ತನ್ನ ಅಭ್ಯಾಸಗಳು, ಸ್ಥಿತಿ ಮತ್ತು ಸಮಯ ಇದಕ್ಕನುಸಾರ ವ್ಯಾಯಾಮ ಮಾಡುವ ಆಯೋಜನೆ ಮಾಡಿ !

ವ್ಯಾಯಾಮ ಮಾಡಲು ಬೇಸರ ಆಗುತ್ತಿದೆಯೇ ? ಹಾಗಾದರೆ ಹೀಗೆ ಮಾಡಿ !

ಜಗತ್ತಿನ ಆಧುನಿಕರಣದೊಂದಿಗೆ ಸಂಭವಿಸಿದ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ವು ಒಂದು ಪರಿಣಾಮಕಾರಿ ಉಪಾಯವಾಗಿದೆ. ಇತ್ತೀಚೆಗೆ ಈ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಮತ್ತು ಆ ಬಗ್ಗೆ ಜಾಗರೂಕತೆ ನಿರ್ಮಾಣವಾಗಿದ್ದರೂ, ವ್ಯಾಯಾಮ ಮಾಡುವುದು ಮಾತ್ರ ಸ್ವಲ್ಪ ಪ್ರಮಾಣದಲ್ಲಿಯೆ ಕಂಡುಬರುತ್ತದೆ. ಇನ್ನೂ ಅನೇಕರಿಗೆ ಮನಸ್ಸಿನಲ್ಲಿ ವ್ಯಾಯಾಮ ವಿಷಯದ ಬಗ್ಗೆ ಕೆಲವು ಸಂದೇಹಗಳಿರುವುದು ಕಂಡು ಬರುತ್ತದೆ. ಸದ್ಯ ಆಗುತ್ತಿರುವ ಅನೇಕ ದೈಹಿಕ ಸಮಸ್ಯೆಗಳಿಗೆ ಉದಾ. ಬೆನ್ನುಮೂಳೆಯ ಕಾಯಿಲೆ, ಮಧುಮೇಹ, ಸ್ಥೂಲಕಾಯಗಳಿಗೆ ಉಪಾಯವೆಂದು ಔಷಧೋಪಚಾರ, ಪಥ್ಯ, ಉಪವಾಸ, ಹೀಗೆ ಅನೇಕ ಮಾರ್ಗಗಳನ್ನು ಆಯ್ಕೆ ಮಾಡುತ್ತಾರೆ. ಈ ಅಂಕಣದಿಂದ ನಾವು ವ್ಯಾಯಾಮ ಮಾಡುವ ಬಗ್ಗೆ ಜಾಗರೂಕತೆಯನ್ನು ಮೂಡಿಸಲಿದ್ದೇವೆ. ಇದರ ಆವಶ್ಯಕತೆ ಮತ್ತು ಮಹತ್ವವನ್ನು ತಿಳಿದುಕೊಳ್ಳಲಿದ್ದೇವೆ, ಹಾಗೆಯೇ ವ್ಯಾಯಾಮ ವಿಷಯದಲ್ಲಿನ ಸಂದೇಹ ನಿವಾರಣೆ ಮಾಡಲಿದ್ದೇವೆ.

(ಭಾಗ ೧೦)

ಶ್ರೀ. ನಿಮಿಷ ಮ್ಹಾತ್ರೆ

ನಾವು ಅನೇಕ ಬಾರಿ ವ್ಯಾಯಾಮ ಮಾಡಲು ಒಂದು ಆದರ್ಶ ಆಯೋಜನೆ ಮಾಡುತ್ತೇವೆ; ಆದರೆ ಅದು ವಾಸ್ತವದಲ್ಲಿ ಎಂದು ಆಗುವುದಿಲ್ಲ. ನಿಮ್ಮ ಕ್ಷಮತೆ, ನಿಮ್ಮ ಬಳಿ ಲಭ್ಯವಿರುವ ಸಮಯ ಮತ್ತು ಅಭ್ಯಾಸ ಇವೆಲ್ಲದರ ವಿಚಾರ ಮಾಡಿ ವ್ಯಾಯಾಮದ ಆಯೋಜನೆ ಮಾಡಿ, ಉದಾ. ಕೆಲವರಿಗೆ ಪ್ರತಿದಿನ ಬೆಳಿಗ್ಗೆ ಬೇಗನೆ ಏಳುವ ಅಭ್ಯಾಸ ಇರುವುದಿಲ್ಲ; ಆದರೆ ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದೆಂದು ಅವನು ಹಾಗೆ ಮಾಡಲು ನಿಶ್ಚಯಿಸುತ್ತಾನೆ; ಆದರೆ ಪ್ರತ್ಯಕ್ಷದಲ್ಲಿ ಅವನಿಗೆ ಏಳಲು ಆಗುವುದಿಲ್ಲ ಮತ್ತು ಅವನ ವ್ಯಾಯಾಮವೂ ಆಗುವುದಿಲ್ಲ ಅಂತಹ ವ್ಯಕ್ತಿಗಳು ಬೆಳಗ್ಗೆ ಬೇಗ ಏಳುವ ಪ್ರಯತ್ನಿಸುವ ಬದಲು ಅವರಿಗೆ ಯಾವಾಗ ಶಕ್ತಿ ಅಥವಾ ಸಮಯವಿದೆ, ಆಗ ಸಾಯಂಕಾಲ ಅಥವಾ ರಾತ್ರಿ ವ್ಯಾಯಾಮ ಮಾಡುವ ಆಯೋಜನೆ ಮಾಡಬೇಕು. ಆದ್ದರಿಂದ ನಿಯಮಿತ ವ್ಯಾಯಾಮ ಆಗುತ್ತದೆ. ಕ್ರಮೇಣ ನಿದ್ದೆಯ ಸಮಯ ಸುಧಾರಿಸಿದ ನಂತರ ಬೆಳಗ್ಗೆ ಬೇಗನೆ ಏಳುವ ಪ್ರಯತ್ನ ಮಾಡುತ್ತಾ ವ್ಯಾಯಾಮದ ಆಯೋಜನೆ ಮಾಡಬಹುದು. ಪರಿಸ್ಥಿತಿಯನ್ನು ಗುರುತಿಸಿ ವ್ಯಾಯಾಮದ ಧ್ಯೇಯ ನಿಶ್ಚಯಿಸಿದರೆ ಖಿನ್ನತೆ ತಪ್ಪಿಸಬಹುದು. ಆದ್ದರಿಂದ ಆರಂಭದಲ್ಲಿ ಮತ್ತು ಪ್ರತಿಯೊಂದು ಸಮಯದಲ್ಲಿ ಆದರ್ಶ ಆಯೋಜನೆ ಮಾಡದೆ ನಿಮ್ಮ ಅಭ್ಯಾಸ, ಸ್ಥಿತಿ ಮತ್ತು ಸಮಯ ಇದರ ಪ್ರಕಾರ ಹಂತಹಂತವಾಗಿ ಆದರ್ಶದ ಕಡೆಗೆ ಮುಂದೆ ಸಾಗೋಣ ಮತ್ತು ವ್ಯಾಯಾಮ ದಲ್ಲಿ ಸಾತತ್ಯತೆ ಇಡೋಣ.

– ಶ್ರೀ. ನಿಮಿಷ ತ್ರಿಭುವನ ಮ್ಹಾತ್ರೆ, ಭೌತಿಕೋಪಚಾರ ತಜ್ಞ (ಫಿಜಿಯೋಥೆರಪಿಸ್ಟ್‌), ಪೋಂಡಾ, ಗೋವಾ. (೮.೯.೨೦೨೪)