ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ೮೨ ನೇ ಜನ್ಮೋತ್ಸವ
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಶ್ರೀವಿಷ್ಣುವಿನ ಅವತಾರವಾಗಿದ್ದಾರೆ, ಹೀಗೆ ಸನಾತನದ ಸಾಧಕರ ಭಾವವಿದೆ. ಬ್ರಹ್ಮರ್ಷಿಗಳೂ ಜೀವನಾಡಿಪಟ್ಟಿಯಲ್ಲಿ ಅವರು ಶ್ರೀಮನ್ನಾರಾಯಣನ ಅವತಾರವಾಗಿದ್ದಾರೆ ಎಂದಿದ್ದಾರೆ. ತ್ರೇತಾಯುಗದಲ್ಲಿ ಶ್ರೀವಿಷ್ಣುವಿನ ಶ್ರೀರಾಮಾವತಾರ ಮತ್ತು ದ್ವಾಪರಯುಗದಲ್ಲಿ ಕೃಷ್ಣಾವತಾರವಾಯಿತು. ದಶಾವತಾರಗಳ ಪೈಕಿ ಶ್ರೀಕೃಷ್ಣನ ನಂತರ ಈಗ ಕಲ್ಕಿ ಅವತಾರವಾಗುವುದು; ಆದರೆ ಬ್ರಹ್ಮರ್ಷಿಗಳು ನಾಡಿಪಟ್ಟಿವಾಚನದಲ್ಲಿ ಮುಂದಿನಂತೆ ಹೇಳಿದ್ದಾರೆ. – ಪ್ರತಿ ೧ ಸಾವಿರ ವರ್ಷಗಳ ನಂತರ ಭಗವಾನ ಶ್ರೀವಿಷ್ಣುವು ಪೃಥ್ವಿಯಲ್ಲಿ ಅವತರಿಸುತ್ತಾನೆ. ಆಗ ಪೃಥ್ವಿಯ ಜನರಿಗೆ ಅವನ ಬಗ್ಗೆ ತಿಳಿಯುತ್ತದೆ, ಎಂದೇನಿಲ್ಲ. ಕಳೆದ ೧ ಸಾವಿರ ವರ್ಷಗಳ ನಂತರ ಭಗವಂತನು ‘ಗುರುದೇವ ಡಾ. ಆಠವಲೆ’ (ಪರಾತ್ಪರ ಗುರು ಡಾ. ಆಠವಲೆ)ಯವರ ರೂಪದಲ್ಲಿ ಜನಿಸಿದ್ದಾನೆ. (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೪೬ (೧.೬.೨೦೨೨))
ಈ ರೀತಿ ಧರ್ಮಸಂಸ್ಥಾಪನೆಗಾಗಿ ಮಧ್ಯಮಧ್ಯದಲ್ಲಿ ಕೆಲವು ಪ್ರಮಾಣದಲ್ಲಿ ಶ್ರೀಮನ್‌ನಾರಾಯಣನ ತತ್ತ್ವವು ಪೃಥ್ವಿಯಲ್ಲಿ ಅವತರಿಸುವುದು ಮತ್ತು ಅದೇ ಈ ಕಲಿಯುಗಾಂತರ್ಗತ ಐದನೇ ಕಲಿಯುಗದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ರೂಪದಲ್ಲಿ ಅವತರಿಸಿದೆ. ಶ್ರೀವಿಷ್ಣು ಯಾವಾಗಲೂ ‘ಶ್ರೀ’ಸಹಿತ ಇರುತ್ತಾನೆ. ಅವನ ಅವತಾರವೂ ‘ಶ್ರೀ’ಸಹಿತ ಅಂದರೆ ಶ್ರೀರಾಮ ಮತ್ತು ಶ್ರೀಕೃಷ್ಣ ಹೀಗೇ ಇರುತ್ತದೆ. ಆದ್ದರಿಂದ ಎಲ್ಲಿ ಶ್ರೀವಿಷ್ಣು ಇರುತ್ತಾನೆಯೋ, ಅಲ್ಲಿ ಸೇವೆಗೆ ಶ್ರೀಲಕ್ಷ್ಮಿ ಇರಲೇಬೇಕು. ಸದ್ಯ ಶ್ರೀಲಕ್ಷ್ಮಿಯು ಯಾವ ರೂಪದಲ್ಲಿ ಸೇವೆ ಮಾಡುತ್ತಿದ್ದಾಳೆ ? ಅದು ನನ್ನ ಅಲ್ಪಬುದ್ಧಿಗೆ ಹೇಗೆ ಅರಿವಾಯಿತೋ, ಹಾಗೆ ಇಲ್ಲಿ ಕೊಡಲು ಪ್ರಯತ್ನಿಸುತ್ತಿದ್ದೇನೆ.
೪೫ ನೇ ವರ್ಷದಲ್ಲಿ (೧೯೮೭ ರಲ್ಲಿ) ನನಗೆ ಸಂತ ಭಕ್ತರಾಜ ಮಹಾರಾಜ (ಬಾಬಾ) ಇವರ ರೂಪದಲ್ಲಿ ಗುರುಪ್ರಾಪ್ತಿ ಆಯಿತು. ೧೯೯೦ ರಲ್ಲಿ ಪ.ಪೂ. ಬಾಬಾರವರು ‘ದೇಶ-ವಿದೇಶಗಳಲ್ಲಿ ಎಲ್ಲೆಡೆ ಧರ್ಮಪ್ರಚಾರ ಮಾಡಿ’, ಎಂದರು. ಅದಕ್ಕಾಗಿ ಅವರು ಆವಶ್ಯಕ ಜ್ಞಾನದೊಂದಿಗೆ, ಧರ್ಮಪ್ರಚಾರಕ್ಕಾಗಿ ತಮ್ಮ ಕಾರನ್ನು ಮತ್ತು ಡಿಝೆಲ್‌ಗಾಗಿ ಹಣವನ್ನೂ ಕೊಟ್ಟರು. ಆಗ ಅವರು, ”ಡಾಕ್ಟರ್, ನೀವು ಕಾಲು ಚಾಚಿರಿ. ನಾವು ನಿಮ್ಮ ಹಾಸಿಗೆಯನ್ನು ಇನ್ನೂ ಹೆಚ್ಚು ಉದ್ದ ಮಾಡುವೆವು’’ ಎಂದÀರು. ಅವರ ಸಂಕಲ್ಪದಿಂದ ‘ನಾವು ಸಾಧನೆಯಲ್ಲಿ ದೇವರ ದಿಶೆಯತ್ತ ಒಂದು ಹೆಜ್ಜೆ ಇಟ್ಟರೆ, ದೇವರು ನಮ್ಮ ದಿಶೆಯತ್ತ ೧೦ ಹೆಜ್ಜೆಗಳನ್ನಿಡುತ್ತಾನೆ’, ಎಂಬ ಅನುಭೂತಿಯು ನನಗೆ ಅಧ್ಯಾತ್ಮದ ಎಲ್ಲ ಕ್ಷೇತ್ರಗಳಲ್ಲಿ ಬಂದಿತು.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಆಧಾರ : ಸನಾತನದ ಗ್ರಂಥ ‘ಪರಾತ್ಪರ ಗುರು ಡಾಕ್ಟರರ ಅದ್ವೀತಿಯ ಕಾರ್ಯ : ಖಂಡ ೧’)
೧. ಗುರುದೇವರ ವ್ಯಾಪಕ ಸ್ವರೂಪ ದಲ್ಲಿನ ಕಾರ್ಯಕ್ಕಾಗಿ ಬೇಕಾದ ಧನದ ರೂಪದಲ್ಲಿ ಶ್ರೀಲಕ್ಷ್ಮಿ !
ಶ್ರೀಮನ್ನಾರಾಯಣನ ತತ್ತ್ವವು ಪೃಥ್ವಿಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ರೂಪದಲ್ಲಿ ಅಂದರೆ ಮಾನವನ ರೂಪದಲ್ಲಿ ಅವತರಿಸಿದ್ದರೂ, ಶ್ರೀಲಕ್ಷ್ಮಿಯು ಮಾನವ ರೂಪದಲ್ಲಿರದೇ ಅವಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಧರ್ಮದ ಪುನರುತ್ಥಾನದ ಕಾರ್ಯಕ್ಕೆ ಆರ್ಥಿಕ ಸಹಾಯವನ್ನು ಮಾಡುತ್ತ ಅವರ ಚರಣಗಳಲ್ಲಿ ವಾಸಿಸಿದ್ದಾಳೆ. ಪ.ಪೂ. ಡಾ. ಆಠವಲೆಯವರು ಸಾಧನೆ ಮಾಡಲು ಆರಂಭಿಸಿದರು ಮತ್ತು ಅವರು ತಮ್ಮ ಸರ್ವಸ್ವವನ್ನು ಗುರುಚರಣಗಳಿಗೆ (ಪ.ಪೂ. ಭಕ್ತರಾಜ ಮಹಾರಾಜರ ಚರಣಗಳಿಗೆ) ಅರ್ಪಿಸಿದರು. ಇದರಲ್ಲಿ ಧನವೂ ಇತ್ತು. ಅವರು ಗುರುಗಳ ಆಶೀರ್ವಾದದಿಂದ ೧೯೯೦ ರಲ್ಲಿ ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯನ್ನು ಸ್ಥಾಪಿಸಿದರು ಮತ್ತು ಮುಂಬೈಯಲ್ಲಿ ಅವರ ಮನೆಯಲ್ಲಿ ಕಾರ್ಯ ವನ್ನು ಪ್ರಾರಂಭಿಸಿದರು. ವ್ಯಾವಹಾರಿಕ ದೃಷ್ಟಿಯಲ್ಲಿ ಯಾವುದಾದರೊಂದು ಕಾರ್ಯವನ್ನು ನಡೆಸುವುದಾದರೆ, ಅದಕ್ಕಾಗಿ ದೊಡ್ಡ ಹಣಕಾಸಿನ ಬಂಡವಾಳ ಬೇಕಾಗುತ್ತದೆ.
ಸ್ವತಃ ತಟಸ್ಥರಾಗಿದ್ದು (ತಾವು ಏನು ಮಾಡಿಲ್ಲ ಎಂಬಂತೆ) ಮತ್ತು ವಿರಕ್ತವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕಾರ್ಯ, ಅದಕ್ಕಾಗಿ ಆಗುವ ಆಯ ಮತ್ತು ವೆಚ್ಚ ಇವುಗಳಲ್ಲಿ ಸ್ವತಃ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಎಲ್ಲಿಯೂ ಸಿಲುಕಿಲ್ಲ. ಅವರು ಸ್ವತಃ ೧೦-೧೦ ಚದರಡಿ ಕೋಣೆಯಲ್ಲಿರುತ್ತಾರೆ. ಕೋಣೆಯಲ್ಲಿ ಹವಾನಿಯಂತ್ರಣ ಯಂತ್ರವನ್ನು (ಎ.ಸಿ) ಅಳವಡಿಸುವ ಬಗ್ಗೆ ಹೇಳುವಾಗ ‘ಎಲ್ಲ ಸಾಧಕರಿಗೆ ಹವಾನಿಯಂತ್ರಣಯಂತ್ರಗಳಿಲ್ಲ, ನನಗೆ ಏಕೆ ?’, ಎಂದು ಕೇಳುತ್ತಾರೆ. ಬರವಣಿಗೆಗಾಗಿ ಒಂದು ಬದಿಗೆ ಬರೆದಿರುವ ಕಾಗದ, ಔಷಧಗಳ ಪಾಕೀಟಿನ ಖಾಲಿ ಜಾಗವನ್ನು ಬಳಸುತ್ತಾರೆ. ಪ್ರತಿಯೊಂದು ವಸ್ತುವನ್ನು ಜೋಪಾನವಾಗಿಟ್ಟು ಮತ್ತು ಸವೆಯುವ ವರೆಗೂ ಬಳಸುತ್ತಾರೆ. ಅವರು ಸಾಧಕರಿಗೂ ಇದೇ ರೀತಿ ಕಲಿಸಿದ್ದಾರೆ. ಇಂತಹ ವಿರಕ್ತ ಜೀವನವನ್ನು ನಡೆಸುವವರ ಧರ್ಮಸಂಸ್ಥಾಪನೆಯ ಕಾರ್ಯಕ್ಕಾಗಿ ಶ್ರೀಮಹಾಲಕ್ಷ್ಮಿಯು ಪ್ರಸನ್ನಳಾಗದೇ ಇರುತ್ತಾಳೆಯೇ !
– ಶ್ರೀ. ವೀರೇಂದ್ರ ಮರಾಠೆ (೧೭.೪.೨೦೨೪)