ಆತ್ಮಕಲ್ಯಾಣಕ್ಕಿಂತ ಲೋಕಕಲ್ಯಾಣ ಹೆಚ್ಚು ಶ್ರೇಯಸ್ಕರ !

‘ಆತ್ಮಕಲ್ಯಾಣಕ್ಕಿಂತ ಲೋಕಕಲ್ಯಾಣವು ಹೆಚ್ಚು ಶ್ರೇಯಸ್ಕರವಾಗಿರುತ್ತದೆ. ಶುದ್ಧ ಸತ್ತ್ವಗುಣಗಳ ಮೇಲೆ ವಿರಾಜಮಾನರಾಗದೇ ನಿಜವಾದ ಲೋಕಕಲ್ಯಾಣದ ಆಸೆ ಮನಸ್ಸಿನಲ್ಲಿ ಸೃಷ್ಟಿಯಾಗುವುದಿಲ್ಲ. ಇಂತಹ ಲೋಕಕಲ್ಯಾಣಕ್ಕಾಗಿ ಮಾಡಿದ ಯಾವುದೇ ಕೃತಿಯು ಮೇಲ್ನೋಟಕ್ಕೆ ಹಿಂಸಕವೆಂದು ಕಂಡು ಬರುತ್ತಿದ್ದರೂ ಅದು ಅಹಿಂಸೆಯೇ ಆಗಿರುತ್ತದೆ. ಹಿಂಸೆ ಮತ್ತು ಅಹಿಂಸೆಯ ನಿರ್ಣಯವನ್ನು ಕೃತಿಯಿಂದಲ್ಲ ಆದರೆ ವೃತ್ತಿಯಿಂದಲೇ ತೆಗೆದುಕೊಳ್ಳಬೇಕಾಗುತ್ತದೆ; ಏಕೆಂದರೆ ಸಾತ್ತ್ವಿಕತೆಯಲ್ಲಿಯೇ ಅಹಿಂಸೆಯು ಅಡಗಿರುತ್ತದೆ. ಅದೇ ಈಶ್ವರಪ್ರವಣ ಮಾಡುತ್ತದೆ.

– ಸ್ವಾಮಿ ವಿದ್ಯಾನಂದ (ಆಧಾರ : ಗ್ರಂಥ ‘ಚಿಂತನಧಾರಾ’)