ರಾಷ್ಟ್ರೀಯ ತನಿಖಾ ದಳದ ತನಿಖೆಯಲ್ಲಿ ಬಹಿರಂಗ!
ಶ್ರೀನಗರ – ಜಮ್ಮು-ಕಾಶ್ಮೀರದ ಗಂದರ್‌ಬಾಲ್‌ನಲ್ಲಿ ಜಿಹಾದಿ ಭಯೋತ್ಪಾದಕರು ಸುರಂಗ ಕಾರ್ಮಿಕರ ಮೇಲೆ ನಡೆಸಿದ ದಾಳಿಯಲ್ಲಿ ಸ್ಥಳೀಯ ಮುಸ್ಲಿಮರು ಸಹಾಯ ಮಾಡಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಡೆಸಿದ ತನಿಖೆಯಲ್ಲಿ ಕಂಡು ಬಂದಿದೆ. ಭಯೋತ್ಪಾದಕರಿಗೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಸ್ಥಳೀಯ ಮುಸ್ಲಿಮರು ವಾಹನವನ್ನು ನೀಡಿತ್ತು. ಆಕ್ರಮಣದ ಮೊದಲು ಅಲ್ಲಿಯ ಮಾಹಿತಿಯನ್ನು ಗುಪ್ತವಾಗಿ ಪಡೆದುಕೊಳ್ಳಲಾಗಿತ್ತು. ಕಾರ್ಮಿಕರ ಶಿಬಿರದಲ್ಲಿ ನಿಯೋಜಿಸಲಾದ ಕಾವಲುಗಾರರು ಶಸ್ತ್ರಸಜ್ಜಿತರಾಗಿಲ್ಲ ಎಂಬ ಖಚಿತ ಮಾಹಿತಿಯನ್ನು ಭಯೋತ್ಪಾದಕರ ಬಳಿ ಇತ್ತು ಎಂದು ತನಿಖೆಗಳು ಕಂಡುಕೊಂಡಿವೆ.
ಅಕ್ಟೋಬರ್ 20 ರ ರಾತ್ರಿ ಗಂದರ್‌ಬಲ್‌ನ ಗಗಾಂಗೀರ್ ಪ್ರದೇಶದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ವೈದ್ಯರು ಮತ್ತು 6 ಕಾರ್ಮಿಕರು ಸಾವನ್ನಪ್ಪಿದ್ದರು. ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ಸಂಘಟನೆ ‘ದಿ ರೆಸಿಸ್ಟೆನ್ಸ್ ಫ್ರಂಟ್’ ಹೊತ್ತುಕೊಂಡಿದೆ.
ಸಂಪಾದಕೀಯ ನಿಲುವುಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಎದುರಿಸಲು ಸೇನೆಯು ‘ಇಂದ್ರಾಯ ಸ್ವಾಹಾ, ತಕ್ಷಕಾಯ ಸ್ವಾಹಾ’ ಪ್ರಕಾರ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ! ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆ ಏಕೆ ನಾಶವಾಗಿಲ್ಲ ಎಂಬುದನ್ನು ಇದರಿಂದ ಸ್ಪಷ್ಟವಾಗುತ್ತದೆ ! ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಧರ್ಮವಿರುವುದರಿಂದ ಅದರಂತೆ ಕಾರ್ಯಾಚರಣೆ ಮಾಡುವುದು ಈಗ ಅಗತ್ಯವಾಗಿದೆ ! |