ನಾದಶಾಸ್ತ್ರದ ಮೇಲಾಧಾರಿತ ದೇವಸ್ಥಾನದ ವಿಶೇಷ ಸ್ತಂಭಗಳು !

ಕನ್ಯಾಕುಮಾರಿಯ ದೇವಸ್ಥಾನದಲ್ಲಿ ಒಂದು ಬದಿಗೆ ಸಪ್ತಸ್ವರಗಳ ಕಲ್ಲಿನ ಕಂಬಗಳು ಇವೆ, ಇನ್ನೊಂದು ಬದಿಗೆ ಮೃದಂಗದ ಧ್ವನಿಯನ್ನು ಕಂಬದಲ್ಲಿ ಅಳವಡಿಸಿದ್ದಾರೆ. ಕಲ್ಲಿನ ನಾದ ವಿಶಿಷ್ಟವಾದ ಸ್ವರದಲ್ಲಿಯೇ ಬರಬೇಕು, ಇದಕ್ಕಾಗಿ ಇದರ ಸುತ್ತಳತೆ ಎಷ್ಟು ಇರಬೇಕು, ಕಲ್ಲಿನ ಒಳಗಿನಿಂದ ಎಷ್ಟು ಟೊಳ್ಳು ಮಾಡಬೇಕಾಗುತ್ತದೆ, ಎಂದು ನಿಖರವಾದ ಲೆಕ್ಕಾಚಾರ ಮತ್ತು ಶಾಸ್ತ್ರ ಅದರ ಹಿಂದಿದೆ. ಶ್ರೀ. ಮ. ಮಾಟೆ ಹೇಳುತ್ತಾರೆ, ‘ಒಂದುವೇಳೆ ಈ ಅಭಿಯಂತರು ಮತ್ತು ಶಿಲ್ಪಿಗಳು ಇದರ ಹಿಂದಿನ ಶಾಸ್ತ್ರ ಏನಿದೆ ಮತ್ತು ಯಾವ ತತ್ತ್ವಗಳಿವೆ, ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಿದ್ದರೆ, ಒಳ್ಳೆಯದಾಗುತ್ತಿತ್ತು. ಅಂದರೆ ಮುಂದಿನ ಅನೇಕ ಪೀಳಿಗೆಗಳು ಅದನ್ನು ‘ದೈವಿ ಚಮತ್ಕಾರ’ ಎಂದು ಅದರತ್ತ ನೋಡದೆ ಸಮಾಜಕ್ಕೆ ಒಂದು ಶುದ್ಧ ವೈಜ್ಞಾನಿಕ ದೃಷ್ಟಿ ದೊರಕುತ್ತಿತ್ತು.

ಶಿವ-ದೇವಸ್ಥಾನದ ವೈಶಿಷ್ಟ್ಯಗಳು : ಶಿವ-ದೇವಸ್ಥಾನವನ್ನು ನೈಸರ್ಗಿಕ ರೀತಿಯಲ್ಲಿ ವಾಯು-ನಿಬದ್ಧ (ವಾತಾನುಕೂಲ) ನಿರ್ಮಿಸಿರುವುದು ಕಂಡು ಬರುತ್ತದೆ. ದೇವಾಲಯದಲ್ಲಿನ ಗರ್ಭಗುಡಿಯನ್ನು ಆಳವಾದ ಭೂಮಿಯಲ್ಲಿ ನಿರ್ಮಿಸಲಾಗಿರುತ್ತದೆ. ಗರ್ಭಗುಡಿಯ ಬಾಗಿಲು ಚಿಕ್ಕದಾಗಿರುತ್ತದೆ. ಅದರಲ್ಲಿ ಮೆಟ್ಟಿಲುಗಳನ್ನು ಇಳಿದು ಹೋಗಬೇಕಾಗುತ್ತದೆ. ಆದ್ದರಿಂದ ಉರಿಬಿಸಿಲಿನಲ್ಲಿಯೂ ಶಿವಾಲಯಕ್ಕೆ ಹೋದರೆ, ಸಹ ತಂಪಾಗಿರುತ್ತದೆ.

‘ಗರ್ಭಗುಡಿಯಲ್ಲಿ ಆನಂದದ ತರಂಗಗಳನ್ನು ನಿರ್ಮಿಸಿ ಆ ತರಂಗಗಳ ನಾದವಲಯದಲ್ಲಿ ನಾವು ನೆಲೆಸಬೇಕು’, ಎಂದು ಯೋಗಶಾಸ್ತ್ರಕ್ಕನುಸಾರ ರಚಿಸಿರುವುದು ಕಂಡು ಬರುತ್ತದೆ. ಧ್ವನಿ ತರಂಗಗಳ ಪ್ರಭಾವವು ಅಸಮಾನವಾಗಿದ್ದರೆ, ವಿರೂಪಗೊಂಡರೆ, ಜ್ಞಾನ ತಂತುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಶಿವ-ದೇವಸ್ಥಾನಗಳ ರಚನೆಯನ್ನೇ ಹೀಗೆ ಮಾಡಲಾಗಿರುತ್ತದೆ ಎಂದರೆ, ಇಲ್ಲಿ ಲಯಬದ್ಧ, ಸುಮಧುರ ಮತ್ತು ಸೌಮ್ಯವಾದ ಧ್ವನಿ ತರಂಗಗಳು ಉತ್ಪತ್ತಿಯಾಗುತ್ತವೆ. ಇದು ಜ್ಞಾನತಂತುಗಳನ್ನು ಸಮನ್ವಯ ಗೊಳಿಸುವುದರ ಜೊತೆಗೆ ಉತ್ತೇಜಿಸುತ್ತವೆ.

ಶ್ರೀ. ಸಂಜಯ ಮುಳ್ಯೆ, ರತ್ನಾಗಿರಿ.