ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ಕಲಿಸುವ ಬೇಲೂರಿನ ಚೆನ್ನಕೇಶವ ದೇವಸ್ಥಾನ !

೧೧೧೬ ರಲ್ಲಿ ಹೊಯ್ಸಳ ರಾಜವಂಶಸ್ಥರು ಕಟ್ಟಿದ ಬೇಲೂರಿನ ಚೆನ್ನಕೇಶವ ದೇವಸ್ಥಾನವು ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ತೋರಿಸುವ ಕಲಾಕೃತಿಗಳಿಂದ ತುಂಬಿದೆ.

ಈ  ದೇವಸ್ಥಾನದಲ್ಲಿ ಮೋಹಿನಿಯ ಮುಖ್ಯ ಮೂರ್ತಿ ಹಾಗೂ ಇತರ ಮೂರ್ತಿಗಳಿವೆ. ಮೋಹಿನಿ ರೂಪವು ಭಸ್ಮಾಸುರನನ್ನು ಕೊಲ್ಲಲು ವಿಷ್ಣುವು ತಾಳಿದ ಸ್ತ್ರೀ ರೂಪವಾಗಿತ್ತು. ಮೋಹಿನಿ ಯೆಂದರೆ ಅದೃಶ್ಯ ಆಕರ್ಷಣೆಯ ಸಂಕೇತವಾಗಿದೆ. ಇಲ್ಲಿ ಮಾನವ ರೂಪವನ್ನು ಉದ್ದೇಶಿಸಿರದೇ, ಗುರುತ್ವಾಕರ್ಷಣೆಯ ತತ್ತ್ವವನ್ನು ತೋರಿಸಲು ಸಾಂಕೇತಿಕ ರೂಪವಾಗಿ ಬಳಸಲಾಗಿದೆ ಎಂಬುದು ಗಮನಕ್ಕೆ ಬರುತ್ತದೆ; ಏಕೆಂದರೆ ಮಾನವನಂತೆ ಈ ಮೂರ್ತಿಗಳಿಗೆ ನಾಭಿಯನ್ನು ತೋರಿಸಿಲ್ಲ. ಇಲ್ಲಿ ಅನೇಕ ಕುಸುರಿ ಕೆತ್ತನೆಗಳಿಂದ ಗುರುತ್ವಾಕರ್ಷಣೆಯ ಅಗೋಚರ ಸೆಳೆತವನ್ನು ತೋರಿಸಲಾಗಿದೆ. ಒಬ್ಬ ಮೋಹಿನಿಯ ಕೈಯಿಂದ ಕೊನೆಯ ಬಳೆ ಕೆಳಗೆ ಬರುತ್ತದೆ, ಹಾಗೆಯೇ ಮೇಲಕ್ಕೆ ಎತ್ತಿರುವ ಕಾಲಿನ ಗೆಜ್ಜೆಯು ಕೆಳಗೆ ಬಾಗಿದೆ. ಈ ಕಲಾಕೃತಿ ಗುರುತ್ವಾಕರ್ಷಣೆಯನ್ನು ತೋರಿಸುತ್ತದೆ.

(1) ಭೂಮಿಯಿಂದ ಮೇಲಿರುವ ಸ್ತಂಭಗಳ ಕೆಳಗಿನ ಸ್ಥಾನ ಚೆನ್ನಕೇಶವ ದೇವಾಲಯದಲ್ಲಿನ ಶಿಲ್ಪಕಲೆ

ಇಲ್ಲಿರುವ ಸರಸ್ವತಿದೇವಿಯ ಅದ್ಭುತ ಮತ್ತು ವಿಶಿಷ್ಟ ಮೂರ್ತಿಯನ್ನು ಗುರುತ್ವಾಕರ್ಷಣೆ ರೇಖೆಯ ಜ್ಞಾನವನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ಈ ಮೂರ್ತಿಯ ಮಸ್ತಕದ ಮೇಲೆ ನೀರಿನ ಹನಿಗಳು ಬಿದ್ದರೆ, ಅವು ಮೂಗಿನ ಕೆಳಗಿನಿಂದ ಬಲಗಡೆಗೆ ಬಂದು, (ಮೇಲಕ್ಕೆತ್ತಿರುವ) ಬಲಗೈಯ ಅಂಗೈ ಮೇಲೆ ಬಿದ್ದು, ಎಡಗಡೆಯ ಅಂಗಾಲಿನಿಂದ ಬಲಗಾಲಿನ ಮೇಲೆ ಬೀಳುತ್ತದೆ. (ಈ ನೀರು ಹರಡುವುದಿಲ್ಲ, ಇದು ನೇರವಾಗಿ ಕೆಳಗೆ ಬರುತ್ತದೆ, ಇದು ಗುರುತ್ವಾಕರ್ಷಣೆಯ ಸಿದ್ಧಾಂತದಿಂದ ಆಗುತ್ತದೆ)

೧೯೨೬ ರಲ್ಲಿ ಇದನ್ನು ನೋಡಲು  ಮೋಹನದಾಸ ಗಾಂಧಿ, ಜವಾಹರಲಾಲ ನೆಹರು, ಮಹಮ್ಮದ ಅಲಿ ಜಿನ್ನಾ ಇವರು ಮಂದಿರಕ್ಕೆ ಬಂದರು. ಈ ನಾಯಕರಿಗೆ ತೋರಿಸಲು ಈ ಮೂರ್ತಿಯನ್ನು ಮೇಲಿನ ಭಾಗದಿಂದ ತೆಗೆದು ಕೆಳಗೆ ತರಲಾಯಿತು. ಮೂರ್ತಿಯ ಮೇಲೆ ನೀರಿನ ಹನಿಗಳ ಪ್ರಯೋಗವನ್ನು ಮಾಡಿ ತೋರಿಸಲಾಯಿತು.

ಅರ್ಚಕರು ಇಲ್ಲಿನ ೧೨ ಅಡಿ ಎತ್ತರದ ಮುಖ್ಯ ಮೂರ್ತಿಯನ್ನು ಪ್ರತಿದಿನ ಮೋಹಿನಿ ರೂಪದಲ್ಲಿ ಶೃಂಗರಿಸುತ್ತಾರೆ. ಇಲ್ಲಿಯ ಗರ್ಭಗೃಹದಲ್ಲಿ ಗುರುತ್ವಾಕರ್ಷಣೆಯನ್ನು ವಿವರಿಸುವ ಕೆತ್ತನೆಯಿದೆ. ಇಲ್ಲಿ ಯಾರಿಗೂ ಒಳಗೆ  ಪ್ರವೇಶಿಸಲು ಅಥವಾ ಛಾಯಾಚಿತ್ರ ತೆಗೆಯಲು ಅವಕಾಶವಿಲ್ಲದ ಕಾರಣ ಜನರಿಗೆ ತಿಳಿಯುವುದಿಲ್ಲ, ಇದು ದುರದೃಷ್ಟಕರ !

ಸಂಸ್ಕ್ರತದಲ್ಲಿ ‘ಗುರುತ್ವ’ ಈ ಶಬ್ದವಿದೆ. ೬೨೮ ರಲ್ಲಿ ಗಣಿತಜ್ಞ ಬ್ರಹ್ಮಗುಪ್ತ ಅದನ್ನು ಉಲ್ಲೇಖಿಸುತ್ತಾ, ‘ಗುರುತ್ವಾಕರ್ಷಣೆಯಿಂದ ದೊಡ್ಡ ವಸ್ತುವಿನ ಕಡೆಗೆ ಸಣ್ಣ ವಸ್ತು ಆಕರ್ಷಿಸಲ್ಪಡುತ್ತವೆ’ ಎಂದು ಹೇಳಿದ್ದಾರೆ, ಕುದುಮಿಆನ ಮಲಯಿಯ ಪ್ರಾಚೀನ ದೇವಸ್ಥಾನದಲ್ಲಿ ಮೋಹಿನಿಯ ೨ ಮೂರ್ತಿಗಳಿವೆ. ಇಲ್ಲಿ ದೊಡ್ಡ ರೂಪದಲ್ಲಿ ಮೋಹಿನಿ ಚಿಕ್ಕ ರೂಪದಲ್ಲಿರುವ ಋಷಿಗಳನ್ನು ಆಕರ್ಷಿಸುವ ಕಲಾಕೃತಿಯಿದೆ. ಇದರಿಂದ ಮೋಹಿನಿ ರೂಪವನ್ನು ಗುರುತ್ವಾಕರ್ಷಣೆ ಸಿದ್ಧಾಂತವನ್ನು ತೋರಿಸಲು ಉಪಯೋಗಿಸಲಾಗುತ್ತಿದೆ ಎಂದು  ಗಮನಕ್ಕೆ ಬರುತ್ತದೆ.

ಚೆನ್ನಕೇಶವ ದೇವಾಲಯದಲ್ಲಿನ ಶಿಲ್ಪಕಲೆ

೧೭ ಸಪ್ಟೆಂಬರ ೨೦೨೨ ರಲ್ಲಿ ಒಂದು ಘಟನೆ ನಡೆಯಿತು. ಈ ದೇವಸ್ಥಾನದ ಹೊರಗಿರುವ ಎತ್ತರದ ಕಬ್ಬಿಣದ ಸ್ತಂಭದ ಮೇಲಿನ ಚೆಂಡು ಕೆಳಗೆ ಬಿದ್ದಿತು. ಇದಾದ ಸ್ವಲ್ಪ ಸಮಯದಲ್ಲಿಯೇ ಅಲ್ಲಿ ಲಘು ಭೂಕಂಪ ಸಂಭವಿಸಿದೆ. ಆಗ ಗಮನಕ್ಕೆ ಬಂದಿರುವುದೇನೆಂದರೆ, ಭೂಕಂಪ ಬರುವುದಿದ್ದರೆ,  ಆಗ ಈ ಸ್ತಂಭದ ಮೇಲಿನ ಚೆಂಡು ಕೆಳಗೆ ಬೀಳುತ್ತದೆ. ಈ ಸ್ತಂಭದ ಕೆಳಗಿನ ಕಲ್ಲು ಒಂದು ಕಡೆ ಭೂಮಿಯನ್ನು ಸ್ಪರ್ಶಿಸಿಲ್ಲ. ಬದಲಾಗಿ ಸ್ವಲ್ಪ ಮೇಲಿದೆ.  ೪೫ ಟನ್‌ ತೂಕದ ಈ ಪ್ರಾಚೀನ ಗುರುತ್ವಾಕರ್ಷಣ ವಿರೋಧಿ ಕಂಬ ಈ ರೀತಿ ೩ ಕಡೆ ಭೂಮಿಯನ್ನು ಸ್ಪರ್ಶಿಸಿ ಸಾವಿರಾರು ವರ್ಷಗಳಿಂದ ನಿಂತಿದೆ.

ಭೂಕಂಪದಲ್ಲಿ ವಿಶಾಲ ಅಖಂಡ ೨೨ ಅಡಿ ಕಂಬ ಬಿದ್ದಿಲ್ಲ. ಕಂಬಕ್ಕೆ ಕೆಳಗಿನಿಂದ ಗಟ್ಟಿಯಾದ ಆಧಾರವಿಲ್ಲ, ಇದು ಆಧಾರವಿಲ್ಲದೇ ನಿಂತು ಕೊಂಡಿರುವ ಕಂಬವಾಗಿದೆ. ನಮಗೆ ಪೆನ್ಸಿಲನ್ನು ಕೂಡ ನಿಲ್ಲಿಸಲು ಬರುವುದಿಲ್ಲ. ಈ ಕಂಬ ಅನೇಕ ವರ್ಷಗಳಿಂದ ನಿಂತುಕೊಂಡಿದೆ. ಭೂಕಂಪ ಬಂದ ಬಳಿಕ ಕಂಬದ ಮಧ್ಯದ ಭಾಗ ತಿರುಗುತ್ತದೆ. ಮೇಲೆ ಚಿಕ್ಕ ಗಂಟೆಯೂ ಇದೆ. ಅದನ್ನು ಬಾರಿಸಬಹುದು. ಈ ಕಂಬವಿರುವ ರೀತಿಯಲ್ಲಿಯೇ ಇತ್ತೀಚಿಗೆ ನಿರ್ಮಾಣವಾಗಿರುವ ಭೂಕಂಪ ಅಳೆಯುವ ‘ಸಿಸ್ನೊಗ್ರಾಫ್’ ಉಪಕರಣ ಕೂಡ ಭೂಮಿಯನ್ನು ಗಟ್ಟಿಯಾಗಿ ಹಿಡಿದಿರುವುದಿಲ್ಲ. ಆದುದರಿಂದ ಭೂಕಂಪವಾದಾಗ ಅದು ಅಲುಗಾಡಿ ಅದರ ತೀವ್ರತೆಯನ್ನು ಅಳೆಯಲು ಆಗುತ್ತದೆ. ಪ್ರಾಚೀನ ಚೀನಾ ಭೂಕಂಪ ಮಾಪನ ಉಪಕರಣವೂ ಭೂಕಂಪವಾದಾಗ ಚೆಂಡು ಬೀಳಿಸುವ ಉಪಕರಣವಿತ್ತು, ಇದು ಈ ದೇವಸ್ಥಾನದ ಕಂಬದ ಮೇಲಿನ ಚೆಂಡು ಬೀಳಿಸುವ ಕಾರ್ಯವಿಧಾನವನ್ನು ಹೋಲುತ್ತದೆ.