ಪ್ರಾಚೀನ ಹಿಂದೂ ಮಂದಿರವಾಗಿದ್ದ ಜಾಮಾ ಮಸೀದಿ
ಸಂಬಲ (ಉತ್ತರಪ್ರದೇಶ) – ನವಂಬರ್ ೧೯ ರಂದು ಶಾಹಿ ಜಾಮಾ ಮಸೀದಿಯ ಸಮೀಕ್ಷೆ ನಡೆಸುವ ಆದೇಶವನ್ನು ದಿವಾನಿ ನ್ಯಾಯಾಲಯದ ನ್ಯಾಯಾಧೀಶರಾದ ಆದಿತ್ಯ ಸಿಂಹ ಅವರು ನೀಡಿದ್ದರು . ನ್ಯಾಯಾಲಯವು ಬರುವ ೭ ದಿನಗಳಲ್ಲಿ ಚಿತ್ರೀಕರಣ ಮತ್ತು ಛಾಯಾಚಿತ್ರ ಸೆರೆಹಿಡಿಯುವುದರ ಜೊತೆಗೆ ಸಮೀಕ್ಷೆ ನಡೆಸುವ ಆದೇಶ ನೀಡಿತ್ತು. ಇದಕ್ಕಾಗಿ ನ್ಯಾಯಾಲಯವು ರಮೇಶ ಸಿಂಹ ರಾಘವ ಅವರನ್ನು ಅಡ್ವೋಕೇಟ್ ಕಮಿಷನರ್ (ವಕೀಲ ಆಯುಕ್ತ) ಆಗಿ ನೇಮಕಗೊಳಿಸಿದ್ದಾರೆ. ಈ ಆದೇಶದ ನಂತರ ಕೇವಲ ೨ ಗಂಟೆಯಲ್ಲಿ ಅವರು ಮಸೀದಿಯ ಸಮೀಕ್ಷೆ ನಡೆಸಿದರು. ಕೈಲಾದೇವಿ ದೇವಸ್ಥಾನದ ಮಹಂತರಾದ ಋಷಿರಾಜ ಗಿರಿ ಮಹಾರಾಜ ಅವರು ದಿವಾನಿ ನ್ಯಾಯಾಲಯದಲ್ಲಿ ಈ ಬಗ್ಗೆ ಅರ್ಜಿ ದಾಖಲಿಸಿದ್ದರು. ನ್ಯಾಯಾಲಯವು ಮಧ್ಯಾಹ್ನ ೪ ಗಂಟೆಗೆ ಆದೇಶ ನೀಡಿದ ನಂತರ ಸರಕಾರವು ೫ ಸದಸ್ಯರ ಸಮಿತಿ ಸ್ಥಾಪಿಸಿತು. ಸಂಜೆ ೬.೧೫ಕ್ಕೆ ಜಿಲ್ಲಾಧಿಕಾರಿ ಪಾನಸಿಯ, ಪೊಲೀಸ್ ಅಧಿಕಾರಿ ಕೃಷ್ಣಕುಮಾರ್ ಬಿಷ್ಣಾಯಿ ಇವರ ಜೊತೆಗೆ ಸಮೀಕ್ಷಾ ತಂಡ ಜಾಮಾ ಮಸೀದಿಗೆ ತಲುಪಿತು. ಅವರ ಜೊತೆಗೆ ಈ ಸಮಿತಿ ಕೂಡ ಇತ್ತು. ಅಲ್ಲಿ ೨ ಗಂಟೆಯಲ್ಲಿ ಸಮೀಕ್ಷೆ ನಡೆಸಿ ರಾತ್ರಿ ೮.೧೫ ಕ್ಕೆ ಎಲ್ಲರೂ ಹೊರಗೆ ಬಂದರು. ಸಮೀಕ್ಷಾ ತಂಡದಿಂದ ಮಸೀದಿಯ ಒಳಗಿನ ಚಿತ್ರೀಕರಣ ಮಾಡಲಾಗಿದೆ ಮತ್ತು ಛಾಯಾಚಿತ್ರಗಳು ಕೂಡ ಸೆರೆ ಹಿಡಿಯಲಾಗಿವೆ. ಅದರ ವರದಿ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾಗುವುದು.
Sambhal Jama Masjid Survey conducted within 2 hours after the Civil Court’s order.
The court direction came on an application filed by a mahant arguing that the ancient Temple was converted into a mosque by Mughal emperor Babur
Survey profoundly reveals the existence of Vishnu… pic.twitter.com/tjI1W9PtfE
— Sanatan Prabhat (@SanatanPrabhat) November 20, 2024
ಮಸೀದಿಯ ಸಮೀಕ್ಷೆ ನಡೆಯುವ ಮಾಹಿತಿ ತಿಳಿಯುತ್ತಲೇ ಮಸೀದಿಯ ಬಳಿ ಅನೇಕ ಜನರು ಸೇರಿದರು. ನೆರೆದ ಜನರನ್ನು ಪೊಲೀಸರು ದೂರ ಸರಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಅಲ್ಲಲ್ಲಿ ಬಿಗಿ ಪೊಲೀಸ್ ಬಂದೋಬಸ್ ಮಾಡಲಾಗಿತ್ತು. ಅರ್ಜಿದಾರರಾದ ಮಹಂತ ಋಷಿರಾಜ ಗಿರಿ ಮಹಾರಾಜ್ ಅವರಿಗೆ ಮಸೀದಿಯೊಳಗೆ ಪ್ರವೇಶ ನೀಡಲಿಲ್ಲ. ಸಮೀಕ್ಷೆ ಆಗುವವರೆಗೆ ಅವರು ಹೊರಗೆ ನಿಂತಿದ್ದರು. ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ (ಪೂ ) ಹರಿಶಂಕರ್ ಜೈನ್ ಅವರು ಮಹಂತ ಋಷಿ ರಾಜಗಿರಿ ಅವರ ಪರ ವಕೀಲರಾಗಿದ್ದಾರೆ. ಪೂ. ಹರಿಶಂಕರ್ ಜೈನ್ ಅವರ ಸುಪುತ್ರ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣುಶಂಕರ್ ಅವರು ಕೂಡ ಈ ಸಮೀಕ್ಷೆಯ ವೇಳೆ ಮಸೀದಿಯಲ್ಲಿದ್ದರು.
ಶಾಹಿ ಜಾಮಾ ಮಸೀದಿ ಪ್ರಾಚೀನ ಶ್ರೀ ಹರಿಹರ ಮಂದಿರ !
ಪ್ರಸ್ತುತ ಕೋತವಾಲಿ ಪ್ರದೇಶದಲ್ಲಿ ಕೋಟ ಪೂರ್ವಕ್ಕೆ ಶಾಹಿ ಜಾಮಾ ಮಸೀದಿ ಇದ್ದು, ಈ ಶಾಹಿ ಜಾಮಾ ಮಸೀದಿ ಪ್ರಾಚೀನ ಶ್ರೀ ಹರಿಹರ ಮಂದಿರವಾಗಿದೆ ಎಂದು ಮಹಂತ ಋಷಿ ರಾಜಗಿರಿ ಮಹಾರಾಜ ಅವರು ಅರ್ಜಿಯಲ್ಲಿ ದಾವೆ ಮಾಡಿದ್ದರು. ಮಸೀದಿಯ ಹಿಂದೆ ದೇವಸ್ಥಾನ ಇರುವ ಸಾಕಷ್ಟು ಸಾಕ್ಷಿಗಳು ಇವೆ. ಸಂಬಲ್ ನಲ್ಲಿಯೇ ಭಗವಾನ್ ಶ್ರೀ ವಿಷ್ಣುವಿನ ಹತ್ತನೆಯ ಕಲ್ಕಿ ಅವತಾರ ಆಗುವುದು ಎಂದು ಹೇಳಲಾಗಿದೆ.
ಮಸೀದಿಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಕಂಡು ಬಂದಿಲ್ಲವಂತೆ – ಮಸೀದಿ ಸಮಿತಿ
ಸಮೀಕ್ಷೆಯ ನಂತರ ಈ ಶಾಹಿ ಜಾಮಾ ಮಸೀದಿ ಸಮಿತಿಯ ಅಧ್ಯಕ್ಷರಾದ ಜಫರ್ ಅಲಿ ಪರ ವಕೀಲರು ಮಾತನಾಡಿ, ಸಮೀಕ್ಷಾ ತಂಡದಿಂದ ಜಾಮಾ ಮಸೀದಿಯ ಪ್ರತಿಯೊಂದು ಭಾಗದ ಸಮೀಕ್ಷೆ ನಡೆಸಲಾಗಿದೆ. ನಾವು ಕೂಡ ತಂಡದ ಜೊತೆಗೆ ಇದ್ದೆವು. ನಾವು ಅವರಿಗೆ ಸಹಕಾರ ನೀಡಿದ್ದೇವೆ. ಸಮೀಕ್ಷೆಯಲ್ಲಿ ಇಲ್ಲಿಯವರೆಗೆ ಯಾವುದೇ ಸಂದೇಹ ನಿರ್ಮಾಣವಾಗುವಂತಹ ಅಕ್ಷೇಪಾರ್ಹ ವಿಷಯ ಕಂಡು ಬಂದಿಲ್ಲ. ಪ್ರತ್ಯಕ್ಷವಾಗಿ ಇದು ಜಾಮಾ ಮಸೀದಿಯೇ ಆಗಿದೆ ಎಂದು ಅಂದುಕೊಳ್ಳಬಹುದು.
ಯಾವುದರ ಸಮೀಕ್ಷೆ ನಡೆಸಬೇಕಿತ್ತು ಅದೆಲ್ಲವೂ ನಡೆದಿದೆ ! – ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಪಾನಸಿಯ ಅವರು ಮಾತನಾಡಿ, ಆಯುಕ್ತರು ಸಮೀಕ್ಷೆ ನಡೆಸಿದ್ದಾರೆ. ಅರ್ಜಿದಾರರು ಕೂಡ ಉಪಸ್ಥಿತರಿದ್ದರು. ಪ್ರತಿವಾದಿ ಮತ್ತು ಸಮಿತಿಯ ಸದಸ್ಯರು ಕೂಡ ಉಪಸ್ಥಿತರಿದ್ದರು. ಸಮೀಕ್ಷೆಯ ವರದಿ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾಗುವುದು. ಪ್ರಥಮ ಹಂತದಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ. ಅಗತ್ಯವಿದ್ದರೆ ಭವಿಷ್ಯದಲ್ಲಿ ಅರ್ಜಿದಾರರು ನ್ಯಾಯಾಲಯಕ್ಕೆ ಹೋಗುವರು ಆಗ ಇನ್ನೂ ಬೇಕಾದರೆ ಸಮೀಕ್ಷೆ ನಡೆಸಲಾಗುವುದು. ಯಾವ ಸಮೀಕ್ಷೆ ನಡೆಸಬೇಕಿತ್ತು ಅದೆಲ್ಲವೂ ನಡೆದಿದೆ ಎಂದು ತಿಳಿಸಿದರು.
ಮಸೀದಿಯಲ್ಲಿ ಈಗಲೂ ಕೂಡ ಹಿಂದೂ ದೇವಸ್ಥಾನಕ್ಕೆ ಸಂಬಂಧಿತ ಅನೇಕ ಚಿಹ್ನೆಗಳು ಮತ್ತು ಗುರುತುಗಳಿವೆ ! – ನ್ಯಾಯವಾದಿ ವಿಷ್ಣು ಶಂಕರ ಜೈನ್
ನ್ಯಾಯವಾದಿ ವಿಷ್ಣು ಶಂಕರ್ ಚೈನ್ ಅವರು ಇದರ ಬಗ್ಗೆ ಮಾತನಾಡಿ, ೧೫೨೯ ರಲ್ಲಿ ಬಾಬರನು ಈ ಮಂದಿರವನ್ನು ಧ್ವಂಸಗೊಳಿಸಿದ್ದನು ಮತ್ತು ಮಸೀದಿ ಕಟ್ಟಿದನು. ಇಂದು ಈ ಮಂದಿರಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ; ಯಾಕೆಂದರೆ ಇದು ಭಾರತೀಯ ಪುರಾತತ್ವ ಸಮೀಕ್ಷೆಯ ಸಂರಕ್ಷಿತ ಕ್ಷೇತ್ರವಾಗಿದೆ. ಅಂತಹ ಸಂರಕ್ಷಿತ ಕ್ಷೇತ್ರದಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗಬಾರದು. ಮಸೀದಿಯಲ್ಲಿ ಈಗಲೂ ಕೂಡ ಹಿಂದೂ ದೇವಸ್ಥಾನಕ್ಕೆ ಸಂಬಂಧಿತ ಅನೇಕ ಚಿಹ್ನೆಗಳು ಮತ್ತು ಗುರುತುಗಳಿವೆ. ಉತ್ತರ ಪ್ರದೇಶ ಸರಕಾರವು ಮಸೀದಿ ಸಮಿತಿ ಮತ್ತು ಅದರೊಟ್ಟಿಗೆ ಸಂಬಂಧಪಟ್ಟವರನ್ನು ಈ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಿದೆ. ನಾವು ಈ ಪ್ರಕರಣದ ಪ್ರತಿಯೊಂದು ವಿಚಾರಣೆಗೆ ಬರುವೆವು. ಯಾವಾಗ ಯಾವಾಗ ನನಗೆ ಅಗತ್ಯ ಇರುವುದೋ, ಆಗ ನಾನು ನ್ಯಾಯಾಲಯಕ್ಕೆ ಬಂದು ನನ್ನ ಅಭಿಪ್ರಾಯ ಮಂಡಿಸುವೆನು. ವಿವಾದಿತ ಸ್ಥಳ ಮಸೀದಿ ಎಂದು ಉಪಯೋಗಿಸುವುದರ ಮೇಲೆ ನಿಷೇಧ ಹೇರಬೇಕು. ಈ ಸ್ಥಳ ಹಿಂದು ಧರ್ಮ ಮತ್ತು ಇತಿಹಾಸಕ್ಕೆ ಸಂಬಂಧಪಟ್ಟದ್ದಾಗಿದೆ ಮತ್ತು ಅದರ ಉಪಯೋಗ ಯಾವುದೇ ಧಾರ್ಮಿಕ ವಿವಾದಕ್ಕೆ ಕಾರಣವಾಗಬಾರದು ಎಂದು ಜೈನ್ ನುಡಿದರು.
ಅಲ್ಲಿ ಮಸೀದಿ ಇತ್ತು, ಇದೆ ಮತ್ತು ಇರುವುದು ! – ಸಮಾಜವಾದಿ ಪಕ್ಷದ ಸಂಸದ ಝಿಯಾ ಊರ್ ರಹಮಾನ್ ಬರ್ಕ್
ಸಂಬಲ್ ನ ಸಮಾಜವಾದಿ ಪಕ್ಷದ ಸಂಸದ ಝಿಯಾ ಊರ್ ರಹಮಾನ್ ಬರ್ಕ್ ಅವರು ಈ ಬಗ್ಗೆ ಮಾತನಾಡಿ, ಸಂಬಲ್ ನ ಜಾಮಾ ಮಸೀದಿ ಐತಿಹಾಸಿಕ ಮತ್ತು ಪ್ರಾಚೀನವಾಗಿದೆ. ೧೯೯೧ ರಲ್ಲಿ ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿ, ೧೯೪೭ ರಿಂದ ಇರುವ ಎಲ್ಲಾ ಧಾರ್ಮಿಕ ಸ್ಥಳಗಳನ್ನು ಯಥಾ ಸ್ಥಿತಿಯಲ್ಲಿಡಬೇಕು ಎಂದು ಹೇಳಿದ್ದರೂ ಕೂಡ ಕೆಲವು ಜನರು ದೇಶ ಮತ್ತು ರಾಜ್ಯದ ವಾತಾವರಣ ಹದಗೆಡಿಸಲು ಬಯಸುತ್ತಿದ್ದಾರೆ. ಅವರು ಒಂದು ಇಂಚು ಜಾಗದಲ್ಲಿ ಕೂಡ ಆಕ್ಷೇಪ ಸಹಿಸಲು ತಯಾರಿಲ್ಲ. ಅಲ್ಲಿ ಒಂದು ಮಸೀದಿ ಇತ್ತು, ಮಸೀದಿ ಇದೆ ಮತ್ತು ಯಾವಾಗಲೂ ಮಸೀದಿಯೇ ಇರಲಿದೆ ಎಂದು ಬರ್ಕ್ ಹೇಳಿದರು.
ಸಂಪಾದಕೀಯ ನಿಲುವುದೇಶದಲ್ಲಿನ ಪ್ರತಿಯೊಂದು ಸ್ಥಳದಲ್ಲಿ ಈ ರೀತಿ ತುರ್ತು ಸಮೀಕ್ಷೆ ನಡೆಸಿ ಅದರ ವರದಿ ಸಾರ್ವಜನಿಕರ ಎದುರಿಟ್ಟರೆ ಪ್ರಪಂಚಕ್ಕೇ ವಾಸ್ತವ ಪರಿಸ್ಥಿತಿ ತಿಳಿಯುತ್ತದೆ ಮತ್ತು ಹಿಂದೂಗಳ ಮೇಲೆ ನಡೆದಿರುವ ದಾಳಿಯ ಇತಿಹಾಸ ಬೆಳಕಿಗೆ ಬರುತ್ತದೆ ! |