ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಅಂದರೆ ಜಗತ್ತಿನ ಕಲ್ಯಾಣಕ್ಕಾಗಿ ಭೂಮಿಯಲ್ಲಿ ಅವತರಿಸಿದ ಶಾಶ್ವತ ಚೈತನ್ಯದಾಯಕ ಪರಬ್ರಹ್ಮ !

‘ಭೂಮಿಯಲ್ಲಿನ ಅವತಾರಿ ಯುಗಪುರುಷರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವವೆಂದರೆ ಕೇವಲ ಅವರ ಸ್ಥೂಲ ಅವತಾರಿ ದೇಹದ ಜನ್ಮೋತ್ಸವವಲ್ಲ, ಶಾಶ್ವತ ಚೈತನ್ಯದಾಯಕ ಪರಬ್ರಹ್ಮನ ತತ್ತ್ವವು ಜಗತ್ತಿನ ಕಲ್ಯಾಣಕ್ಕಾಗಿ ಈ ಭೂಮಿಯಲ್ಲಿ ಅವತರಿಸಿದ ಆ ದಿವ್ಯ ದಿನವಾಗಿದೆ ! ಶ್ರೀಗುರುಗಳ ಜನ್ಮೋತ್ಸವವೆಂದರೆ ಎಲ್ಲ ಸಾಧಕರ ಜೀವನದಲ್ಲಿನ ಸುಮಂಗಲದಿನವಾಗಿದೆ ! ಗುರುಗಳ ೮೨ ನೇ ಜನ್ಮೋತ್ಸವವನ್ನು ಆಚರಿಸುವ ಅವಕಾಶವು ನಮ್ಮೆಲ್ಲ ಭಾಗ್ಯವಂತ ಸಾಧಕ-ಜೀವಗಳಿಗೆ ಪ್ರಾಪ್ತವಾಗಿದೆ. ನಿಜ ಹೇಳುವುದಾದರೆ ಗುರುದೇವರು ವಿಶ್ವಗುರುಗಳಾಗಿರುವುದರಿಂದ ಸಾಧಕರಷ್ಟೇ ಅಲ್ಲ, ಚರಾಚರ ಸೃಷ್ಟಿಯೇ ಶ್ರೀ ಗುರುಗಳ ಜನ್ಮೋತ್ಸವದ ಆಚರಣೆ ಮತ್ತು ಅದರ ಆನಂದವನ್ನು ಅನುಭವಿಸುತ್ತಿದೆ ಇಂತಹ ಪರಮ ಕೃಪಾಸಾಗರ ಶ್ರೀ ಗುರುಗಳ ಅನುಪಮೇಯ ಮಹಾತ್ಮೆಯನ್ನು ಅನುಭವಿಸುತ್ತ ಮತ್ತು ಅವರ ಕೃಪಾಸಾಗರದಲ್ಲಿನ ಕೆಲವು ಭಕ್ತಿಮಯ ಹನಿಗಳಿಂದ ಭಕ್ತಿಅರ್ಚನೆ ಮಾಡುತ್ತ ಶ್ರೀ ಗುರುಗಳ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಿದ್ದೇನೆ. ಅದಕ್ಕಾಗಿ ಈ ಲೇಖನರೂಪಿ ಸ್ತುತಿಯನ್ನು ಶ್ರೀ ಗುರುಚರಣಗಳಲ್ಲಿ ಅತ್ಯಂತ ಶರಣಾಗತಿಯಿಂದ ಮತ್ತು ಕೃತಜ್ಞತೆಯಿಂದ ಸಮರ್ಪಿಸುತ್ತಿದ್ದೇನೆ.

ಆದಿಗುರು ಮಹಾದೇವನು ನುಡಿದ ‘ಶ್ರೀ ಗುರುಗೀತೆ’ ಯಲ್ಲಿನ ಒಂದು ಶ್ಲೋಕದಲ್ಲಿ ಹೀಗೆ ಹೇಳಲಾಗಿದೆ,

ಆನನ್ದಮಾನನ್ದಕರಂ ಪ್ರಸನ್ನಂ ಜ್ಞಾನಸ್ವರೂಪಂ ನಿಜಬೋಧಯುಕ್ತಮ್‌ |

ಯೋಗೀನ್ದ್ರಮೀಡ್ಯಂ ಭವರೋಗವೈದ್ಯಂ ಶ್ರೀಮದ್ಗುರುಂ ನಿತ್ಯಮಹಂ ನಮಾಮಿ ||

– ಗುರುಗೀತಾ, ಶ್ಲೋಕ ೯೩

ಅರ್ಥ : ಆನಂದಸ್ವರೂಪ, ಆನಂದದಾತಾ, ಪ್ರಸನ್ನವದನ, ಜ್ಞಾನಸ್ವರೂಪ, ಆತ್ಮಬೋಧಯುಕ್ತ, ಯೋಗೀಶ್ವರ, ಸ್ತುತಿಯೋಗ್ಯ, ಸಂಸಾರರೂಪಿ ರೋಗಕ್ಕೆ ರಾಮಬಾಣ ಔಷಧಿಯನ್ನು ನೀಡುವ ವೈದ್ಯ, ಇಂತಹ ಶ್ರೀ ಗುರುಗಳಿಗೆ ನಾನು ನಿತ್ಯ ನಮಸ್ಕರಿಸುತ್ತೇನೆ. ಇದÀನ್ನು ಓದುವಾಗ ನನಗೆ ಗುರುಸ್ಮರಣೆಯಾಗಿ ‘ಈ ಶ್ಲೋಕದಲ್ಲಿರುವ ಗುರುಗಳ ವರ್ಣನೆಯು ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಅವತಾರಿಕಾರ್ಯ ಮತ್ತು ವೈಶಿಷ್ಟ್ಯಗಳೊಂದಿಗೆ ಹೋಲಿಕೆ ಯಾಗುತ್ತದೆ’, ಎಂದು ನನ್ನ ಗಮನಕ್ಕೆ ಬಂದಿತು.

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

೧. ಆನಂದಸ್ವರೂಪ ಮತ್ತು ಆನಂದದಾತಾ

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸ್ವತಃ ಆನಂದಸ್ವರೂಪವೇ ಆಗಿದ್ದಾರೆ; ಆದರೆ ಅವರು ಎಲ್ಲ ಸೃಷ್ಟಿಗೆ ಆನಂದ ನೀಡುವ ಆನಂದದಾಯಿ ಯಾಗಿದ್ದಾರೆ. ಅವರು ಕೇವಲ ಆನಂದ ಮಾತ್ರವಲ್ಲ, ಪರಮಾನಂದ ಮತ್ತು ಸಚ್ಚಿದಾನಂದವನ್ನು ನೀಡುವರಾಗಿದ್ದಾರೆ; ಆದ್ದರಿಂದಲೇ ಸಪ್ತರ್ಷಿ ಗಳು ಜೀವನಾಡಿಪಟ್ಟಿಯಲ್ಲಿ ಅವರಿಗೆ ‘ಸಚ್ಚಿದಾನಂದ ಪರಬ್ರಹ್ಮ’ ಈ ಉಪಮೆಯನ್ನು ನೀಡಲಾಗಿದೆ ಎಂದು ಹೇಳಿದರು. ‘ಆನಂದಪ್ರಾಪ್ತಿಗಾಗಿ ಸಾಧನೆ’ಯನ್ನು ಕಲಿಸುವ ಗುರುದೇವರು ಈ ಕಲಿಯುಗದಲ್ಲಿನ ಏಕಮೇವಾದ್ವಿತೀಯರಾಗಿದ್ದಾರೆ. ಇಂತಹ ಆನಂದದಾತಾ ಗುರುದೇವರು ಜೀವನದಲ್ಲಿ ಬಂದಿರುವುದರಿಂದ ಸಾಧಕರ ಜೀವನವು ಆನಂದದಿಂದ ತುಂಬಿಕೊಂಡಿದೆ.

೨. ಪ್ರಸನ್ನವದನ

ಪ್ರತಿಯೊಂದು ಸ್ಥಿತಿಯಲ್ಲಿ ಗುರುದೇವರ ಮುಖಮಂಡಲವು ಪ್ರಸನ್ನ ವಾಗಿಯೇ ಇರುತ್ತದೆ. ಯಾವುದೇ ಸಂಕಟ ಬಂದರೂ ಅವರ ಮುಖದ ಮೇಲಿನ ನಗುವು ಎಂದಿಗೂ ಕಡಿಮೆಯಾಗುವುದಿಲ್ಲ. ಅವರ ಆ ಪ್ರಸನ್ನವದನದತ್ತ ನೋಡಿ ಎಷ್ಟೋ ಸಾಧಕರಿಗೆ ಸಮಾಧಾನ ಸಿಗುತ್ತದೆ. ಅಷ್ಟೇ ಅಲ್ಲದೇ, ಯಾವಾಗ ಸಾಧಕರು ಅಡಚಣೆಯಲ್ಲಿ, ಸಂಕಟಗಳಲ್ಲಿ ಅಥವಾ ಕಠಿಣ ಪ್ರಸಂಗಗಳಲ್ಲಿ ಸಿಲುಕಿದಾಗ ಕೇವಲ ಗುರುಗಳ ಪ್ರಸನ್ನವದನದ ಸ್ಮರಣೆ ಮಾಡಿದರೆ ಸಾಕು, ಅವರಿಗೆ ಧೈರ್ಯ ಬರುತ್ತದೆ. ಸಾಧಕರಿಗೆ ಕೆಲವೊಮ್ಮೆ ಗುರುಗಳ ನೆನಪು ಬರದಿದ್ದರೆ, ವಿವಿಧ ಅನುಭೂತಿಗಳ ಮಾಧ್ಯಮದಿಂದ ಗುರುದೇವರು ತಾವಾಗಿಯೇ ಪ್ರಸನ್ನವದನದಿಂದ ಅವರಿಗೆ ಸೂಕ್ಷ್ಮದಿಂದ ದರ್ಶನವನ್ನು ನೀಡಿ ಸಮಾಧಾನ ಮಾಡುತ್ತಾರೆ. ಅವರ ಈ ಪ್ರಸನ್ನಮುಖವೇ ಸಾಧಕರಿಗೆ ಸಾಧನೆಯಲ್ಲಿ ಮುಂದೆ ಹೋಗಲು ಪ್ರೋತ್ಸಾಹ ಮತ್ತು ಸಂಕಟದಲ್ಲಿ ಧೈರ್ಯ ಹಾಗೂ ಆಧ್ಯಾತ್ಮಿಕ ಊರ್ಜೆಯನ್ನು ಪ್ರದಾನಿಸುತ್ತದೆ.

೩. ಜ್ಞಾನಸ್ವರೂಪ

ಪೃಥ್ವಿಯಲ್ಲಿ ಎಲ್ಲಿಯೂ ಲಭ್ಯವಿಲ್ಲದ ಅಧ್ಯಾತ್ಮಶಾಸ್ತ್ರದ ಜ್ಞಾನದ ಗಂಗೋತ್ರಿಯು ಗುರುದೇವರ ಕೃಪೆಯಿಂದಲೇ ಕಾರ್ಯನಿರತವಾಗಿದೆ. ಈ ಜ್ಞಾನಾಮೃತವು ಅಖಿಲ ಮನುಕುಲಕ್ಕಾಗಿ ಲಭ್ಯವಾಗುತ್ತಿದೆ. ಅಧ್ಯಾತ್ಮದಲ್ಲಿನ ಗೂಢ ರಹಸ್ಯ ಅಥವಾ ಅಧ್ಯಾತ್ಮದ ಸಂದರ್ಭದ ಕೆಲವು ಪ್ರಶ್ನೆಗಳ ಉತ್ತರ ಗಳನ್ನು ಗುರುದೇವರು ಆರಂಭದಲ್ಲಿ ಧ್ಯಾನದ ಮೂಲಕ ಸ್ವತಃ ಹುಡುಕಲು ಪ್ರಾರಂಭಿಸಿದರು. ಅನಂತರ ಅವರ ಕೃಪೆಯಿಂದ ಸನಾತನದ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡುವ ಕೆಲವು ಸಾಧಕರಲ್ಲಿ ಗುರುಕೃಪೆಯಿಂದ ಸೂಕ್ಷ್ಮ ಜ್ಞಾನವನ್ನು ಗ್ರಹಿಸುವ ಕ್ಷಮತೆ ಉತ್ಪನ್ನವಾಗಿದೆ. ಈಶ್ವರನಿಂದ ಪ್ರಾಪ್ತವಾಗಿರುವ ಈ ದೈವೀ ಜ್ಞಾನವನ್ನು ಗುರುದೇವರು ಜನಸಾಮಾನ್ಯರಿಗೆ ತಿಳಿಯುವ ಭಾಷೆಯಲ್ಲಿ ನೂರಾರು ಗ್ರಂಥಗಳ ರೂಪದಲ್ಲಿ ಜಗತ್ತಿಗೆ ನೀಡಿದ್ದಾರೆ. ಸನಾತನದ ಗ್ರಂಥಗಳು ರಾಮಾಯಣ, ಭಗವದ್ಗೀತೆ, ಭಾಗವತ ಈ ಗ್ರಂಥಗಳಂತೆಯೇ ಧರ್ಮಗ್ರಂಥಗಳಾಗಿವೆ. ಈ ಗ್ರಂಥಗಳು ಜ್ಞಾನಸ್ವರೂಪರಾಗಿರುವ ಗುರುದೇವರ ಸ್ವರೂಪವಾಗಿವೆ.

೪. ಆತ್ಮಬೋಧಯುಕ್ತ (ಆತ್ಮಸಾಕ್ಷಾತ್ಕಾರವಾಗಿರುವ, ಪರಮಾತ್ಮನನ್ನು ಅರಿತುಕೊಳ್ಳುವವನು)

ಶ್ರೀ ಗುರುಗಳು ಸಾಧಕರಿಗೆ ‘ಸಾಧನೆ ಮಾಡಿ ಮೋಕ್ಷಪ್ರಾಪ್ತಿ ಮಾಡಿಕೊಳ್ಳುವುದು’, ಇದುವೇ ಭೂಮಿಯ ಮೇಲೆ ಜನ್ಮ ಪಡೆಯುವ ಮಾನವರ ಏಕೈಕ ಉದ್ದೇಶವಾಗಿದೆ’, ಎಂಬ ಆತ್ಮಬೋಧನೆಯನ್ನು ನೀಡಿದ್ದಾರೆ.

ಅವರು ಸ್ವತಃ ಈಶ್ವರನ ಅವತಾರವಾಗಿದ್ದಾರೆ; ಆದರೆ ಜಗತ್ತಿಗೆ ಕಲಿಸಲು ಸಾಧನೆಯ ಆರಂಭದಲ್ಲಿ ಅವರು ವಿವಿಧ ಸಂತರ ಬಳಿ ತೆರಳಿ ಆತ್ಮಬೋಧನೆಯನ್ನು ಪಡೆದರು. ಗುರುಗಳ ಈ ಕೃತಿ ಯೆಂದರೆ ಅವರ ಒಂದು ದೈವೀ ಅವತಾರಿ ಲೀಲೆಯೇ ಎಂದು ಹೇಳಬಹುದು. ಅವರು ನೀಡಿದ ಆತ್ಮಬೋಧನೆ ಮತ್ತು ಅದಕ್ಕಾಗಿ ಹೇಳಿದ ಪ್ರಯತ್ನಗಳು (ಸಾಧನೆ) ಸಾಧಕರಿಗಾಗಿ ಗುರುಮಂತ್ರ ದಂತಿದೆ. ಆ ಆತ್ಮಬೋಧನೆಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಆಚರಣೆ ಮಾಡುವುದರಿಂದ ಸಾಧಕರಿಗೆ ಆತ್ಮಕಲ್ಯಾಣ ಸಾಧಿಸಲು ಸುಲಭವಾಗುತ್ತಿದೆ.

೫. ಯೋಗೀಶ್ವರ

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಗುರುಕೃಪಾಯೋಗ ವನ್ನು ನಿರ್ಮಿಸಿದ್ದಾರೆ. ಅವರು ಗುರುಕೃಪಾಯೋಗದ ಜನಕ ರಾಗಿದ್ದಾರೆ. ‘ಗುರುಕೃಪಾಯೋಗ’, ಈ ಸಾಧನಾಮಾರ್ಗದಲ್ಲಿ ಅವರು ಕರ್ಮ, ಜ್ಞಾನ ಮತ್ತು ಭಕ್ತಿ ಈ ಯೋಗಗಳ ಉತ್ತಮ ಸಂಗಮವನ್ನು ಸಾಧಿಸಿದ್ದಾರೆ. ಆದ್ದರಿಂದ ಈ ಒಂದೇ ಯೋಗ ಮಾರ್ಗಕ್ಕನುಸಾರ ಸಾಧನೆಯನ್ನು ಮಾಡುವಾಗ ಸಾಧಕರಿಂದ ಎಲ್ಲ ಯೋಗಮಾರ್ಗಗಳ ಸಾಧನೆ ಆಗುತ್ತಿರುತ್ತದೆ. ಇಂತಹ ಈ ಅಮೂಲ್ಯ ಯೋಗಮಾರ್ಗವನ್ನು ನಿರ್ಮಿಸಿದ ಗುರುದೇವರಿಗಾಗಿ ‘ಯೋಗೀಶ್ವರ’ ಈ ಉಪಮೆಯು ಅತ್ಯಂತ ಯೋಗ್ಯವಾಗಿದೆ.

೬. ಸಂಸಾರರೂಪಿ ರೋಗಕ್ಕೆ ರಾಮಬಾಣ ಔಷಧಿ ನೀಡುವ ವೈದ್ಯರು

ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರು ಅವರಿಗೆ ‘ಡಾಕ್ಟರ್’ ಎಂದು ಕರೆ ಯುತ್ತಿದ್ದರು. ‘ಡಾಕ್ಟರ್’ ಎಂದರೆ ‘ಆಧುನಿಕ ವೈದ್ಯ’. ‘ವೈದ್ಯ’ ಇದು ಶ್ರೀವಿಷ್ಣುವಿನ ಸಾವಿರ ನಾಮಗಳ ಪೈಕಿ ಒಂದು ನಾಮವಾಗಿದೆ. ‘ವೈದ್ಯೋ ನಾರಾಯಣೋ ಹರಿಃ |’ ಎಂದರೆ ‘ಶ್ರೀಮನ್ನಾರಾಯಣ ಹರಿಯೇ ನಿಜವಾದ ವೈದ್ಯನಾಗಿದ್ದಾನೆ’, ಎಂಬ ವಚನವಿದೆ. ಆ ನಾರಾಯಣನೇ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ರೂಪ ವನ್ನು ತಾಳಿ ಈ ಭೂಮಿಯಲ್ಲಿ ಅವತರಿಸಿದ್ದಾನೆ. ‘ಸಂಸಾರರೂಪಿ ವ್ಯಾಧಿ’ಯೇ ಜೀವಗಳ ದುಃಖಕ್ಕೆ ಮೂಲ ಕಾರಣವಾಗಿದೆ. ಅದರಿಂದ ಮುಕ್ತರಾಗಲು ಗುರುದೇವರು ಸಾಧನಾರೂಪಿ ರಾಮಬಾಣ ಔಷಧಿಯನ್ನು ನೀಡಿದ್ದಾರೆ; ಆದ್ದರಿಂದಲೇ ‘ಸಂಸಾರರೂಪಿ ರೋಗಕ್ಕೆ ರಾಮಬಾಣ ಔಷಧಿಯನ್ನು ನೀಡುವ ವೈದ್ಯರು’, ಈ ಉಪಮೆಯು ಗುರುದೇವರಿಗೆ ಅನ್ವಯಿಸುತ್ತದೆ. ಜನ್ಮ-ಮರಣರೂಪಿ ಘೋರ ಚಕ್ರಗಳಲ್ಲಿ ಪುನಃಪುನಃ ಸಿಲುಕುವ ಜೀವಗಳ ಈ ಮೂಲ ರೋಗವನ್ನು ಅರಿತುಕೊಂಡು ಅದಕ್ಕೆ ಸಾಧನಾರೂಪಿ ಯೋಗ್ಯ ಉಪಾಯಗಳನ್ನು ಹೇಳುವ ಗುರು ದೇವರು ಈ ಭೂಲೋಕದಲ್ಲಿ ಏಕಮೇವಾದ್ವಿತೀಯ ಆಧ್ಯಾತ್ಮಿಕ ಡಾಕ್ಟರ್‌ / ವೈದ್ಯರಾಗಿದ್ದಾರೆ.

೭. ಸ್ತುತಿಸಲು ಯೋಗ್ಯ

ಇಂತಹ ಅನೇಕ ಗುಣವೈಶಿಷ್ಟ್ಯಗಳು ಇರುವುದರಿಂದಲೇ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಅಖಿಲ ಜಗತ್ತಿನಲ್ಲಿ ಎಲ್ಲರಿಂದ ಸ್ತುತಿ ಮಾಡಿಸಿಕೊಳ್ಳಲು ಅರ್ಹರಾಗಿದ್ದಾರೆ.

‘ಹೇ ಗುರುದೇವರೇ, ತಾವು ಅವಿನಾಶಿ ತತ್ತ್ವವಾಗಿರುವ ಸಾಕ್ಷಾತ್‌ ಪರಬ್ರಹ್ಮನ ಅವತಾರವಾಗಿದ್ದೀರಿ. ಭೂಮಿಯ ಮೇಲೆ ತಮ್ಮ ರೂಪದಿಂದ ಕಾರ್ಯನಿರತವಾಗಿರುವ ದಿವ್ಯ ಪರಬ್ರಹ್ಮನ ತತ್ತ್ವವನ್ನು ನಮಗೆ ಕೊನೆಯ ಉಸಿರಿನವರೆಗೆ ಗ್ರಹಿಸಲು ಸಾಧ್ಯ ವಾಗಲಿ ಮತ್ತು ತಾವು ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯದ ರೂಪದಲ್ಲಿ ಭೂಮಿಯಲ್ಲಿ ನೆಟ್ಟಿರುವ ಧರ್ಮಧ್ವಜವು ಸಂಪೂರ್ಣ ಜಗತ್ತಿನಾದ್ಯಂತ ಎಲ್ಲೆಡೆ ರಾರಾಜಿಸಲಿ. ಹೇ ಗುರು ನಾಥಾ, ಈ ಆಕಾಶಮಂಡಲದಲ್ಲಿ ಎಲ್ಲಿಯವರೆಗೆ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳಿರುವವೋ, ಅಲ್ಲಿಯ ತನಕ ತಮ್ಮ ಶ್ರೀಚರಣಗಳಲ್ಲಿ ನಿತ್ಯ ಕೋಟಿ ಕೋಟಿ ನಮನಗಳು !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರು) (೧೬.೫.೨೦೨೪)