ಭಾರತದ ಲೋಕಸಭಾ ಚುನಾವಣೆಯನ್ನು ಕಳಂಕಿತಗೊಳಿಸುವ ಬಿಬಿಸಿಯ ಪ್ರಯತ್ನ !
ಲಂಡನ್ – ಗೃಹಸಚಿವ ಅಮಿತ ಶಾ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿಕ ಭಾರತದಲ್ಲಿನ ಎರಡನೆಯ ದೊಡ್ಡ ಶಕ್ತಿಶಾಲಿ ವ್ಯಕ್ತಿ ಎಂದು ಹೇಳಲಾಗುತ್ತದೆ. ಅವರನ್ನು ಭಾಜಪದ ಉದಯದ ಸೂತ್ರಧಾರ ಎಂದೂ ಕರೆಯಲಾಗುತ್ತದೆ. ಇದೇ ಅಮಿತ ಶಾ ಅವರ ನಕಲಿ ವಿಡಿಯೋ ಪ್ರಸಾರಗೊಳಿಸಿದ್ದಕ್ಕೆ ಕಾಂಗ್ರೆಸ್ಸಿನ ಮುಖ್ಯಮಂತ್ರಿಗಳನ್ನು ಬಂಧಿಸಲಾಗಿದೆ ಎಂಬ ಸುಳ್ಳು ವಾರ್ತೆಯನ್ನು ಬಿಬಿಸಿ ಪ್ರಸಾರ ಮಾಡಿದೆ.
೧. ಏಪ್ರಿಲ್ ೨೮.೨೦೨೪ ರಂದು ಕೇಂದ್ರ ಸಚಿವ ಅಮಿತ ಶಾ ಅವರ ಒಂದು ನಕಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು. ಈ ವಿಡಿಯೋ ತೆಲಂಗಾಣ ಕಾಂಗ್ರೆಸ್ಸಿನ ಎಕ್ಸ್ ಹ್ಯಾಂಡಲ್ ಹಾಗೂ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಶೇರ್ ಮಾಡಿದ್ದರು. ಈ ನಕಲಿ ವಿಡಿಯೋದಲ್ಲಿ ಅಮಿತ ಶಾ ಎಸ್ಸಿ ಎಸ್ಟಿ ಮತ್ತು ಓಬಿಸಿ ವರ್ಗದವರಿಗೆ ಮೀಸಲಾತಿ ರದ್ದು ಪಡಿಸುವ ಕುರಿತು ಮಾತನಾಡುತ್ತಿರುವುದು ಕಂಡುಬಂದಿತ್ತು. ಈ ಪ್ರಕರಣದಲ್ಲಿ ತೆಲಂಗಾಣ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣದ ಸಂಯೋಜಕ ಅರುಣ ರೆಡ್ಡಿ ಅವರನ್ನು ಬಂಧಿಸಲಾಗಿತ್ತು ; ಈ ವಾರ್ತೆಯನ್ನು ತಿರುಚಿ ಬಿಬಿಸಿಯು ಕಾಂಗ್ರೆಸ್ಸಿನ ಮುಖ್ಯಮಂತ್ರಿಗಳನ್ನು ಬಂಧಿಸಲಾಗಿದೆ ಎಂದು ಸುಳ್ಳು ವಾರ್ತೆ ಪ್ರಸಾರಗೊಳಿಸಿತು.
೨. ಕೆಲವು ದಿನಗಳ ಹಿಂದೆ ಬಿಬಿಸಿ ೨೦೦೨ ರಲ್ಲಿನ ಗುಜರಾತ ಗಲಭೆಯ ಬಗ್ಗೆ ಒಂದು ಕಿರುಚಿತ್ರ ಪ್ರಸಾರ ಮಾಡಿ ಅಧಿಕಾರದಲ್ಲಿ ಭಾಜಪ ಮತ್ತು ಹಿಂದುಗಳನ್ನು ಕಳಂಕಿತಗೊಳಿಸುವ ಪ್ರಯತ್ನ ಮಾಡಿತ್ತು.
೩. ದೇಶದಲ್ಲಿ ಲೋಕಸಭಾ ಚುನಾವಣೆಯ ಪ್ರಕ್ರಿಯೆ ನಡೆಯುತ್ತಿದೆ. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಮತದಾನದ ೭ ಹಂತಗಳಲ್ಲಿನ ೨ ಹಂತದ ಮತದಾನ ಶಾಂತಿಯುತವಾಗಿ ನಡೆದಿದೆ. ಆದರೆ ಬಿಬಿಸಿ ಅಂತಹ ಭಾರತ ವಿರೋಧಿ ಅಂತರಾಷ್ಟ್ರೀಯ ಪ್ರಸಾರ ಮಾಧ್ಯಮಗಳು ಸುಳ್ಳು ತಥ್ಯಗಳ ಜೊತೆಗೆ ಏಕ ಪಕ್ಷೀಯ ವರದಿ ಮತ್ತು ವಾರ್ತೆ ಪ್ರಸಾರಗೊಳಿಸಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕಿತಗೊಳಿಸುವ ಪ್ರಯತ್ನ ಮಾಡುತ್ತಿರುವುದಾಗಿ ಮೇಲಿಂದ ಮೇಲೆ ತಿಳಿದು ಬರುತ್ತಿದೆ.
अमित शाह यांचा बनावट व्हिडिओ प्रसारित केल्याविषयी काँग्रेसच्या मुख्यमंत्र्यांना अटक केल्याचे निराधार वृत्त प्रसारित !
वाचा :https://t.co/0qyn2OUvCb
भारताच्या लोकसभा निवडणुकीला अपकीर्त करण्याचा ‘बीबीसी’चा प्रयत्न !
सातत्याने भारतद्वेषी आणि हिंदूविरोधी भूमिका घेणार्या बीबीसीवर… pic.twitter.com/wiLYUEM24f
— Sanatan Prabhat (@SanatanPrabhat) May 5, 2024
ಸಂಪಾದಕೀಯ ನಿಲುವುಸತತವಾಗಿ ಭಾರತದ್ವೇಷಿ ಮತ್ತು ಹಿಂದೂ ವಿರೋಧಿ ನಿಲುವು ತಾಳುವ ಬಿಬಿಸಿಯ ಮೇಲೆ ನಿಷೇಧ ಹೇರುವುದಕ್ಕಾಗಿ ಭಾರತ ಸರಕಾರ ಕ್ರಮ ಕೈಗೊಳ್ಳುವುದು ಆವಶ್ಯಕ ! |