ದೈವೀ ಅಸ್ತಿತ್ವದ ಸಾಕ್ಷಾತ್ ಅನುಭೂತಿ !
೬ ತಿಂಗಳು ದೀಪ ಉರಿಯುತ್ತಿರುವ ಉತ್ತರಾಖಂಡದಲ್ಲಿನ ಕೇದಾರನಾಥ !
೧೨ ಜ್ಯೋತಿರ್ಲಿಂಗಗಳಲ್ಲಿ ಇದು ಒಂದಾಗಿದೆ !ಈ ದೇವಸ್ಥಾನವು ಉತ್ತರಾಖಂಡ ರಾಜ್ಯದ ಕೇದಾರನಾಥ ಗ್ರಾಮದಲ್ಲಿ ಮಂದಾಕಿನಿ ನದಿಯ ತೀರದಲ್ಲಿದೆ. ಒಂದು ಕಾಲದಲ್ಲಿ ಸುಮಾರು ೪೦೦ ವರ್ಷಗಳ ವರೆಗೆ ಈ ದೇವಸ್ಥಾನವು ಹಿಮಗಡ್ಡೆಯಲ್ಲಿ ಹೂತುಹೋಗಿತ್ತು. ಇದನ್ನು ಒಂದು ಕಲ್ಲನ್ನು ಇನ್ನೊಂದು ಕಲ್ಲಿನಲ್ಲಿ ಅಳವಡಿಸಿ (ಇಂಟರ್‌ಲಾಕಿಂಗ್ ಸಿಸ್ಟಿಮ್) ಸಿದ್ಧಪಡಿಸಲಾಗಿದೆ. ದೀಪಾವಳಿಯ ಮರುದಿನ ದೇವಸ್ಥಾನದ ಬಾಗಿಲು ಗಳನ್ನು ಮುಚ್ಚಲಾಗುತ್ತವೆ ಮತ್ತು ೬ ತಿಂಗಳವರೆಗೆ ಮುಚ್ಚಿದ್ದರೂ ದೇವಸ್ಥಾನದ ಒಳಗೆ ಹಚ್ಚಿದ ದೀಪವು ಉರಿಯುತ್ತಿರುತ್ತದೆ. ಆ ಕಾಲದಲ್ಲಿ ತೀವ್ರ ಹಿಮಪಾತ ವಾಗಿರುವುದರಿಂರ ಜನರ ಸಂಚಾರ ಇರುವುದಿಲ್ಲ !
೧೨ ಜ್ಯೋತಿರ್ಲಿಂಗಗಳಲ್ಲಿ ಇದು ಮೊದಲನೇ ಜ್ಯೋತಿರ್ಲಿಂಗ. ಗುಜರಾತದ ಕಾಠಿಯಾವಾಡದಲ್ಲಿನ ಸೋಮನಾಥ ದೇವಸ್ಥಾನವನ್ನು ಚಂದ್ರದೇವ ಸೋಮರಾಜನು ಋಗ್ವೇದಕ್ಕನುಸಾರ ಕಟ್ಟಿದ್ದನು. ಇಲ್ಲಿನ ಶಿವಲಿಂಗವು ಅಯಸ್ಕಾಂತದ ಪ್ರಭಾವದಿಂದಾಗಿ ಗಾಳಿಯಲ್ಲಿ ತೂಗಾಡುತ್ತಿತ್ತು. ವಾಸ್ತುಶಿಲ್ಪದ ಇದೊಂದು ಅದ್ಭುತ ಉದಾಹರಣೆ ಮತ್ತು ಚಿನ್ನ-ಬೆಳ್ಳಿಯ ದೊಡ್ಡ ಭಂಡಾರವಾಗಿತ್ತು. ಇದೇ ಸ್ಥಳದಲ್ಲಿ ಪ್ರಾಚೀನ ದೇವಸ್ಥಾನದ ಮೇಲೆ ಒಂದು ಶಿಲಾಶಾಸನವಿದೆ, ಅದು ಇಲ್ಲಿಂದ ದಕ್ಷಿಣ ಧ್ರುವದವರೆಗೆ ಯಾವುದೇ ಅಡತಡೆಗಳಿಲ್ಲದೇ ತಲುಪ ಬಹುದು, ಎಂದು ಸೂಚಿಸುತ್ತದೆ. ಮಹಾ ಸಾಗರದ ಶಾಸ್ತ್ರಜ್ಞರಿಗೆ ನಂತರ ಅದು ಸರಿಯಾಗಿರುವುದು ಕಂಡುಬಂದಿತು.
ಜಗತ್ತಿನ ಒಂದು ದೊಡ್ಡ ಅದ್ಭುತ !
ತಿರುವನಂತಪುರಮ್‌ದಲ್ಲಿನ ಅಗರ್ಭ ಶ್ರೀಮಂತ ಪದ್ಮನಾಥಸ್ವಾಮಿ ದೇವಸ್ಥಾನ !
ಕೇರಳದಲ್ಲಿನ ತಿರುವನಂತಪುರಮ್‌ನಲ್ಲಿನ ಪದ್ಮನಾಭ ದೇವಸ್ಥಾನವನ್ನು ಭಾರತದ ಎಲ್ಲಕ್ಕಿಂತ ಶ್ರೀಮಂತ ದೇವಸ್ಥಾನವೆಂದು ಕರೆಯುತ್ತಾರೆ. ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು ಸೌಂದರ್ಯ ಮತ್ತು ಭವ್ಯತೆಗಾಗಿಯೂ ಪ್ರಸಿದ್ಧವಾಗಿದೆ. ಭಗವಾನ ವಿಷ್ಣುವಿಗೆ ಸಮರ್ಪಿತವಾಗಿರುವ ಭಾರತದಲ್ಲಿನ ೧೦೮ ಪವಿತ್ರ ವಿಷ್ಣು ದೇವಸ್ಥಾನಗಳಲ್ಲಿ ಒಂದು ಅಥವಾ ‘ದಿವ್ಯ ದೇಶಮ್’ ಆಗಿದೆ. ತ್ರಾವಣಕೋರಿನ ಮಹಾನ ರಾಜ, ಮಾರ್ತಂಡ ವರ್ಮಾ ಇವನು ಇಂದು ನಾವು ನೋಡುತ್ತಿರುವ ದೇವಸ್ಥಾನದ ಜೀರ್ಣೋದ್ಧಾರವನ್ನು ಮಾಡಿದ್ದಾನೆ, ಎಂದು ಹೇಳಲಾಗುತ್ತದೆ.