ಭಾಜಪವನ್ನು ಅಧಿಕಾರದಿಂದ ತೆಗೆದುಹಾಕಲು ನೀವು ‘ವೋಟ್ ಜಿಹಾದ್’ ಮಾಡಬೇಕು ! – ಸಮಾಜವಾದಿ ಪಕ್ಷದ ನಾಯಕಿ ಮರಿಯಾ ಆಲಂ

  • ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ನಂತರ, ಈಗ ‘ವೋಟ್ ಜಿಹಾದ್’!

  • ಸಮಾಜವಾದಿ ಪಕ್ಷದ ನಾಯಕಿ ಮರಿಯಾ ಆಲಂ ಮುಸ್ಲಿಮರಿಗೆ ಪ್ರಚೋದನಕಾರಿ ಮನವಿ !

ಫರೂಖಾಬಾದ (ಉತ್ತರ ಪ್ರದೇಶ) – “ಭಾಜಪವನ್ನು ಅಧಿಕಾರದಿಂದ ಕಿತ್ತೊಗೆಯಲು ನೀವು ‘ವೋಟ್ ಜಿಹಾದ್’ ಮಾಡಬೇಕಾಗಿದೆ” ಎಂದು ಸಮಾಜವಾದಿ ಪಕ್ಷದ ನಾಯಕಿ ಮರಿಯಾ ಆಲಂ ಅವರು ಕಾಯಮಗಂಜ್‌ನಲ್ಲಿ ನಡೆದ ಪ್ರಸಾರ ಸಭೆಯಲ್ಲಿ ಮುಸ್ಲಿಮರಿಗೆ ಪ್ರಚೋದನಕಾರಿ ಮನವಿ ಮಾಡಿದರು. ‘ವೋಟ್ ಜಿಹಾದ್’ ಎಂಬ ಪದ ಬಳಸಿದ ಆರೋಪದ ಮೇಲೆ ಮರಿಯಾ ಆಲಂ ವಿರುದ್ಧ ದೂರು ದಾಖಲಾಗಿದೆ. ಮಾರಿಯಾ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಖುರ್ಷಿದ್ ಆಲಂ ಅವರ ಸೊಸೆಯಾಗಿದ್ದಾರೆ. ಆ ಸಮಯದಲ್ಲಿ ಖುರ್ಷಿದ್ ವೇದಿಕೆಯಲ್ಲಿದ್ದರು. ಆದ್ದರಿಂದ, ಖುರ್ಷಿದ್ ಆಲಂ ಮತ್ತು ಮರಿಯಾ ಆಲಂ ಇಬ್ಬರ ಮೇಲೆಯೂ ಭಾರತೀಯ ದಂಡ ಸಂಹಿತೆ ಕಲಂ 188 ಮತ್ತು 295 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಾರಿಯಾ ಆಲಂ ತಪ್ಪಿಸಿಕೊಳ್ಳಲು ಪ್ರಯತ್ನ !

ಮರಿಯಾ ಆಲಂ ಅವರು ತಮ್ಮ ಭಾಷಣದಲ್ಲಿ ಭಾಜಪವನ್ನು ಬೆಂಬಲಿಸುವ ಮುಸಲ್ಮಾನರನ್ನು ಬಹಿಷ್ಕರಿಸುವಂತೆ ಕರೆ ನೀಡಿದರು. ಪ್ರಕರಣ ದಾಖಲಾದ ಬಳಿಕ ಮರಿಯಾ ಆಲಂ ಸ್ಪಷ್ಟೀಕರಣ ನೀಡುವಾಗ, ನಾನು ಚುನಾವಣಾ ಪ್ರಚಾರದಲ್ಲಿದ್ದು ಮತ್ತು ನನ್ನ ಸಮುದಾಯದಲ್ಲಿದ್ದೆ. ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ಅದಕ್ಕಾಗಿಯೇ ನಾನು ‘ಜಿಹಾದ್’ ಎಂಬ ಪದವನ್ನು ಬಳಸಿದ್ದೇನೆ. ಜಿಹಾದ ಎಂದರೆ ಹೋರಾಟ. ನನ್ನ ಮಾತಿನಿಂದ ನೀವು ಯಾವ ಅರ್ಥ ತೆಗೆದಿದ್ದೀರಿ ? ಅದು ನನಗೆ ಗೊತ್ತಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಈ ವಿಷಯದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಇತ್ಯಾದಿ ಕಪಟ ಜಾತ್ಯತೀತವಾದಿಗಳು ಮತ್ತು ಹಿಂದೂಗಳಿಗೆ ಸರ್ವಧರ್ಮದ ಉಪದೇಶ ನಿಡುವವರು ಏಕೆ ಮೌನವಾಗಿದ್ದಾರೆ ?