ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರ ಕೂಡ ಚಲನಚಿತ್ರ ಪ್ರದರ್ಶನದಲ್ಲಿ ಅಡೆತಡೆಯನ್ನು ಒಡ್ಡುತ್ತಿದೆಯೆಂದು ನಿರ್ಮಾಪಕರ ಆರೋಪ
ಮುಂಬಯಿ – ‘ದಿ ಡೈರಿ ಆಫ್ ವೆಸ್ಟ್ ಬೆಂಗಾಲ’ ಚಲನಚಿತ್ರ ಪ್ರದರ್ಶನಗೊಳ್ಳಬಾರದು ಎಂದು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಿಂದ ಬೆದರಿಕೆ ಕರೆಗಳು ಬರುತ್ತಿದೆಯೆಂದು ಚಲನಚಿತ್ರ ನಿರ್ಮಾಪಕ ಜಿತೇಂದ್ರ ನಾರಾಯಣ ಸಿಂಹ ತ್ಯಾಗಿ(ಪೂರ್ವಾಶ್ರಮದ ವಸೀಮ ರಿಝ್ವಿ) ಇವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಹಾಗೆಯೇ ಬಂಗಾಲದ ತೃಣಮೂಲ ಕಾಂಗ್ರೆಸ ಸರಕಾರವು ಚಲನಚಿತ್ರ ರಾಜ್ಯದಲ್ಲಿ ಪ್ರದರ್ಶಿತಗೊಳ್ಳಬಾರದೆಂದು ಪ್ರಯತ್ನಿಸುತ್ತಿದೆಯೆಂದು ತ್ಯಾಗಿಯವರು ಆರೋಪಿಸಿದರು.
(ಸೌಜನ್ಯ – Bollygrad Studioz)
ಜಿತೇಂದ್ರ ತ್ಯಾಗಿ ಮಾತು ಮುಂದುವರಿಸಿ,
1. ನಾವು ಒಂದು ಸತ್ಯ ಘಟನೆಯನ್ನಾಧರಿಸಿ ಚಲನಚಿತ್ರ ಮಾಡಿದ್ದೇವೆ. ಇದಕ್ಕಾಗಿ, ಪಾಕಿಸ್ತಾನದ ಕರಾಚಿ ಮೂಲದ ‘ಜಾಮಿಯಾ ದಾರುಲ್ ಉಲೂಮ್’ ಈ ಭಯೋತ್ಪಾದಕ ಸಂಘಟನೆಯು ನಮ್ಮ ವಿರುದ್ಧ ಫತ್ವಾ ಹೊರಡಿಸಿದೆ. ಇದರಲ್ಲಿ ಚಲನಚಿತ್ರ ಪ್ರದರ್ಶಿಸದಂತೆ ಬೆದರಿಕೆ ಹಾಕಿದ್ದಾರೆ. ನನಗೆ ನೀವು ಹೇಳಿರಿ, ಈಗ ಭಾರತದಲ್ಲಿ ಚಲನಚಿತ್ರ ನಿರ್ಮಿಸಲು ಮತ್ತು ಪ್ರದರ್ಶಿಸಲು ನಾವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಸಂಘಟನೆಯಿಂದ ಅನುಮತಿ ಪಡೆಯಬೇಕೇ ?
2. ‘ಬಂಗಾಳದ ಮಮತಾ ಬ್ಯಾನರ್ಜಿ ಸರಕಾರವನ್ನು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಸಂಘಟನೆಯ ಜನರು ನಡೆಸುತ್ತಿದ್ದಾರೆಂದು ನಾವು ಅರ್ಥೈಸಿಕೊಳ್ಳಬೇಕೆ ? ಏಕೆಂದರೆ, ಅವರಿಗೆ ಚಲನಚಿತ್ರ ಪ್ರದರ್ಶನಗೊಳ್ಳುವುದರಿಂದ ಅಡಚಣೆಯಿದೆ ಮತ್ತು ಇಲ್ಲಿ ಮಮತಾ ಬ್ಯಾನರ್ಜಿಯವರ ಸರಕಾರವು ಪ್ರದರ್ಶಿತಗೊಳ್ಳಲು ಬಿಡುತ್ತಿಲ್ಲ ಈ ಭಯೋತ್ಪಾದಕರೊಂದಿಗೆ ಅವರಿಗೆ ಯಾವ ಸಂಬಂಧವಿದೆಯೆಂದು ನಾವು ತಿಳಿದುಕೊಳ್ಳಬೇಕು ?
The makers of ‘The Diary of West Bengal’ are threatened by a #Pakistani terrorist organization, to not release the film.
The producers allege that Bengal’s #TrinamoolCongress Government is also tampering with the release of the film.
👉 It is humiliating for India that an… pic.twitter.com/ZYSeXE1BLL
— Sanatan Prabhat (@SanatanPrabhat) April 6, 2024
3. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಚಲನಚಿತ್ರಗಳನ್ನು ನಿರ್ಮಾಣ ಮಾಡುವ ಸ್ವಾತಂತ್ರ್ಯ ನಮ್ಮ ದೇಶದಲ್ಲಿ ಕೇವಲ ಕಮ್ಯುನಿಸ್ಟ ಸಿದ್ಧಾಂತ ಹೊಂದಿರುವ ಜನರಿಗೆ ಮಾತ್ರ ಇದೆಯೇ ? ಚಲನಚಿತ್ರ ನಿರ್ಮಿಸುವ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಮ್ಮಂತಹ ಸ್ವತಂತ್ರ ವಿಚಾರಸರಣಿಯ ಜನರಿಗೆ ಯಾವುದೇ ಅಧಿಕಾರವಿಲ್ಲವೇ ?
4. ಈ ಚಲನಚಿತ್ರದ ಮಾಧ್ಯಮದಿಂದ ಇಲ್ಲಿಯವರೆಗೆ ನಮಗೆ ಎಷ್ಟು ಹಾನಿಯಾಗಿದೆಯೋ, ಅದನ್ನು ಯಾರು ಭರಿಸುತ್ತಾರೆ ?
5. ಒಂದು ವೇಳೆ ಬಂಗಾಳದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿದ್ದರೆ, ಮಮತಾ ಸರಕಾರ ನಮ್ಮ ಚಲನಚಿತ್ರ ಪ್ರದರ್ಶನಗೊಳ್ಳಲು ಏಕೆ ಬಿಡುತ್ತಿಲ್ಲ ? ಮಮತಾ ಬ್ಯಾನರ್ಜಿಯವರ ಸರಕಾರ ನಮ್ಮ ಹಿಂದೆ ಏಕೆ ಬಿದ್ದಿದೆ ? ಚಲನಚಿತ್ರವನ್ನು ತಯಾರಿಸಿ ನಾವು ಅಪರಾಧ ಮಾಡಿದ್ದೇವೆಯೇ ? ಮಮತಾ ಸರಕಾರ ಯಾವುದೇ ಸ್ಪಷ್ಟ ಕಾರಣವನ್ನು ಏಕೆ ಕೊಡುತ್ತಿಲ್ಲ? ಮಮತಾ ಬ್ಯಾನರ್ಜಿಯವರ ಸರಕಾರ ಬಂಗಾಳದ ರೋಹಿಂಗ್ಯಾ ಮತ್ತು ಬಂಗಾಳದೇಶಿ ನುಸುಳುಕೋರರಿಗೆ ಸಹಾಯ ಮಾಡುತ್ತಿಲ್ಲದಿದ್ದರೆ, ಅವರು ಅದನ್ನು ಬಹಿರಂಗವಾಗಿ ಏಕೆ ಹೇಳುತ್ತಿಲ್ಲ ?
‘ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವಾಗ, ನಮ್ಮ ಚಲನಚಿತ್ರ ಏಕೆ ಪ್ರದರ್ಶಿತಗೊಳ್ಳಬಾರದು ? – ನಿರ್ದೇಶಕ ಸನೋಜ ಮಿಶ್ರಾ
ಚಲನಚಿತ್ರದ ನಿರ್ದೇಶಕ ಸನೋಜ್ ಮಿಶ್ರಾ ಮಾತನಾಡಿ, ಈ ಚಲನಚಿತ್ರದಲ್ಲಿ ನಾವು ಬಂಗಾಳದಲ್ಲಿ ಹೆಚ್ಚುತ್ತಿರುವ ಸಂಘಟಿತ ಅಪರಾಧ ಮತ್ತು ಉದ್ದೇಶಿತ ಹಿಂಸಾಚಾರದ ಕುರಿತು ಗಮನವನ್ನು ಸೆಳೆದಿದ್ದೇವೆ. ಈಗ ಈ ವಿಷಯ ಬೆಂಬಲಿಸುವವರಿಗೆ ಮಾತ್ರ ಕೆಟ್ಟದೆನಿಸಬಹುದು, ಹಾಗಿರುವಾಗ ನಾವು ಏನು ಮಾಡಬೇಕು ?’ `ಮಿಶನ ಕಾಶ್ಮೀರ’, `ಹೈದರ’, `ಉಡತಾ ಪಂಜಾಬ’ `ಕಾಶ್ಮೀರ ಫೈಲ್ಸ’, `ದಿ ಕೇರಳ ಸ್ಟೋರಿ’ ಗಳಂತಹ ಚಲನಚಿತ್ರಗಳು ಈ ದೇಶದಲ್ಲಿ ಪ್ರದರ್ಶನಗೊಳ್ಳುತ್ತಿರುವಾಗ, ನಮ್ಮ ಚಲನಚಿತ್ರ ಪ್ರದರ್ಶನಗೊಳ್ಳುವುದರಲ್ಲಿ ಏನು ಹಾನಿ ? ನನ್ನ ಚಲನಚಿತ್ರ ಪೂರ್ಣಗೊಂಡಿದ್ದು, ಅದು ಏಪ್ರಿಲ್ 27 ರಂದು ಭಾರತದಾದ್ಯಂತ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
‘ದಿ ಡೈರಿ ಆಫ್ ವೆಸ್ಟ್ ಬೆಂಗಾಲ’ ಚಲನಚಿತ್ರ ಪ್ರದರ್ಶನಕ್ಕಾಗಿ ಸೆನ್ಸಾರ ಮಂಡಳಿ ಪ್ರಮಾಣಪತ್ರ ನೀಡಲು ಮೀನಮೇಷ ಎಣಿಸುತ್ತಿದೆ !‘ದಿ ಡೈರಿ ಆಫ್ ವೆಸ್ಟ ಬೆಂಗಾಲ’ ಚಲನಚಿತ್ರವು ಕೇಂದ್ರೀಯ ಚಲನಚಿತ್ರ ಪರಿಶೀಲನಾ ಮಂಡಳಿ (ಸೆನ್ಸಾರ ಮಂಡಳಿ) ನೋಡಿದ್ದು, ಅದಕ್ಕೆ ಮನ್ನಣೆ ದೊರಕಿದೆ; ಆದರೆ ಚಲನಚಿತ್ರ ಪ್ರದರ್ಶನಗೊಳ್ಳಲು ಬೋರ್ಡನಿಂದ ಪ್ರಮಾಣಪತ್ರ ನೀಡಲು ಮೀನಮೇಷ ಎಣಿಸಲಾಗುತ್ತಿರುವಂತೆ ಕಂಡು ಬರುತ್ತಿದೆ. ಸೆನ್ಸಾರ ಬೋರ್ಡಗೆ ಹಲವಾರು ಬಾರಿ ಹೋಗಿ ಬಂದು ನಿರ್ಮಾಪಕ-ನಿರ್ದೇಶಕರು ಬೇಸತ್ತಿದ್ದಾರೆ. ಸೆನ್ಸಾರ ಬೋರ್ಡ ಈ ಚಲನಚಿತ್ರದ ಬಗ್ಗೆ ಏನೂ ಹೇಳಲು ಸಿದ್ಧರಿಲ್ಲ. ಇದರಿಂದ ಚಲನಚಿತ್ರದ ನಿರ್ಮಾಪಕ-ನಿರ್ದೇಶಕರು ಆರ್ಥಿಕ ನಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಪಾದಕೀಯ ನಿಲುವು‘ಸೆನ್ಸಾರ್ ಮಂಡಳಿ ಕೇಂದ್ರ ಸರಕಾರದ ವ್ಯಾಪ್ತಿಯಡಿ ಬರುವಾಗ ಇಂತಹ ಪರಿಸ್ಥಿತಿ ಏಕೆ ಉಂಟಾಗುತ್ತದೆ ?’, ಎಂದು ಹಿಂದೂಗಳ ಮನಸ್ಸಿನಲ್ಲಿ ಪ್ರಶ್ನೆ ಮೂಡುತ್ತದೆ ! |
ಚಲನಚಿತ್ರದ ಜಾಹೀರಾತಿನಲ್ಲಿ (ಟ್ರೇಲರ್) ಏನಿದೆ ?
‘ದಿ ಡೈರಿ ಆಫ್ ವೆಸ್ಟ ಬೆಂಗಾಲ’ ಚಲನಚಿತ್ರವು ಬಂಗಾಳದ ರಾಜಕೀಯ ಮತ್ತು ಧಾರ್ಮಿಕ ಪರಿಸ್ಥಿತಿಯ ಚಿತ್ರಣವಾಗಿದೆ. ಬಂಗಾಳದಲ್ಲಿ, ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರ ಮುಸ್ಲಿಮರನ್ನು ತೃಣಮೂಲ ಕಾಂಗ್ರೆಸ್ ಸರಕಾರವು ತನ್ನ ರಾಜಕೀಯ ಲಾಭಕ್ಕಾಗಿ ರಾಜ್ಯದಲ್ಲಿ ನಿಯೋಜನಾಬದ್ಧವಾಗಿ ಉಳಿಸಿಕೊಳ್ಳುತ್ತಿದೆ. ಈ ಮುಸಲ್ಮಾನರು ಇಲ್ಲಿ ಹಿಂಸಾಚಾರವನ್ನು ಮಾಡುತ್ತಿರುವುದರಿಂದ ಹಿಂದೂಗಳಿಗೆ ಅಲ್ಲಿಂದ ಪಲಾಯನ ಮಾಡಬೇಕಾಗುತ್ತಿದೆ. ಹಿಂದೂಗಳ ಮೇಲೆ ಅತ್ಯಾಚಾರವಾಗುತ್ತಿದೆ. ಮಮತಾ ಬ್ಯಾನರ್ಜಿ ಸರಕಾರ ಮುಸಲ್ಮಾನರಿಗೆ ತಲೆಬಾಗುತ್ತಿದೆ. ಇದು ಚಲನಚಿತ್ರದ ಜಾಹೀರಾತಿನಲ್ಲಿ ತೋರಿಸಲಾಗಿದೆ.
ಸಂಪಾದಕೀಯ ನಿಲುವುಭಾರತದಲ್ಲಿ ಚಲನಚಿತ್ರವೊಂದು ಪ್ರದರ್ಶನಗೊಳ್ಳಬಾರದೆಂದು, ಭಾರತೀಯ ನಾಗರಿಕರಿಗೆ ಪಾಕಿಸ್ತಾನದಿಂದ ಬೆದರಿಕೆಗಳು ಬರುತ್ತಿದ್ದರೆ, ಅದು ಭಾರತಕ್ಕೆ ನಾಚಿಕೆಗೇಡು ! ಭಾರತ ಇವರ ವಿರುದ್ಧ ಕಠಿಣ ಉಪಾಯಗಳನ್ನು ಕೈಗೊಳ್ಳುವುದು ಅಗತ್ಯ! |