ಹಿಂದೂ ಧರ್ಮಕ್ಕೆ ಸವಾಲು ಹಾಕಿದರೆ, ಮಢಿ ಗ್ರಾಮವು ತೆಗೆದುಕೊಂಡಂತಹ ನಿರ್ಧಾರವನ್ನೇ ಭವಿಷ್ಯದಲ್ಲಿ ಮಹಾರಾಷ್ಟ್ರದಾದ್ಯಂತ ತೆಗೆದುಕೊಳ್ಳಲಾಗುವುದು! – ಸಚಿವ ನಿತೇಶ ರಾಣೆ

ಮಢಿ (ಅಹಿಲ್ಯಾನಗರ) ಯಲ್ಲಿ ನಡೆದ ಹಿಂದೂ ಧರ್ಮ ಸಭೆ !

ಅಹಿಲ್ಯಾನಗರ – ಗ್ರಾಮದ ಜಾತ್ರೆಯಲ್ಲಿ ಮುಸಲ್ಮಾನರಿಗೆ ಅಂಗಡಿ ಹಾಕಲು ಅವಕಾಶ ನೀಡಬಾರದೆಂದು ಅಹಲ್ಯಾನಗರ ಜಿಲ್ಲೆಯ ಪಾಥರ್ಡಿ ತಾಲೂಕಿನ ಮಢಿ ಗ್ರಾಮಸ್ಥರು ನಿರ್ಣಯ ತೆಗೆದುಕೊಂಡಿದ್ದರು. ಈ ಬಗ್ಗೆ ಗ್ರಾಮ ಪಂಚಾಯಿತಿ ಒಂದು ಠರಾವು ಅಂಗೀಕರಿಸಿದ್ದರಿಂದ ಅದಕ್ಕೆ ವಿರೋಧ ಕೂಡ ವ್ಯಕ್ತವಾಗಿತ್ತು. ಮಹಾರಾಷ್ಟ್ರದ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ ರಾಣೆ ಅವರು ಮಢಿ ಗ್ರಾಮ ಪಂಚಾಯಿತಿಯ ಈ ನಿರ್ಣಯವನ್ನು ಬೆಂಬಲಿಸಿದ್ದಾರೆ. ಮಢಿ ಗ್ರಾಮ ತೆಗೆದುಕೊಂಡ ನಿರ್ಧಾರವು ಇತಿಹಾಸದಲ್ಲಿ ದಾಖಲಾಗುತ್ತದೆ. ಈ ಗ್ರಾಮವು ಜಿಹಾದಿಗಳಿಗೆ ಅವರ ಸ್ಥಾನವನ್ನು ತೋರಿಸುವ ಕೆಲಸ ಮಾಡಿದೆ. ಹಿಂದೂ ಧರ್ಮಕ್ಕೆ ಸವಾಲು ಹಾಕುವ ಕೆಲಸ ಮಾಡಿದರೆ, ಮಢಿ ಗ್ರಾಮವು ತೆಗೆದುಕೊಂಡಂತಹ ನಿರ್ಧಾರವನ್ನೇ ಭವಿಷ್ಯದಲ್ಲಿ ಮಹಾರಾಷ್ಟ್ರದಾದ್ಯಂತ ತೆಗೆದುಕೊಳ್ಳಲಾಗುವುದು ಎಂದು ರಾಣೆ ಎಚ್ಚರಿಕೆ ನೀಡಿದರು. ಮಢಿ ಗ್ರಾಮದಲ್ಲಿ ನಡೆದ ಹಿಂದೂ ಧರ್ಮ ಸಭೆಯಲ್ಲಿ ರಾಣೆ ಮಾತನಾಡುತ್ತಿದ್ದರು. ‘ನಮ್ಮ ಧಾರ್ಮಿಕ ಸ್ಥಳಗಳಿಗೆ ಬಂದು ಜಿಹಾದ್ ಮಾಡಲು ಬಯಸಿದರೆ, ನಾವು ಅದನ್ನು ಸಹಿಸುವುದಿಲ್ಲ’ ಎಂದು ರಾಣೆ ತಮ್ಮ ಸಾರ್ವಜನಿಕ ಭಾಷಣದಲ್ಲಿ ಖಡಕ್ ಆಗಿ ಹೇಳಿದರು.

ಶ್ರೀ. ನಿತೇಶ್ ರಾಣೆ ಅವರು ಮುಂದೆ ಮಾತನಾಡಿ:

1. ಮಢಿ ಗ್ರಾಮದ ಕಟು ವಿಚಾರಗಳ ಹಿಂದೂಗಳು ಜಾಗೃತರಾಗಿದ್ದಾರೆ. ಇದು ಇಡೀ ದೇಶಕ್ಕೆ ದಿಕ್ಕು ತೋರಿಸುವ ನಿರ್ಣಯವಾಗಿದೆ.

2. ಇದು ಹಿಂದುತ್ವನಿಷ್ಠ ಸರಕಾರವಾಗಿದೆ ಎಂದು ಮಢಿ ಗ್ರಾಮ ಸಭೆಯ ನಿರ್ಣಯವನ್ನು ರದ್ದುಗೊಳಿಸಿದ್ದ ಅಭಿವೃದ್ಧಿ ಅಧಿಕಾರಿಗೆ ತಿಳಿಸಿರಿ. ನಾವು ನಿಮ್ಮ ಧರ್ಮದ ವಿರುದ್ಧ ನಿಲುವು ವಹಿಸಿದರೆ, ನೀವು ಅದನ್ನು ಒಪ್ಪುವರೇ? ಮಹಂತ ರಾಮಗಿರಿ ಮಹಾರಾಜರು ತೆಗೆದುಕೊಂಡ ನಿಲುವಿಗೆ ನಿಮಗೆ ಏಕೆ ಉರಿ ಉಂಟಾಗುತ್ತದೆ? ಎಂದು ನಿತೇಶ್ ರಾಣೆ ಪ್ರಶ್ನಿಸಿದರು.

3. ಹಿಂದೂಗಳು ಮತ ಹಾಕಿದ್ದರಿಂದ ನಾನು ಮಂತ್ರಿಯಾಗಿದ್ದೇನೆ. ಈಗ ಮೆರವಣಿಗೆ, ಪ್ರತಿಭಟನೆ ಮಾಡುವ ಆವಶ್ಯಕತೆಯಿಲ್ಲ. ಆ ದಿನಗಳು ಹೋದವು, ಈಗಿನ ಸರಕಾರ ಹಿಂದುತ್ವನಿಷ್ಠ ಸರಕಾರವಾಗಿದೆ.

4. ಮಢಿ ಗ್ರಾಮದ ಠರಾವು ರದ್ದಾದರೂ ಕೂಡ ಮತ್ತೊಮ್ಮೆ ಠರಾವು ಮಾಡಿರಿ ಮತ್ತು ಎಲ್ಲಾ ಗ್ರಾಮಸ್ಥರು ಆ ಠರಾವಿಗೆ ಸಹಿ ಮಾಡಿರಿ. ಎಲ್ಲಾ ಗ್ರಾಮಸ್ಥರು ಸಹಿ ಮಾಡಿದ ನಂತರ, ಅಭಿವೃದ್ಧಿ ಅಧಿಕಾರಿಗಳು ಹೇಗೆ ಆ ಠರಾವನ್ನು ರದ್ದುಗೊಳಿಸುತ್ತಾರೆ ಎಂದು ನಾನು ನೋಡುತ್ತೇನೆ.

5. ರಾಜ್ಯದ ಅನೇಕ ಸ್ಥಳಗಳಲ್ಲಿ ಈ ಜನರು ಮಾಡಿದ ಅತಿಕ್ರಮಣಗಳನ್ನು ತೆರವುಗೊಳಿಸಲಾಗುತ್ತಿದೆ. ಯಾವ ಧರ್ಮದವರು ಮೂರ್ತಿ ಪೂಜೆಯನ್ನು ವಿರೋಧಿಸುತ್ತಾರೆಯೋ, ಆ ಧರ್ಮದವರಿಗೆ ನಮ್ಮ ಜಾತ್ರೆಯಲ್ಲಿ ಅಂಗಡಿ ಹಾಕಲು ನಾವೇಕೆ ಬಿಡಬೇಕು?

6. ಅವರು ತಮ್ಮ ಹಬ್ಬ-ಉತ್ಸವಗಳ ವೇಳೆ ಹಿಂದೂಗಳಿಗೆ ಅಂಗಡಿಗಳನ್ನು ಹಾಕಲು ಅವಕಾಶ ನೀಡದಿರುವಾಗ, ಹಿಂದೂಗಳು ಅವರ ಪವಿತ್ರ ಉತ್ಸವದ ಸಮಯದಲ್ಲಿ ಮುಸಲ್ಮಾನರಿಗೆ ಅಂಗಡಿಗಳನ್ನು ಹಾಕಲು ಅವಕಾಶ ನೀಡದಿದ್ದರೆ ಅದರಲ್ಲಿ ತಪ್ಪೇನಿದೆ? ಇತರ ಧರ್ಮದವರು ಹಿಂದೂಗಳ ಜಾತ್ರೆಯ ಪಾವಿತ್ರ್ಯವನ್ನು ಕಡಿಮೆ ಮಾಡುತ್ತಿದ್ದಾರೆ, ಅಲ್ಲಿ ಮಾಂಸದ ಅಂಗಡಿಗಳನ್ನು ಹಾಕುತ್ತಾರೆ, 8-9 ದಿನ ಸ್ನಾನ ಮಾಡುವುದಿಲ್ಲ, ಎಲ್ಲಾ ಕಡೆ ಹೊಲಸು ಮಾಡುತ್ತಾರೆ, ಇದರ ವಿರುದ್ಧ ಹಿಂದೂ ಧರ್ಮದ ರಕ್ಷಣೆಗಾಗಿ ಗ್ರಾಮದ ಸರ್ಪಂಚ್ ಮತ್ತು ಗ್ರಾಮಸ್ಥರು ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ. ಇತರ ಗ್ರಾಮಗಳು ಮತ್ತು ಮಹಾರಾಷ್ಟ್ರದ ಇತರ ದೇವಸ್ಥಾನಗಳು ಕೂಡ ಇಂತಹ ನಿರ್ಣಯ ತೆಗೆದುಕೊಳ್ಳಬೇಕು, ಇದರಿಂದ ಹಿಂದೂ ಧರ್ಮದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ನಿಲ್ಲುತ್ತದೆ ಎಂದು ರಾಣೆ ನುಡಿದರು.

ಮುಸಲ್ಮಾನ ವ್ಯಾಪಾರಿಗಳಿಗೆ ನಿಷೇಧ ಹೇರಿದ ಠರಾವು ರದ್ದು!

ಮುಂದಿನ ತಿಂಗಳಿನಿಂದ ಮಢಿಯಲ್ಲಿ ಚೈತನ್ಯ ಕಾನಿಫನಾಥ ಮಹಾರಾಜರ ಜಾತ್ರೆ ಪ್ರಾರಂಭವಾಗಲಿದೆ. ಗ್ರಾಮ ಪಂಚಾಯಿತಿ ಮಾಡಿದ ಠರಾವು ಕಾನೂನುಬಾಹಿರವಾಗಿದೆ ಎಂದು ಆರೋಪಿಸಿ ಮುಸ್ಲಿಂ ಸಮಾಜದ ನಿಯೋಗವು ಅಭಿವೃದ್ಧಿ ಅಧಿಕಾರಿಗೆ ದೂರು ನೀಡಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು. ಗುಂಪು ಅಭಿವೃದ್ಧಿ ಅಧಿಕಾರಿಯಿಂದ ಮಢಿ ಗ್ರಾಮ ಸೇವಕರಿಗೆ ‘ಕಾರಣ ತೋರಿಸಿ’ ನೋಟಿಸ್ ನೀಡಲಾಗಿತ್ತು. ನಂತರ ಪಾಥರ್ಡಿ ಪಂಚಾಯತ ಸಮಿತಿಯ ಗುಂಪು ಅಭಿವೃದ್ಧಿ ಅಧಿಕಾರಿ ಶಿವಾಜಿ ಕಾಂಬಳೆ ಅವರು ಉನ್ನತ ಅಧಿಕಾರಿಗಳಿಗೆ ತನಿಖಾ ವರದಿ ಕಳುಹಿಸಿದ್ದು, ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿದ ಠರಾವನ್ನು ರದ್ದುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.