ಸಾಧಕರೇ, ‘ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ಚೆನ್ನಾಗಿ ಮಾಡಿದರೆ ಸಮಷ್ಟಿ ಸಾಧನೆಯೂ ಚೆನ್ನಾಗಿ ಆಗುತ್ತದೆ’ ಎಂಬುದನ್ನು ಗಮನದಲ್ಲಿರಿಸಿ ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ಹೆಚ್ಚಿಸಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ವ್ಯಷ್ಟಿ ಸಾಧನೆಯು ಸಾಧನೆಯ ಅಡಿಪಾಯವಾಗಿದೆ. ಮರದ ಬೇರುಗಳು ಭೂಮಿಯಲ್ಲಿ ಗಟ್ಟಿಯಾಗಿ ಬೇರೂರಿದರೆ ಮರದ ಮೇಲಿನ ಭಾಗ ಚೆನ್ನಾಗಿ ಬೆಳೆಯುತ್ತದೆ ಮತ್ತು ಅದಕ್ಕೆ ಸುಂದರ ಹೂವುಗಳು ಮತ್ತು ರಸಭರಿತ ಹಣ್ಣುಗಳು ಬರುತ್ತವೆ. ಇದರಲ್ಲಿ ಮರದ ಬೇರುಗಳೆಂದರೆ ವ್ಯಷ್ಟಿ ಸಾಧನೆ, ವ್ಯಷ್ಟಿ ಸಾಧನೆ ಎಂದರೆ ನಾಮಜಪಾದಿ ಉಪಾಯಗಳನ್ನು ಮಾಡುವುದು, ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಪ್ರಯತ್ನಿಸುವುದು ಅದೇ ರೀತಿ ಭಾವಜಾಗೃತಿಗಾಗಿ ಪ್ರಯತ್ನಿಸುವುದು. ನಾಮಜಪಾದಿ ಉಪಾಯಗಳನ್ನು ಮಾಡಿದರೆ ಸಾಧಕರ ಮನಸ್ಸು ಮತ್ತು ಬುದ್ಧಿಯಲ್ಲಿರುವ ತೊಂದರೆದಾಯಕ ಶಕ್ತಿಗಳ ಅವರಣ ಕಡಿಮೆಯಾಗುತ್ತದೆ. ಕೆಟ್ಟ ಶಕ್ತಿಗಳಿಂದಾಗಿ ಅವನ ಸಾಧನೆಯಲ್ಲಿ ಬರುವ ಅಡಚಣೆಗಳು ಕಡಿಮೆಯಾಗುತ್ತವೆÉ. ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಗಾಗಿ ಪ್ರಯತ್ನಿಸುವುದ ರಿಂದ ಮನಸ್ಸಿನಲ್ಲಿ ಬರುವ ಅನಾವಶ್ಯಕ ಮತ್ತು ಅಹಂಯುಕ್ತ ವಿಚಾರಗಳು ಕಡಿಮೆಯಾಗಿ ಸಾಧಕನ ಮನಸ್ಸು ನಿರ್ಮಲ ವಾಗತೊಡಗುತ್ತದೆ. ಇದರಿಂದ ಅವನ ನಾಮಜಪವು ಇನ್ನಷ್ಟು ಚೆನ್ನಾಗಿ ಆಗತೊಡಗುತ್ತದೆ. ಭಾವಜಾಗೃತಿಗಾಗಿ ಪ್ರಯತ್ನ ಮಾಡುವುದರಿಂದ ಈಶ್ವರನೊಂದಿಗೆ ಸಾಧಕನ ಅನುಸಂಧಾನ ಹೆಚ್ಚಾಗುತ್ತದೆ ಮತ್ತು ಅವನ ಮನಸ್ಸಿನಲ್ಲಿಯೂ ‘ಎಲ್ಲವನ್ನೂ ಈಶ್ವರನೇ ಮಾಡಿಸಿಕೊಳ್ಳುತ್ತಿದ್ದಾನೆ’, ಎಂಬ ಅರಿವು ಹೆಚ್ಚಾಗುತ್ತದೆ.

ಈ ರೀತಿ ಸಾಧಕನ ವ್ಯಷ್ಟಿ ಸಾಧನೆ ಚೆನ್ನಾಗಿ ಆಗುವುದರಿಂದ ಅವನ ವಾಣಿಯಲ್ಲಿನ ಚೈತನ್ಯ ಹೆಚ್ಚಾಗುತ್ತದೆ ಮತ್ತು ಇದರಿಂದ ಅಧ್ಯಾತ್ಮ ಪ್ರಚಾರದ ಸೇವೆ ಮಾಡುವಾಗ ಅವನು ಸಾಧನೆಯ ವಿಷಯದಲ್ಲಿ ಹೇಳುವ ವಿಷಯಗಳು ಸಮಾಜದ ಜನರಿಗೆ ಮನವರಿಕೆಯಾಗಿ ಅವರು ಸಾಧನೆ ಮಾಡಲು ಪ್ರವೃತ್ತರಾಗುತ್ತಾರೆ. ವ್ಯಷ್ಟಿ ಸಾಧನೆ ಚೆನ್ನಾಗಿರುವುದರಿಂದ ಈಶ್ವರೀ ವಿಚಾರವನ್ನು ಗ್ರಹಣ ಮಾಡಿಕೊಳ್ಳುವ ಅವನ ಕ್ಷಮತೆ ಹೆಚ್ಚಾಗುತ್ತದೆ. ಇದರಿಂದ ಇತರ ಸೇವೆಗಳನ್ನು ಮಾಡುವಾಗಲೂ ‘ಸೇವೆ ಉತ್ಸಾಹದಿಂದ ಆಗುವುದು, ಅದು ಕಡಿಮೆ ಅವಧಿಯಲ್ಲಿ ಪೂರ್ಣವಾಗುವುದು, ಸೇವೆ ಪರಿಪೂರ್ಣ ಮತ್ತು ತಪ್ಪಿಲ್ಲದಂತೆ ಆಗುವುದು, ಸೇವೆ ಯಲ್ಲಿ ಹೊಸಹೊಸ ವಿಷಯಗಳು ತಿಳಿಯುವುದು’ ಇತ್ಯಾದಿಗಳು ಸಾಧ್ಯವಾಗುವುದರಿಂದ ಅವನ ಸೇವೆಯ ಫಲನಿಷ್ಪತ್ತಿ ಹೆಚ್ಚಾಗುತ್ತದೆ. ಸಾಧಕರೇ, ವ್ಯಷ್ಟಿ ಸಾಧನೆ ಚೆನ್ನಾಗಿ ಮಾಡಿ ಸಾಧನಾರೂಪಿ ಮರದ ಬೇರನ್ನು ಬಲಿಷ್ಠಗೊಳಿಸಿ ಮತ್ತು ಸಮಷ್ಟಿ ಸಾಧನೆಯ ಫಲನಿಷ್ಪತ್ತಿಯನ್ನು ಹೆಚ್ಚಿಸಿ ಆ ಮರಕ್ಕೆ ಬಂದಿರುವ ಆನಂದದ ಫಲಗಳನ್ನು ಸವಿಯಿರಿ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ