‘ಯಾವುದಾದರೊಂದು ದೇವಸ್ಥಾನದ ಗರ್ಭಗುಡಿಯ ಮಧ್ಯಬಿಂದು, ಸಭಾಗೃಹದ ಮಧ್ಯಬಿಂದು, ಮುಖಮಂಟಪದ ಮಧ್ಯಬಿಂದು ಮತ್ತು ವಾಹನಮಂಟಪದ ಮಧ್ಯಬಿಂದು ಈ ಎಲ್ಲವೂ ಒಂದು ರೇಖೆಯಲ್ಲಿದ್ದರೆ ಮತ್ತು ಕೆಳಗಿನ ಶಿಖರದಿಂದ ಮೇಲಿನ ಶಿಖರದ ವರೆಗೆ, ಅಂದರೆ ಪಾತಾಳದಿಂದ ಸ್ವರ್ಗದ ವರೆಗೆ ಎಲ್ಲ ದರ್ಶನವಾಗುತ್ತಿದ್ದರೆ, ಅಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಊರ್ಜೆ ಇರುತ್ತದೆ. ಇಂದು ದೇವಸ್ಥಾನಗಳಲ್ಲಿ ಇದು ಕಂಡು ಬರುವುದಿಲ್ಲ; ಏಕೆಂದರೆ ಇಂದಿನ ದೇವಸ್ಥಾನಗಳನ್ನು ಜನರನ್ನು ಒಟ್ಟುಗೂಡಿಸುವ ಉದ್ದೇಶದಿಂದ ಕಟ್ಟಲಾಗುತ್ತವೆ, ಅಂದರೆ ಅಲ್ಲಿ ಸಕಾಮತೆ ಬಂದಿತು. ಯಾವಾಗ ಕರ್ಮವನ್ನು ಸಕಾಮ ಮಾಡಲಾಗುತ್ತದೆಯೋ, ಆಗ ಅದು ನಿಷ್ಫಲವಾಗುತ್ತದೆ. ಇಂದ್ರ-ವರುಣನಿಗೆ ಆವಾಹನೆ ಮಾಡಿ ತಂದಿರುವ ಮುಖ್ಯ ದೇವತೆ ಇಂತಹ ದೇವಸ್ಥಾನಗಳಲ್ಲಿ ಇರುತ್ತಾರೆಯೇ ?’
– ಪೂ. ಡಾ. ರಾಮಚಂದ್ರ ಮೋರವಂಚಿಕರ, ಅಂತಾರಾಷ್ಟ್ರೀಯ ಕೀರ್ತಿಯ ಇತಿಹಾಸ ಸಂಶೋಧಕರು, ಸಂಭಾಜಿನಗರ. (ಆಗಸ್ಟ್ ೨೦೧೪)
ದೇವಸ್ಥಾನಗಳನ್ನು ಸಾಮೂಹಿಕ ಉಪಾಸನೆಯ ಕೇಂದ್ರಗಳನ್ನಾಗಿಸಿ ! ಅಲ್ಲಿ ಪ್ರತಿದಿನ ಆರತಿ, ಪ್ರಾರ್ಥನೆ ಅಥವಾ ನಾಮಜಪ ಮಾಡಲು ಒಟ್ಟುಸೇರಿ ! |