ಆಧ್ಯಾತ್ಮಿಕ ತೊಂದರೆ ಇರುವ ಸಾಧಕರಿಗೆ ನಾಮಜಪದ ಉಪಾಯವನ್ನು ಮಾಡುವಾಗ ‘ಪರಾತ್ಪರ ಗುರು ಡಾ. ಆಠವಲೆಯವರೇ ಮಾಡುವವರು-ಮಾಡಿಸುವವರು ಆಗಿದ್ದಾರೆ’ ಎಂಬ ಅರಿವಾಗಿ ಅಹಂ ಹೆಚ್ಚಾಗದಿರುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಂಚಿಕೆ ಕ್ರ. ೨೫/೨೮ ರಲ್ಲಿ ಮುದ್ರಿಸಲಾದ ಸದ್ಗುರು ರಾಜೇಂದ್ರ ಶಿಂದೆಯವರ ಲೇಖನದಲ್ಲಿ  ‘ನವೆಂಬರ್‌ ೨೦೦೩ ರಿಂದ ಪ.ಪೂ ಡಾಕ್ಟರರು ಶುದ್ಧೀಕರಣ ಸತ್ಸಂಗವನ್ನು (ಟಿಪ್ಪಣಿ ೧) ತೆಗೆದುಕೊಳ್ಳುವ ಅಭಿಯಾನವನ್ನು ಪ್ರಾರಂಭಿಸಿದರು. ಈ ಸತ್ಸಂಗಗಳಲ್ಲಿ ಕಲಿಯಲು ಸಿಕ್ಕಿದ ಅಂಶಗಳು ಮತ್ತು ಅವರ ಸಾಧನೆಯಲ್ಲಿ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಲು ಆಗಿರುವ ಲಾಭಗಳನ್ನು ಓದಿದ್ದೆವು.

ಆಗಸ್ಟ್ ೨೦೧೧ ರಲ್ಲಿ ನಾನು ರಾಮನಾಥಿ ಆಶ್ರಮದಲ್ಲಿರುವಾಗ ಪ.ಪೂ. ಡಾಕ್ಟರರು ನನಗೆ ಸಂದೇಶ ಕಳುಹಿಸಿ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರಿಗೆ ಉಪಾಯ ಮಾಡಲು ಹೇಳಿದ್ದರು. ಆ ಮಾಧ್ಯಮದಿಂದ ‘ಅವರು ನನ್ನ ಅಹಂ ನಿರ್ಮೂಲನೆಯನ್ನು ಹೇಗೆ ಮಾಡಿದರು ?’, ಈ ಬಗ್ಗೆ ನನಗೆ ಕಲಿಯಲು ಸಿಕ್ಕಿದ ಅಂಶಗಳನ್ನು ಮುಂದೆ ಕೊಟ್ಟಿದ್ದೇನೆ.

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/109114.html

(ಭಾಗ ೯)

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

೧. ಆಧ್ಯಾತ್ಮಿಕ ತೊಂದರೆ ಇರುವ ಸಾಧಕರೆದುರು ಆಸನದಲ್ಲಿ ಕುಳಿತುಕೊಂಡು ನಾಮಜಪ ಮಾಡಲು ಹೇಳುವುದು

‘ನೀವು ಸಭಾಗೃಹದಲ್ಲಿ ಎಲ್ಲರೆದುರು ಇರುವ ಆಸನದಲ್ಲಿ ಕುಳಿತುಕೊಳ್ಳಿ. ನಿಮ್ಮ ಮುಂದೆ ಆಧ್ಯಾತ್ಮಿಕ ತೊಂದರೆ ಇರುವ ಕೆಲವು ಸಾಧಕರು ಕುಳಿತುಕೊಳ್ಳುತ್ತಾರೆ. ‘ಅವರಿಗೆ ಆಧ್ಯಾತ್ಮಿಕ ಸ್ತರದ ಉಪಾಯವೆಂದು ಯಾವ ನಾಮಜಪವನ್ನು ಮಾಡ ಬೇಕೆಂದು ಭಗವಂತನಿಗೆ ಪ್ರಾರ್ಥನೆ ಮಾಡಿ ಕೇಳಿ. ಯಾವ ಜಪ ಸಿಗುವುದೋ, ಅದನ್ನು ನೀವು ಮಾಡಬೇಕು’, ಎಂದು ಹೇಳಲಾಯಿತು. ನನಗಾಗಿ ಈ ಸೇವೆ ಹೊಸದಾಗಿತ್ತು.

೨. ಆಧ್ಯಾತ್ಮಿಕ ತೊಂದರೆ ಇರುವ ಸಾಧಕರಿಗೆ ನಾಮಜಪಾದಿ ಉಪಾಯಗಳನ್ನು ಮಾಡುವಾಗ ಅರಿವಾದ ಅಂಶಗಳು

೨ ಅ. ನಾಮಜಪವನ್ನು ಆರಂಭಿಸಿದಾಗ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ತೊಂದರೆ ಹೆಚ್ಚಾಗುವುದು : ನಾನು ಸಭಾಗೃಹಕ್ಕೆ ಹೋಗುವ ಮೊದಲೇ ಅಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಕೆಲವು ಸಾಧಕರು ಕುಳಿತಿದ್ದರು. ನಾನು ನನಗಾಗಿ ಇಡಲಾದ ಆಸನದಲ್ಲಿ ಹೋಗಿ ಕುಳಿತೆನು ಮತ್ತು ಭಗವಂತನಿಗೆ ಪ್ರಾರ್ಥನೆ ಮಾಡಿ ಬಂದ ನಾಮಜಪವನ್ನು ಕಣ್ಣುಗಳನ್ನು ಮುಚ್ಚಿಕೊಂಡು ಶಾಂತವಾಗಿ ಮಾಡಲಾರಂಭಿಸಿದೆನು. ಅನಂತರ ಸಾಧಕರಿಗಾಗುವ ಕೆಟ್ಟ ಶಕ್ತಿಗಳ ತೊಂದರೆ ಹೆಚ್ಚಾಯಿತು.

೨ ಆ. ಸಾಧಕರಿಗೆ ಆಧ್ಯಾತ್ಮಿಕ ಸ್ತರದ ಉಪಾಯ ಮಾಡುವಾಗ ಧ್ಯಾನ ತಗಲಿ ಯಾವುದೇ ಅರಿವು ಇಲ್ಲದಿರುವುದು : ನಾಮಜಪಾದಿ ಉಪಾಯ ಆರಂಭಿಸಿದ ನಂತರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ತೊಂದರೆ ಹೆಚ್ಚಾಯಿತು; ಆದರೆ ಆ ಸ್ಥಿತಿಯಲ್ಲಿಯೂ ನನ್ನ ಮನಸ್ಸು ಸಂಪೂರ್ಣ ಏಕಾಗ್ರವಾಗಿ ‘ನನಗೆ ಯಾವಾಗ ಧ್ಯಾನ ತಗಲುತ್ತಿತ್ತೋ, ಅದು ನನಗೆ ಗೊತ್ತಾಗುತ್ತಿರಲಿಲ್ಲ. ನನಗೆ ಕೇವಲ ಅಸ್ಪಷ್ಟವಾಗಿ ‘ಅಕ್ಕಪಕ್ಕದಲ್ಲಿ ಏನೋ ನಡೆದಿದೆ’, ಎಂದು ಕೆಲವೊಮ್ಮೆ ಅರಿವಾಗುತ್ತಿತ್ತು; ಆದರೆ ಆ ಬಗ್ಗೆ ನನ್ನ ಮನಸ್ಸಿನಲ್ಲಿ ಯಾವುದೇ ಸಂವೇದನೆ ಏಳುತ್ತಿರಲಿಲ್ಲ ನನ್ನ ಶರೀರ ಸ್ವಲ್ಪವೂ ಅಲು ಗಾಡುತ್ತಿರಲಿಲ್ಲ. ಆಗ ‘ನನ್ನ ಶರೀರ ಆಸನಕ್ಕೆ ಅಂಟಿಕೊಂಡಿದೆ’, ಎಂದು ನನಗೆ ಅನಿಸುತ್ತಿತ್ತು. ನನಗೆ ಸಮಯದ ಅರಿವು ಅಥವಾ ದೇಹದ ಅರಿವು ಇರುತ್ತಿರಲಿಲ್ಲ. ನಾಮಜಪಾದಿ ಉಪಾಯವು ಮುಗಿದಾಗ ಯಾರಾದರೂ ನನ್ನನ್ನು ಸ್ಪರ್ಶಿಸಿ ಎಬ್ಬಿಸುತ್ತಿದ್ದರು, ಆಗ ನಾನು ಅರಿವಿಗೆ ಬರುತ್ತಿದ್ದೆನು. ಅಲ್ಲಿಯವರೆಗೆ ೨-೩ ಗಂಟೆಗಳು ಉರುಳಿ ಹೋಗುತ್ತಿದ್ದವು. ಈ ನಾಮಜಪಾದಿ ಉಪಾಯಗಳಿಂದ ಸಾಧಕರ ಆಧ್ಯಾತ್ಮಿಕ ತೊಂದರೆ ಕಡಿಮೆ ಆಗಿರುತ್ತಿತ್ತು.

೩. ‘ಕೆಟ್ಟ ಶಕ್ತಿಗಳ ಮೇಲೆ ಪರಾತ್ಪರ ಗುರು ಡಾ. ಆಠವಲೆಯವರ ಸಂಪೂರ್ಣ ನಿಯಂತ್ರಣವಿದೆ’, ಎಂದು ಗಮನಕ್ಕೆ ಬರುವುದು

ಒಂದು ಸಲ ಇದೇ ರೀತಿಯ ಆಧ್ಯಾತ್ಮಿಕ ಸ್ತರದ ಉಪಾಯಗಳ ಸತ್ರವು ನಡೆದಿತ್ತು. ಸಾಧಕರಿಗಾಗುವ ಕೆಟ್ಟ ಶಕ್ತಿಗಳ ತೊಂದರೆಯು ಹೆಚ್ಚಾಗಿತ್ತು. ಆದುದರಿಂದ ‘ಈಗ ಏನು ಮಾಡಬೇಕು ?’, ಎಂದು ಕೇಳಲು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಪ.ಪೂ. ಡಾಕ್ಟರರ ಕೋಣೆಗೆ ಹೋದರು. ಆಗ ಪ.ಪೂ. ಗುರುದೇವರು ಅವರಿಗೆ, ”ಅವರಿಗೆ (ಕೆಟ್ಟ ಶಕ್ತಿಗಳಿಗೆ) ಹೇಳಿ, ಈಗ ಸಾಕು, ಶಾಂತರಾಗಿ”, ಎಂದು ಹೇಳಿದರು. ಪ.ಪೂ ಗುರುದೇವರ ಈ ಸಂದೇಶವನ್ನು ಪಡೆದು ಸೌ. ಗಾಡಗೀಳಕಾಕು ಇವರು ಸಭಾಗೃಹಕ್ಕೆ ಬರುವವರೆಗೆ ಎಲ್ಲರ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗಿತ್ತು. ಇದರ ಅರ್ಥ ‘ಯಾವ ಕ್ಷಣ ಪ.ಪೂ. ಡಾಕ್ಟರರು ‘ಶಾಂತರಾಗಿ’, ಎಂದು ಹೇಳಿದರೋ ಅದೇ ಕ್ಷಣ ಎಲ್ಲರ ತೊಂದರೆ ಕಡಿಮೆಯಾಗಿತ್ತು. ಇದರಿಂದ ‘ಕೆಟ್ಟ ಶಕ್ತಿಗಳ ಮೇಲೆ ಪ.ಪೂ. ಗುರುದೇವರ ಸಂಪೂರ್ಣ ನಿಯಂತ್ರಣವಿದೆ’, ಎಂದು ನನ್ನ ಗಮನಕ್ಕೆ ಬಂದಿತು. ಆದುದರಿಂದ ಸಾಧನೆಯಲ್ಲಿ ಕೆಟ್ಟ ಶಕ್ತಿಗಳಿಂದಾಗುವ ವಿರೋಧದ ಬಗ್ಗೆ ಅನಿಸುವ ಭಯ ಕಡಿಮೆಯಾಯಿತು.

ಪ.ಪೂ. ಡಾಕ್ಟರರು ಬರೆದ ‘ಶಕ್ತಿ ಸ್ತವನ’ದಲ್ಲಿ ಆದಿಶಕ್ತಿಯನ್ನು ಸ್ತುತಿಸುವಾಗ ಒಂದು ಸಾಲು ಹೀಗಿದೆ, ‘ನಾನಾ ವಿಧದಲ್ಲಿ ನೀನೇ ಪ್ರಕಟಿಣಿ | ಸುರ-ಅಸುರರಲ್ಲಿನ ಶಕ್ತಿಯು ನೀನೇ ||’, ಇದು ಈ ಸಾಲಿನ ಅನುಭೂತಿಯಾಗಿತ್ತು.

೪. ಕಲಿಯಲು ಸಿಕ್ಕಿದ ಅಂಶಗಳು

ಅ. ಗುರುದೇವರು ನನಗೆ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರೆದುರು ನಾಮಜಪ ಮಾಡುತ್ತಾ ಕುಳಿತುಕೊಳ್ಳಲು ಹೇಳಿದಾಗ, ಅವರ ಸಂಕಲ್ಪದಿಂದ ನನಗೆ ಸಹಜವಾಗಿ ಧ್ಯಾನ ತಗಲಿತು. ಸಾಮಾನ್ಯವಾಗಿ ನನಗೆ ಧ್ಯಾನ ತಗಲುವುದು ಕಠಿಣವಾಗುತ್ತದೆ.

ಆ. ಆಧ್ಯಾತ್ಮಿಕ ಸ್ತರದ ಉಪಾಯಗಳ ಸಮಯದಲ್ಲಿ ಸಾಧಕರಿಗೆ ತೊಂದರೆ ನೀಡುವ ಸೂಕ್ಷ್ಮದ ದೊಡ್ಡ ಕೆಟ್ಟ ಶಕ್ತಿ ಮತ್ತು ಸಾಧಕ ರಿಗಾಗಿ ನಾಮಜಪಾದಿ ಉಪಾಯ ಮಾಡುವ ಸಂತರ ನಡುವೆ ಸೂಕ್ಷ್ಮದಲ್ಲಿ ಯುದ್ಧವಾಗುತ್ತದೆ. ಈ ಯುದ್ಧದಲ್ಲಿ ಕೆಟ್ಟ ಶಕ್ತಿಗಳ ಶಕ್ತಿ ಬಹಳಷ್ಟು ಖರ್ಚಾಗುತ್ತದೆ; ಆದರೆ ನನಗೆ ಇದ್ಯಾವುದರ ಅರಿವಾಗುತ್ತಿರಲಿಲ್ಲ; ಆದರೂ ಸಾಧಕರ ತೊಂದರೆ ಕಡಿಮೆಯಾಗಿತ್ತು.

ಇ. ‘ನನ್ನನ್ನು ನಿಮಿತ್ತ ಮಾಡಿ ಪ.ಪೂ. ಡಾಕ್ಟರರೇ ಕೆಟ್ಟ ಶಕ್ತಿಗಳೊಂದಿಗೆ ಸೂಕ್ಷ್ಮದಿಂದ ಹೋರಾಡುತ್ತಿದ್ದರು, ಹಾಗಾಗಿ ಕೆಟ್ಟ ಶಕ್ತಿಗಳು ಸೋಲುತ್ತಿದ್ದವು. ಇದರಿಂದ ‘ಮಾಡುವವರು-ಮಾಡಿಸುವವರು ಪ.ಪೂ. ಡಾಕ್ಟರರೇ ಆಗಿದ್ದಾರೆ’, ಎಂದರಿವಾಯಿತು

ಈ. ಆದುದರಿಂದ ‘ಸಾಧಕರ ಆಧ್ಯಾತ್ಮಿಕ ತೊಂದರೆ ನನ್ನಿಂದ ಕಡಿಮೆಯಾಯಿತು’, ಎಂಬ ಅಹಂನ ವಿಚಾರ ಎಷ್ಟು ಅಯೋಗ್ಯವಾಗಿದೆ ?’, ಎಂದೂ ನನ್ನ ಗಮನಕ್ಕೆ ಬಂದಿತು. ಇದರಿಂದ ನನ್ನ ಅಹಂ ಕಡಿಮೆಮಾಡಲು ಬಹಳ ಲಾಭವಾಯಿತು.

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಪುಷ್ಪಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಲ್ಲಿಯೇ ಸಮರ್ಪಿಸುತ್ತೇನೆ !’

(ಮುಂದುವರಿಯುವುದು)

– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ಪನವೇಲ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.