ರಾಮಾಯಣವು ಭಾರತದ ಇತಿಹಾಸದ ಅವಿಭಾಜ್ಯ ಅಂಗ. ಪ್ರಗತಿಪರರು ರಾಮಾಯಣದ ಅಸ್ತಿತ್ವವನ್ನು ಅಲ್ಲಗಳೆಯಲು ಎಷ್ಟೇ ಪ್ರಯತ್ನಪಟ್ಟರೂ, ರಾಮಾಯಣ ಕಾಲದ ಅನೇಕ ಕುರುಹುಗಳು ಇಂದಿಗೂ ನಮಗೆ ಆಯಾ ಸಮಯದ ಸಾಕ್ಷ್ಯವನ್ನು ನೀಡುತ್ತವೆ. ರಾಮಾಯಣವು ತ್ರೇತಾಯುಗದಲ್ಲಿ ಆಗಿಹೋಗಿದ್ದರೂ ಅದರಿಂದ ಹಿಂದೂ ಸಂಸ್ಕೃತಿಯ ಮಹಿಮೆ, ಪ್ರಾಚೀನತೆ ನಮ್ಮ ಗಮನಕ್ಕೆ ಬರುತ್ತದೆ. ಈ ವಾರದ ಸಂಚಿಕೆಯಲ್ಲಿ ಶ್ರೀಲಂಕಾದ್ವೀಪದಲ್ಲಿರುವ ರಾಮಾಯಣ ಕಾಲದ ಸ್ಥಳಗಳ ಚಿತ್ರಗಳನ್ನು ನೀಡುವ ಪ್ರಯತ್ನವನ್ನು ಮಾಡಿದ್ದೇವೆ.