದೆ ಮತ್ತು ಜೀವನವನ್ನು ಆನಂದಮಯಗೊಳಿಸಬಹುದು,’ ಎಂದು ಸಮಾಜಕ್ಕೆ ಭರವಸೆ ನೀಡುವುದು.

೩. ಶ್ರೀವಿಷ್ಣುವಿನ ಶ್ರೀ ಜಯಂತಾವತಾರದ ಚರಣಗಳಲ್ಲಿ ಮಾಡಿದ ಪ್ರಾರ್ಥನೆ !

ಹೇ ಶ್ರೀವಿಷ್ಣು, ಶ್ರೀ ಜಯಂತಾವತಾರದ ಸೂಕ್ಷ್ಮದಲ್ಲಿನ ಕಾರ್ಯವನ್ನು ಪೃಥ್ವಿಯ ಕೆಲವೇ ಸಂತರು ಗುರುಗಳು ಗುರುತಿಸಿದ್ದಾರೆ ಮತ್ತು ಸೂಕ್ಷ್ಮ ಜ್ಞಾನವನ್ನು ಪಡೆದ ಕೆಲವು ಸಾಧಕರು ತಮ್ಮ ಬರಹದ ಮೂಲಕ ತಿಳಿಸಿದ್ದಾರೆ. ಋಷಿಗಳು ಕಾಲಕಾಲಕ್ಕೆ ಜೀವನಾಡಿಪಟ್ಟಿಯ ಮೂಲಕ ಗುರುದೇವರ ಸೂಕ್ಷ್ಮ ಕಾರ್ಯಗಳನ್ನು ಪರಿಚಯಿಸಿಕೊಟ್ಟಿದ್ದಾರೆ. ‘ಜ್ಞಾತ-ಅಜ್ಞಾತ ಮೂಲಗಳಿಂದ ಇಲ್ಲಿಯವರೆಗೆ ತಿಳಿದ ಗುರುದೇವರ ಪರಿಚಯವು ಅಪೂರ್ಣವೇ ಇದೆ ಎನ್ನಬಹುದು. ಇನ್ನು ಮುಂದೆ, ಧರ್ಮಸಂಸ್ಥಾಪನೆಯ ತಮ್ಮ ಸೂಕ್ಷ್ಮಕಾರ್ಯವು ನಮ್ಮೆಲ್ಲರಿಗೂ ಅನೇಕ ಮೂಲಗಳಿಂದ ವ್ಯಾಪಕವಾಗಿ ತಿಳಿಯಲಿ ಮತ್ತು ಸಾಧಕರಾದ ನಾವೆಲ್ಲರೂ ಅದರ ಆನಂದವನ್ನು ಪಡೆದು ಹೆಚ್ಚು ಉತ್ಸಾಹದಿಂದ ಸಾಧನೆ ಮಾಡಲು ಸಾಧ್ಯವಾಗಲೆಂದು ೨೦೨೪ ರ ಈ ಜನ್ಮೋತ್ಸವದ ಸಂದರ್ಭದಲ್ಲಿ ಶ್ರೀಮನ್ನಾರಾಯಣ ಸ್ವರೂಪ ಗುರುದೇವರ ಚರಣಗಳಲ್ಲಿ ಪ್ರಾರ್ಥನೆ.

– ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೭, ವಯಸ್ಸು ೪೧ ವರ್ಷಗಳು) ಕಾಂಚಿಪುರಂ, ತಮಿಳುನಾಡು (೧೩.೫.೨೦೨೪)