ಬೇಸಿಗೆಯ ರಜೆ ಮತ್ತು ಆ ಸಮಯದಲ್ಲಿ ಹೆಚ್ಚುತ್ತಿರುವ ಪ್ರವಾಸವನ್ನು ಗಮನಿಸಿ ನಾಗರಿಕರಿಗೆ ಅನಾನುಕೂಲವಾಗಬಾರದೆಂದು ಕೇಂದ್ರ ರೈಲ್ವೆ ಆಡಳಿತವು ಬೇಸಿಗೆ ಕಾಲದಲ್ಲಿ ೯ ಸಾವಿರದ ೧೧೧ ರೈಲು ಪ್ರಯಾಣವನ್ನು ಹೆಚ್ಚಿಸಿದೆ. ಬೇಸಿಗೆಯಲ್ಲಿ ಇಂತಹ ರೈಲುಗಳ ಪ್ರಯಾಣವನ್ನು ಹೆಚ್ಚಿಸುವ ರೈಲ್ವೆಯ ಕಾರ್ಯಕ್ರಮ ಪ್ರತಿ ವರ್ಷವೂ ಇರುತ್ತದೆ. ಈ ಅವಧಿಯಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರಿಂದಾಗಿ ರೈಲ್ವೆಗೂ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಆದಾಯವಾಗುತ್ತದೆ. ‘ರೈಲ್ವೆಯ ಆರ್ಥಿಕ ಲಾಭ ಮತ್ತು ಪ್ರಯಾಣಿಕರ ಸೌಲಭ್ಯ’ಕ್ಕಿಂತಲೂ ಇದರಲ್ಲಿ ವಿಶೇಷವೇನಿಲ್ಲ, ಎಂಬುದು ಮೇಲ್ನೋಟಕ್ಕೆ ಕಾಣಿಸಿದರೂ, ಇದರ ಹಿಂದೆ ದೊಡ್ಡ ಆರ್ಥಿಕ ಲೆಕ್ಕಾಚಾರ ಅಡಗಿದೆ. ರೈಲ್ವೆ ಆಡಳಿತ ಮತ್ತು ಪ್ರಯಾಣಿಕರ ನಡುವೆ ಇರುವ ದಲಾಲರು ಮತ್ತು ಭ್ರಷ್ಟ ರೈಲ್ವೆ ಅಧಿಕಾರಿಗಳು ರೈಲ್ವೆ ಟಿಕೇಟ್‌ಗಳ ಕಾಳಸಂತೆ ನಡೆಸುತ್ತಾರೆ. ಇದರಲ್ಲಿ ಪ್ರಯಾಣಿಕರು ಮತ್ತು ರೈಲ್ವೇ ಆಡಳಿತದ ಹೊರತು ಈ ಮೂರನೇ ಘಟಕಕ್ಕೆ ಆರ್ಥಿಕ ಲಾಭವಾಗುತ್ತದೆ. ಟಿಕೇಟ್‌ನ ನಿಯಮಿತ ದರಕ್ಕಿಂತ ೧೦೦-೨೦೦ ರೂಪಾಯಿಗಳನ್ನು ಸಲ್ಲಿಸಿದರೆ ಈ ದಲಾಲರು ನಿಮಗೆ ಬೇಕಾದ ಕೋಚ್‌ನ ಟಿಕೇಟ್ ಕೊಡುತ್ತಾರೆ. ಸರಕಾರಿ ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರದ ವಿರುದ್ಧ ದೂರು ನೀಡಬೇಕೆಂದು ಎಲ್ಲ ಕಚೇರಿಗಳಲ್ಲಿ ಭಿತ್ತಿಪತ್ರ ಗಳನ್ನು ಹಚ್ಚಿರುತ್ತದೆ; ಆದರೆ ರೈಲ್ವೆಯ ಟಿಕೇಟ್‌ಗಳ ದಲಾಲಿ ‘ಆನ್‌ಲೈನ್’ ನಡೆಯುತ್ತದೆ. ದಲಾಲರು ಪ್ರಯಾಣಿಕರಿಗೆ ಪ್ರತ್ಯಕ್ಷ ಭೇಟಿಯಾಗುವುದಿಲ್ಲ. ದೂರವಾಣಿಯಲ್ಲಿ ಸಂಪರ್ಕಿಸಿ ಅವರ ಖಾತೆಗೆ ಹಣ ಪಾವತಿಸಿದ ನಂತರ ಪ್ರಯಾಣಿಕರಿಗೆ ಖಚಿತ ಟಿಕೇಟ್ ಸಿಗುತ್ತದೆ. ಈ ಭ್ರಷ್ಟಾಚಾರ ರೈಲ್ವೆ ಆಡಳಿತದ ಕಣ್ತಪ್ಪಿಸಿ ನಡೆಯುತ್ತದೆ ಎಂದು ಯಾರಾದರೂ ಹೇಳಿದರೆ, ಅದು ಸುಳ್ಳು. ರೈಲ್ವೆಯಲ್ಲಿನ ಏಜೆಂಟರ ಹಸ್ತಕ್ಷೇಪವಿಲ್ಲದೇ ಇಂತಹ ಭ್ರಷ್ಟಾಚಾರ ನಡೆಯಲು ಸಾಧ್ಯವೇ ಇಲ್ಲ. ರೈಲಿನಲ್ಲಿ ಟಿಕೇಟ್ ಇಲ್ಲದಿರುವಾಗ ಟಿಕೇಟ್ ತಪಾಸಣೆ ಮಾಡುವವನಿಗೆ ಸ್ವಲ್ಪ ಹಣ ಕೊಟ್ಟರೆ ಸೀಟು ಸಿಗುತ್ತದೆ. ಆದರೆ ಈ ಭ್ರಷ್ಟಾಚಾರದ ಜಾಲ ಇದಕ್ಕಿಂತ ೧೦೦ ಪಟ್ಟು ಹೆಚ್ಚಿದೆ ಹಾಗೂ ಇದನ್ನು ರೈಲ್ವೆ ಆಡಳಿತ ಉದ್ದೇಶಪೂರ್ವಕ ದುರ್ಲಕ್ಷಿಸುತ್ತದೆ.
ಟಿಕೇಟ್‌ಗಳ ಕಾಳಸಂತೆಯಿಂದ ರೈಲ್ವೆಗೆ ಪ್ರತ್ಯಕ್ಷ ಆರ್ಥಿಕ ಹಾನಿಯಾಗುವುದಿಲ್ಲ. ಆದ್ದರಿಂದ ರೈಲ್ವೆ ಈ ಭ್ರಷ್ಟಾಚಾರವನ್ನು ದುರ್ಲಕ್ಷಿಸುತ್ತಿರಬಹುದು; ಆದರೆ ಈ ಭ್ರಷ್ಟಾಚಾರಕ್ಕೆ ರೈಲ್ವೆ ಆಡಳಿತವು ‘ಪ್ಲಾಟ್ ಫಾರ್ಮ್’ ಮಾಡಿಕೊಡುತ್ತಿದೆ. ಈ ಭ್ರಷ್ಟಾಚಾರ ರೈಲ್ವೆಯ ಹೆಸರಿನಲ್ಲಿ ನಡೆಯುತ್ತದೆ, ಅದಕ್ಕೇನು ಮಾಡಬೇಕು ? ಪ್ರಧಾನಿ ನರೇಂದ್ರ ಮೋದಿಯವರ ‘ಭ್ರಷ್ಟಾಚಾರಮುಕ್ತ ಭಾರತ’ ಮಾಡುವ ಘೋಷಣೆಗೆ ಏನರ್ಥ ? ರೈಲ್ವೆಯ ಕೆಲವೇ ಅಧಿಕಾರಿಗಳು ರೈಲ್ವೆ ಟಿಕೇಟ್‌ಗಳ ಕಾಳಸಂತೆ ನಡೆಸಿ ನಾಗರಿಕರ ಅಸಹಾಯಕತೆಯ ದುರ್ಲಾಭ ಪಡೆಯುತ್ತಿದ್ದರೆ, ಅವರಿಗೆ ಶಿಕ್ಷೆ ನೀಡುವುದು ಹಾಗೂ ಅದನ್ನು ಸುಧಾರಣೆ ಮಾಡುವುದು ರೈಲ್ವೆ ಆಡಳಿತದ ನೈತಿಕ ಕರ್ತವ್ಯ ಆಗಿದೆ. ಆದ್ದರಿಂದ ರೈಲ್ವೆ ಆಡಳಿತ ಇಷ್ಟು ದೊಡ್ಡ ಪ್ರಮಾಣದಲ್ಲಿ ಗಾಡಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಇದರ ಒಂದು ಮುಖವಾದರೆ ಟಿಕೇಟ್‌ಗಳ ಕಾಳಸಂತೆ ನಡೆಸುವವರಿಗೆ ದೊಡ್ಡ ಪ್ರಮಾಣದಲ್ಲಿ ಅವಕಾಶ ಆಡಳಿತ ಇಂತಹ ಬಹಿರಂಗ ಭ್ರಷ್ಟಾಚಾರದ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲವೆಂದರೆ, ಇದರ ಅರ್ಥ ಅದು ಕಳ್ಳತನದ ಪಾಪದಲ್ಲಿ ಪಾಲ್ಗೊಂಡಿದೆ ಎನ್ನಬೇಕು.
ಸಾವಿರಾರು ಪ್ರಯಾಣಿಕರ ಆರ್ಥಿಕ ಶೋಷಣೆ !
‘ಕೊಡುವವನು ಕೊಡುತ್ತಿದ್ದರೆ, ತೆಗೆದುಕೊಳ್ಳುವವನು ತೆಗೆದು ಕೊಳ್ಳುತ್ತಿದ್ದರೆ, ಅದರಿಂದ ಯಾರಿಗೆ ಏನು ನಷ್ಟವಾಗುತ್ತದೆ ? ಯಾರಿಗೆ ಟಿಕೇಟ್ ಬೇಕಾಗಿದೆಯೋ, ಅವನು ಹೆಚ್ಚು ಹಣ ಕೊಡಲು ಸಿದ್ಧನಿರುವಾಗ ಇದರಲ್ಲಿ ಯಾರಿಗೆ ತೊಂದರೆ ?’, ಎಂದು ಯಾರಿಗಾದರೂ ಅನಿಸಬಹುದು; ಆದರೆ ರೈಲ್ವೆಯ ಟಿಕೇಟ್‌ಗಳ ಈ ಕಾಳಸಂತೆ ಇಷ್ಟಕ್ಕೇ ಸೀಮಿತವಾಗಿಲ್ಲ. ಈ ಸಮಸ್ಯೆ ಕೇವಲ ಒಂದೆರಡು ಟಿಕೇಟ್‌ಗಳದ್ದಲ್ಲ. ಒಂದು ರೈಲಿನ ನೂರಾರು ಟಿಕೇಟ್‌ಗಳ ಕಾಳಸಂತೆ ನಡೆಯುತ್ತದೆ, ಅಂದರೆ ಯಾವ ಟಿಕೇಟ್ ಸಾಮಾನ್ಯ ವ್ಯಕ್ತಿಗೆ ರೈಲ್ವೇನಿಲ್ದಾಣದ ಟಿಕೇಟ್ ಕಿಂಡಿಯಲ್ಲಿ ಅಥವಾ ‘ಆನ್‌ಲೈನ್’ನಲ್ಲಿ ರೈಲ್ವೆಯ ನಿಜವಾದ ದರದಲ್ಲಿ ಸಿಗಲಿಕ್ಕಿರುತ್ತದೋ, ಅದು ಕಳ್ಳಸಂತೆಯಿಂದಾಗಿ ಆ ಸಾಮಾನ್ಯ ಪ್ರಯಾಣಿಕನಿಗೆ ಸಿಗುವುದಿಲ್ಲ; ಆದರೆ ಅದೇ ಗಾಡಿಯ ಟಿಕೇಟ್ ದಲಾಲನಿಗೆ ಸ್ವಲ್ಪ ಹೆಚ್ಚು ಹಣ ನೀಡಿದಾಗ ಸಿಗುತ್ತದೆ. ದಲಾಲರು ಈ ಟಿಕೇಟನ್ನು ಮೊದಲೇ ಖರೀದಿಸಿಟ್ಟಿರುತ್ತಾರೆ ಹಾಗೂ ರೈಲ್ವೆಯಲ್ಲಿನ ಭ್ರಷ್ಟ ಅಧಿಕಾರಿಗಳೇ ಈ ದಲಾರಿಗೆ ಟಿಕೇಟ್‌ಗಳ ಕೋಟಾವನ್ನು ಪೂರೈಸುತ್ತಾರೆ. ಹೀಗೆ ನೂರಾರು ಟಿಕೇಟ್‌ಗಳನ್ನು ಹೆಚ್ಚು ದರದಲ್ಲಿ ಪ್ರಯಾಣಿಕರಿಗೆ ಮಾರಾಟ ಮಾಡಲಾಗುತ್ತದೆ, ಆಗ ಆ ಪ್ರಯಾಣಿಕರ ಜೇಬು ಖಾಲಿಯಾಗುತ್ತದೆ. ಯಾವ ಟಿಕೇಟ್ ಸಾಮಾನ್ಯ ಜನರಿಗೆ ಸಿಗಬೇಕೋ, ಅದು ರೈಲ್ವೇ ನಿಲ್ದಾಣದಲ್ಲಿ ಸಿಗುವುದಿಲ್ಲ ಹಾಗೂ ‘ಆನ್‌ಲೈನ್’ನಲ್ಲಿ ತೆಗೆಯಲು ಹೋದರೆ ‘ವೇಟಿಂಗ್’ ತೋರಿಸುತ್ತದೆ. ಇದೆಲ್ಲವೂ ಟಿಕೇಟ್‌ಗಳ ಕಾಳಸಂತೆಯ ಪರಿಣಾಮವೇ ಆಗಿದೆ.
ಭ್ರಷ್ಟಾಚಾರಕ್ಕೆ ಮೂಕ ಸಮ್ಮತಿ !
‘ತಮಗೆ ರೈಲ್ವೆಯಲ್ಲಿ ಕುಳಿತುಕೊಳ್ಳಲು ಸ್ಥಳ ಸಿಗಬಹುದೆಂಬ ಆಸೆಯಿಂದ ನೂರಾರು ಪ್ರಯಾಣಿಕರು ‘ವೇಟಿಂಗ್’ ಇದ್ದರೂ ಟಿಕೇಟ್ ತೆಗೆಯುತ್ತಾರೆ. ಈ ‘ವೇಟಿಂಗ್’ ಟಿಕೇಟ್ ‘ಕ್ಲಿಯರ್’ ಆಗದಿದ್ದರೆ, ಅವರ ಹಣದಿಂದ ಸ್ವಲ್ಪ ಕಳೆದು ಹಿಂತಿರುಗಿಸಲಾಗುತ್ತದೆ. ಅಂದರೆ ಯಾವ ಸೀಟ್‌ಗಾಗಿ ಹಣ ಪಾವತಿಸ ಲಾಗುತ್ತದೆಯೋ, ಆ ಹಣವೂ ರೈಲ್ವೆಗೆ ಸಿಗುತ್ತದೆ ಹಾಗೂ ಆ ಸೀಟ್‌ನ ಟಿಕೇಟ್ ಯಾರಿಗೆ ಸಿಗುತ್ತದೋ, ಅವನಿಂದಲೂ ರೈಲ್ವೆಗೆ ಹಣ ಸಿಗುತ್ತದೆ. ಇನ್ನೊಂದು ಕಡೆಯಲ್ಲಿ ಟಿಕೇಟ್‌ಗಳ ಕಾಳಸಂತೆ ನಡೆಸುವ ದಲಾಲರಿಗೆ ಮತ್ತು ರೈಲ್ವೆಯಲ್ಲಿನ ಭ್ರಷ್ಟ ಅಧಿಕಾರಿಗಳಿಗೂ ಅದರ ಪಾಲು ಸಿಗುತ್ತದೆ. ಆದ್ದರಿಂದ ಇಲ್ಲಿ ಎಲ್ಲರಿಗೂ ಆರ್ಥಿಕ ಲಾಭವಾಗುತ್ತದೆ. ನಷ್ಟವಾಗುವುದು ಕೇವಲ ಸಾಮಾನ್ಯ ನಾಗರಿಕರಿಗೆ ಮಾತ್ರ ! ರೈಲ್ವೆಗೆ ರದ್ದಾಗಿರುವ ಟಿಕೇಟ್‌ನ ಸ್ವಲ್ಪಾಂಶ ಹಣ ಮತ್ತು ಪ್ರತ್ಯಕ್ಷ ಯಾರಿಗೆ ಟಿಕೇಟ್ ಸಿಗುತ್ತದೋ, ಅದರ ಮೊತ್ತ ಹೀಗೆ ಒಂದು ಸೀಟಿನ ಹಿಂದೆ ಎರಡೂ ಕಡೆಯಿಂದ ಹಣ ಸಿಗುತ್ತಿರುವುದರಿಂದ ರೈಲ್ವೆ ಆಡಳಿತ ಇದರ ಕಡೆಗೆ ದುರ್ಲಕ್ಷ ಮಾಡುತ್ತದೆ ಎನ್ನಲು ಆಸ್ಪದವಿದೆ.
‘ರೈಲ್ವೆಯ ಟಿಕೇಟ್‌ಗಳಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾಳಸಂತೆ ನಡೆಯುತ್ತದೆ, ಎಂದು ಹೇಳುತ್ತೀರಾದರೆ ಅದರ ಸಾಕ್ಷಿಯನ್ನು ನೀಡಿರಿ’, ಎಂದು ಯಾರಾದರೂ ಹೇಳಿದರೆ, ಸಾಮಾನ್ಯ ನಾಗರಿಕನು ಅದರ ಸಾಕ್ಷಿಯನ್ನು ಎಲ್ಲಿಂದ ತರಬಹುದು ?
ಟಿಕೇಟ್ ಕಿಂಡಿಯಲ್ಲಿ ಟಿಕೇಟ್ ಮುಗಿದಾಗ ಅವನು ರೈಲ್ವೆಯ ಯಾವುದಾದರೂ ‘ಆನ್‌ಲೈನ್’ ಟಿಕೇಟ್ ತೆಗೆದು ಅದನ್ನು ‘ಕನ್ಫರ್ಮ್’ ಮಾಡಲು ಯಾವುದೋ ದಲಾಲನ ಬಳಿ ಹೋದರೆ ಅವನು ಆ ಟಿಕೇಟ್ ಕೊಡುತ್ತಾನೆ. ಇದಕ್ಕಿಂತ ದೊಡ್ಡ ಪುರಾವೆ ಇನ್ನೇನು ಬೇಕು ? ಒಂದು ಇದು ದೇಶಾದ್ಯಂತದ ಸಾವಿರಾರು ನಾಗರಿಕರೊಂದಿಗೆ ನಡೆಯುವ ಮೋಸ, ಅಂದರೆ ರೈಲ್ವೆ ಆಡಳಿತ ೯ ಸಾವಿರದ ೧೧೧ ವಿಶೇಷ ಗಾಡಿಗಳನ್ನು ಹೆಚ್ಚಿಸಲಾಗುತ್ತದೆ. ಆಗ ಅದರಿಂದ ದಲಾಲರು ಮತ್ತು ರೈಲ್ವೆಯ ಭ್ರಷ್ಟ ಅಧಿಕಾರಿಗಳ ಕಿಸೆಗೆ ಎಷ್ಟು ಹಣ ಹೋಗಬಹುದು, ಎಂಬುದರ ಲೆಕ್ಕಹಾಕಬಹುದು. ಕಾಳಸಂತೆಯ ೧ ತಿಂಗಳ ಅಂಕಿಅಂಶ ನೋಡಿದರೆ ಅದು ಕೋಟಿಗಟ್ಟಲೆ ರೂಪಾಯಿಗಳಾಗಬಹುದು. ಇಷ್ಟು ಬಹಿರಂಗವಾಗಿ ಕಾಳಸಂತೆ ನಡೆಯುತ್ತಿದ್ದರೂ ರೈಲ್ವೆ ಆಡಳಿತ ಇದನ್ನು ಸುಧಾರಿಸಲು ಇಚ್ಛಿಸುವುದಿಲ್ಲವೆಂದಾದರೆ, ಇದರ ಹಿಂದೆ ಏನೋ ರಹಸ್ಯವಿದೆ. ರೈಲ್ವೇ ಆಡಳಿತವೇ ಇದರಲ್ಲಿ ತೊಡಗಿರುವಾಗ ಅದು ಭ್ರಷ್ಟ ಅಧಿಕಾರಿಗಳ ಮತ್ತು ದಲಾಲರ ಮೇಲೆ ಹೇಗೆ ತಾನೆ ಕ್ರಮ ಕೈಗೊಳ್ಳಬಹುದು ?
ಕಳೆದ ಕೆಲವು ವರ್ಷಗಳಲ್ಲಿ ರೈಲ್ವೆ ಸೇವೆಯಲ್ಲಿ ಬಹಳಷ್ಟು ಸುಧಾರಣೆ ಆಗುತ್ತಿರುವುದನ್ನು ಒಪ್ಪಲೇ ಬೇಕು; ಆದರೆ ಮೂಲಭೂತ ಸೌಲಭ್ಯ ಮತ್ತು ಪ್ರಯಾಣಿಕರಿಗೆ ಸೌಲಭ್ಯಗಳನ್ನು ನೀಡಿದರೆ ರೈಲ್ವೆಯ ಭ್ರಷ್ಟಾಚಾರ ಕ್ಷಮಾರ್ಹವಾಗುವುದಿಲ್ಲ. ರೈಲ್ವೆ ಟಿಕೇಟ್‌ಗಳ ಈ ಕಾಳಸಂತೆ ಸಾಮಾನ್ಯವೆಂದು ಅನಿಸಿದರೂ ಈ ಭ್ರಷ್ಟಾಚಾರವು ರೈಲ್ವೆ ಆಡಳಿತದ ಸಂಪೂರ್ಣ ಜಾಲದಲ್ಲಿ ಹರಡಿದೆ. ರೈಲ್ವೆಯ ಜಾಲ ದೇಶದಾದ್ಯಂತ ಎಲ್ಲೆಲ್ಲಿ ಹರಡಿದೆಯೊ, ಅಲ್ಲಲ್ಲಿ ಟಿಕೇಟ್‌ಗಳ ಕಾಳಸಂತೆಯೂ ಹರಡಿದೆ. ಪ್ರಾಮಾಣಿಕ ರಾಜಕಾರಣಿಗಳು ಮತ್ತು ಆಡಳಿತಾಧಿಕಾರಿಗಳಿದ್ದರೆ ಮಾತ್ರ ಈ ಭ್ರಷ್ಟಾಚಾರವನ್ನು ತಡೆಯಬಹುದು !