MP Love Jihad : ನಿಶ್ಚಿತಾರ್ಥಗೊಂಡಿರುವ ಓರ್ವ ಹಿಂದೂ ಯುವತಿಯ ಕುಟುಂಬದವರನ್ನು ಅಮಾನುಷವಾಗಿ ಥಳಿಸಿದ ಆಬಿದ ಖಾನ್ !

  • ಅಶೋಕನಗರ (ಮಧ್ಯಪ್ರದೇಶ)ದಲ್ಲಿ ಲವ್ ಜಿಹಾದ್ !

  • ಸಂತ್ರಸ್ತೆಯ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿದ್ದ, ವಿವಾಹ ನಿಶ್ಚಯವಾಗಿರುವುದರಿಂದ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ !

ಅಶೋಕ ನಗರ (ಮಧ್ಯಪ್ರದೇಶ) – ಆಬಿದ ಖಾನ್ ಎಂಬ ಯುವಕನು ೨೨ ವರ್ಷದ ಹಿಂದೂ ಯುವತಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಲು ಪ್ರಯತ್ನಿಸಿದನು. ಆಕೆಯ ಮೇಲೆ ಹಲವಾರು ಬಾರಿ ಬಲಾತ್ಕಾರ ಮಾಡಿದ್ದನು. ಬಲಾತ್ಕಾರದ ವಿಡಿಯೋ ಕೂಡ ತಯಾರಿಸಿದ್ದನು. ಮುಂದೆ ಯಾವ ಯುವಕನೊಂದಿಗೆ ವಿವಾಹ ನಿಶ್ಚಯವಾದನಂತರ ಅಬಿದ ಖಾನ್ ತನ್ನ ಸ್ನೇಹಿತರ ಜೊತೆಗೆ ಕತ್ತಿಯ ಭಯ ತೋರಿಸಿ ಮನೆಯಿಂದ ಹುಡುಗಿಯನ್ನು ಅಪಹರಿಸಲು ಪ್ರಯತ್ನಿಸಿದನು. ಸಂತ್ರಸ್ತೆಯ ತಂದೆ ಮತ್ತು ಸಹೋದರರು ವಿರೋಧಿಸಿದಾಗ ಆಬಿದ ಖಾನ ಸಂತ್ರಸ್ತೆಯ ತಂದೆಯ ಒಂದು ಕಾಲು ಹಾಗೂ ಸಹೋದರನ ಒಂದು ಕೈ ಮುರಿದನು ಹಾಗೂ ತಾಯಿಗೂ ಕೂಡ ಹಿಗ್ಗಾಮುಗ್ಗಾ ಥಳಿಸಿದನು. ಕುಟುಂಬದವರು ಕೂಗಾಡಿದಾಗ ಪರಿಸರದಲ್ಲಿನ ಜನರು ಮುಸಲ್ಮಾನ ಗುಂಡಾಗಳಿಗೆ ಬೆದರಿಸಿದರು. ಹೆಚ್ಚುತ್ತಿರುವ ಜನದಟ್ಟಣೆ ನೋಡಿ ಅವರು ಹುಡುಗಿಯನ್ನು ಬಿಟ್ಟು ಓಡಿ ಹೋಗಿದ್ದನು.(ಈ ರೀತಿ ಹಿಂದೂ ಕುಟುಂಬಗಳು ಅಸುರಕ್ಷಿತವಾಗಿ ಇರಲು ಇದು ಭಾರತವೇ ಅಥವಾ ಪಾಕಿಸ್ತಾನವೇ ? – ಸಂಪಾದಕರು)

1. ಹುಡುಗಿಯ ಕುಟುಂಬದವರಿಗೆ ಮತ್ತು ಆಕೆಯೊಂದಿಗೆ ನಿಶ್ಚಿತಾರ್ಥಗೊಂಡ ಹುಡುಗನ ಕುಟುಂಬದವರಿಗೂ ಹೆದರಿಸಲಾಗಿತ್ತು. ಈ ಸಮಯದಲ್ಲಿ ಆಬಿದ ಮತ್ತು ಇತರ ಗೂಂಡಾಗಳು ಕತ್ತಿಗಳು ಮತ್ತು ಕಬ್ಬಿಣದ ರಾಡುಗಳನ್ನು ತಂದಿದ್ದರು.

೨. ಪೊಲೀಸ ಅಧಿಕಾರಿ ವಿನಯಕುಮಾರ ಜೈನ್ ಇವರು ಮುಖ್ಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅವನ ಸಹಚರರನ್ನು ಹುಡುಕುತ್ತಿದ್ದಾರೆ.

ಪೊಲೀಸರಿಂದ ದೂರು ದಾಖಲಿಸಿಕೊಳ್ಳಲು ಮೀನಾಮೇಷ !

ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳಲು ಮೀನಾಮೇಷ ಮಾಡುತ್ತಿರುವುದು ತಿಳಿದುಬಂದಿತ್ತು. ಬಳಿಕ ಹಿಂದುತ್ವನಿಷ್ಠ ಸಂಘಟನೆಗಳು ಒತ್ತಡ ಹೇರಿದ ನಂತರ ದೂರು ದಾಖಲಿಸಿಕೊಳ್ಳಲಾಗಿದೆ; ಆದರೆ ಇದಕ್ಕಾಗಿ ಸಂತ್ರಸ್ತ ಕುಟುಂಬದವರಿಗೆ ೬-೭ ಗಂಟೆಗಳ ಕಾಲ ಪೊಲೀಸ ಠಾಣೆಯಲ್ಲಿ ನಿಲ್ಲಬೇಕಾಯಿತು. ರಾತ್ರಿ ಒಂದು ಗಂಟೆಯ ಸುಮಾರಿಗೆ ದೂರು ದಾಖಲಿಸಲಾಯಿತು. (ಭಾಜಪದ ಸರಕಾರ ಇರುವ ಮಧ್ಯಪ್ರದೇಶದಲ್ಲಿ ಅಲ್ಲಿಯ ಪೊಲೀಸರಿಂದ ಈ ರೀತಿಯ ಹಿಂದುಗಳ ಮೇಲಿನ ದೌರ್ಜನ್ಯದ ಪ್ರಕರಣದ ಕುರಿತು ಈ ರೀತಿ ವರ್ತಿಸುವುದು ಇದು ಹಿಂದುಗಳಿಗೆ ಅಪೇಕ್ಷಿತವಿಲ್ಲ ! ಇಂತಹ ಪೊಲೀಸರನ್ನು ತಕ್ಷಣ ಅಮಾನತುಗೊಳಿಸಬೇಕು – ಸಂಪಾದಕರು)

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಇದ್ದರೂ ಕೂಡ ಕಳೆದ ತಿಂಗಳಲ್ಲಿ ಲವ್ ಜಿಹಾದ್ ನ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ಅನೇಕ ಘಟನೆಯಲ್ಲಿ ಹಿಂದೂ ಯುವತಿ ಅಥವಾ ಆಕೆಯ ಕುಟುಂಬದವರ ಮೇಲೆ ಹಲ್ಲೆಗಳು ಮಾಡಲಾಗಿದೆ ಅಥವಾ ಅವರನ್ನು ಅಪಹರಿಸಲಾಗಿದೆ. ಇಂತಹ ಘಟನೆಗಳನ್ನು ತಡೆಯುವುದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಏನು ಮಾಡುತ್ತಿದ್ದಾರೆ ?