UN Experts Expressed Outrage: ಪಾಕಿಸ್ತಾನದಲ್ಲಿ ಹಿಂದೂ ಮತ್ತು ಕ್ರೈಸ್ತ ಹುಡುಗಿಯರ ಅಪಹರಣ ಮತ್ತು ಬಲವಂತ ವಿವಾಹ ಸಹಿಸಲಾಗುವುದಿಲ್ಲ !

ವಿಶ್ವಸಂಸ್ಥೆಯಿಂದ ಪಾಕಿಸ್ತಾನಕ್ಕೆ ತಪರಾಕಿ !

ನ್ಯೂಯಾರ್ಕ್ (ಅಮೇರಿಕಾ) – ಪಾಕಿಸ್ತಾನದ ಕ್ರೈಸ್ತ ಮತ್ತು ಹಿಂದೂ ಸಮುದಾಯದ ಹುಡುಗಿಯರು ಬಲವಂತದ ಮತಾಂತರ, ಅಪಹರಣ, ಕಳ್ಳಸಾಗಣೆ, ಬಾಲ್ಯವಿವಾಹ, ಬೇಗ ಮತ್ತು ಬಲವಂತದ ಮದುವೆ, ಕೌಟುಂಬಿಕ ಗುಲಾಮಗಿರಿ ಮತ್ತು ಲೈಂಗಿಕ ಹಿಂಸಾಚಾರಗಳಿಗೆ ಬಲಿ ಬೀಳುತ್ತಿದ್ದಾರೆ ಎನ್ನುವಂತಹ ಶಬ್ದಗಳಲ್ಲಿ ವಿಶ್ವಸಂಸ್ಥೆಯ ತಜ್ಞರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ತಜ್ಞರು, ಪಾಕಿಸ್ತಾನವು ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ತನ್ನ ಜವಾಬ್ದಾರಿಗಳನ್ನು ಪಾಲಿಸುವ ಆವಶ್ಯಕತೆಯಿದೆ. ಎಂದು ಹೇಳಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು ಮತ್ತು ಹುಡುಗಿಯರ ಮೇಲಿನ ಈ ರೀತಿಯ ಘೋರ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅಪರಾಧಗಳನ್ನು ಇನ್ನು ಮುಂದೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿಯು ತಜ್ಞರ ಹೇಳಿಕೆಯನ್ನು ಉಲ್ಲೇಖಿಸಿ ಒಂದು ವಿನಂತಿಯನ್ನು ಪ್ರಸಾರ ಮಾಡಿದೆ. ಇದರಲ್ಲಿ,

1. ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಹುಡುಗಿಯರ ಬಲವಂತ ವಿವಾಹ ಮತ್ತು ಮತಾಂತರಗಳಿಗೆ ನ್ಯಾಯಾಲಯವು ಒಪ್ಪಿಗೆ ನೀಡಿದೆ. ಸಂತ್ರಸ್ತರಿಗೆ ಅವರ ಪೋಷಕರ ಬಳಿಕ ಮರಳಿ ಹೋಗಲು ಅನುಮತಿ ನೀಡುವ ಬದಲಾಗಿ ಅವರನ್ನು ಅಪಹರಣಕಾರರೊಂದಿಗೆ ವಾಸಿಸಲು ಅನುಮತಿ ನೀಡಲು ಧಾರ್ಮಿಕ ಕಾನೂನನ್ನು ಬಳಸಲಾಗುತ್ತದೆ. ಪ್ರೇಮ ವಿವಾಹದ ಹೆಸರಿನಡಿಯಲ್ಲಿ ಪೊಲೀಸರು ಅಪರಾಧಗಳನ್ನು ತಿರಸ್ಕರಿಸುತ್ತಾರೆ.

2. ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಸಂತ್ರಸ್ತರ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇದ್ದರೆ ಒಪ್ಪಿಗೆ ಅಪ್ರಸ್ತುತವಾಗುತ್ತದೆ. ಒಬ್ಬ ಸ್ತ್ರೀಗೆ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಮುಕ್ತವಾಗಿ ಮದುವೆಯಾಗುವ ಅಧಿಕಾರವು ಅವಳ ಜೀವನಕ್ಕೆ, ಗೌರವಕ್ಕೆ ಮತ್ತು ಮನುಷ್ಯನೆಂದು ಸಮಾನತೆಗೆ ಆವಶ್ಯಕವಾಗಿದೆ ಮತ್ತು ಕಾನೂನಿನ ಮೂಲಕ ಅದನ್ನು ಶಾಶ್ವತವಾಗಿಡಬೇಕು.

3. ಸಂತ್ರಸ್ತರಿಗೆ ನ್ಯಾಯ, ಪರಿಹಾರ, ರಕ್ಷಣೆ ಮತ್ತು ಅಗತ್ಯ ನೆರವು ಸಿಗಬೇಕು, ಇದಕ್ಕಾಗಿ ಬಲವಂತದ ವಿವಾಹವನ್ನು ರದ್ದುಗೊಳಿಸುವ ಕಾನೂನಿನ ಆವಶ್ಯಕತೆಯಿದೆ.

ಸಂಪಾದಕೀಯ ನಿಲುವು

ವಿಶ್ವಸಂಸ್ಥೆ ಎಂದರೆ ಕಣ್ಣು ಕಟ್ಟಿದ ಹುಲಿಯಾಗಿದ್ದು, ಅದರ ಇತಿಹಾಸವನ್ನು ನೋಡಿದರೆ, ಅದು ಯಾವುದೇ ಸಮಸ್ಯೆಗಳನ್ನು ಪರಿಹರಿಸಿದ್ದು ಅಥವಾ ಯಾರನ್ನಾದರೂ ರಕ್ಷಿಸಿರುವ ಚಿತ್ರಣವಿಲ್ಲ. ಆದುದರಿಂದ ಇಂತಹ ಹೇಳಿಕೆಗಳನ್ನು ನೀಡುವ ಬದಲು ಪ್ರತ್ಯಕ್ಷ ಕೃತಿಯನ್ನು ಕೈಕೊಂಡು ತೋರಿಸುವುದು ಆವಶ್ಯಕವಾಗಿದೆ !