ಚೈತ್ರ ಶುಕ್ಲ ನವಮಿ (೧೭ ಏಪ್ರಿಲ್ ೨೦೨೪)ಯಂದು ಶ್ರೀರಾಮನವಮಿ ಇದೆ. ಆ ನಿಮಿತ್ತ…..
‘ಅನೇಕ ದೇವಸ್ಥಾನಗಳಲ್ಲಿ ಈ ದಿನ ರಾಮನಿಗಾಗಿ ಬಂಗಾರದ ತೊಟ್ಟಿಲನ್ನು ಸಿಂಗರಿಸುತ್ತಾರೆ. ಅವನ ಬಾಲರೂಪಕ್ಕೆ ಆಭರಣಗಳನ್ನು ತೊಡಿಸುತ್ತಾರೆ. ಮುತ್ತುಗಳ ಚಪ್ಪರವಿರುತ್ತದೆ. ಪ್ರಸಾದ, ತೀರ್ಥ, ಹಾರ ಮತ್ತು ಗುಚ್ಛಗಳು ಇರುತ್ತವೆ. ಗೋಡೆಗಳನ್ನು ನಾಲ್ಕೂ ಬದಿಗಳಿಂದ ಸಿಂಗರಿಸಲಾಗುತ್ತದೆ. ಅಲ್ಲಿ ಉತ್ಸಾಹವಿರುತ್ತದೆ; ಆದರೆ ಅಲ್ಲಿ ರಾಮನೇ ಇರುವುದಿಲ್ಲ ! ರಾಮನನ್ನು ಸೃಷ್ಟಿಸುವುದು ಸುಲಭವಲ್ಲ. ರಾಮನು ಮನಸ್ಸಿನಲ್ಲಿ ನಿರ್ಮಾಣವಾಗಬೇಕು. ಉದ್ದೇಶಪೂರ್ವಕವಾಗಿ ಜ್ಞಾನ ವನ್ನು ಪಡೆದು ಅಜ್ಞಾನವನ್ನು ದೂರ ಮಾಡಿದಾಗಲೇ ಜೀವನದಲ್ಲಿ ಪರಿಪೂರ್ಣರಾಗುವಿರಿ. ನಂತರ ಅಜ್ಞಾನ ದೂರಗೊಳಿಸಲು ಪ್ರಜ್ಞಾ ಪೂರ್ವಕವಾಗಿ ಮುಂದಿಡುವ ಏಕೈಕ ಅತ್ಯುತ್ತಮ ಚಿತ್ರವೆಂದರೆ ಪ್ರಭು ಶ್ರೀರಾಮ !
೧. ಲಕ್ಷ್ಮಣನ ಮಾಧ್ಯಮದಿಂದ ರಾಮನ ಪರಿಚಯ ಮಾಡಿಕೊಳ್ಳುವುದು
೧ ಅ. ರಾಮನನ್ನು ನೋಡುವ ಭೂತಕನ್ನಡಿ ಎಂದರೆ ಲಕ್ಷ್ಮಣ ! : ರಾಮನು ಸೂರ್ಯನಾಗಿದ್ದಾನೆ. ಸೂರ್ಯನ ಕಡೆಗೆ ಅಂದರೆ ತೇಜದ ಕಡೆಗೆ ನೋಡುವುದು ಸುಲಭವಲ್ಲ; ಆದುದರಿಂದ ಒಮ್ಮೆಲೆ ರಾಮನ ತೇಜಸ್ಸನ್ನು ಎದುರಿಸುವ ಬದಲು ಲಕ್ಷ್ಮಣನ ಪರಿಚಯ ದಿಂದ ಪ್ರಭು ಶ್ರೀರಾಮನ ಪರಿಚಯ ಮಾಡಿಕೊಳ್ಳುವವರಿದ್ದೇವೆ. ‘ಲಕ್ಷ್ಮಣನನ್ನು ಅರಿತುಕೊಂಡರೂ ನೀವು ಶ್ರೀರಾಮನನ್ನು ಬಹಳಷ್ಟು ಅರ್ಥಮಾಡಿಕೊಂಡಿರಿ’, ಎಂದಾಗುತ್ತದೆ. ಯಾವುದೇ ವಸ್ತುವನ್ನು ನೋಡಲು ಒಂದು ಭೂತಕನ್ನಡಿ ಬೇಕಾಗುತ್ತದೆ. ಆ ಭೂತಕನ್ನಡಿ (ಮ್ಯಾಗನಿಫಾಯಿಂಗ ಲೆನ್ಸ್) ಎಂದರೆ ಲಕ್ಷ್ಮಣ. ಅವನು ನಿಮಗೆ ರಾಮನನ್ನು ದೊಡ್ಡದು ಅಥವಾ ವಿರಾಟ ಮಾಡಿ ತೋರಿಸಬಲ್ಲನು. ಜೀವನಪೂರ್ತಿ ಲಕ್ಷ್ಮಣನ ನಿಷ್ಠೆ ರಾಮನಲ್ಲಿತ್ತು.
೧ ಆ. ರಾಮ ಮತ್ತು ಲಕ್ಷ್ಮಣ ಇವರ ಪರಸ್ಪರ ವಿಲಕ್ಷಣ ಪ್ರೇಮ : ರಾಮ ಮತ್ತು ಲಕ್ಷ್ಮಣ ಇವರು ಮಲಸಹೋದರರಾಗಿದ್ದರು (ಕಸಿನ್ಸ) ಮತ್ತು ಶತ್ರುಘ್ನ ಮತ್ತು ಲಕ್ಷ್ಮಣ ಇವರು ಸ್ವಂತ ಸಹೋದರÀರಾಗಿದ್ದರು. ಲಕ್ಷ್ಮಣನು ಒಂದು ಮಾನದಂಡವಾಗಿ ದ್ದನು. ‘ವಾಲ್ಮೀಕಿ ರಾಮಾಯಣ’ದಲ್ಲಿ ಉರ್ಮಿಳೆಯ ಪತಿ ಎಂದು ಲಕ್ಷ್ಮಣನನ್ನು ೫ ಕ್ಕಿಂತ ಹೆಚ್ಚು ಬಾರಿ ಉಲ್ಲೇಖಿಸಲಾಗಿದೆ; ಆದರೆ ಅವನು ಸಂಸಾರವನ್ನು ಎಲ್ಲಿ ಮಾಡಿದನು ? ‘ರಾಮಸೇವೆ’ಯೇ ಅವನ ಸಂಸಾರವಾಗಿತ್ತು. ಲಕ್ಷ್ಮಣನು ನೆರಳಿನಂತೆ ರಾಮನೊಂದಿಗೆ ಕೊನೆಯವರೆಗೆ ಉಳಿದನು. ನೆರಳು ಆ ವ್ಯಕ್ತಿಯೊಂದಿಗೆ ಬಹಳ ಏಕನಿಷ್ಠವಾಗಿರುತ್ತದೆ. ಕೇವಲ ನೆರಳೇ ನಮಗೆ ನಿರಂತರ ಜೊತೆ ನೀಡುತ್ತದೆ. ಲಕ್ಷ್ಮಣನು ಬಾಲ್ಯದಲ್ಲಿ ರಾಮನ ಮಡಿಲಲ್ಲಿ ಮಲಗು ತ್ತಿದ್ದನು ಮತ್ತು ರಾಮನು ತನಗೆ ಯಾವುದಾದರೊಂದು ಸಿಹಿ ಪದಾರ್ಥ ಸಿಕ್ಕರೆ, ಅವನು ಅದನ್ನು ಲಕ್ಷ್ಮಣನಿಗೆ ಕೊಡದೇ ತಾನು ಎಂದಿಗೂ ಒಬ್ಬನೇ ತಿನ್ನುತಿರಲಿಲ್ಲ. ರಾಮನಿಗೆ ರಾಜ್ಯಾಭಿಷೇಕವನ್ನು ಮಾಡಬೇಕೆಂದು ನಿಶ್ಚಯವಾದಾಗ ರಾಮನು ಈ ವಾರ್ತೆಯನ್ನು ಮೊದಲು ತಾಯಿಗೆ ಹೇಳಿದನು ಮತ್ತು ನಂತರ ಕೂಡಲೇ ಲಕ್ಷ್ಮಣನಿಗೆ ಹೇಳಿದನು. ಅವನು ಲಕ್ಷ್ಮಣನಿಗೆ, ”ಅರೇ ರಾಜ್ಯವು ನನ್ನದಲ್ಲ, ನಿನ್ನದು ಮತ್ತು ನಿನ್ನದೇ ಆಗಿದೆ !’’ ಎಂದು ಹೇಳಿದನು. ಈ ರೀತಿ ರಾಮನು ಲಕ್ಷ್ಮಣನಿಗೆ ಬಹಳ ಪ್ರೇಮ ನೀಡಿದನು.
೨. ರಾಮ, ಲಕ್ಷ್ಮಣ ಮತ್ತು ಸೀತೆಯ ವನವಾಸ
೨ ಅ. ಕೈಕಯಿಯು ವರ ಬೇಡಿದುದರಲ್ಲಿ ಯಾವುದೇ ತಪ್ಪಿಲ್ಲ ಎಂದು ರಾಮನು ಲಕ್ಷ್ಮಣನಿಗೆ ಹೇಳುವುದು : ರಾಮಾಯಣದಲ್ಲಿ ಲಕ್ಷ್ಮಣನ ಪ್ರೇಮವನ್ನೂ ವಿನೋದದಿಂದ ಕೊಡಲಾಗಿದೆ. ಯಾವಾಗ ‘ರಾಮನಿಗೆ ರಾಜ್ಯಾಭಿಷೇಕವನ್ನು ಮಾಡುವ ಹಾಗಿಲ್ಲ’, ಎಂದು ನಿರ್ಧರಿಸಲಾಯಿತೋ, ಆಗ ರಾಮನಿಗೆ ಸಿಟ್ಟು ಬರಲಿಲ್ಲ. ಲಕ್ಷ್ಮಣನಿಗೆ ಮಾತ್ರ ಸಿಟ್ಟು ಬಂದಿತು. ಲಕ್ಷ್ಮಣನು, ”ರಾಮಾ, ನೀನು ರಾಜ್ಯಾಧಿಕಾರವನ್ನು ಸ್ವೀಕರಿಸು. ನಾನು ಧನಸ್ಸು ಹಿಡಿದು ಹೊರಗೆ ನಿಲ್ಲುತ್ತೇನೆ’’, ಎಂದನು. ಆದರೂ ರಾಮನು ಶಾಂತನಾಗಿದ್ದನು. ಅವನು ಲಕ್ಷ್ಮಣನಿಗೆ, ”ನೀನೇಕೆ ಸಿಟ್ಟಾಗಿರುವೆ ? ಕೈಕಯಿಯು ಏಕೆ ವರ ಬೇಡಿದಳು ? ಏಕೆಂದರೆ ಅವಳು ಸಹಾಯ ಮಾಡಿದ್ದಳು. ‘ಪತ್ನಿಯ ಸಹಾಯವನ್ನೂ ಉಚಿತವಾಗಿ ಪಡೆಯಬಾರದು’, ಎಂಬ ನಮ್ಮ ಕರ್ಮಸಿದ್ಧಾಂತವಿದೆಯಲ್ಲ ? ಅವಳು ತನ್ನ ಪುರುಷಾರ್ಥದಿಂದ ವರವನ್ನು ಪಡೆದಳು ಮತ್ತು ಅವಳು ಆ ವರವನ್ನು ಸಂರಕ್ಷಿಸಿಟ್ಟಳು. ಇದರಲ್ಲಿ ಅವಳ ತಪ್ಪೇನಿದೆ ? ನಂತರ ‘ತನ್ನ ಮಗನಿಗೆ ರಾಜ್ಯ ಸಿಗಬೇಕು’, ಎಂದು ಬಯಸುವುದರಲ್ಲಿ ಅವಳ ತಪ್ಪೇನಿದೆ ? ಅವಳು ಆ ವರವನ್ನು ಬೇಡಿದಳು ಮತ್ತು ಹಿಂದೆ ವಚನ ನೀಡಿದುದರಿಂದ ದಶರಥನು ಅದನ್ನು ನೀಡಿದನು. ಒಂದು ಬಾರಿ ವಚನ ನೀಡಿದ ನಂತರ ಅದನ್ನು ಭಂಗ ಮಾಡಿದರೆ ಜೀವನವು ಮಣ್ಣಿಗೆ ಸಮನಾಗುತ್ತದೆ. ದಶರಥನು ನೀಡಿದ ವಚನವನ್ನು ಪಾಲಿಸುವುದು ಯೋಗ್ಯವೇ ಆಗಿದೆ. ಅವಳು ನನಗೆ ‘ಹೋಗು’, ಎಂದು ಹೇಳಿದಳು. ನಾನು ಹೋಗುತ್ತಿದ್ದೇನೆ. ಕೈಕಯಿ ನನ್ನ ತಾಯಿಯೇ ಆಗಿದ್ದಾಳೆ. ಅವಳನ್ನು ಮಲತಾಯಿ ಎಂದು ನಾನು ತಿಳಿದಿಲ್ಲ. ಆದುದರಿಂದ ಇಲ್ಲಿ ಯಾರದ್ದೂ ತಪ್ಪಿಲ್ಲ. ನೀನು ಸಿಟ್ಟು ಮಾಡುತ್ತಿರುವುದು ಮಾತ್ರ ತಪ್ಪಾಗಿದೆ’, ಎಂದು ಹೇಳಿದನು. ಲಕ್ಷ್ಮಣನು ಸುಮ್ಮನಾದನು ಮತ್ತು, ”ಸರಿ, ಹಾಗಿದ್ದಲ್ಲಿ ನಾನೂ ನಿಮ್ಮೊಂದಿಗೆ ವನವಾಸಕ್ಕೆ ಬರುತ್ತೇನೆ’’, ಎಂದನು. ನಂತರ ಅವರು ವನವಾಸಕ್ಕೆ ಹೊರಟರು.
೨ ಆ. ರಾಮ ಮತ್ತು ಸೀತೆ ಇವರು ಮಲಗಿರುವಾಗ ಲಕ್ಷ್ಮಣನು ರಾತ್ರಿಯಿಡಿ ಕಾವಲು ಕಾಯುವುದು : ಅವರು ಮೊದಲು ತಂಗಿದ್ದ ಸ್ಥಳ ಶೃಂಗವೆರಪುರ. ಅಲ್ಲಿ ನಿಷಾದಪತಿ (ಬೆಸ್ತ ವ್ಯಕ್ತಿಗಳ ಪ್ರಮುಖ) ಗುಹ ಎಂಬ ವ್ಯಕ್ತಿಯು ಇದ್ದನು. ರಾಮ ಮತ್ತು ಸೀತೆ ಬಯಲಿನಲ್ಲಿ ಮಲಗಿದ್ದರು. ಗುಹನು, ”ಲಕ್ಷ್ಮಣಾ, ನೀನೂ ಮಲಗು. ನಾನು ಮತ್ತು ನನ್ನ ನಿಷಾದರಿದ್ದೇವೆ, ನಾವು ರಾತ್ರಿಯಿಡಿ ಕಾವಲಿರುತ್ತೇವೆ’’, ಎಂದು ಹೇಳಿದನು. ಆಗ ಲಕ್ಷ್ಮಣನು ಒಂದು ಬಾರಿ ಆ ಗುಹನ ಕಣ್ಣುಗಳ ಕಡೆಗೆ ದಿಟ್ಟಿಸಿ ನೋಡಿ ಅವನಿಗೆ ಹೇಳಿದನು, ”ಗುಹಾ ನೀನು ಏನು ಮಾತನಾಡುತ್ತಿರುವೆ ? ರಾಮ ಮತ್ತು ಸೀತೆ ಇವರು ನನ್ನ ದೇವತೆಗಳಾಗಿದ್ದಾರೆ. ಅವರು ಹೊರಗೆ ಬಯಲಲ್ಲಿ ಮಲಗಿದ್ದಾರೆ ಮತ್ತು ನನಗೆ ನಿದ್ದೆ ಬರುವುದೇ ? ನೀನು ಅಥವಾ ಇತರ ಯಾರೇ ಇದ್ದರೂ ನಾನು ಇಲ್ಲಿ ಎಚ್ಚರದಿಂದ ಕಾಯಬೇಕಾಗುತ್ತದೆ’’ ಹೀಗೆ ಹೇಳಿ ಲಕ್ಷ್ಮಣನು ಎಚ್ಚರವಾಗಿಯೇ ಇದ್ದನು.
೩. ಭರತನು ಬಹಳ ದೊಡ್ಡ ಸೇನೆಯೊಂದಿಗೆ ಬರುತ್ತಿರುವುದನ್ನು ನೋಡಿ ರಾಮನು ವ್ಯಕ್ತ ಪಡಿಸಿದ ಸಹೋದರ ಪ್ರೇಮ
ಮುಂದೆ ಭರತನು ದೊಡ್ಡ ಸೇನೆಯನ್ನು ತೆಗೆದುಕೊಂಡು ಬರುತ್ತಿದ್ದನು. ಅದನ್ನು ನೋಡಿ ಲಕ್ಷ್ಮಣನಿಗೆ ಸಂದೇಹ ಬಂದಿತು, ‘ಭರತನು ಇಷ್ಟು ದೊಡ್ಡ ಸೇನೆಯನ್ನು ಏಕೆ ತರುತ್ತಿದ್ದಾನೆ ? ಇವನು ರಾಮನ ಮೇಲೆ ದಾಳಿ ಮಾಡಲು ಬಂದಿರಬೇಕು. ಹಾಗಾದರೆ ಭರತನನ್ನು ಕೊಲ್ಲಲೇಬೇಕು.’ ರಾಮನು ಹೇಳಿದನು, ”ಭರತನನ್ನು ಕೊಂದು ರಾಜ್ಯವನ್ನಾಳುವುದು ನನಗೆ ಬೇಕಾಗಿಲ್ಲ. ನನಗೆ ರಾಜ್ಯ ಸಿಗುವುದೆಂದು ಗೊತ್ತಾದಾಗಲೇ ‘ರಾಜ್ಯ ನನ್ನದಲ್ಲ, ನಿನ್ನದಾಗಿದೆ’ ನಾನು ನಿನಗೆ ಹೇಳಿದ್ದೆ. ನಾನು ರಾಜ್ಯವಾಳುವುದಾದರೆ ನನ್ನ ಸಹೋದರರಿಗಾಗಿ ಮತ್ತು ಜನತೆಗಾಗಿ ಆಳಬೇಕಾಗಿದೆ. ಇವರು ರಾಮರಾಜ್ಯದ ಆದರ್ಶ ಸಹೋದರನಾಗಿದ್ದರು, ತನ್ನ ಸಹೋದರನಿಗಾಗಿ ಕೆಲಸ ಮಾಡು ತ್ತಿದ್ದರು. ಈ ಪ್ರಸಂಗದಲ್ಲಿ ಲಕ್ಷ್ಮಣನು ರಾಮನೊಂದಿಗೆ ಎಷ್ಟು ಏಕನಿಷ್ಠನಾಗಿದ್ದನು, ಇದು ಮಹತ್ವದ ಬೋಧವಾಗಿದೆ.
೪. ರಾಮ ಮತ್ತು ಲಕ್ಷಣರಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಅವರು ಮನಸ್ಸಿನಿಂದ ಸಂಪೂರ್ಣ ಒಂದಾಗಿದ್ದರು ಲಕ್ಷ್ಮಣನ ಧ್ಯೇಯ ಸರಳವಾಗಿತ್ತು. ರಾಮನು ನಿರ್ಧರಿಸಿದ್ದಕ್ಕೆ ಬೆಂಬಲ ನೀಡುವುದು.
ಸೀತೆಯ ಅಗ್ನಿಪರೀಕ್ಷೆಯ ಸಮಯದಲ್ಲಿ ರಾಮನೊಂದಿಗೆ ಅವನ ಭಿನ್ನಾಭಿಪ್ರಾಯವಾಯಿತು. ಸೀತೆಯು ಅತ್ಯಂತ ಪವಿತ್ರಳಾಗಿರು ವುದರಿಂದ ಅಗ್ನಿಪರೀಕ್ಷೆಯ ಸಮಯದಲ್ಲಿ ಲಕ್ಷ್ಮಣನು ರಾಮನ ಮೇಲೆ ಕೋಪಗೊಂಡಿದ್ದನು. ಅನೇಕ ಬಾರಿ ರಾಮನೊಂದಿಗೆ ಅವನ ಭಿನ್ನಾಭಿಪ್ರಾಯವಾಯಿತು; ಆದರೆ ಎಂದಿಗೂ ಮನಸ್ಸು ಎರಡಾಗಲಿಲ್ಲ. ಲಕ್ಷ್ಮಣನು ಇಷ್ಟು ಶ್ರೇಷ್ಠನಾಗಿದ್ದನು !
೫. ಲಿಪ್ತನಾಗಿದ್ದೂ ಅಲಿಪ್ತನಾಗಿರುವ ಲಕ್ಷ್ಮಣ !
ರಾಮನಿಗೆ ಲಕ್ಷ್ಮಣನಂತಹ ದಿವ್ಯ ಸಹೋದರನು ಸಿಕ್ಕಿದ್ದನು, ಇದುವೇ ರಾಮನ ಒಂದು ಶ್ರೇಷ್ಠತನ. ರಾಮನ ಇಷ್ಟಾನಿಷ್ಟ, ಅವನ ಕರ್ತವ್ಯ ಮತ್ತು ಜೀವನದ ಉದ್ದೇಶಕ್ಕೆ ಚಿಕ್ಕ ಆಘಾತವಾದರೂ ಅವನು ಉಗ್ರನಾಗುತ್ತಿದ್ದನು. ಲಕ್ಷ್ಮಣನಲ್ಲಿ ಒಂದು ಲಿಪ್ತ ಅಲಿಪ್ತತೆ ಇತ್ತು, ಅಂದರೆ ಅವನು ಸೀತಾ ಮತ್ತು ರಾಮರಲ್ಲಿ ಲಿಪ್ತನಾಗಿದ್ದನು; ಅಷ್ಟೇ ಅಲಿಪ್ತನೂ ಆಗಿದ್ದನು. ಇದು ಅವನ ವೈಶಿಷ್ಟ್ಯವಾಗಿತ್ತು.
೫ ಅ. ಸೀತೆಯು ಲಕ್ಷ್ಮಣನಿಗೆ ರಾಮನ ಸಹಾಯಕ್ಕಾಗಿ ಹೋಗಲು ಹೇಳುವುದು ಮತ್ತು ಅವನ ಮೇಲೆ ದೋಷಾರೋಪಣೆ : ಸುವರ್ಣ ಮೃಗ ಬೇಕೆಂಬ ಸೀತೆಯ ಹಠದಿಂದ ರಾಮನು ಅದನ್ನು ಬೆಂಬೆತ್ತಿದನು ಮತ್ತು ಸೀತೆಗೆ, ‘ಧಾವಿಸು ಲಕ್ಷ್ಮಣಾ, ಧಾವಿಸು ಸೀತೆ’, ಎಂಬ ಕಿರುಚುವ ಧ್ವನಿ ಕೇಳಿಸಿತು. ಆ ಸಮಯದಲ್ಲಿ ಸೀತೆಯು ಲಕ್ಷ್ಮಣನಿಗೆ, ”ರಾಮನು ತೊಂದರೆಯಲ್ಲಿದ್ದಾನೆ, ನೀನು ಹೋಗು’’, ಎಂದು ಹೇಳತೊಡಗಿದಳು. ಆಗ, ”ರಾಮನು ಸಂಕಟದಲ್ಲಿರಲು ಸಾಧ್ಯವಿಲ್ಲ, ‘ಅದು ಯಾವುದೋ ಮಾಯಾವಿ ಧ್ವನಿ ಆಗಿದೆ. ಸತ್ಯವಲ್ಲ’, ಎಂದು ಬಹಳ ಕಳಕಳಿಯಿಂದ ತಿಳಿಸಿ ಹೇಳಿದನು. ಈಗ ಸೀತೆಯು, ಕೇಳÀಲಿಲ್ಲ. ಕೊನೆಗೆ ‘ಇಷ್ಟೆಲ್ಲ ಆಗಿದ್ದರೂ ನೀನು ಹೋಗುತ್ತಿಲ್ಲ, ಎಂದರೆ ನಿನ್ನ ಮನಸ್ಸಿನಲ್ಲಿ ವಿಕಾರ(ಮೋಹ) ಉತ್ಪನ್ನವಾಗಿದೆ’’, ಎಂದು ಹೇಳಿದಳು.
೫ ಆ. ಲಕ್ಷ್ಮಣನು ಸೀತೆಯ ರಕ್ಷಣೆಗಾಗಿ ಗೆರೆಯನ್ನು ಹಾಕುವುದು : ಲಕ್ಷ್ಮಣನು ಇದನ್ನು ಕೇಳಿ ಈಗ ಸೀತೆಗೇನಾಗುವುದೋ ? ಎಂದು ಅವನು ಲಿಪ್ತ ಮತ್ತು ಅಲಿಪ್ತನೂ ಆಗಿದ್ದನು. ಕೊನೆಗೆ ಅವನು ಅವಳ ರಕ್ಷಣೆಗಾಗಿ ಒಂದು ಗೆರೆಯನ್ನು ಹಾಕಿದನು.
೫ ಇ. ಲಕ್ಷ್ಮಣನು ಸೀತೆಯ ಗೆಜ್ಜೆಗಳನ್ನು ಮಾತ್ರ ಗುರುತಿಸುವುದು : ಸುಗ್ರೀವನಿಗೆ ಆಭರಣಗಳ ಒಂದು ಗಂಟು ಸಿಕ್ಕಿರುತ್ತದೆ. ಸುಗ್ರೀವನು ‘ಇವು ಸೀತೆಯ ಆಭರಣಗಳಾಗಿವೆಯೇ ?’, ಎಂದು ಕೇಳಲು ರಾಮನ ಬಳಿಗೆ ಹೋದನು. ಆ ಸಮಯದಲ್ಲಿ ರಾಮನು ಲಕ್ಷ್ಮಣನಿಗೆ, ಅದನ್ನು ಗುರುತಿಸಲು ಹೇಳಿದಾಗ ಲಕ್ಷ್ಮಣನು, ”ನಾನು ಇದರಲ್ಲಿನ ಕೇವಲ ಕಾಲುಗೆಜ್ಜೆಗಳನ್ನು ಮಾತ್ರ ಗುರುತಿಸಬಲ್ಲೆ; ಏಕೆಂದರೆ ನಾನು ಕೇವಲ ಅವಳ ಚರಣಗಳ ಕಡೆಗೇ ನೋಡುತ್ತಿದ್ದೆನು. ನನಗೆ ಬೇರೆ ಏನೂ ಗೊತ್ತಿಲ್ಲ’’, ಎಂದನು. ಇದರಿಂದ ಅವನ ವಿಚಾರದ ಮಹಾನತೆ ಕಾಣಿಸುತ್ತದೆ.
೬. ರಾಮನಿಂದ ದೂರವಾದರೆ ಲಕ್ಷ್ಮಣನ ಅಂತ್ಯವಾಗುವುದು
ಲಕ್ಷ್ಮಣನ ಪ್ರಾಣ ಹೇಗೆ ಹೋಯಿತು ? ಬ್ರಹ್ಮದೇವನು ಕಾಲನಿಗೆ, ”ನೀನು ಹೋಗಿ ಬಾ’’ ಎಂದು ಹೇಳಿದನು. ಕಾಲನು ರಾಮನಿಗೆ, ”ನಿನ್ನ ಸಮಯ ಮುಗಿದಿದ್ದು ಈಗ ನೀನು ಹೊರಡುವ ಸಮಯವು ಬಂದಿದೆ’’, ಎಂದು ಹೇಳಿದನು. ಎಲ್ಲ ಸಂದೇಶವನ್ನು ನೀಡಿ ಆ ಚರ್ಚೆಯನ್ನು ಮಾಡಲು ಕುಳಿತಿರುವಾಗ ಲಕ್ಷ್ಮಣನನ್ನು ಹೊರಗೆ ಕಾವಲಿಗೆ ಕುಳ್ಳಿರಿಸಿದ್ದರು ಮತ್ತು ‘ಒಳಗೆ ಯಾರನ್ನೂ ಬಿಡಬಾರದು’, ಎಂದು ಹೇಳಿದ್ದರು. ‘ಯಾರು ಒಳಗೆ ಪ್ರವೇಶಿಸುವರೋ, ಅವರಿಗೆ ರಾಮನು ಮರಣದಂಡನೆಯ ಶಿಕ್ಷೆ ಯನ್ನು ನೀಡಬೇಕು’, ಎಂಬ ಷರತ್ತಿನ ಮೇಲೆಯೇ ಕಾಲನು ಅಲ್ಲಿ ಕುಳಿತಿದ್ದನು. ಅಲ್ಲಿಗೆ ದುರ್ವಾಸ ಋಷಿಗಳು ಬಂದರು ಮತ್ತು ”ನನ್ನನ್ನು ಒಳಗೆ ಬಿಡು’’, ಎಂದು ಹೇಳಿದರು. ಲಕ್ಷ್ಮಣನು, ”ಒಳಗೆ ಬಿಡದಿದ್ದಾಗ, ದುರ್ವಾಸರು , ”ರಘುವಂಶವನ್ನು ನಾಶ ಮಾಡುವೆನು. ನೀನು ಏನು ತಿಳಿದುಕೊಂಡಿರುವೆ ?’’ ಎಂದರು. ಲಕ್ಷ್ಮಣನು, ”ಸಂಪೂರ್ಣ ರಘುವಂಶ ನಾಶವಾಗುವುದಕ್ಕಿಂತ ನಾನೊಬ್ಬನೇ ನಾಶವಾಗುವುದು ಉತ್ತಮ’’, ಎಂದನು. ಅವನು ಸುಮ್ಮನೆ ಒಳಗೆ ಹೋದನು. ಕಾಲನ ಭೇಟಿ ಕೊನೆಗೊಂಡಿತು ಮತ್ತು ಲಕ್ಷ್ಮಣನು ರಾಮನ ಮುಂದೆ ಹೋಗಿ ನಿಂತುಕೊಂಡನು ಮತ್ತು ”ನೀವು ನನಗೆ ಹೇಳಿದ ಹಾಗೆ ಮರಣದಂಡನೆಯ ಶಿಕ್ಷೆ ವಿಧಿಸಿ. ಈಗ ನನ್ನನ್ನು ಗಲ್ಲಿಗೇರಿಸಿ’’, ಎಂದು ಹೇಳಿದನು.
‘ಲಕ್ಷ್ಮಣನನ್ನು ಗಲ್ಲಿಗೇರಿಸಿ’, ಎಂದು ಹೇಳುತ್ತಾ ರಾಮನಿಗೆ ಏನು ಮಾಡಬೇಕು ಎಂಬುದು ತಿಳಿಯಲಾಯಿತು ! ಅಷ್ಟರಲ್ಲಿಯೇ ಅಲ್ಲಿಗೆ ಬಂದ ವಸಿಷ್ಠ ಋಷಿಗಳು ರಾಮನಿಗೆ, ”ನೀನು ಹೀಗೆ ಮಾಡು, ಅವನಿಗೆ ನಿಜವಾಗಿಯೂ ಗಲ್ಲುಶಿಕ್ಷೆ ನೀಡುವ ಆವಶ್ಯಕತೆ ಇಲ್ಲ. ಅವನನ್ನು ನಿನ್ನ ಗಡಿಯಿಂದ ಹೊರಗೆ ಹಾಕು. ಅವನು ಸತ್ತಂತೆ ಆಗುತ್ತಾನೆ. ಲಕ್ಷ್ಮಣನಿಗೆ ನಿನ್ನನ್ನು ಬಿಟ್ಟಿರಲು ಸಾಧ್ಯವಿಲ್ಲ, ಎಂದು ನಿನಗೆ ಗೊತ್ತಿದೆ’’, ಎಂದು ಹೇಳಿದರು. ‘ಅದೇ ಷರತ್ತು ಲಕ್ಷ್ಮಣನನ್ನು ರಾಮನಿಂದ ದೂರ ಮಾಡುತ್ತದೆ; ಆದರೆ ನಿಜ ವಾಗಿಯೂ ಕೊಲ್ಲುವ ಹಾಗಿಲ್ಲ’, ಇದೇ ವಸಿಷ್ಠರು ರಾಮನಿಗೆ ಬೇರೆ ಶಬ್ದಗಳಲ್ಲಿ ಹೇಳಿದರು. ರಾಮ ಮತ್ತು ಲಕ್ಷ್ಮಣರಿಗೆ ಇದು ಒಪ್ಪಿಗೆಯಾಯಿತು. ವಸಿಷ್ಠರ ಅನುಭವದಲ್ಲಿ, ಲಕ್ಷ್ಮಣನು ರಾಮನ ಹೊರತು ಇರಲಾರನು. ಅವನು ರಾಮನ ಶ್ವಾಸವಾಗಿದ್ದನು.’
ಸಂಕಲನ – ಗೀತೆಶ (ಸ್ವಾಮಿ ವಿಜ್ಞಾನಾನಂದÀರು ರಾಮ ನವಮಿ ಯಂದು ಹೇಳಿದ ವಿಚಾರ) (ಆಧಾರ : ಮಾಸಿಕ ‘ಮನಶಕ್ತಿ’)