ದೈವೀ ಮಕ್ಕಳ ಜಾತಕಗಳಲ್ಲಿ ಅಧ್ಯಾತ್ಮದ ದೃಷ್ಟಿಯಿಂದ ಉತ್ತಮ ಯೋಗ !

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಜ್ಯೋತಿಷ್ಯ ಶಾಸ್ತ್ರೀಯ ಸಂಶೋಧನೆ

‘ದೈವೀ ಬಾಲಕರ ಜನ್ಮಕುಂಡಲಿಗಳಲ್ಲಿನ ಆಧ್ಯಾತ್ಮಿಕ ಗ್ರಹಯೋಗಗಳ ಅಧ್ಯಯನ ಮಾಡುವುದು’, ಇದು ಪ್ರಸ್ತುತ ಸಂಶೋಧನೆಯ ಉದ್ದೇಶವಾಗಿದೆ. ಈ ಸಂಶೋಧನೆಯನ್ನು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಜ್ಯೋತಿಷ್ಯ ವಿಭಾಗದ ವತಿಯಿಂದ ಮಾಡಲಾಗಿದೆ. ಸಂಚಿಕೆ ೨೫/೩೩ ರಲ್ಲಿ ಪ್ರಕಟಿಸಲಾದ ಲೇಖನದಲ್ಲಿ ನಾವು ‘ದೈವಿ ಬಾಲಕರು ಅಂದರೇನು ? ಮತ್ತು ದೈವೀ ಬಾಲಕರ ವೈಶಿಷ್ಟ್ಯಗಳ ಬಗ್ಗೆ ಓದಿದೆವು. ಇಂದು ಈ ಲೇಖನದ ಮುಂದಿನ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.

(ಭಾಗ ೨)

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ:https://sanatanprabhat.org/kannada/114296.html

೪. ದೈವೀ ಬಾಲಕರ ಸಂಬಂಧದಲ್ಲಿನ ಜ್ಯೋತಿಷ್ಯಶಾಸ್ತ್ರೀಯ ಸಂಶೋಧನೆ

‘ದೈವೀ ಬಾಲಕರ ಜನ್ಮಕುಂಡಲಿಗಳಲ್ಲಿನ ಆಧ್ಯಾತ್ಮಿಕ ಗ್ರಹಯೋಗಗಳ ಅಧ್ಯಯನ ಮಾಡುವುದು’, ಇದು ಸದ್ಯದ ಸಂಶೋಧನೆಯ ಉದ್ದೇಶವಾಗಿದೆ. ಅದಕ್ಕಾಗಿ ಮಹರ್ಲೋಕದಿಂದ ಜನ್ಮ ಪಡೆದ ೧೦೦ ದೈವೀ ಬಾಲಕರ ಜನ್ಮಕುಂಡಲಿಗಳ ಅಧ್ಯಯನ ಮಾಡಲಾಯಿತು. ‘ಈ ಬಾಲಕರು ಮಹರ್ಲೋಕದ ಜೀವಗಳಾಗಿದ್ದು ಈಗ ಪೃಥ್ವಿಯ ಮೇಲೆ ಜನಿಸಿದ್ದಾರೆ’, ಎಂದು ಸಂತರು ಸೂಕ್ಷ್ಮ ಪರೀಕ್ಷಣೆಯ ಮೂಲಕ ಅರಿತಿದ್ದಾರೆ. ಈ ಬಾಲಕರು ೨೦೧೩ ರಿಂದ ೨೦೨೩ ಈ ಕಾಲಾವಧಿಯಲ್ಲಿ ಜನಿಸಿದ್ದಾರೆ. ದೈವೀ ಬಾಲಕರ ಜನ್ಮಕುಂಡಲಿಗಳ ತುಲನೆ ಮಾಡಲು ಸಾಧನೆ ಮಾಡುವ ೧೦೦ ಸಾಧಕರ ಜನ್ಮಕುಂಡಲಿಗಳ ಅಧ್ಯಯನವನ್ನೂ ಮಾಡಲಾಯಿತು. ಈ ಅಧ್ಯಯನದ ಸಾರರೂಪದ ವಿವೇಚನೆಯನ್ನು ಈ ಸಂಶೋಧನಾತ್ಮಕ ಲೇಖನದಲ್ಲಿ ಪ್ರಸ್ತುತಪಡಿಸಲಾಗಿದೆ.

ಈ ವಿವೇಚನೆಯಲ್ಲಿ ಆರಂಭದಲ್ಲಿ ಸಾಧನೆಗಾಗಿ ಜನ್ಮದಿಂದಲೇ ಅನುಕೂಲ ಪರಿಸ್ಥಿತಿಯನ್ನು ದರ್ಶಿಸುವ ಗ್ರಹಯೋಗಗಳ ನಿಷ್ಕರ್ಷವನ್ನು ನೀಡಲಾಗಿದೆ. ಅನಂತರ ೧೦೦ ದೈವೀ ಬಾಲಕರು ಮತ್ತು ೧೦೦ ಸಾಧಕರ ಜನ್ಮಕುಂಡಲಿಗಳಲ್ಲಿ ಈ ಯೋಗವು ಎಷ್ಟು ಪ್ರಮಾಣದಲ್ಲಿ ಕಂಡು ಬಂದಿತು, ಇದರ ನಿರೀಕ್ಷಣೆಯನ್ನು ನೀಡಲಾಗಿದೆ ಮತ್ತು ಕೊನೆಗೆ ಸಂಶೋಧನೆಯ ನಿಷ್ಕರ್ಷವನ್ನು ಪ್ರಸ್ತುತಪಡಿಸಲಾಗಿದೆ.

ಶ್ರೀ. ಯಶವಂತ ಕಣಗಲೇಕರ
ಶ್ರೀ. ಯಶವಂತ ಕಣಗಲೇಕರ

೪ ಅ. ಜ್ಯೋತಿಷ್ಯಶಾಸ್ತ್ರದ ನಿಷ್ಕರ್ಷ : ಸಾಧನೆಗಾಗಿ ಜನ್ಮದಿಂದಲೇ ಅನುಕೂಲ ಪರಿಸ್ಥಿತಿಯನ್ನು ದರ್ಶಿಸುವ ಗ್ರಹಯೋಗಗಳ ನಿಷ್ಕರ್ಷವನ್ನು ಈ ಜ್ಯೋತಿಷ್ಯಶಾಸ್ತ್ರದ ನಿಯಮ, ತರ್ಕ ಮತ್ತು ಅನುಭವ ಇವುಗಳ ಆಧಾರದಲ್ಲಿ ನಿಶ್ಚಿತಪಡಿಸಲಾಗಿದೆ. ಅದನ್ನು ಮುಂದೆ ಕೊಡಲಾಗಿದೆ.

೪ ಅ ೧. ನಿಷ್ಕರ್ಷ ೧ – ಧರ್ಮಸ್ಥಾನಗಳ ಸ್ವಾಮಿಗಳ ಪೈಕಿ ಕನಿಷ್ಠ ಇಬ್ಬರು ಸ್ವಾಮಿಗಳು ಧರ್ಮಸ್ಥಾನಗಳಲ್ಲಿ ಇರುವುದು : ಕುಂಡಲಿಯಲ್ಲಿನ ೧, ೫ ಮತ್ತು ೯ ಈ ಸ್ಥಾನಗಳಿಗೆ ‘ಧರ್ಮಸ್ಥಾನಗಳು’ ಎಂದು ಹೇಳುತ್ತಾರೆ. ಈ ಸ್ಥಾನಗಳನ್ನು ಮುಂದಿನ ಆಕೃತಿಯಲ್ಲಿ ತೋರಿಸಲಾಗಿದೆ.

ಈ ಸ್ಥಾನಗಳಿಂದ ಮುಂದಿನ ವಿಷಯಗಳ ವಿಚಾರವಾಗುತ್ತದೆ.

ಕುಂಡಲಿಯಲ್ಲಿನ ೧, ೫, ೯ ಈ ಧರ್ಮಸ್ಥಾನಗಳ ಪೈಕಿ ಕನಿಷ್ಠ ೨ ಸ್ಥಾನಗಳ ಸ್ವಾಮಿಗಳು (ಟಿಪ್ಪಣಿ) ೧, ೫, ೯ ಈ ಧರ್ಮಸ್ಥಾನಗಳಲ್ಲಿದ್ದರೆ ವ್ಯಕ್ತಿಗೆ ‘ವಿದ್ಯೆ, ಬುದ್ಧಿ, ಮತ್ತು ಭಾಗ್ಯ’ ಇವುಗಳಿಗೆ ಸಂಬಂಧಿಸಿದ ಶುಭ ಫಲಗಳು ಪ್ರಾಪ್ತವಾಗುತ್ತವೆ. ಭಾಗ್ಯವು ಅವನ ಜೊತೆಗಿರುತ್ತದೆ. ಅವನ ಪ್ರಾರಬ್ಧ ಸಹನೀಯವಾಗುತ್ತದೆ. ಇದು ಉತ್ತಮ ಸ್ತರದ ಯೋಗವಾಗಿದೆ.

ಟಿಪ್ಪಣಿ – ಕುಂಡಲಿಯಲ್ಲಿನ ಪ್ರತಿಯೊಂದು ಸ್ಥಾನದಲ್ಲಿ ಒಂದು ರಾಶಿ ಇರುತ್ತದೆ. ಆ ರಾಶಿಯ ಒಂದು ಅಧಿಪತಿ ಗ್ರಹವಿರುತ್ತದೆ. ಆ ಗ್ರಹಕ್ಕೆ ಆ ಸ್ಥಾನದ ಸ್ವಾಮಿಯೆಂದು ಕರೆಯುತ್ತಾರೆ.

೪ ಅ ೨. ನಿಷ್ಕರ್ಷ ೨ – ಮೋಕ್ಷಸ್ಥಾನಗಳ ಸ್ವಾಮಿಗಳ ಪೈಕಿ ಕನಿಷ್ಠ ಇಬ್ಬರು ಸ್ವಾಮಿಗಳು ಮೋಕ್ಷಸ್ಥಾನಗಳಲ್ಲಿ ಇರುವುದು : ಕುಂಡಲಿಯಲ್ಲಿ ೪, ೮ ಮತ್ತು ೧೨ ಈ ಸ್ಥಾನಗಳಿಗೆ ‘ಮೋಕ್ಷ ಸ್ಥಾನಗಳು’ ಎಂದು ಹೇಳುತ್ತಾರೆ. ಈ ಸ್ಥಾನಗಳನ್ನು ಮುಂದಿನ ಆಕೃತಿಯಲ್ಲಿ ತೋರಿಸಲಾಗಿದೆ.

ಈ ಸ್ಥಾನಗಳಿಂದ ಮುಂದಿನ ವಿಷಯಗಳ ವಿಚಾರವಾಗುತ್ತದೆ.

ಕುಂಡಲಿಯಲ್ಲಿನ ೪, ೮, ೧೨ ಈ ಮೋಕ್ಷಸ್ಥಾನಗಳ ಪೈಕಿ ಕನಿಷ್ಠ ೨ ಸ್ಥಾನಗಳ ಸ್ವಾಮಿ ೪, ೮, ೧೨ ಈ ಮೋಕ್ಷಸ್ಥಾನಗಳಲ್ಲಿದ್ದರೆ ವ್ಯಕ್ತಿಯು ತ್ಯಾಗಿ ಮತ್ತು ಸಮರ್ಪಣವೃತ್ತಿಯವನಾಗಿರುತ್ತಾನೆ. ಆದುದರಿಂದ ಅವನ ಆಧ್ಯಾತ್ಮಿಕ ಉನ್ನತಿ ಬೇಗನೆ ಆಗುತ್ತದೆ. ಇಂತಹ ವ್ಯಕ್ತಿ ಸಾಮಾಜಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ಸಕ್ರಿಯನಾಗಿರುತ್ತಾನೆ. ಇದು ಉತ್ತಮ ಸ್ತರದ ಯೋಗವಾಗಿದೆ.

ಶ್ರೀ. ರಾಜ ಕರ್ವೆ

೪ ಅ ೩. ನಿಷ್ಕರ್ಷ ೩ – ಧರ್ಮಸ್ಥಾನಗಳ ಸ್ವಾಮಿಗಳ ಪೈಕಿ ಕನಿಷ್ಠ ಇಬ್ಬರು ಸ್ವಾಮಿಗಳು ಮೋಕ್ಷಸ್ಥಾನಗಳಲ್ಲಿರುವುದು : ಕುಂಡಲಿ ಯಲ್ಲಿನ ೧, ೫, ೯ ಈ ಧರ್ಮಸ್ಥಾನಗಳ ಪೈಕಿ ಕನಿಷ್ಠ ೨ ಸ್ಥಾನಗಳ ಸ್ವಾಮಿ ೪, ೮ ೧೨ ಈ ಮೋಕ್ಷಸ್ಥಾನಗಳಲ್ಲಿದ್ದರೆ ವ್ಯಕ್ತಿ ಒಲವು ಅಧ್ಯಾತ್ಮದ ಕಡೆಗಿರುತ್ತದೆ. ಅವನು ಮಾಯೆಯಿಂದ ವಿರಕ್ತನಾಗಿರುತ್ತಾನೆ. ಹಾಗೆಯೇ ಅವನು ಜ್ಞಾನ, ಸೇವೆ, ತ್ಯಾಗ ಮುಂತಾದವುಗಳ ಕಡೆಗೆ ಆಕರ್ಷಿತನಾಗುತ್ತಾನೆ. ಇದು ಉತ್ತಮ ಸ್ತರದ ಯೋಗವಾಗಿದೆ.

೪ ಅ ೪. ನಿಷ್ಕರ್ಷ ೪ – ಧರ್ಮಸ್ಥಾನಗಳ ಸ್ವಾಮಿಗಳ ಪೈಕಿ ಕನಿಷ್ಠ ಇಬ್ಬರು ಸ್ವಾಮಿಗಳ (ಗ್ರಹಗಳ) ಪರಸ್ಪರರೊಂದಿಗಿನ ಸಂಯೋಗ ಅಥವಾ ಶುಭಯೋಗವಿರುವುದು : ಕುಂಡಲಿಯಲ್ಲಿನ ೧, ೫, ೯ ಈ ಧರ್ಮಸ್ಥಾನಗಳ ಪೈಕಿ ಕನಿಷ್ಠ ೨ ಸ್ಥಾನಗಳ ಸ್ವಾಮಿಗಳ (ಗ್ರಹಗಳ) ಪರಸ್ಪರರೊಂದಿಗಿನ ಸಂಯೋಗ (ಟಿಪ್ಪಣಿ) ಅಥವಾ ಶುಭಯೋಗವಿದ್ದರೆ ವಿದ್ಯೆ, ಬುದ್ಧಿ ಮತ್ತು ಭಾಗ್ಯ ಇವುಗಳಿಗೆ ಸಂಬಂಧಿಸಿದಂತೆ ಶುಭ ಫಲಗಳು ಪ್ರಾಪ್ತವಾಗುತ್ತವೆ. ಈ ಸಂಯೋಗ ಅಥವಾ ಶುಭಯೋಗ ಕುಂಡಲಿಯಲ್ಲಿ ಯಾವ ಸ್ಥಾನದಲ್ಲಿದೆ, ಅದರ ಮೇಲೆ ಅವುಗಳ ಫಲ ಅವಲಂಬಿಸಿರುತ್ತದೆ. ಆದುದರಿಂದ ಇದು ಮಧ್ಯಮ ಸ್ತರದ ಯೋಗವಾಗಿದೆ.

ಟಿಪ್ಪಣಿ – ಜ್ಯೋತಿಷ್ಯಶಾಸ್ತ್ರದಲ್ಲಿ ಸಂಯೋಗ, ಅಂದರೆ ೨ ಅಥವಾ ಅದಕ್ಕಿಂತಲೂ ಹೆಚ್ಚು ಗ್ರಹಗಳು ಒಂದೇ ಸ್ಥಾನದಲ್ಲಿರುವುದು.

೪ ಅ ೫. ನಿಷ್ಕರ್ಷ ೫ – ಮೋಕ್ಷಸ್ಥಾನಗಳ ಸ್ವಾಮಿಗಳ ಪೈಕಿ ಕನಿಷ್ಠ ೨ ಸ್ವಾಮಿಗಳ (ಗ್ರಹಗಳ) ಪರಸ್ಪರರೊಂದಿಗೆ ಸಂಯೋಗ ಅಥವಾ ಶುಭಯೋಗವಿರುವುದು : ಕುಂಡಲಿಯಲ್ಲಿನ ೪, ೮, ೧೨ ಈ ಮೋಕ್ಷಸ್ಥಾನಗಳ ಪೈಕಿ ಕನಿಷ್ಠ ೨ ಸ್ಥಾನಗಳ ಸ್ವಾಮಿಗಳ (ಗ್ರಹಗಳ) ಪರಸ್ಪರರೊಂದಿಗಿನ ಸಂಯೋಗ ಅಥವಾ ಶುಭಯೋಗವಿದ್ದರೆ ಆಧ್ಯಾತ್ಮಿಕ ಪ್ರಗತಿಯ ದೃಷ್ಟಿಯಿಂದ ಶುಭ ಫಲಗಳು ಪ್ರಾಪ್ತವಾಗುತ್ತವೆ.

ಈ ಸಂಯೋಗ ಅಥವಾ ಶುಭಯೋಗ ಕುಂಡಲಿಯಲ್ಲಿ ಯಾವ ಸ್ಥಾನದಲ್ಲಿದೆ, ಅದರ ಮೇಲೆ ಅವುಗಳ ಫಲ ಅವಲಂಬಿಸಿರುತ್ತದೆ. ಆದುದರಿಂದ ಇದು ಮಧ್ಯಮ ಸ್ತರದ ಯೋಗವಾಗಿದೆ.

ಮೇಲಿನ ೫ ನಿಷ್ಕರ್ಷಗಳ ಮಾಹಿತಿಯನ್ನು ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ.

ಮೇಲಿನ ೫ ನಿಷ್ಕರ್ಷಗಳ ಪೈಕಿ ವ್ಯಕ್ತಿಯ ಜನ್ಮಕುಂಡಲಿಯಲ್ಲಿ ಯಾವುದೇ ೨ ನಿಷ್ಕರ್ಷಗಳು ಅನ್ವಯಿಸುತ್ತಿದ್ದರೆ ಆ ಜನ್ಮಕುಂಡಲಿಯಲ್ಲಿ ‘ಅಧ್ಯಾತ್ಮದ ದೃಷ್ಟಿಯಿಂದ ಉತ್ತಮ ಯೋಗವಿದೆ’, ಎಂದು ತಿಳಿಯಬೇಕು

೪ ಆ. ಇತರ ನಿಷ್ಕರ್ಷಗಳು

೪ ಆ ೧. ಜನ್ಮಕುಂಡಲಿಯಲ್ಲಿ ಗುರು ಮತ್ತು ಶನಿ ಇವುಗಳ ಸ್ಥಿತಿ ಉತ್ತಮವಾಗಿರುವುದು : ಗುರು ಗ್ರಹವು ಆಕಾಶತತ್ತ್ವಕ್ಕೆ  ಮತ್ತು ಶನಿ ಗ್ರಹವು ವಾಯುತತ್ತ್ವಕ್ಕೆ ಸಂಬಂಧಿಸಿದೆ. ಈ ಎರಡು ಗ್ರಹಗಳು ಆಧ್ಯಾತ್ಮಿಕ ಸ್ವರೂಪದ್ದಾಗಿವೆ. ಗುರು ಗ್ರಹವು ಜ್ಞಾನ, ವ್ಯಾಪಕತ್ವ ಮತ್ತು ಸಾತ್ತ್ವಿಕತೆಯನ್ನು ನೀಡುತ್ತದೆ ಮತ್ತು ಶನಿ ಗ್ರಹವು ವಿವೇಕ, ಸಂಯಮ ಮತ್ತು ತ್ಯಾಗಿ ವೃತ್ತಿಯನ್ನು ನೀಡುತ್ತದೆ. ಗುರು ಮತ್ತು ಶನಿ ಇವುಗಳ ಸ್ಥಿತಿ ಉತ್ತಮವಾಗಿದ್ದರೆ, ಅಂದರೆ ಜಾತಕದಲ್ಲಿ, ರಾಶಿಯಲ್ಲಿ ಮತ್ತು ಮಿತ್ರಗ್ರಹಗಳೊಂದಿಗೆ ಅನುಕೂಲಕರ ಸ್ಥಾನದಲ್ಲಿದ್ದರೆ ಅವು ಅಧ್ಯಾತ್ಮಕ್ಕೆ ಸಹಾಯ ಮಾಡುತ್ತವೆ.

(ಮುಂದುವರಿಯುವುದು)

– ಶ್ರೀ. ರಾಜ ಕರ್ವೆ (ಜ್ಯೋತಿಷ್ಯ ವಿಶಾರದ) ಮತ್ತು ಶ್ರೀ. ಯಶವಂತ ಕಣಗಲೇಕರ (ಜ್ಯೋತಿಷ್ಯ ವಿಶಾರದ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೫.೧.೨೦೨೪)

ಜ್ಯೋತಿಷಿಗಳಿಗೆ ಟಿಪ್ಪಣಿ – ಮೇಲೆ ನೀಡಲಾದ ೫ ಜ್ಯೋತಿಷ್ಯಶಾಸ್ತ್ರೀಯ ನಿಷ್ಕರ್ಷಗಳಿಗನುಸಾರ ಒಂದು ವೇಳೆ ಧರ್ಮಸ್ಥಾನಗಳು ಮತ್ತು ಮೋಕ್ಷಸ್ಥಾನಗಳ ಸ್ವಾಮಿಗಳ ಸ್ಥಿತಿ ಕುಂಡಲಿ ಯಲ್ಲಿದ್ದರೆ, ಆದರೆ ಅದೇ ಸಮಯಕ್ಕೆ ಆ ಸ್ವಾಮಿಗಳು ಒಂದು ವೇಳೆ ಶತ್ರುಗ್ರಹಗಳೊಂದಿಗೆ ಇದ್ದರೆ, ಶುಭ ಫಲಗಳಲ್ಲಿ ನ್ಯೂನತೆ ಉಂಟಾಗುವುದು, ಉದಾ. ಕುಂಡಲಿಯಲ್ಲಿ ರವಿ-ಶನಿ, ಚಂದ್ರ-ಶನಿ, ಬುಧ-ಮಂಗಲ, ಶನಿ-ಮಂಗಲ, ರಾಹು-ಮಂಗಲ, ಶನಿ-ಕೇತು, ಗುರು-ಕೇತು ಇತ್ಯಾದಿ ಪ್ರಕಾರದ ಅಶುಭ ಯುತಿ (ಸಂಯೋಗಗಳು) ಇರುತ್ತವೆ ಮತ್ತು ವ್ಯಕ್ತಿಗೆ ಅಶುಭ ಫಲಗಳು ಪ್ರಾಪ್ತವಾಗುತ್ತವೆ.