ಪ್ರಾಚೀನ ಮಂದಿರದಲ್ಲಿನ ವಿಗ್ರಹಗಳ ವೈಶಿಷ್ಟ್ಯಗಳು !

ಕನ್ನಡಿ ನೋಡಿ ಅಲಂಕರಿಸುತ್ತಿರುವ ಸ್ತ್ರೀ

೧. ಭಾರತದ ಪ್ರಾಚೀನ ದೇವಾಲಯಗಳು ಸ್ವತಃ ವೈಜ್ಞಾನಿಕ ಪ್ರಗತಿಯ ದ್ಯೋತಕವಾಗಿವೆ. ಪ್ರಾಚೀನ ಕಾಲದಲ್ಲಿ ವೈಜ್ಞಾನಿಕ ಪ್ರಗತಿಯ ಉದಾಹರಣೆಗಳಿಲ್ಲದ ಪುರಾತನ ದೇವಾಲಯಗಳೇ ಇಲ್ಲ !

೨. ಪ್ರಾಚೀನ ದೇವಾಲಯಗಳಲ್ಲಿನ ವಿಗ್ರಹಗಳು ಕೇವಲ ಸ್ತಬ್ಧಮೂರ್ತಿಗಳಲ್ಲ, ಆದರೆ ಅವುಗಳು ಏನಾದರೂ ಒಂದು ಕೃತಿ ಮಾಡುತ್ತಿವೆ. ಅನೇಕಬಾರಿ ವಿಗ್ರಹಗಳ ಗುಂಪು ಒಟ್ಟಾಗಿ ಏನನ್ನಾದರೂ ಮಾಡುತ್ತಿರುತ್ತವೆ, ಉದಾ. ಮೆರವಣಿಗೆ, ಯುದ್ಧ, ಮಹಿಳೆಯರ ಶೃಂಗಾರ, ಮಾರುಕಟ್ಟೆಗೆ ಹೋಗುವುದು, ಆಟವಾಡುವುದು, ಈಜುವುದು, ಚಿಕಿತ್ಸೆ ಮಾಡುವುದು, ಇತ್ಯಾದಿ. ಮಾನವ ಜೀವನದ ವಿವಿಧ ವಿಷಯಗಳನ್ನು ಅದರಲ್ಲಿ ವಿವರಿಸಲಾಗಿದೆ. ಈ ಸಾಮೂಹಿಕ ಕಲಾಕೃತಿಗಳಲ್ಲಿ ಒಂದು ರೀತಿಯ ಕ್ರಿಯಾಶೀಲತೆ ಇರುತ್ತದೆ.

೩. ಈ ಸಾಮೂಹಿಕ ಕಲಾಕೃತಿಗಳು ಸಾಮಾನ್ಯವಾಗಿ ಕಡಿಮೆಪಕ್ಷ ಒಂದು ಸಣ್ಣ ಕಥೆ ಅಥವಾ ಪೌರಾಣಿಕ ಪ್ರಸಂಗ ಅಥವಾ ಕೆಲವು ಬೋಧಪ್ರದ ಸಂದೇಶವನ್ನು ಹೊಂದಿರುತ್ತವೆ. ಕೆಲವೊಮ್ಮೆ ನಮ್ಮನ್ನು ತಕ್ಷಣ ನಗಿಸುವ ಸಂದೇಶಗಳು ಈ ಕಲಾಕೃತಿಗಳಲ್ಲಿವೆ.

ಶಸ್ತ್ರಸಜ್ಜಿತರಾಗಿ ಹೊರಟ ವಾನರಸೇನೆ

೪. ಮೂರ್ತಿಗಳ ಮುಖದಲ್ಲಿ ವಿಸ್ಮಯಕರ ಹಾವಭಾವಗಳಿವೆ. ಅದರಲ್ಲಿ ದುಃಖ, ನಿರಾಶೆ, ಹಾಸ್ಯ, ಸುಖ, ಕಾಮುಕತೆ, ಕೋಪ, ದ್ವೇಷ, ಶಾಂತಿ, ನಿರ್ವಿಚಾರ, ಏಕಾಗ್ರತೆ ಮುಂತಾದ ಅನೇಕ ಮಾನವೀ ಭಾವನೆಗಳನ್ನು ಬಹಳ ಸ್ಪಷ್ಟವಾಗಿ ಗಮನಕ್ಕೆ ಬರುವಂತೆ, ವಿನ್ಯಾಸಗೊಳಿಸಲಾಗಿದೆ.

೫. ವಿವಿಧ ರೀತಿಯ ಆಯುಧಗಳು, ಆಧುನಿಕ ಯಂತ್ರಗಳನ್ನು ಹೋಲುವ ಅನೇಕ ಉಪಕರಣಗಳು ವಿಗ್ರಹಗಳೊಂದಿಗೆ ಕಂಡು ಬರುತ್ತವೆ,  ಉದಾ. ಸ್ತನ ಕ್ಯಾನ್ಸರ್‌ ಅಥವಾ ಹೊಟ್ಟೆ ತಪಾಸಣೆ ಮಾಡುವ ಆಧುನಿಕ ಯಂತ್ರಗಳಂತೆ ಕಾಣುವ ಸಾಧನಗಳು, ಕೆತ್ತನೆ ಕೆಲಸಗಳ ಆಧುನಿಕ ಯಂತ್ರ, ಸಂಚಾರಿದೂರವಾಣಿಯಂತೆ ಕಾಣುವ ಆಕೃತಿ, ಬೈನಾಕ್ಯುಲರ್, ಬೈಸಿಕಲ್, ಬ್ಯಾಟರಿಯಂತೆ ಉರ್ಜೆ ಕೊಡುವ ಸಾಧನ, ಬ್ಯಾಗ್‌ ಕಾಸ್ಮೆಟಿಕ್ಸ್ ಇತ್ಯಾದಿ ವಸ್ತುಗಳು ಈ ವಿಗ್ರಹಗಳ ಕೈಯಲ್ಲಿವೆ.

೬. ದೇವಾಲಯಗಳ ವಿಗ್ರಹಗಳಿಂದ, ಅದರ ಕಣ್ಣುಗಳಿಂದ, ಅದರ ಭಂಗಿಯಿಂದ ಮತ್ತು ಅದರ ಸ್ಪಂದನದಿಂದ ಅದು ಮಾತನಾಡುತ್ತಿರುವಂತೆ ಅನಿಸುತ್ತದೆ, ಏನೋ ಹೇಳುತ್ತಿದೆ ಅಥವಾ, ಸೂಚಿಸುತ್ತಿದೆ, ಎಂದು ಅನಿಸುತ್ತದೆ. ಇತ್ತೀಚಿನ ಕಾಲದಲ್ಲಿ ಈ ವಿಗ್ರಹಗಳು ಭಗ್ನವಾಗಿದ್ದರೂ, ಸವೆದಿದ್ದರೂ ಆ ಭಾವದ ಅರಿವಾಗುತ್ತದೆ. ಇದರಿಂದ ಮೂರ್ತಿಕಾರನ ಭಾವವು ಅದರಲ್ಲಿ ಅಡಕವಾಗಿರುವುದು ಗಮನಕ್ಕೆ ಬರುತ್ತದೆ.

೭. ಕೆಲವು ವಿಗ್ರಹಗಳ ಮುಖಭಾವವು ಭಾರತೀಯ ಸಭ್ಯತೆ, ಅತ್ಯುನ್ನತ ಆಧ್ಯಾತ್ಮಿಕ ಮತ್ತು ನೈತಿಕ ಸಂಸ್ಕೃತಿ, ಪ್ರೌಢಿಮೆ, ಸೃಜನಶೀಲತೆಯನ್ನು ಪ್ರತಿಬಿಂಬಿಸುತ್ತವೆ.

೮. ದೇವಾಲಯಗಳಲ್ಲಿ ಶೃಂಗಾರಮಯ ವಿಗ್ರಹಗಳನ್ನು ಇರಿಸಲು ಪ್ರಮುಖ ಐತಿಹಾಸಿಕ ಕಾರಣವೆಂದರೆ ಆ ಸಮಯದಲ್ಲಿ ಯುದ್ಧದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪುರುಷರು ಕೊಲ್ಲಲ್ಪಡುತ್ತಿದ್ದರು. ಆ ನಂತರ ಹೆಚ್ಚಿನವರು ಸನ್ಯಾಸ ಸ್ವೀಕರಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಅವರಲ್ಲಿ ಹೆಚ್ಚಿನವರು ನಿರ್ಮೋಹಿ ಅಥವಾ ಆಧ್ಯಾತ್ಮಿಕ ಜೀವನ ಸಾಗಿಸುವ ವ್ಯಕ್ತಿಗಳಾಗಿದ್ದರು. ಆದ್ದರಿಂದ, ಮುಂದಿನ ಜನಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ, ಕೆಲವು ದೇವಸ್ಥಾನಗಳಲ್ಲಿ ಕಾಮಕ್ರೀಡೆಯನ್ನಾಡುವ ವಿಗ್ರಹಗಳನ್ನು ಕೆತ್ತಲು ಆಯೋಜಿಸಲಾಯಿತು. ಇದು ಖಜುರಾಹೊದಿಂದ ಕೊಣಾರ್ಕ ವರೆಗಿನ ಅನೇಕ ದೇವಾಲಯಗಳಲ್ಲಿದೆ.

೯. ನಮ್ಮ ಪೂರ್ವಜರು ತಮ್ಮ ಜೀವನಶೈಲಿ, ತಮಗೆ ಎಲ್ಲಾ ಕ್ಷೇತ್ರಗಳಲ್ಲಿರುವ ಜ್ಞಾನವನ್ನು ದೇವಾಲಯಗಳ ಮೂಲಕ ಕಲ್ಲಿನಲ್ಲಿ ಕೆತ್ತುವ ಮೂಲಕ ಹೇಳಿಟ್ಟಿದ್ದಾರೆ. ನಾವು ಇಂದು ಅದರ ಕಲ್ಪನೆ ಪಡೆಯಬಹುದು.

೧೦. ಪ್ರಾಚೀನ ದೇವಾಲಯದ ವಾಸ್ತ್ತುಶೈಲಿಯ ಮತ್ತು ಅದರಲ್ಲಿ ವೈಜ್ಞಾನಿಕ ಪ್ರಯೋಗಗಳ ಪುರಾವೆಗಳ ಬಗ್ಗೆ ಆಳವಾದ ಸಂಶೋಧನೆಯಾಗುವ ತುರ್ತು ಅಗತ್ಯವಿದೆ. ಈ ಸಂಶೋಧನೆಯು ಕೇವಲ ವೈಜ್ಞಾನಿಕ ಜ್ಞಾನವನ್ನು ಮಾತ್ರವಲ್ಲ, ಅದರ ಬಗ್ಗೆ ನಮ್ಮಲ್ಲಿ ತೀವ್ರವಾದ ಧರ್ಮಾಭಿಮಾನ ಮತ್ತು ಭಕ್ತಿಯನ್ನು ಮೂಡಿಸುತ್ತದೆ. !

– ಸೌ. ರೂಪಾಲಿ ವರ್ತಕ, ಸನಾತನ ಆಶ್ರಮ, ದೇವದ, ಪನವೆಲ. (೧೪.೪.೨೦೨೪)