UCC Law Will Be Enacted: ಸಮಾನ ನಾಗರಿಕ ಕಾನೂನು ತರುವುದು ವಚನಬದ್ಧ ! – ಪ್ರಧಾನಮಂತ್ರಿ

ಗೋವಾದಲ್ಲಿ ಸಮಾನ ನಾಗರಿಕ ಕಾನೂನು ಇದ್ದರು ಕೂಡ ಅಲ್ಲಿ ಯಾವುದೇ ಸಮಸ್ಯೆ ಇಲ್ಲದಿರುವುದರ ಬಗ್ಗೆ ಉಲ್ಲೇಖ !

ನವ ದೆಹಲಿ – ಸಮಾನ ನಾಗರಿಕ ಕಾನೂನಿನ ವಿರುದ್ಧ ಧ್ವನಿ ಎತ್ತುವವರಿಗೆ ಒಮ್ಮೆ ಗೋವಾವನ್ನು ನೋಡಿ ಎಂದು ಹೇಳಲು ಬಯಸುತ್ತೇನೆ. ದೇಶ ಸ್ವತಂತ್ರವಾಗಿದೆ, ಅಂದಿನಿಂದ ಅಲ್ಲಿ ಸಮಾನ ನಾಗರಿಕ ಕಾನೂನು ಇದೆ. ಗೋವಾದಲ್ಲಿನ ಎಲ್ಲಕ್ಕಿಂತ ಹೆಚ್ಚು ಅಲ್ಪಸಂಖ್ಯಾತರಿದ್ದಾರೆ. ಆದರೂ ಗೋವಾದಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲರೂ ಸುಖ ಸಮಾಧಾನದಿಂದ ವಾಸಿಸುತ್ತಾರೆ. ಗೋವಾ ವೇಗವಾಗಿ ಅಭಿವೃದ್ಧಿ ಆಗುತ್ತಿದೆ. ಆದ್ದರಿಂದ ಎಲ್ಲಾ ರಾಜ್ಯಗಳಿಗೆ, ಸಮಾನ ನಾಗರಿಕ ಕಾನೂನಿನಿಂದ ಗೋವಾದಲ್ಲಿ ಸುಖ ಸಮಾಧಾನವಿದೆ, ಆದರೆ ನಮ್ಮ ರಾಜ್ಯದಲ್ಲಿ ಏಕೆ ಇಲ್ಲ ? ಎಂದು ಅನಿಸಬಹುದು, ಆದ್ದರಿಂದ ಸಮಾನ ನಾಗರಿಕ ಕಾನೂನು ತರುವುದು ಶತಸಿದ್ಧ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು “ಟಿವಿ9 “ಈ ವಾರ್ತ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಸಮಾನ ನಾಗರಿಕ ಕಾನೂನಿನ ಬಗ್ಗೆ ಮಂಡಿಸಿರುವ ಸೂತ್ರಗಳು !

೧. ಸಮಾನ ನಾಗರಿಕ ಕಾನೂನು ಜಾರಿ ಆಗಬೇಕು, ಇದು ಸಂವಿದಾನದಲ್ಲಿಯೇ ಬರೆಯಲಾಗಿದೆ !

ಸಮಾನ ನಾಗರಿಕ ಕಾನೂನು ಜಾರಿ ಆಗಬೇಕು, ಇದು ಸಂವಿದಾನದಲ್ಲಿಯೇ ಬರೆಯಲಾಗಿದೆ; ಆದರೆ ಇಲ್ಲಿಯವರೆಗೆ ಈ ಕಾನೂನು ಜಾರಿಗೊಳಿಸಲಿಲ್ಲ. ಆದ್ದರಿಂದ ಯಾರು ಈ ಕಾನೂನು ಜಾರಿಗೊಳಿಸಿಲ್ಲ ಅವರಿಗೆ, ದೇಶ ನಡೆಸುವುದಿದ್ದರೆ, ಸಮಾನ ನಾಗರಿಕ ಕಾನೂನು ಇರಬೇಕು ಅಥವಾ ಇರಬಾರದು? ಎಂದು ಪ್ರಶ್ನಿಸಬೇಕು.

೨. ಹಿಂದಿನ ಸರಕಾರಗಳು ಕಾನೂನನ್ನು ಏಕೆ ರೂಪಿಸಲಿಲ್ಲ ?

‘ಸಮಾನ ನಾಗರಿಕ ಕಾನೂನು ಯಾವಾಗ ಜಾರಿ ಆಗುವುದು ?’, ಈ ಪ್ರಶ್ನೆ ಪ್ರಸಾರ ಮಾಧ್ಯಮಗಳು ನಮಗೆ ಕೇಳುತ್ತಾರೆ. ನಮಗೆ ಆಶ್ಚರ್ಯ ಅನ್ನಿಸುತ್ತದೆ. ಪ್ರಸಾರ ಮಾಧ್ಯಮಗಳು ಈ ಪ್ರಶ್ನೆ ೭೫ ವರ್ಷಗಳ ನಂತರ ಏಕೆ ಕೇಳುತ್ತಿದ್ದಾರೆ ? ಈ ಮೊದಲು ಏಕೆ ಕೇಳಲಿಲ್ಲ ? ದೇಶ ಸ್ವತಂತ್ರವಾದ ನಂತರ ಪ್ರತಿಯೊಂದು ಸರಕಾರಕ್ಕೆ ಮತ್ತು ಪ್ರಧಾನಮಂತ್ರಿಗಳಿಗೆ ಈ ಪ್ರಶ್ನೆ ಕೇಳಬೇಕಾಗಿತ್ತು.

೩. ಕಾಂಗ್ರೆಸ್ಸಿನ ಬಳಿ ಉತ್ತರ ಕೇಳಿ !

ಸರ್ವೋಚ್ಚ ನ್ಯಾಯಾಲಯವು ೨ ಸಾವಿರದ ೫೦೦ ಸಲ, ಸರಕಾರಕ್ಕೆ ಸಮಾನ ನಾಗರಿಕ ಕಾನೂನು ರೂಪಿಸುವುದಕ್ಕಾಗಿ ಹೆಜ್ಜೆ ಇಡಬೇಕು ಎಂದು ಹೇಳಿತ್ತು; ಆದ್ದರಿಂದ ನೀವು ಕಾಂಗ್ರೆಸ್ಸಿನ ಬಳಿ ಈ ಸಂದರ್ಭದಲ್ಲಿ ಉತ್ತರ ಕೇಳಬೇಕು.

೪. ಅಧಿಕಾರಕ್ಕೆ ಬಂದ ನಂತರ ಸಮಾನ ನಾಗರಿಕ ಕಾನೂನು ಜಾರಿಗೊಳಿಸುವೆವು !

ನಾವು ಅಧಿಕಾರಕ್ಕೆ ಬಂದ ನಂತರ ಸಮಾನ ನಾಗರಿಕ ಕಾನೂನು ಜಾರಿಗೊಳಿಸುವೆವು, ಇದು ನಾವು ನಮ್ಮ ಘೋಷಣಾ ಪತ್ರದಲ್ಲಿ ಹೇಳುತ್ತಿದ್ದೇವೆ. ಈಗ ಅದರ ಬಗ್ಗೆ ಯಾವ ರೀತಿಯಲ್ಲಿ ಮುನ್ನಡೆಯಬೇಕು ? ಹೇಗೆ ಮಾರ್ಗ ಹುಡುಕಬೇಕು? ಇದು ನಾವು ಪರಿಸ್ಥಿತಿಯ ಪ್ರಕಾರ ನಿಶ್ಚಯಿಸುತ್ತಿದ್ದೇವೆ. ದೇಶದ ಸಂವಿಧಾನವು ಸಮಾನ ನಾಗರಿಕ ಕಾನೂನಿನ ಬಗ್ಗೆ ಹೇಳುತ್ತದೆ. ದೇಶದಲ್ಲಿನ ಸರ್ವೋಚ್ಚ ನ್ಯಾಯಾಲಯವು ಈ ಕಾನೂನಿನ ಬಗ್ಗೆ ಮಾತನಾಡುತ್ತದೆ. ದೇಶದಲ್ಲಿನ ಸಂವಿಧಾನಿಕ ಸಂಸ್ಥೆಗಳು ಏನು ಹೇಳುತ್ತದೆ, ಅದನ್ನು ಪಾಲಿಸಲು ನಾವು ಮಾರ್ಗ ಹುಡುಕುತ್ತಿದ್ದೇವೆ. ಆದ್ದರಿಂದ ನಾವು ಜನರಿಂದ ಆಶೀರ್ವಾದ ಕೇಳುತ್ತಿದ್ದೇವೆ ಎಂದು ಹೇಳಿದರು.