ಸೂರ್ಯನ ಬೆಳಕು, ನಿದ್ರೆ ಮತ್ತು ಆರೋಗ್ಯ ಇವುಗಳ ನಡುವಿನ ಲೆಕ್ಕಾಚಾರ

ನಮ್ಮ ಶರೀರದಲ್ಲಿ ತಯಾರಾಗುವ ಕೆಲವು ಹಾರ್ಮೋನ್ಸಗಳು ಸೂರ್ಯನ ಬೆಳಕನ್ನು  ಅವಲಂಬಿಸಿರುತ್ತವೆ. ಸೂರ್ಯನ ಬೆಳಕಿನಲ್ಲಿ ಶರೀರದಲ್ಲಿನ ‘ಮೆಲಟೋನಿನ’ ಎಂಬ ಹಾರ್ಮೋನು ಕಡಿಮೆಯಾಗುತ್ತದೆ ಹಾಗೂ ನಮಗೆ ಎಚ್ಚರಗೊಳ್ಳಲು ಸಹಾಯವಾಗುತ್ತದೆ. ‘ಮೆಲಟೋನಿನ’ ಇದು ‘ಡ್ರೌಸಿನೆಸ್’ (ನಿದ್ದೆಯ ಮಂಪರು) ತರುತ್ತದೆ, ಇದು ನಿದ್ರೆ ತರಿಸುವ ಹಾರ್ಮೋನ ಆಗಿದೆ. ಆಯುರ್ವೇದದಲ್ಲಿ ಈ ನಿದ್ರೆಗೆ ‘ರಾತ್ರಿ ಸ್ವಭಾವ ಪ್ರಭವ ನಿದ್ರಾ’ ಅಂದರೆ ‘ರಾತ್ರಿ ಯಾದಾಗ ನೈಸರ್ಗಿಕವಾಗಿ ಬರುವ ನಿದ್ರೆ’, ಎಂದು ಹೇಳಲಾಗುತ್ತದೆ. ಊರೂರುಗಳಲ್ಲಿ ವಿದ್ಯುತ್‌ ಬಂದಾಗಿನಿಂದ ಸತತವಾಗಿ ಪ್ರಕಾಶ ಇರುವುದರ ಭ್ರಮೆಯಾಗುವುದರಿಂದ ನಿದ್ರೆಯ ನೈಸರ್ಗಿಕ ಚಕ್ರದ ಮೇಲೆ ಪ್ರಭಾವ ಬಿದ್ದಿದೆ. ಬೆಳಗ್ಗೆ ಬೇಗನೆ ಎದ್ದು ನಿಧಾನವಾಗಿ ತಲೆಯ ವರೆಗೆ ಸೂರ್ಯನ ಪ್ರಕಾಶ ಬರುವುದು ಹಾಗೂ ರಾತ್ರಿ ನಿಧಾನವಾಗಿ ಪ್ರಕಾಶವನ್ನು (ಲೈಟ್) ಮಂದಗೊಳಿಸಿ ಮಲಗುವುದು ಆರೋಗ್ಯಕ್ಕಾಗಿ ಉತ್ತಮವಾಗಿರುತ್ತದೆ. ನಿದ್ರೆಯ ಚಕ್ರವು ಕೆಡುವುದರಿಂದ ಅತ್ಯಂತ ಬೀಜದ ಮಟ್ಟದಲ್ಲಿ ವರ್ಣತಂತು (ಕ್ರೋಮೋಸೋಮ್‌)ಗಳ ಮಟ್ಟದಲ್ಲಿ ಬದಲಾವಣೆಗಳಾಗುವುದು ಕಂಡುಬಂದಿದೆ. ಈ ಬಗೆಗಿನ ಸಂಶೋಧನೆಗೆ ೨೦೧೭ ರಲ್ಲಿ ‘ನೊಬೆಲ್’ ಪ್ರಶಸ್ತಿ ದೊರೆತಿದೆ. ಕೊನೆಯದಾಗಿ ಸಮಯಕ್ಕೆ ಸರಿಯಾಗಿ ಮಲಗುವುದು ಹಾಗೂ ಸಮಯಕ್ಕೆ ಸರಿಯಾಗಿ ಏಳುವುದು ಇವೆರಡೂ ಸಂಗತಿಗಳು ಮಹತ್ವದ್ದಾಗಿವೆ.

೧. ನಿದ್ರೆ ಬರಲು ಔಷಧಿಗಳು ಅವಶ್ಯಕವೆಂದು ಅನಿಸುವ ಕಾರಣ

ಈ ದೃಷ್ಟಿಯಲ್ಲಿ ನಾವು ಭಾರತೀಯರು ಬಹಳ ಭಾಗ್ಯವಂತರಾಗಿದ್ದೇವೆ, ನಮಗೆ ಬೇಕಾದಷ್ಟು ಸಮಯ ಸೂರ್ಯನ ಬೆಳಕು ಸಿಗುತ್ತದೆ. ಬಹಳ ಚಳಿ ಇರುವಲ್ಲಿ ಅಥವಾ ಸೂರ್ಯನ ಬೆಳಕು ಕಡಿಮೆ ಇರುವಲ್ಲಿ ಈ ದೂರುಗಳು ಬಹಳ ಸಹಜವಾಗಿ ಉದ್ಭವಿಸುತ್ತವೆ. ಮಾನಸಿಕ ರೋಗಗಳು, ನಿದ್ರೆಯ ದೂರು, ನಿರಾಶೆ (ಡಿಪ್ರೆಶನ್‌), ಕೆಲಸ ಮಾಡಲು ಉತ್ಸಾಹವಿಲ್ಲದಿರುವುದು, ಇಂತಹ ತೊಂದರೆಗಳಾಗುತ್ತವೆ. ಭಾರತದಲ್ಲಿ ಈ ಎಲ್ಲ ಸೌಲಭ್ಯಗಳನ್ನು ನಿಸರ್ಗವು ನೀಡಿರುವಾಗಲೂ ಕೇವಲ ಕೆಲವು ಮೂಲ ಭೂತ ನಿಯಮಗಳನ್ನು ಪಾಲಿಸದಿರುವುದರಿಂದ ಬಹಳಷ್ಟು ಜನರು ನಿದ್ರೆ ಬರದಿರುವಾಗ ಮನಸ್ಸಿನಿಂದ ‘ಮೆಲಟೋನಿನ ಸಪ್ಲಿಮೆಂಟ್ಸ್‌’ (ಪೂರಕ ಔಷಧಿ) ತೆಗೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಇದು ಹೀಗೇಕೆ ಆಗುತ್ತಿದೆ ? ಚಿಕ್ಕಂದಿನಿಂದ ತಡವಾಗಿ ಏಳುವ ಅಭ್ಯಾಸವಿರುವುದು, ‘ಪಾರ್ಟಿ ಕಲ್ಚರ್‌ (ಔತಣಕೂಟದ ಸಮಾರಂಭಗಳು) ಹಾಗೂ ನಂತರ ಕೆಲವೊಮ್ಮೆ ಕೆಲಸದ ಸ್ವರೂಪ ಅಥವಾ ವರ್ಷಾನುಗಟ್ಟಲೆ ಹತ್ತಿದ ರೂಢಿಗಳು, ಹೀಗೆ ಅನೇಕ ಕಾರಣಗಳಿಂದ ನಿದ್ರೆಗಾಗಿ ಔಷಧಿಗಳ ಅವಶ್ಯಕತೆ ಅನಿಸುತ್ತಿದೆ. ಚಿಕ್ಕಂದಿನಿಂದ ಶಿಸ್ತು ರೂಢಿಸಿಕೊಂಡರೆ ಮುಂದೆ ಈ ಸೂಚನೆಗಳ ಅವಶ್ಯಕತೆ ಬೀಳುವುದಿಲ್ಲ.

೨. ನಿದ್ದೆಗೆ ಯೋಗ್ಯ ಸಮಯ ಯಾವುದು ?

ಸಾಮಾನ್ಯವಾಗಿ ಇಂದ್ರಿಯಗಳು ಸುಸ್ತಾದರೆ ನಿದ್ರೆ ಬರುತ್ತದೆ. ರಾತ್ರಿಯೇ ಮಲಗಬೇಕು ಎಂಬುದು ಮಾತ್ರ ಖಂಡಿತ ! ‘ಸ್ಕ್ರೀನ್‌ ಟೈಮ್’ (ಮೊಬೈಲ್‌ ಅಥವಾ ಟಿವಿ ನೋಡುವ ಸಮಯ) ಹೆಚ್ಚಿರುವುದರಿಂದ ಸದ್ಯ ನಿದ್ರೆಯ ವೇಳಾಪಟ್ಟಿಯು ಬದಲಾಗಿದೆ. ರಾತ್ರಿ ಎಚ್ಚರವಿರುವುದು ಹಾಗೂ ಬೆಳಗ್ಗೆ ತಡವಾಗಿ ಏಳುವುದರಿಂದ ದಿನದಲ್ಲಿ ಬಹಳ ಕಡಿಮೆ ಸಮಯವು ನಮಗೆ ಉಳಿಯುತ್ತದೆ. ಬೆಳಗ್ಗೆ ೮.೩೦ ಕ್ಕೆ ಏಳುವುದು, ಬೆಳಗ್ಗೆ ೧೦ ಗಂಟೆಗೆ ಕೆಲಸಕ್ಕೆ ಹೋಗುವುದು, ಈ ನಡುವಿನ ೧ ರಿಂದ ೧.೩೦ ಗಂಟೆಯಲ್ಲಿ ವ್ಯಾಯಾಮ, ಸ್ನಾನ, ತಿಂಡಿ, ಅಡುಗೆ ಈ ಎಲ್ಲವನ್ನೂ ಮಾಡ ಬೇಕಾದರೆ ಇವುಗಳಲ್ಲಿ ಒಂದನ್ನು ಬದಿಗೆ ಸರಿಸಬೇಕಾಗುತ್ತದೆ. ವ್ಯಾಯಾಮ ಮಾಡಿದರೆ ತಿಂಡಿಯಲ್ಲಿ ಸುಲಭವಾಗಲೆಂದು ಬ್ರೆಡ್‌ ಅಥವಾ ಹಾಲು-ಬಿಸ್ಕತ್ತು ತಿನ್ನಲಾಗುತ್ತದೆ. ತಿಂಡಿ ಸರಿಯಾಗಿ ಮಾಡಿದರೆ ವ್ಯಾಯಾಮ ಮಾಡಲು ಆಗುವುದಿಲ್ಲ. ವ್ಯಾಯಾಮ ಹಾಗೂ ತಿಂಡಿ ಮಾಡಿದರೆ, ಎಣ್ಣೆ ಹಚ್ಚುವುದು ಉಳಿಯುತ್ತದೆ ಹಾಗೂ ದಿನಚರ್ಯೆಯ ಪಾಲನೆಯಾಗದಿರಲು ಅಸಂಖ್ಯ ಕಾರಣ ಗಳು ಬರುತ್ತಿರುತ್ತವೆ. ಸೂರ್ಯಾಸ್ತದ ಹತ್ತಿರ ಊಟ ಹಾಗೂ ನಂತರ ೨ ರಿಂದ ೨.೩೦ ಗಂಟೆಯಲ್ಲಿ ಅಂದರೆ ಇಂದಿನ ಕಾಲದಲ್ಲಿ ರಾತ್ರಿ ೯.೩೦ ರಿಂದ ೧೦ ಗಂಟೆಗಾದರೂ ಮಲಗಬೇಕು. ಬೆಳಗ್ಗಿನ ವ್ಯಾಯಾಮವನ್ನು ಪೂರ್ತಿಗೊಳಿಸಲು ರಾತ್ರಿ ಊಟದ ನಂತರ ವ್ಯಾಯಾಮ ಮಾಡಬಾರದು. ಶರೀರದಲ್ಲಿನ ಜಡತ್ವವು ನಿದ್ರೆ ಬರಲು ಯೋಗ್ಯವಾಗಿರುತ್ತದೆ, ಅದು ವ್ಯಾಯಾಮದಿಂದ ದೂರವಾಗಿ ಹಗುರತೆ ಬರುತ್ತದೆ. ಊಟವೂ ಸರಿಯಾಗಿ ಪಚನವಾಗುವುದಿಲ್ಲ ಹಾಗೂ ನಿದ್ರೆಯೂ ಬರುವುದಿಲ್ಲ.

ವೈದ್ಯೆ ಸ್ವರಾಲಿ ಶೆಂಡ್ಯೆ

೩. ನಿದ್ರೆಯನ್ನು ಸರಿಯಾಗಿ ಮಾಡದಿರಲು ವಿವಿಧ ಕಾರಣಗಳು ಯಾವವು ?

ಅ. ಮೊಬೈಲ್‌ನಲ್ಲಿ ಸಂದೇಶದ ಮೂಲಕ ಚರ್ಚೆ (ಚಾಟಿಂಗ್‌)ಗಳನ್ನು ಮಾಡುವುದು, ‘ವೆಬ್‌ ಸರ್ಫಿಂಗ್’ (ಜಾಲತಾಣದಲ್ಲಿ ವಿವಿಧ ಮಾಹಿತಿಗಳನ್ನು ಹುಡುಕುವುದು ಹಾಗೂ ನೋಡುವುದು)

ಆ. ‘ಸ್ಟ್ರೀಮಿಂಗ್‌ ಸೈಟ್ಸ್ ‘ (ನೇರ ಪ್ರಸಾರ ಕಾರ್ಯಕ್ರಮ) ನಲ್ಲಿ ಹೆಚ್ಚಾಗಿರುವ ಸಮಯ

ಇ. ಅನಾರೋಗ್ಯ, ಚಿಂತೆ, ದುಃಖ ಹಾಗೂ ಮಾನಸಿಕ ರೋಗಗಳು

ಈ. ಪಾರ್ಟಿಗಳು

ಉ. ಶರೀರದಲ್ಲಿ ಹೆಚ್ಚಾದ ವಾತ ಅಥವಾ ದೇಹದ ಉಷ್ಣತೆಯಲ್ಲಿ ಹೆಚ್ಚಳ ಹಾಗೂ ಈ ಕಾರಣದ ಅನ್ವಯ ಬರುವ ಇತರ ಕಾರಣಗಳು

ಊ. ರಾತ್ರಿಪಾಳಿಯಲ್ಲಿ ನೌಕರಿ ಮಾಡುವುದು (ಡ್ಯೂಟಿ)

೪. ಎಷ್ಟು ಹೊತ್ತು ಮಲಗಬೇಕು ?

ಶಾರೀರಿಕ ಪ್ರಕೃತಿಯಂತೆ ನಿದ್ರೆಯ ಪ್ರಮಾಣ ಬದಲಾಗುತ್ತದೆ. ವಾತ ಪ್ರಕೃತಿಯಲ್ಲಿ ಬಹಳ ಕಡಿಮೆ ಹಾಗೂ ಆಗಾಗ ಎಚ್ಚರ ವಾಗುವುದು, ಪಿತ್ತ ಪ್ರಕೃತಿಯಲ್ಲಿ ಸಾಮಾನ್ಯವಾಗಿ ಕಡಿಮೆ ನಿದ್ರೆ ಹಾಗೂ ಕಫ ಹೆಚ್ಚಿರುವ ಜನರಲ್ಲಿ ನೈಸರ್ಗಿಕವಾಗಿ ಹೆಚ್ಚು ನಿದ್ರೆ ಬರುತ್ತದೆ. ವಯಸ್ಕರು, ಚಿಕ್ಕ ಮಕ್ಕಳು, ಅನಾರೋಗ್ಯವಿರುವ ಜನರು ಹೆಚ್ಚು ಸಮಯ ಮಲಗಬಹುದು.

೫. ಹಗಲಿನಲ್ಲಿ ಮಲಗಬೇಕೋ ಮಲಗಬಾರದೋ ?

ಹಗಲಿನಲ್ಲಿ ಮಲಗಬಾರದು. ಮಲಗಲಿಕಿದ್ದರೆ ಕುರ್ಚಿಯಲ್ಲಿ ಕುಳಿತು ಸಣ್ಣ ನಿದ್ರೆಯನ್ನು ಮಾಡಬೇಕು. ರಾತ್ರಿ ನಿದ್ರೆಯಾಗಿರದಿದ್ದರೆ ಊಟದ ಮೊದಲು ಜಾಗರಣೆಯ ಸಮಯದ ಅರ್ಧದಷ್ಟು ಸಮಯ ಮಲಗಬೇಕು. ಜ್ವರ, ಅಜೀರ್ಣ, ಭೇದಿ, ಕೃಷ ಶರೀರ, ಕ್ಷಯ, ಬಹಳ ನಡೆದು ಸುಸ್ತಾಗಿರುವ ಜನರು ದಿನದಲ್ಲಿ ಮಲಗಬಹುದು.

ಬೇಸಿಗೆಯ ದಿನಗಳಲ್ಲಿ ಮಾತ್ರ ಕೆಲವೊಂದು ಅಪವಾದಗಳನ್ನು ಹೊರತುಪಡಿಸಿ ದಿನದಲ್ಲಿ ಅವಶ್ಯ ಮಲಗಬೇಕು. ಪ್ರತಿದಿನ ಹಗಲಿ ನಲ್ಲಿ ಮಲಗಿದರೆ ತಲೆನೋವು, ಅಗ್ನಿಮಾಂದ್ಯ (ಹಸಿವು ಹಾಗೂ ಪಚನ ಶಕ್ತಿಯು ಕ್ಷೀಣವಾಗುವುದು), ಮೈಯಲ್ಲಿ ಜಡತ್ವ, ಬಾಯಿ ರುಚಿ ಕಡಿಮೆಯಾಗುವುದು, ಹೊಟ್ಟೆ ತೊಳೆಸುವುದು, ಚರ್ಮದ ರೋಗಗಳು ಉಂಟಾಗುತ್ತವೆ. ಇವುಗಳಲ್ಲಿನ ಅನೇಕ ಲಕ್ಷಣಗಳನ್ನು ಬಹಳಷ್ಟು ಜನರು ಎಂದಾದರೂ ಅನುಭವಿಸಿರಬಹುದು. ಬೇಸಿಗೆಯಲ್ಲಿಯೂ ಬಹಳ ಸ್ಥೂಲ, ತೂಕ ಕಡಿಮೆ ಮಾಡಿಕೊಳ್ಳ ಬೇಕಾದವರು, ಕಫದ ಪ್ರಮಾಣ ಹೆಚ್ಚು ಇರುವವರು ಮಲಗಬಾರದು.

೬. ರಾತ್ರಿ ಜಾಗರಣೆ ಮಾಡಿದರೆ ಯಾವ ತೊಂದರೆಗಳು ಆಗುತ್ತವೆ ?

ಸಂದುಗಳ ನೋವು, ಮೈಕೈ ನೋವು, ಪಿತ್ತ ಹಾಗೂ ವಾತದ ತೊಂದರೆ, ಶರೀರದಲ್ಲಿ ಶುಷ್ಕತೆ ಹೆಚ್ಚಾಗುವುದು, ಕಿರಿಕಿರಿ, ಆಲಸ್ಯ, ತಲೆ ತಿರುಗುವುದು ಮತ್ತು ಮಂಪರು ಬರುವುದು ಇಂತಹ ತೊಂದರೆಗಳಾಗುತ್ತವೆ.

೭. ಸಮಯಕ್ಕೆ ಸರಿಯಾಗಿ ನಿದ್ರೆ ಬರಲು ಮಾಡಬೇಕಾದ ಉಪಾಯಗಳು

ಅ. ಪಾಲಕರು ಮಕ್ಕಳಿಗೆ ಚಿಕ್ಕಂದಿನಿಂದಲೇ ಬೇಗನೆ ಏಳುವ ಅಭ್ಯಾಸವನ್ನು ಮಾಡಿಸಬೇಕು, ಅಂದರೆ ರಾತ್ರಿ ತನ್ನಷ್ಟಕ್ಕೆ ಬೇಗ ನಿದ್ರೆ ಬರುತ್ತದೆ. ಬೆಳಗ್ಗೆ ಶಾಲೆಯಿದ್ದರೆ ಈ ರೂಢಿಯು ತಾನಾಗಿಯೇ ಆಗುತ್ತದೆ.

ಆ. ಸೂರ್ಯಾಸ್ತದ ನಂತರ ೭.೩೦ ರಿಂದ ರಾತ್ರಿ ೮ ಗಂಟೆಯ ವರೆಗೆ ರಾತ್ರಿಯ ಊಟವನ್ನು ಮುಗಿಸಿ ಮನೆಯಲ್ಲಿನ ಬಿಳಿ ಪ್ರಕಾಶವನ್ನು ಕಡಿಮೆ ಮಾಡಬೇಕು. ಈ ಪ್ರಕಾಶವು ತಿಳಿ ಹಳದಿಯಾಗಿದ್ದರೆ ಸಂಧಿ ಪ್ರಕಾಶದ ಭಾಸವಾಗುತ್ತದೆ ಹಾಗೂ ಶರೀರದ ‘ಬಯೊಲಾಜಿಕಲ ಕ್ಲಾಕ್’ (ಜೈವಿಕ ಗಡಿಯಾರ) ನಡೆಯಲು ಆರಂಭವಾಗುತ್ತದೆ. ತಡ ರಾತ್ರಿಯವರೆಗೆ ಕೆಲಸ ಇರುವವರು ಬೇರೆ ಕೋಣೆಗೆ ಹೋಗಬೇಕು.

ಇ. ನಮ್ಮ ತಲೆಯಲ್ಲಿರುವ ಮಲಗುವ ಸಮಯದ ಅರ್ಧ ಗಂಟೆ ಮೊದಲೇ ಕಣ್ಣುಗಳ ಮೇಲೆ ಬೀಳುವ ಪ್ರಕಾಶವನ್ನು (ಮೊಬೈಲ್‌/ಟಿವಿ) ತಡೆಯಬೇಕು.

ಈ. ತಡವಾಗಿ ಮಲಗುವ ರೂಢಿಯಿದ್ದರೆ ಪ್ರತಿದಿನ ನಿಧಾನವಾಗಿ ಅರ್ಧ ಅರ್ಧ ಗಂಟೆಯಂತೆ ಆ ಸಮಯವನ್ನು ಈಚೆಗೆ ತರಲು ಪ್ರಯತ್ನಿಸಬೇಕು ಹಾಗೂ ಬೆಳಗ್ಗೆ ಏಳುವ ಸಮಯವನ್ನೂ ಈಚೆಗೆ ತರಲು ಪ್ರಯತ್ನಿಸಬೇಕು.

ಉ. ರಾತ್ರಿ ೯ ಗಂಟೆಯ ನಂತರ ಎಲ್ಲ ಸ್ಕ್ರೀನ್‌ಗಳನ್ನು ಮುಚ್ಚಬೇಕು. ಮೈಗೆ ಉಗುರುಬೆಚ್ಚಗಿನ ಎಳ್ಳೆಣ್ಣೆಯಿಂದ ಅಭ್ಯಂಗ ಮಾಡಬೇಕು. ಬೆಳಗ್ಗಿನ ವ್ಯಾಯಾಮವನ್ನು ತಪ್ಪಿಸಬಾರದು. ಹಗಲಿನಲ್ಲಿ ಊಟದ ನಂತರ ಮಲಗುವುದನ್ನು ತಡೆಯಬೇಕು. ಕೈಕಾಲು ಹಾಗೂ ದೇಹಕ್ಕೆ ಅವಶ್ಯ ಎಣ್ಣೆಯನ್ನು ಹಚ್ಚಬೇಕು. ಒಂದು ದಿನ ಕಡಿಮೆ ಮಲಗಿ ಬೇಗನೆ ಏಳಬೇಕು ಹಾಗೂ ಹಗಲಿನಲ್ಲಿ ಮಲಗದಿದ್ದರೆ ರಾತ್ರಿ ನಿಧಾನವಾಗಿ ನಿದ್ರೆ ಬರಲು ಆರಂಭವಾಗುತ್ತದೆ. ಶೋಕ ಅಥವಾ ಮಾನಸಿಕ ಅನಾರೋಗ್ಯದಿಂದಾಗಿ ನಿದ್ರೆ ಬರದಿದ್ದರೆ ಮಾನಸೋಪಚಾರ ತಜ್ಞರ ಸಲಹೆ ಪಡೆಯಬೇಕು. ಮೊದಲನೇ ದಿನ ಮಲಗಿರುವ ಸಮಯಕ್ಕಿಂತಲೂ ಕೇವಲ ಅರ್ಧ ಗಂಟೆ ಮೊದಲೇ ಮಲಗಲು ಪ್ರಯತ್ನಿಸಬೇಕು. ನಿಧಾನವಾಗಿ ವೇಳಾಪಟ್ಟಿಯು ಸರಿಯಾಗುತ್ತದೆ.

ಊ. ನಿದ್ರೆಯು ಶರೀರವನ್ನು ಸ್ಥಿರವಾಗಿಡುವ ೩ ಕಾರಣಗಳಲ್ಲಿ ಒಂದಾಗಿದೆ. ಯುವಾವಸ್ಥೆಯಲ್ಲಿ ಅಗ್ನಿ, ವಯಸ್ಸು, ಧಾತು ಉತ್ತಮವಾಗಿರುತ್ತವೆ, ಆಗ ಈ ಸಂಗತಿಗಳು ತೊಂದರೆದಾಯಕ ಅನಿಸುವುದಿಲ್ಲ; ಆದರೆ ಇತ್ತೀಚೆಗೆ ಬಹಳಷ್ಟು ಯುವಕರು ಮೇಲಿನ ವಿವಿಧ ಲಕ್ಷಣಗಳಿಂದ ತೊಂದರೆಗೊಳಗಾಗಿರುವುದು ಕಂಡುಬರುತ್ತಿದೆ. ಇದಕ್ಕಾಗಿ ಬಾಹ್ಯತಃ ಕಾರ್ಯಾಲಯದ ಸಮಯ, ಎಲ್ಲರ ಬದಲಾಗಿರುವ ದಿನಚರ್ಯೆ ಇವೆಲ್ಲ ಕಾರಣವಾಗಿದೆ. ಅತ್ಯಂತ ಶಾಸ್ತ್ರೋಕ್ತ ಪದ್ಧತಿಯಲ್ಲಿ ರಾತ್ರಿ ೮ ಗಂಟೆಗೆ ಮಲಗಿ ಬೆಳಗ್ಗಿನ ಜಾವ ೪ ಗಂಟೆಗೆ ಏಳುವುದು ಸಾಧ್ಯವಿಲ್ಲದಿದ್ದರೂ ಮಧ್ಯಮ ಮಾರ್ಗವನ್ನು ಸಾಧಿಸಿ ದಿನಚರ್ಯೆಯನ್ನು ಪಾಲಿಸಬೇಕು. ಕಾರ್ಯಾಲಯದ ವಿಭಿನ್ನ ವಿಚಿತ್ರ ಸಮಯಗಳಿಂದಾಗಿ ಸಾಧ್ಯವಾಗದಿದ್ದರೆ ತಜ್ಞರ ಸಲಹೆ ಪಡೆದು ನಿದ್ರೆಯ ವೇಳಾಪಟ್ಟಿಯೊಂದಿಗೆ ಸಮತೋಲನವನ್ನು ಸಾಧಿಸುವ ಆಹಾರ ಹಾಗೂ ದಿನಚರ್ಯೆಯನ್ನು ಜೋಡಿಸಿ ತಮಗಾಗಿ ಅತ್ಯಂತ ಯೋಗ್ಯವಾಗಿ ವರ್ತಿಸಬೇಕು.

ಇವು ಅತ್ಯಂತ ಸಾಮಾನ್ಯ ಉಪಾಯಗಳಾಗಿವೆ. ಈ ಸ್ವಯಂ ಶಿಸ್ತಿನಿಂದಲೂ ಪರಿಣಾಮವಾಗದಿದ್ದರೆ ಔಷಧಿ ತೆಗೆದುಕೊಳ್ಳಲು ವೈದ್ಯಕೀಯ ಸಲಹೆಯನ್ನು ಅವಶ್ಯ ಪಡೆಯಬೇಕು. ಕೆಲವು ಮಾನಸಿಕ ಆಘಾತಗಳು ಅಥವಾ ಚಿಂತೆಯಿಂದಾಗಿ ನಿದ್ರೆ ಬರದಿದ್ದರೆ ಮಾತ್ರ ಅವರಿಗೆ ಔಷಧಿ ಹಾಗೂ ಮಾನಸಿಕ ಚಿಕಿತ್ಸೆಯ ಅವಶ್ಯಕತೆಯಿದೆ ಎಂಬ ಸಂಗತಿಯನ್ನು ಅವಶ್ಯವಾಗಿ ಗಮನಕ್ಕೆ ತೆಗೆದುಕೊಳ್ಳಬೇಕು.

– ವೈದ್ಯೆ ಸ್ವರಾಲಿ ಶೇಂಡ್ಯೆ, ಯಶಪ್ರಭಾ ಆಯುರ್ವೇದ

(ವೈದ್ಯೆ ಸ್ವರಾಲಿ ಶೇಂಡ್ಯೆಯವರ ಫೇಸಬುಕ್‌ನಿಂದ ಪಡೆಯಲಾಗಿದೆ)