ಸಪ್ತರ್ಷಿಗಳ ಆಜ್ಞೆಯಂತೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಪ್ಯಾರೀಸ್‌ ನಗರದ ದೈವೀ ಪ್ರವಾಸದ ವಾರ್ತೆ

ದೋಣಿಯಲ್ಲಿ ನಿಂತಿರುವ (ಎಡದಿಂದ) ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ! ಹಿಂದಿನ ಭಾಗದಲ್ಲಿ ಶ್ರೀ ಪರಮೇಶ್ವರೀದೇವಿಯ ಸ್ಥಾನ ಆಗಿರುವ ನೋಟ್ರೇ ಡೆಮ್‌ ಕ್ಯಥೆಡ್ರಲ್‌

‘ಹಿಂದಿನ ಕಾಲದಲ್ಲಿ ಸಂತರು ಮತ್ತು ಮಹಾಪುರುಷರು ಅನೇಕ ತೀರ್ಥಯಾತ್ರೆಗಳನ್ನು ಮಾಡುತ್ತಿದ್ದರು. ದಾರಿಯಲ್ಲಿ ಎಲ್ಲಿ ಈಶ್ವರನ ಭಕ್ತರು ಇರುತ್ತಿದ್ದರೋ, ಅಲ್ಲಿ ಅವರ ಮನೆಯಲ್ಲಿ ವಾಸ ಮಾಡಿ ಅವರಿಗೆ ಆನಂದವನ್ನು ಕೊಡುತ್ತಿದ್ದರು. ತಾವು ಕೂಡ ಇಂತಹ ಕೆಲವು ಸಂತರು ಮತ್ತು ಮಹಾಪುರುಷರ ಪ್ರವಾಸದ ವರ್ಣನೆಗಳನ್ನು ಓದಿರಬಹುದು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ಕೃಪಾಶೀರ್ವಾದದಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಮಾಡಿದ ವಿದೇಶ ಪ್ರವಾಸದ ಸಚಿತ್ರ ವರ್ಣನೆಯನ್ನು ಈ ಲೇಖನದ ಮೂಲಕ ಅನುಭವಿಸೋಣ. ಸಪ್ತರ್ಷಿಗಳು ಸಾವಿರಾರು ವರ್ಷಗಳ ಹಿಂದೆ ನಾಡಿಪಟ್ಟಿಯಲ್ಲಿ ಬರೆದಿರುವಂತೆ ಪ್ರವಾಸ ಮಾಡುವುದು ಅಷ್ಟು ಸುಲಭವಲ್ಲ. ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಸಪ್ತರ್ಷಿಗಳ ಆಜ್ಞೆಯನ್ನು ಹೇಗೆ ಪಾಲನೆ ಮಾಡಿದರು’, ಎಂಬುದನ್ನು ಕೂಡ ನಾವು ಈ ದೈವೀ ಪ್ರವಾಸದ ವರ್ಣನೆಯಿಂದ ತಿಳಿದುಕೊಳ್ಳೋಣ.

ಪ್ರವಾಸದ ಹಿನ್ನೆಲೆ

ಆಗಸ್ಟ್ ೨೦೨೨ ರಲ್ಲಿ ಸಪ್ತರ್ಷಿಗಳು ಸಪ್ತರ್ಷಿ ಜೀವನಾಡಿಪಟ್ಟಿಯ ವಾಚನದಲ್ಲಿ ‘ಏಪ್ರಿಲ್‌ ೨೦೨೩ ರಲ್ಲಿ  ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಯುರೋಪ್‌ ಮತ್ತು ಬ್ರಿಟನ್‌ನ ಪ್ರವಾಸ ಮಾಡಬೇಕು. ಈ ಪ್ರವಾಸವೆಂದರೆ ಧರ್ಮಸಂಸ್ಥಾಪನೆಯ ಒಂದು ಐತಿಹಾಸಿಕ ಹಂತವಾಗಿರಲಿದೆ. ಪ್ರವಾಸವನ್ನು  ಯುರೋಪ್‌ನ ಉತ್ತರ ಸಮುದ್ರದ ಕಡೆಗೆ ದ್ವೀಪನಗರಿಯಿಂದ ಆರಂಭಿಸಬೇಕು. ನೀರಿನಲ್ಲಿರುವ ಈ ನಗರಕ್ಕೆ ಮೊದಲು ಹೋಗಬೇಕು. (ಈ ನಗರ, ಅಂದರೆ ನೆದರ್‌ಲ್ಯಾಂಡನ  ರಾಜಧಾನಿ ಎಮ್ಸ್ಟರ್‌ಡ್ಯಾಮ್‌ – ಸಂಕಲನಕಾರರು). ಇಲ್ಲಿಂದ ಪ್ಯಾರೀಸ್‌ಗೆ ಹೋಗಬೇಕು. ಅಲ್ಲಿ ದೇವಿಯ ಪ್ರಾಚೀನ ಮುಖ್ಯ ಸ್ಥಾನಕ್ಕೆ ಹೋಗಬೇಕು’, ಎಂದು ಹೇಳಿದ್ದರು.

ಪರಮೇಶ್ವರಿದೇವಿಯ ಮಂದಿರವೆಂದರೆ ‘ಅವರ್‌ ಲೇಡಿ ಆಫ್‌ ಪ್ಯಾರೀಸ್’ ಈ ಚರ್ಚ್‌ನ ಕಡೆಗೆ ನೋಡುವಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಬಂದಿರುವ ದೈವೀ ಅನುಭೂತಿಗಳು

೬.೪.೨೦೨೩ ರಂದು ಸಪ್ತರ್ಷಿಗಳು ಹೇಳಿದಂತೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಪ್ಯಾರೀಸ್‌ ನಗರದ ಪರಮೇಶ್ವರೀದೇವಿಯ ಸ್ಥಾನದ (ನೋಟ್ರೆಡೇಮ್‌ ಕ್ಯಥೆಡ್ರಲ್‌ನ) ದರ್ಶನ ಪಡೆಯಲು ನಿರ್ಧರಿಸಿದರು. ನಾವು ಅಲ್ಲಿಗೆ ಹೊರಟೆವು, ಆದರೆ ಆ ದಿನವೇ ಫ್ರಾನ್ಸ್ ಸರಕಾರದ ವಿರುದ್ಧ ಧರಣಿ ಮುಷ್ಕರ ನಡೆಯುತ್ತಿದ್ದ ಕಾರಣ ಕ್ಯಥೆಡ್ರಲ್‌ ಮುಚ್ಚಲಾಗಿತ್ತು. ಸ್ವಲ್ಪ ಹೊತ್ತಿನಲ್ಲಿ ನಾವು ಸೀನ್‌ ನದಿಯಿಂದ ಪ್ಯಾರೀಸ್‌ ನಗರದ ದರ್ಶನ ಮಾಡಿಸುವ ಒಂದು ದೋಣಿಯಲ್ಲಿ ಹೋದೆವು. ಆ ದೋಣಿ ನೋಟ್ರೆ ಡೇಮ್‌ ಕ್ಯಥೆಡ್ರಲ್‌ನ ಸಮೀಪ ಬಂದಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ತುಂಬಾ ಒಳ್ಳೆಯ ಅನುಭೂತಿಗಳು ಬಂದವು.

ಅ. ಇಬ್ಬರ ಮೈ ರೋಮಾಂಚವಾಯಿತು.

ಆ. ಇಬ್ಬರಿಗೂ ದೇವಿಯ ಗರ್ಭಗುಡಿಯಲ್ಲಿ ಬರುವಂತಹ ಕುಂಕುಮದ ಒಳ್ಳೆಯ ಸುಗಂಧ  ಬಂದಿತು.

ಇ. ಇಬ್ಬರಿಗೂ ದೇವಿಯ ಮಂದಿರದಲ್ಲಿ ಎಣ್ಣೆಯ ದೀಪ ಹಚ್ಚಿದಾಗ ಬರುವಂತಹ ಸುಗಂಧ ಬಂದಿತು.

ಈ. ಇಬ್ಬರಿಗೂ ದೇವಿಯ ಆರತಿಯ ನಾದ ಕೇಳಿಸಿತು. ಅದರಿಂದ ಇಬ್ಬರ ಭಾವ ಉಕ್ಕಿ ಬಂದಿತು. ಅವರ ಮುಖದ ಮೇಲೆ ಒಂದು ಬೇರೆಯೆ ಆನಂದ ಕಾಣಿಸುತ್ತಿತ್ತು.

ನೋಟ್ರೆ ಡೇಮ್‌ ಕ್ಯಥೆಡ್ರಲ್‌ನ ಮುಂಭಾಗ (೨೦೨೩)

‘ಆಪತ್ಕಾಲದಲ್ಲಿ ಪರಮೇಶ್ವರೀ ದೇವಿಯ ಮಹಿಮೆ ಗಮನಕ್ಕೆ ಬರುವುದಿದೆ’, ಎಂದು ಸಪ್ತರ್ಷಿಗಳು ಹೇಳಿದ್ದಾರೆ

ಇವೆಲ್ಲವನ್ನೂ ಸಪ್ತರ್ಷಿಗಳ ಚರಣಗಳಲ್ಲಿ ನಿವೇದನೆ ಮಾಡಿದಾಗ ಅವರು, ‘ಪರಮೇಶ್ವರಿದೇವಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಪ್ಯಾರೀಸ್‌ಗೆ ಯಾವಾಗ ಬರುವರು’, ಎಂದು ದಾರಿ ನೋಡುತ್ತಿದ್ದಳು ಮುಂಬರುವ ಆಪತ್ಕಾಲದಲ್ಲಿ ಈ ದೇವಿಯ ಮಹಿಮೆ ಗಮನಕ್ಕೆ ಬರಲಿದೆ’ ಎಂದು ಹೇಳಿದರು.

ಫ್ರಾನ್ಸ್ ದೇಶದ ರಾಜಧಾನಿ ಪ್ಯಾರೀಸ್‌ ನಗರದಲ್ಲಿನ ‘ಪರಮೇಶ್ವರೀದೇವಿ‘ಯ ಸ್ಥಾನದ ಶೋಧ !

ಪು.ನಾ. ಓಕ್

೧. ಖ್ಯಾತ ಇತಿಹಾಸತಜ್ಞ ಪು.ನಾ. ಓಕ್‌ ಇವರು ಬರೆದ ಶೋಧಗ್ರಂಥದಲ್ಲಿ ಪರಮೇಶ್ವರೀ ದೇವಿಯ ಪ್ರಾಚೀನ ಮುಖ್ಯ ಸ್ಥಾನದ ಶೋಧ ಆಗುವುದು

‘ಪ್ಯಾರೀಸ್‌ಗೆ ಹೋದಾಗ ಅಲ್ಲಿನ ದೇವಿಯ ಮುಖ್ಯ ಸ್ಥಾನಕ್ಕೆ ಹೋಗಬೇಕೆಂದು ಸಪ್ತರ್ಷಿಗಳು ಹೇಳಿದ್ದರು. ‘ಪ್ಯಾರೀಸ್‌ನಲ್ಲಿ ಅದು ಎಲ್ಲಿದೆ ?’, ಎಂಬುದು ತಿಳಿದಿರಲಿಲ್ಲ. ಈ ಬಗ್ಗೆ ಹುಡುಕಿದಾಗ  ಖ್ಯಾತ ಇತಿಹಾಸತಜ್ಞ ಪು.ನಾ. ಓಕ್‌ ಇವರು ಬರೆದ ‘ವರ್ಲ್ಡ್‌ ವೇದಿಕ್‌ ಹೆರಿಟೇಜ್’ ಈ ಗ್ರಂಥದಲ್ಲಿ ಅದು ಸಿಕ್ಕಿತು.

ನೋಟ್ರೆ ಡೇಮ್‌ ಕ್ಯಥೆಡ್ರಲ್‌ನ ಗಂಟೆ

೨. ಆದಿಶಕ್ತಿಯ ರೂಪವಾಗಿರುವ ಪರಮೇಶ್ವರೀ ದೇವಿಯ ಹೆಸರಿನಿಂದ ಫ್ರಾನ್ಸ್ ದೇಶದ ರಾಜಧಾನಿಗೆ ‘ಪ್ಯಾರೀಸ್’ ಹೆಸರು ಲಭಿಸಿದೆ 

ಫ್ರಾನ್ಸ್ ದೇಶದ ರಾಜಧಾನಿಗೆ ‘ಪ್ಯಾರೀಸ್’ ಎಂಬ ಹೆಸರು ಆದಿಶಕ್ತಿಯ ರೂಪ ಆಗಿರುವ ಪರಮೇಶ್ವರಿದೇವಿಯ ಹೆಸರಿನಿಂದ ಲಭಿಸಿದೆ. ರೋಮನ್‌ ಸಭ್ಯತೆಯ ಕಾಲದಲ್ಲಿ ಪ್ಯಾರೀಸ್‌ ನಗರಕ್ಕೆ ‘ಪ್ಯರಿಶೋರಿಯಮ್’ ಎಂದು ಸಂಬೋಧಿಸಲಾಗುತ್ತಿತ್ತು. ಇದು ನಿಜವಾಗಿಯೂ ‘ಪರಮೇಶ್ವರೀ’ ಈ ದೇವಿಯ ಹೆಸರಿನ ಅಪಭ್ರಂಶವಾಗಿದೆ; ಏಕೆಂದರೆ ಪ್ಯಾರೀಸ್‌ ಇದು ಪ್ರಾಚೀನ ಕಾಲದಲ್ಲಿ ಪರಮೇಶ್ವರಿಯ ಸ್ಥಾನವಾಗಿತ್ತು. ಪ್ಯಾರೀಸ್‌ ನಗರದ ಮಧ್ಯಭಾಗದಲ್ಲಿ ಸೀನ್‌ ನದಿಯ ತೀರದಲ್ಲಿರುವ ‘ನೋಟ್ರೆ ಡೇಮ್‌ ಕ್ಯಥೆಡ್ರಲ್’ ಜಗತ್ಪ್ರಸಿದ್ಧವಾಗಿದೆ. ಕ್ಯಥೆಡ್ರಲ್‌ ಎಂದರೆ ಚರ್ಚ್ ಮತ್ತು ಈ ಚರ್ಚ್ ‘ಅವರ್‌ ಲೇಡಿ ಆಫ್‌ ಪ್ಯಾರೀಸ್’ (ಅವರ್‌ ಲೇಡಿ’ ಎಂದರೆ ‘ನಮ್ಮ ತಾಯಿ’), ಪ್ಯಾರೀಸ್‌ನ ತಾಯಿಯ ಸ್ಥಾನವಾಗಿದೆ. ಫ್ರಾನ್ಸ್ ದೇಶದ ಜನರಲ್ಲಿ ‘ಅವರ್‌ ಲೇಡಿ ಆಫ್‌ ಪ್ಯಾರೀಸ್’ ಈ ದೇವತೆ ಫ್ರಾನ್ಸ್ ದೇಶವನ್ನು ರಕ್ಷಿಸುವ ದೇವತೆಯಾಗಿದ್ದಾಳೆ’, ಎಂಬ ನಂಬಿಕೆಯಿದೆ. ಈ ಚರ್ಚ್‌ನ ಒಳಗೆ ೧೦ ದೊಡ್ಡ ಗಂಟೆಗಳಿವೆ. ಪ್ರತಿಯೊಂದು ಗಂಟೆ ಸುಮಾರು ಒಂದು ಕೋಣೆಯಷ್ಟು ದೊಡ್ಡದಿದೆ. ಈ ಚರ್ಚ್‌ನ ಒಳಗೆ ೧೨ ರಾಶಿಗಳ ಚಿತ್ರ ಇವೆ. ‘ಇದು ಚರ್ಚ್ ಆಗಿದ್ದರೆ, ಇಲ್ಲಿ ೧೨ ರಾಶಿಗಳ ಚಿತ್ರ ಹೇಗೆ ? ಅಥವಾ ಇಷ್ಟು ದೊಡ್ಡ ಗಂಟೆಗಳು ಹೇಗೆ ?’, ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇದರಿಂದ ‘೧೨ ನೇ ಶತಮಾನದಲ್ಲಿ ಕ್ರೈಸ್ತರು ಪರಮೇಶ್ವರೀ ದೇವಿಯ ಮಂದಿರವನ್ನು ‘ಅವರ್‌ ಲೇಡಿ ಆಫ್‌ ಪ್ಯಾರೀಸ್’ ಚರ್ಚ್‌ಗೆ ರೂಪಾಂತರಿಸಿರಬಹುದು’ ಎಂದರಿವಾಗುತ್ತದೆ

(ಆಧಾರ : ವರ್ಲ್ಡ್‌ ವೇದಿಕ್‌ ಹೆರಿಟೇಜ್, ಲೇಖಕರು – ಪು.ನಾ. ಓಕ್, ಪುಟ ೮೪೪- ೮೪೬)

ಪರಮೇಶ್ವರೀದೇವಿಯ ‘ಶೃಂಗಾರನಗರಿ’ ಪ್ಯಾರೀಸ್‌ ಈಗ ‘ವಿಕೃತನಗರಿ’!

‘ಸ್ತ್ರೀ ಇದ್ದಲ್ಲಿ ‘ಶೃಂಗಾರ’ ಇದ್ದೇ ಇರುತ್ತದೆ ! ಪೂಜೆಯಲ್ಲಿನ ದೇವಿ ಇರಲಿ ಅಥವಾ ಮನೆಯಲ್ಲಿನ ಸಣ್ಣ ಹುಡುಗಿ ಇರಲಿ, ಅವರನ್ನು ಶೃಂಗರಿಸಲು ಎಲ್ಲರಿಗೂ ಇಷ್ಟವಾಗುತ್ತದೆ. ಒಂದು ಕಾಲದಲ್ಲಿ ‘ಜಗತ್ಪ್ರಸಿದ್ಧ ಪ್ಯಾರಿಸ್‌ ನಗರ ಆದಿಶಕ್ತಿ ದೇವಿಯ ರೂಪವಾಗಿರುವ ‘ಪರಮೇಶ್ವರಿ’ದೇವಿಯ ಸ್ಥಾನವಾಗಿತ್ತು’, ಎಂದು ಖ್ಯಾತ ಇತಿಹಾಸ ತಜ್ಞ ಪು.ನಾ. ಓಕ್‌ ಇವರು ಬರೆದಿದ್ದಾರೆ. ‘ಪರಮೇಶ್ವರೀದೇವಿಯ ಸ್ಥಾನವಾಗಿದ್ದ ಪ್ಯಾರೀಸ್‌ ನಗರ ಶೃಂಗಾರ ನಗರವಾಗಿತ್ತು’, ಎಂಬುದರಲ್ಲಿ ಸಂದೇಹವಿಲ್ಲ; ಆದರೆ ಇಂದಿನ ಕಲಿಯುಗದಲ್ಲಿ ಈ ಸ್ಥಾನ ಸಾತ್ತ್ವಿಕ ಶೃಂಗಾರದ ಬದಲು ವಿಕೃತ ಶೃಂಗಾರವಾಗಿ ಪರಿವರ್ತನೆಯಾಗಿದೆ. ಪ್ಯಾರೀಸ್‌ ನಗರದಲ್ಲಿ ಯಾವುದೇ ಮಾರ್ಗದಲ್ಲಿ ಹೋಗುವಾಗ ಅಲ್ಲಿನ ಮಹಿಳೆಯರನ್ನು ನೋಡಿದರೆ ಶೃಂಗಾರ ಎಂಬ ಶಬ್ದವನ್ನು ಅವಮಾನಗೊಳಿಸುವ ವಿಕೃತ ಪದ್ಧತಿ, ವಿಕೃತ ಉಡುಗೆತೊಡುಗೆ ಇತ್ಯಾದಿ ದೃಶ್ಯಗಳು ಕಾಣಿಸುತ್ತವೆ.

ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೭), ಮಡಿಕೇರಿ ಕರ್ನಾಟಕ (೨೬,೫.೨೦೨೩)

‘ಲ್ಯಾಕ್ಮೆ’, ಎಂದರೆ ಫ್ರೆಂಚ್‌ ಭಾಷೆಯಲ್ಲಿ ‘ಲಕ್ಷ್ಮಿ’ !

‘ಒಮ್ಮೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ನನಗೆ ”ಲ್ಯಾಕ್ಮೆ ಎಂದರೇನು ?’ ಎಂದು ಕೇಳಿದರು. ಆ ಬಗ್ಗೆ ಸ್ವಲ್ಪ ಹುಡುಕಿದಾಗ, ‘ಟಾಟಾ’ ಕಂಪನಿಯು ಸೌಂದರ್ಯ ಸಾಧನ ‘ಲ್ಯಾಕ್ಮೆ’ಯನ್ನು ಸಿದ್ಧಪಡಿಸುತ್ತದೆ ಎಂಬುದು ತಿಳಿಯಿತು. ‘ಟಾಟಾ’ ಕಂಪನಿಯ ಸಂಚಾಲಕರಾದ ಶ್ರೀ. ಜೆ.ಆರ್‌.ಡಿ. ಟಾಟಾ ಇವರು ಹೊಸ ಸೌಂದರ್ಯ ಸಾಧನದ ಉತ್ಪಾದನೆಗಾಗಿ ಹೆಸರು ಹುಡುಕುತ್ತಿದ್ದರು. ಆಗ ಅವರು ‘ಲ್ಯಾಕ್ಮೆ’ ಈ ಫ್ರೆಂಚ್‌ ಶಬ್ದ ಆರಿಸಿದರು. ದೇವಿ ಲಕ್ಷ್ಮಿಗೆ ಫ್ರೆಂಚ್‌ ಭಾಷೆ ಯಲ್ಲಿ ‘ಲ್ಯಾಕ್ಮೆ, ಎನ್ನುತ್ತಾರೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಸಹಜವಾಗಿ ಕೇಳಿದ ಪ್ರಶ್ನೆಯಿಂದ ದೇವೀ ಲಕ್ಷ್ಮಿ ಮತ್ತು ‘ಲ್ಯಾಕ್ಮೆ’ಯ ಸಂಬಂಧ ತಿಳಿಯಿತು.’

ಶ್ರೀ. ವಿನಾಯಕ ಶಾನಭಾಗ, ಮಡಿಕೇರಿ, ಕರ್ನಾಟಕ, ೨೬.೫.೨೦೨೩

ಕೃತಜ್ಞತೆ

‘ಹೇ ಆದಿಶಕ್ತಿ, ನೀನು ಪೃಥ್ವಿಯ ಮೇಲೆ ಅನೇಕ ಸ್ಥಳಗಳಲ್ಲಿ ಭಕ್ತರಿಗಾಗಿ ಪ್ರಕಟವಾಗಿದ್ದೀ. ಇಂತಹ ನಿನ್ನ ದಿವ್ಯ ಸ್ಥಾನದ ಮಹಿಮೆ ನಮಗೆ ಸಪ್ತರ್ಷಿ ಹಾಗೂ ಪ.ಪೂ. ಗುರುದೇವರಿಂದಾಗಿ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಿಂದ) ತಿಳಿಯಿತು’, ಅದಕ್ಕಾಗಿ ನಾವೆಲ್ಲರು ಸಪ್ತರ್ಷಿಗಳ ಮತ್ತು ಪ.ಪೂ. ಗುರುದೇವರ ಚರಣಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ.’

– ಶ್ರೀ. ವಿನಾಯಕ ಶಾನಭಾಗ