ಇಟಲಿಯ ಪೀಸಾ ಗೋಪುರಕ್ಕಿಂತ ಹೆಚ್ಚು ಬಾಗಿರುವ ವಾರಾಣಸಿಯ ರತ್ನೇಶ್ವರ ಮಂದಿರ !

ವಾರಾಣಸಿ, ಅಂದರೆ ಕಾಶಿಯ ಮಣಿ ಕರ್ಣಿಕಾಘಾಟನ ಎದುರಿಗಿರುವ ಮಂದಿರವನ್ನು ರತ್ನೇಶ್ವರ ಮಂದಿರವೆಂದು ಗುರುತಿಸಲಾಗುತ್ತ್ತದೆ. ಇಟಲಿಯಲ್ಲಿರುವ ಪೀಸಾ ವಾಲು ಗೋಪುರವು (ಟವರ್) ವಾಸ್ತು ಕಲೆಯ ಅಪ್ರತಿಮ ಮಾದರಿಯಾಗಿದೆ. ಈ ಕಟ್ಟಡ ಅಡಿಪಾಯದಿಂದಲೇ ೫ ಅಂಶದಷ್ಟು ಬಾಗಿಕೊಂಡಿದೆ. ೫೪ ಮೀಟರ್‌ ಎತ್ತರ ವಿರುವ ಪೀಸಾ ಗೋಪುರವು ಜಗತ್ಪ್ರಸಿದ್ಧವಾಗಿದೆ; ಆದರೆ ವಾರಣಾಸಿಯ ರತ್ನೇಶ್ವರ ಮಂದಿರವು ತನ್ನ ಅಡಿಪಾಯ ದಿಂದ ೯ ಅಂಶದಷ್ಟು ಬಾಗಿದೆ ಹಾಗೂ ಅದರ ಎತ್ತರ ೧೩.೧೪ ಮೀಟರ್‌ ಇದೆ. ಇದರಿಂದ ಮಂದಿರದ ಅದ್ವಿತೀಯತೆ ಮತ್ತು ದಿವ್ಯತ್ವ ಗಮನಕ್ಕೆ ಬರುತ್ತದೆ.

ವಾರಾಣಸಿಯ ಗಂಗಾ ಘಾಟ್‌ನಲ್ಲಿರುವ ಎಲ್ಲ ಮಂದಿರಗಳನ್ನು ಮೇಲಿನ ದಿಕ್ಕಿನಲ್ಲಿ ನಿರ್ಮಿಸಲಾಗಿದೆ. ಆದರೆ ರತ್ನೇಶ್ವರ ಮಂದಿರವನ್ನು ಮಣಿಕರ್ಣಿಕಾ ಘಾಟ್‌ನ ಕೆಳಗೆ ನಿರ್ಮಿಸಲಾಗಿದೆ. ಘಾಟ್‌ನ ಕೆಳಗೆ ಇರುವುದ ರಿಂದ ಈ ಮಂದಿರ ವರ್ಷದಲ್ಲಿ ೮ ತಿಂಗಳುಗಳ ಕಾಲ ಗಂಗಾನದಿಯ ನೀರಿನಲ್ಲಿ ಮುಳುಗಿರುತ್ತದೆ. ಮಳೆಗಾಲದಲ್ಲಿ ನದಿಗೆ ನೆರೆ ಬಂದಾಗ ನದಿಯ ನೀರು ಮಂದಿರದ ಕಲಶದ ವರೆಗೆ ತಲಪುತ್ತದೆ. ಮಂದಿರ ಯಾವಾಗಲೂ ನೀರಿನಲ್ಲಿಯೇ ಇರುತ್ತದೆ. ಆದ್ದರಿಂದ ಇಲ್ಲಿ ಪೂಜೆ ಆಗುವುದಿಲ್ಲ. ೨ ತಿಂಗಳು ಮಾತ್ರ ಇಲ್ಲಿ ಪೂಜೆಯನ್ನು ಮಾಡಬಹುದು, ಇಂತಹ ಪರಿಸ್ಥಿತಿ ಇರುತ್ತದೆ; ಆದರೆ ಮಂದಿರದಲ್ಲಿ ಸ್ಥಾಪಿಸಿದ ಶಿವಲಿಂಗ ಮಂದಿರದ ಭೂಮಿಯಿಂದ ಕೆಳಗೆ ಇರುವುದರಿಂದ ಶಿವಲಿಂಗದ ದರ್ಶನವಾಗುವುದಿಲ್ಲ. ಮಂದಿರದ ವಾಸ್ತು ಅಥವಾ ನಿರ್ಮಾಣಕಾರ್ಯ ಅತ್ಯಂತ ಸುಂದರವಾಗಿದೆ. ಗುಜರಾತಿ ಪದ್ಧತಿಯಲ್ಲಿ ಮಂದಿರದ ನಿರ್ಮಾಣವಾಗಿದ್ದು ಕಲ್ಲುಗಳಲ್ಲಿನ ಕೊರೆದಿರುವ ಭಾಗ ಯಾವುದೇ ಯಂತ್ರಗಳಿಲ್ಲದೆ ಹೇಗೆ ಮಾಡಿರಬಹುದು, ಎಂಬುದು ಆಶ್ಚರ್ಯದ ವಿಷಯವಾಗಿದೆ.

(ಎಲ್ಲ ಆಧಾರ : ವಿವಿಧ ಜಾಲತಾಣಗಳು, ಯೂ ಟ್ಯೂಬ್‌ ವಾಹಿನಿಗಳು)