ಪುರಾತನ ದೇವಾಲಯಗಳಲ್ಲಿನ ಆಶ್ಚರ್ಯಜನಕ ವಿಜ್ಞಾನ !

ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ಬಹಳ ಮುಂದುವರಿದ ವಿಜ್ಞಾನವಿತ್ತ್ತು; ಪಾಶ್ಚಿಮಾತ್ಯರು ಭಾರತದ ಈ ವಿಜ್ಞಾನವನ್ನು ಮುಂದೆ ಬರಲು ಬಿಡುತ್ತಿರಲಿಲ್ಲ, ಇದು ಅನೇಕ ಉದಾಹರಣೆಗಳಿಂದ ಗಮನಕ್ಕೆ ಬರುತ್ತದೆ. ಆದ್ದರಿಂದ ಅವರ ಪ್ರಭಾವದ ಅಡಿಯಲ್ಲಿರುವ ಕೆಲವು ಆಧುನಿಕತಾವಾದಿಗಳು ಇದನ್ನು ‘ಹುಸಿ ವಿಜ್ಞಾನ’ ಎಂದು ಕರೆಯಬಹುದು; ಆದರೆ ಈ ರಹಸ್ಯ ಸಂಪೂರ್ಣ ಬಹಿರಂಗವಾಗುವವರೆಗೆ, ಇದು ಎಲ್ಲರಿಗೂ ಒಂದು ಒಗಟೇ ಆಗಿದೆ ! ಅರ್ಥಾತ ದೇವಸ್ಥಾನಗಳ ಮೂಲಕ ನಮಗೆ ಪುರಾವೆಗಳನ್ನು ಬಿಟ್ಟು ಹೋಗಿರುವ ಈ ವೈಜ್ಞಾನಿಕ ಸಂಗತಿಗಳು ಕಾಲಾಂತರದಲ್ಲಿ ಬಯಲಾಗಿ ಭಾರತೀಯ ಪ್ರಾಚೀನ ಸಂಸ್ಕೃತಿಯ ಹಿರಿಮೆ ಮತ್ತೊಮ್ಮೆ ಬಯಲಾಗುವುದರಲ್ಲಿ ಸಂಶಯವಿಲ್ಲ !

ದೇವಾಲಯ ಮತ್ತು ವಿಗ್ರಹ ತಯಾರಕರು ತಂತ್ರಜ್ಞಾನದಲ್ಲಿ, ಹಾಗೆಯೇ ಇಂಜಿನಿಯರಿಂಗ್‌ ಜ್ಞಾನದ ಉತ್ತಮ ಅನುಭವವನ್ನು ಹೊಂದಿರದ ಹೊರತು ಇಂತಹ ವಿಶಿಷ್ಟ ದೇವಾಲಯಗಳನ್ನು ನಿರ್ಮಿಸುವುದು ಅಸಾಧ್ಯವಾಗಿದೆ, ವಾಸ್ತವದಲ್ಲಿ, ಕೆಲವು ಸ್ಥಳಗಳ ವಿಸ್ಮಯಗಳನ್ನು ನೋಡಿದ ನಂತರ, ಆಗಿನ ವಿಜ್ಞಾನ ಮತ್ತು ತಂತ್ರಜ್ಞಾನ ಇಂದಿನಕ್ಕಿಂತ ಹೆಚ್ಚು ಮುಂದುವರೆದಿತ್ತು ಎಂಬುದು ಗಮನಕ್ಕೆ ಬರುತ್ತದೆ !

ಹೊಯ್ಸಳೇಶ್ವರ ದೇವಾಲಯವು ಪ್ರಾಚೀನ ಕಾಲದಲ್ಲಿ ಯಂತ್ರಗಳ ಅಸ್ತಿತ್ವಕ್ಕೆ ಸಾಕ್ಷಿಯಾಗಿದೆ !

ಕರ್ನಾಟಕ ರಾಜ್ಯದ ಹಳೆಬೀಡುವಿನಲ್ಲಿನ ಹೊಯ್ಸಳೇಶ್ವರ ದೇವಾಲಯವನ್ನು ೧೨ ನೇ ಶತಮಾನದಲ್ಲಿ ರಾಜ ವಿಷ್ಣುವರ್ಧನನ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ಹಿಂದೆ ಹೊಯ್ಸಳ ರಾಜಧಾನಿಯಾಗಿತ್ತು. ಈ ದೇವಾಲಯವು ಪೌರಾಣಿಕ ವಾಸ್ತುಶಿಲ್ಪದ ಅತ್ಯಂತ ಆಕರ್ಷಕ ರಚನೆಯನ್ನು ಹೊಂದಿದೆ. ಈ ದೇವಾಲಯದಲ್ಲಿ ೨೫೦ ದೇವತೆಗಳಿವೆ. ಈ ದೇವಾಲಯದ ಕಂಬಗಳ ಮೇಲೆ ಅತ್ಯಂತ ಸೂಕ್ಷ್ಮವಾದ ವೃತ್ತಾಕಾರದ ಗೆರೆಗಳನ್ನು (ಕುಂಬಾರನ ಚಕ್ರದ ಮೇಲಿನ ತಿರುಗುತ್ತಿರುವ ಮಡಿಕೆಯ ಮೇಲೆ ಇರುವಂತೆ) ಯಂತ್ರವಿಲ್ಲದೆ ರಚಿಸುವುದು ಅಸಾಧ್ಯವಾಗಿದೆ !

ಇಲ್ಲಿರುವ ಶಿವನ ಮೂರ್ತಿಯ ಮೇಲಿನ ಮುಕುಟದ ಮೇಲೆ ಸುಮಾರು ೧ ಇಂಚು ಆಕಾರದ ಸಣ್ಣ ಕಲ್ಲಿನ (ಮಾನವನ) ತಲೆಬುರುಡೆಯ ಕೆತ್ತನೆ ಇದೆ. ವಿಸ್ಮಯವೆಂದರೆ, ಈ ತಲೆಬುರುಡೆ ಒಳಗೆ ಟೊಳ್ಳಾಗಿದೆ. ಇದರ ಮೂಲಕ ತೆಳುವಾದ ಕೋಲು ಹೋಗಬಹುದು. ಈ ತಲೆಬುರುಡೆಯ ಕಣ್ಣುಗಳ ಮೂಲಕ ಹಾದುಹೋಗುವ ಬೆಳಕು ಕಿವಿ ಮತ್ತು ಬಾಯಿಯ ಮೂಲಕ ಹೊರಬರುತ್ತದೆ. ‘ಈ ರೀತಿಯ ಸಣ್ಣ ಮಾನವ ತಲೆಬುರುಡೆಯನ್ನು ಕಲ್ಲಿನಲ್ಲಿ ಕೈಯಿಂದ ಕೆತ್ತುವುದು ಕಷ್ಟಕರವಾಗಿದೆ. ಇದನ್ನು ಯಂತ್ರಗಳಿಲ್ಲದೆ ಕೊರೆಯುವುದು ಸಾಧ್ಯವಿಲ್ಲ’ ಎನ್ನುತ್ತಾರೆ ತಜ್ಞರು. ಅಂದರೆ ಇಂತಹ ಕಲ್ಲುಗಳ ಮೇಲೆ ಕೆಲಸ ಮಾಡುವ ಯಂತ್ರಗಳು ಆ ಕಾಲದಲ್ಲಿ ಇದ್ದವು. ಕೆಲವು ದೇವಾಲಯಗಳಲ್ಲಿ, ಕೆಲವು ವಿಗ್ರಹಗಳು ತಮ್ಮ ಕೈಯಲ್ಲಿ ಇಂತಹ ಉಪಕರಣಗಳನ್ನು ಹಿಡಿದುಕೊಂಡಿದ್ದು, ಅವುಗಳನ್ನು ಇಂದು ಕಲ್ಲಿನ ಕೆತ್ತನೆಯಲ್ಲಿ ಬಳಸುತ್ತಾರೆ. ಇದರರ್ಥ ‘ಪ್ರಾಚೀನ ಕಾಲದಲ್ಲಿ ಈ ಯಂತ್ರಗಳು ಇದ್ದವು’ ಎಂದಾಗುತ್ತದೆ. ೧೪ ನೇ ಶತಮಾನದ ಆರಂಭದಲ್ಲಿ ಇಸ್ಲಾಮಿಕ್‌ ಆಕ್ರಮಣಕಾರರು ಈ ದೇವಾಲಯವನ್ನು ಒಡೆದರು. ಹೊಯ್ಸಳ ರಾಜರು ಒಂದೂವರೆ ಸಾವಿರ ದೇವಾಲಯಗಳನ್ನು ನಿರ್ಮಿಸಿದ್ದರು.

ಕಣ್ಣುಗಳಿಗೆ ಕಾಣದ ನಕ್ಷತ್ರಗಳಲ್ಲಿನ ಚುಕ್ಕಿಗಳ ಆಕೃತಿಗಳಿರುವ ಹೊಯ್ಸಳೇಶ್ವರ ದೇವಸ್ಥಾನ !

ಹೊಯ್ಸಳೇಶ್ವರ ದೇವಸ್ಥಾನದಲ್ಲಿ ಬರಿಗಣ್ಣಿಗೆ ಕಾಣದ ನಕ್ಷತ್ರಗಳಲ್ಲಿರುವ ಚುಕ್ಕಿಗಳ  ಪ್ರತಿಕೃತಿಗಳು ಇಲ್ಲಿನ ಕಲ್ಲಿನ ಕೆತ್ತನೆಗಳಲ್ಲಿವೆ. ಇದರರ್ಥ ಭಾರತೀಯ ಪೂರ್ವಜರಿಗೆ ಈ ನಕ್ಷತ್ರಗಳ ಬಗ್ಗೆ ತಿಳಿದಿತ್ತು. ಅವರು ಈ ನಕ್ಷತ್ರಗಳನ್ನು ನೋಡುವ ದೂರದರ್ಶಕ ಗಳನ್ನು ಹೊಂದಿದ್ದರು. ಈ ದೇವಾಲಯವನ್ನು ೫೦೦ ವರ್ಷಗಳ ಹಿಂದೆ ಪುನರ್ನಿರ್ಮಿಸಲಾಯಿತು. ಭಾರತದಲ್ಲಿನ ಅನೇಕ ದೇವಾಲಯಗಳಲ್ಲಿ ದುರ್ಬೀನುಗಳ ಮೂಲಕ ಆಕಾಶವನ್ನು ನೋಡುತ್ತಿರುವ ಪುರುಷರು ಮತ್ತು ಮಹಿಳೆಯರನ್ನು ಕೆತ್ತಲಾಗಿದೆ. ಅಂದರೆ ಆಗ ದುರ್ಬೀನುಗಳೂ ಲಭ್ಯವಿದ್ದವು.