ಹಿಂದೂ ಜನತೆಗೆ ಅಕ್ಷಯ ತೇಜಸ್ಸನ್ನು ನೀಡಿದ ಛತ್ರಪತಿ ಸಂಭಾಜಿ ಮಹಾರಾಜ ! – ಸ್ವಾತಂತ್ರ್ಯವೀರ ಸಾವರಕರ

ಮೇ ೧೪ ರಂದು (ದಿನಾಂಕಾನುಸಾರ) ಇರುವ ಛತ್ರಪತಿ ಸಂಭಾಜಿ ಮಹಾರಾಜರ ಜಯಂತಿ ನಿಮಿತ್ತ

ಛತ್ರಪತಿ ಸಂಭಾಜಿ ಮಹಾರಾಜ

‘ಛತ್ರಪತಿ ಸಂಭಾಜಿ ಮಹಾರಾಜರನ್ನು ಬಂಧಿಸಿ ಕ್ರೂರ ಶತ್ರುವಿನ ಮುಂದೆ ನಿಲ್ಲಿಸಿದಾಗಲೂ ಅವರು (ಸಂಭಾಜಿರಾಜೆ)  ದೃಢವಾಗಿ ನಿಂತರು ಮತ್ತು ಜೀವನದ ಮೌಲ್ಯವನ್ನು ಕಟ್ಟಿಯೂ ತಮ್ಮ ಧರ್ಮವನ್ನು ಮಾರಾಟ ಮಾಡಲು ನಿರಾಕರಿಸಿದರು. ಮರಣವನ್ನು ತಪ್ಪಿಸಲು ಮತಾಂತರಗೊಳ್ಳುವ ವಿಚಾರವನ್ನು ಅವರು ಖಂಡಿಸಿದರು ಮತ್ತು ತಮ್ಮ ಪೂರ್ವಜರ ಧರ್ಮದ ಬಗ್ಗೆ ಇರುವ ಶ್ರದ್ಧೆಯನ್ನು ಮತ್ತೆ ಪುನರುಚ್ಚರಿಸಿ, ಮುಸಲ್ಮಾನರು ನೀಡಿದ ಹಿಂಸೆಯನ್ನು, ಅವರ ಧರ್ಮಶಾಸ್ತ್ರವನ್ನು ಮತ್ತು ವಿಚಾರಸರಣಿಗಳನ್ನು ಅವಮಾನಿಸಿ ಮತ್ತು ಬೈಗುಳ-ಶಾಪಗಳ ಸುರಿಮಳೆಯನ್ನು ಸುರಿಸಿದರು. ಈ ಸಿಂಹವನ್ನು ಈ ರೀತಿ ತನ್ನ ಸಾಕುನಾಯಿಯನ್ನಾಗಿ ಮಾಡಿಕೊಳ್ಳುವುದು ಅಸಾಧ್ಯವೆಂದು ಮನಗಂಡ ಔರಂಗಜೇಬನು ಈ ‘ಕಾಫೀರ’ನನ್ನು ಕೊಲ್ಲಲು ಆಜ್ಞಾಪಿಸಿದನು; ಆದರೆ ಈ ಬೆದರಿಕೆಯು ಶಿವಾಜಿ ಮಹಾರಾಜರ ಪುತ್ರನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ !

ಸ್ವಾತಂತ್ರ್ಯವೀರ ಸಾವರಕರ

ಕಾಯಿಸಿ ಕೆಂಪು ಮಾಡಿದ ಸರಳುಗಳಿಂದ ಮತ್ತು ಇಕ್ಕಳಗಳಿಂದ ಇರಿದು ಅವನ ಕಣ್ಣುಗಳನ್ನು ಹೊರಗೆ ತೆಗೆಯಲಾಯಿತು; ಅವರ ನಾಲಿಗೆಯನ್ನು ಸ್ವಲ್ಪ ಸ್ವಲ್ಪವಾಗಿ ತುಂಡರಿಸಲಾಯಿತು; ಆದರೆ ಈ ಕ್ರೂರ ಹಿಂಸೆಯಿಂದಲೂ ಆ ರಾಜಹುತಾತ್ಮರ ಧೈರ್ಯಕ್ಕೆ ಭಂಗ ಬರಲಿಲ್ಲ. ಕೊನೆಗೆ ಅವರ ಶಿರಚ್ಛೇದ ಮಾಡಲಾಯಿತು. ಅವರು ಮುಸಲ್ಮಾನರ ಮತಾಂಧತೆಗೆ ಬಲಿಯಾದರು; ಆದರೆ ಅವರು ಹಿಂದೂ ಜನತೆಗೆ ಅಕ್ಷಯವಾದ ತೇಜಸ್ಸನ್ನು ತಂದುಕೊಟ್ಟರು. ಯಾವ ರೀತಿ ಈ ತೀವ್ರವಾದ ಚಳುವಳಿಯ ಆತ್ಮರೂಪವನ್ನು ವಿವರಿಸಿ ತೋರಿಸಲಾಯಿತೋ, ಹೀಗೆ ಬೇರೆ ಯಾವುದೇ ರೀತಿಯಲ್ಲಿ ತೋರಿಸುವುದು ಸಾಧ್ಯ ವಿರಲಿಲ್ಲ ಎಂಬುದು ಸತ್ಯ !

ಸಂಭಾಜಿರಾಜರು ತಮ್ಮ ಅಪ್ರತಿಮ ಹುತಾತ್ಮತೆಯಿಂದ ಶಿವಾಜಿ ಮಹಾರಾಜರ ನೈತಿಕ ಮತ್ತು ಆಧ್ಯಾತ್ಮಿಕ ಸಂಪತ್ತನ್ನು ರಕ್ಷಿಸಿದ್ದು ಮಾತ್ರವಲ್ಲ, ಅದನ್ನು ಅನೇಕ ಪಟ್ಟುಗಳಲ್ಲಿ ಉಜ್ವಲ ಮತ್ತು ಶಕ್ತಿಶಾಲಿಯನ್ನಾಗಿಸಿದರು ! ಹಿಂದೂ ಧರ್ಮಕ್ಕಾಗಿ ಪ್ರಾಣತ್ಯಾಗ ಮಾಡಿದ ರಾಜಹುತಾತ್ಮರ ರಕ್ತದಿಂದ ಪೋಷಿಸಲ್ಪಟ್ಟ ಹಿಂದೂ ಸ್ವಾತಂತ್ರ್ಯದ ಹೋರಾಟವು ಅಸಾಧಾರಣ ದೈವತ್ವ ಮತ್ತು ನೈತಿಕ ಶಕ್ತಿಯನ್ನು ಪಡೆದುಕೊಂಡಿತು.’

(ಆಧಾರ : ‘ಹಿಂದೂಪದಪಾದಶಾಹಿ’, ಸ್ವಾತಂತ್ರ್ಯವೀರ ವಿ.ದಾ. ಸಾವರಕರ)’