ಕಾಶ್ಮೀರದಲ್ಲಿ ಭಾರತೀಯ ಸೈನ್ಯದ ಶ್ವಾನ ಭಯೋತ್ಪಾದಕರೊಂದಿಗೆ ಹೋರಾಡುತ್ತಾ ವೀರಮರಣ

ಅಖನೂರ (ಜಮ್ಮು-ಕಾಶ್ಮೀರ) – ಅಕ್ಟೋಬರ್ ೨೮ ರಂದು ಗಡಿ ರೇಖೆಯಲ್ಲಿ ಭಾರತೀಯ ಸೇನೆ ಮತ್ತು ಜಿಹಾದಿ ಭಯೋತ್ಪಾದಕರಲ್ಲಿ ನಡೆದ ಚಕಮಕಿಯಲ್ಲಿ ಸೇನೆಯಲ್ಲಿ ನೇಮಕವಾಗಿದ್ದ ೪ ವರ್ಷದ ‘ಫ್ಯಾಟಮ್’ ಎಂಬ ಬೆಲ್ಜಿಯಂ ಶೆಫರ್ಡ್ ಜಾತೀಯ ಶ್ವಾನ ವೀರಗತಿ ಆಯಿತು. ಈ ಚಕಮಕಿಯಲ್ಲಿ ಫ್ಯಾಟಮ್ ಗೆ ಗುಂಡುತಾಗಿ ಸಾವನ್ನಪ್ಪಿತು. ಭಾರತೀಯ ಸೇನೆಯ ‘ವೈಟ್ ನೈಟ್ ಕಾಪ್ರ್ಸ್’ ಈ ಅಧಿಕೃತ ‘ಎಕ್ಸ್’ ಖಾತೆಯಿಂದ ಇದರ ಕುರಿತು ಮಾಹಿತಿ ನೀಡಿದೆ. ಇದರಲ್ಲಿ, ನಾವು ನಮ್ಮ ನಾಯಕನ ಸರ್ವೋಚ್ಚ ತ್ಯಾಗಕ್ಕೆ ನಮಸ್ಕರಿಸುತ್ತೇವೆ. ಫ್ಯಾಟಮ್ ನಮ್ಮ ಶ್ವಾನ ಪಥಕದಲ್ಲಿನ ಒಂದು ಶೂರ ವೀರನಾಗಿತ್ತು. ಅದರ ನಿಷ್ಠೆ ಎಂದಿಗೂ ಮರೆಯಲಾಗದು ಎಂದು ಹೇಳಿದೆ.

ಕಳೆದ ವರ್ಷದಿಂದ ಭಯೋತ್ಪಾದಕರ ಜೊತೆಗೆ ಹೋರಾಡುವಾಗ ವೀರಮರಣ ಪಡೆದಿರುವ ಪ್ಯಾಟಮ ಇದು ಎರಡನೆಯ ಶ್ವಾನವಾಗಿದೆ. ಸಪ್ಟೆಂಬರ್೨೦೨೩ ರಲ್ಲಿ ಲ್ಯಾಬ್ರಾಡೋರ್ ಜಾತಿಯ ಹೆಣ್ಣು ಶ್ವಾನ ‘ಕೆಂಟ್’ ಇದು ರಾಜೌರಿ ಜಿಲ್ಲೆಯಲ್ಲಿನ ಚಕಮಕಿಯಲ್ಲಿ ಸಾವನ್ನಪ್ಪಿತ್ತು. ಅಡಗಿ ಕುಳಿತಿದ್ದ ಭಯೋತ್ಪಾದಕರ ಶೋಧ ನಡೆಸುವುದಕ್ಕಾಗಿ ಭಾರತೀಯ ಸೇನೆಯು ಶ್ವಾನಗಳನ್ನ ಬಳಸಲಾಗುತ್ತದೆ. ಶ್ವಾನಗಳಿಗೆ ವಿಭಿನ್ನ ಗೆಝೆಟ್ (ಉಪಕರಣಗಳು) ಅಳವಡಿಸಲಾಗಿರುತ್ತದೆ. ಅದರಿಂದ ಭಯೋತ್ಪಾದಕರ ಸ್ಥಳ ಮತ್ತು ಅಂತರ ತಪಾಸಣೆ ಮಾಡುತ್ತಾರೆ.