ಒಟಾವಾ – ಕೆನಡಾದಲ್ಲಿ, ಖಲಿಸ್ತಾನ್ ಬೆಂಬಲಿಗರು ಇಂದಿರಾ ಗಾಂಧಿಯವರ ಹತ್ಯೆಯನ್ನು ಬಿಂಬಿಸುವ ಪೋಸ್ಟರ್‌ಗಳನ್ನು ಹಾಕಿದ್ದಾರೆ. ಈ ಮೂಲಕ ಭಾರತೀಯರಿಗೆ ಬೆದರಿಕೆ ಹಾಕಲು ಆರಂಭಿಸಿದ್ದಾರೆ. ಈ ಭಿತ್ತಿಚಿತ್ರಗಳಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಇವರಿಗೆ ಗುಂಡುಗಳು ತಾಗಿರುವ ಶವ ಮತ್ತು ಅವರ ಹಂತಕರು ಕೈಯಲ್ಲಿ ಬಂದೂಕು ಹಿಡಿದು ನಿಂತಿರುವಂತೆ ತೋರಿಸುತ್ತವೆ. ಭಾರತೀಯ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಚಂದ್ರಾ ಆರ್ಯ ಮಾತನಾಡಿ, “’ಈ ಬೆದರಿಕೆಗಳ ಸರಣಿ ಮುಂದುವರಿಯುತ್ತದೆ. ಕೆಲವು ತಿಂಗಳ ಹಿಂದೆ ‘ಸಿಖ್ಸ್ ಫಾರ್ ಜಸ್ಟಿಸ್’ ಎಂಬ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕ ಪನ್ನು ಹಿಂದೂಗಳನ್ನು ಭಾರತಕ್ಕೆ ಮರಳಿ ಹೋಗುವಂತೆ ಹೇಳಿದ್ದ. ಹಿಂದೂಗಳನ್ನು ಬೆದರಿಸಲು ಇಂತಹ ಫಲಕಗಳನ್ನು ಬಳಸಲಾಗುತ್ತಿದೆ. ಈ ಅಪರಾಧಿಗಳನ್ನು ಸಡಿಲಗೊಳಿಸಿದರೆ, ಅವರು ನಿಜವಾಗಿಯೂ ಅಪಾಯಕಾರಿಯಾಗಬಹುದು. ಇಂದಿರಾ ಗಾಂಧಿ ಇವರ ಹಣೆಯ ಮೇಲೆ ಕುಂಕುಮ ತೋರಿಸುವುದು, ಇದರ ಅರ್ಥ ಖಲಿಸ್ತಾನಿ ಭಯೋತ್ಪಾದಕರ ಗಮನವನ್ನು ‘ಹಿಂದೀ-ಕೆನಡಿಯನ್’ಗೆ ಹೊರಳಿಸುವುದಾಗಿದೆ. ಕೆನಡಾದ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನಾವು ಒತ್ತಾಯಿಸುತ್ತೇವೆ.”
If criminals glorifying violence are let free, it is dangerous for a civilized society. – Indian origin Canadian MP, @AryaCanada
Issue of Khalistanis put up posters of Indira Gandhi’s assassination in #Canada
‘The depiction of Indira Gandhi with a prominent bindi was to clearly… pic.twitter.com/cOaW2tQDYv
— Sanatan Prabhat (@SanatanPrabhat) June 8, 2024