ಸೂಕ್ಷ್ಮ ಜಗತ್ತನ್ನು ಪರಿಚಯಿಸಿ ಈಶ್ವರನ ‘ಸರ್ವಜ್ಞತೆ’ ಎಂಬ ಗುಣದೊಂದಿಗೆ ಏಕರೂಪವಾಗಲು ಕಲಿಸುವ ಪರಾತ್ಪರ ಗುರು ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಕಲಿಯುಗದಲ್ಲಿ ಕೆಟ್ಟ ಶಕ್ತಿಗಳ ತೊಂದರೆಯ ವಿಷಯದಲ್ಲಿ ಸಮಾಜವು ಅಜ್ಞಾನಿ ಯಾಗಿದೆ. ಬುದ್ಧಿಪ್ರಾಮಾಣ್ಯವಾದಿಗಳು ‘ಜಗತ್ತಿನಲ್ಲಿ ಕೆಟ್ಟ ಶಕ್ತಿಗಳು ಎಂದು ಏನೂ ಇಲ್ಲವೆ ಇಲ್ಲ’, ಎಂದು ಹೇಳುತ್ತಾರೆ; ಏಕೆಂದರೆ ಅವರಿಗೆ ಈ ವಿಷಯದಲ್ಲಿ ಅಭ್ಯಾಸವೇ ಇಲ್ಲ. ನಮ್ಮೆಲ್ಲ ಸಾಧಕರಿಗೆ ಕೂಡ ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಹಾಗೂ ಅವರು ಪದೇ ಪದೇ ಮಾಡಿದ ಮಾರ್ಗ ದರ್ಶನದಿಂದ ಕೆಟ್ಟ ಶಕ್ತಿಗಳ ಸೂಕ್ಷ್ಮ ಜಗತ್ತಿನ ಪರಿಚಯವಾಯಿತು. ಪರಾತ್ಪರ ಗುರು ಡಾ. ಆಠವಲೆಯವರು ಈ ವಿಷಯದಲ್ಲಿ ಅನೇಕ ಸಂತರಲ್ಲಿಗೆ ಹೋಗಿ, ತಾನು ಸ್ವತಃ ಅಖಂಡ ಸಂಶೋಧನೆ ಮಾಡಿ ಸಾವಿರಾರು ಪ್ರಯೋಗಗಳಿಂದ ಕೆಟ್ಟ ಶಕ್ತಿಗಳ ನಿವಾರಣೆಗಾಗಿ ಅನೇಕ ಉಪಾಯಗಳನ್ನು ಕಂಡು ಹಿಡಿದರು. ‘ಕೆಟ್ಟ ಶಕ್ತಿಗಳು ಎಷ್ಟೇ ದೊಡ್ಡದಿದ್ದರೂ ಅವುಗಳಿಗಿಂತಲೂ ದೇವರ ಶಕ್ತಿ ತುಂಬಾ ದೊಡ್ಡದಿದೆ’, ಎಂಬುದನ್ನು ಅನೇಕ ಪ್ರಸಂಗಗಳಿಂದ ಸಾಧಕರಿಗೆ ತೋರಿಸಿ ಅವರು ಸಾಧನೆಯ ಮಹತ್ವವನ್ನು ಸಾಧಕರ ಮನಸ್ಸಿನಲ್ಲಿ ಬಿಂಬಿಸಿದರು. ತಮ್ಮ ೮೧ ವಯಸ್ಸಿನಲ್ಲಿಯೂ ಅವರ ಸಂಶೋಧನೆಯ ಕಾರ್ಯ ಮುಂದುವರಿದಿದೆ. ಪೃಥ್ವಿಯಲ್ಲಿ ಕೆಟ್ಟ ಶಕ್ತಿಗಳ ವಿಷಯದಲ್ಲಿ ಇಷ್ಟು ಆಳ ಅಭ್ಯಾಸ ಮಾಡುವವರಲ್ಲಿ ಪರಾತ್ಪರ ಗುರು ಡಾ. ಆಠವಲೆ ಏಕಮೇವಾದ್ವಿತೀಯರಾಗಿದ್ದಾರೆ.

ಸೂಕ್ಷ್ಮ ಜಗತ್ತಿನ ವಿಷಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ಅನುಭವವನ್ನು ಈ ಲೇಖನದಿಂದ ನಾವು ನೋಡಲಿಕ್ಕಿದ್ದೇವೆ. 

(ಭಾಗ ೧)

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

೧. ಪೂರ್ಣವೇಳೆ ಸಾಧನೆಗಾಗಿ ಗೋವಾದ ‘ಸುಖಸಾಗರ’ಕ್ಕೆ ಬಂದಾಗ ಸಾಧನೆ ಮತ್ತು ಸೇವೆ ಆರಂಭವಾಗಿ ಅದರ ಆನಂದ ಸಿಗಲು ಆರಂಭವಾಗುವುದು

‘ಇಸವಿ ೨೦೦೦ ದಿಂದ ನಾವು (ನಾನು ಮತ್ತು ನನ್ನ ಪತಿ ಡಾ. ಮುಕುಲ ಗಾಡಗೀಳ (ಈಗಿನ ಸದ್ಗುರು ಡಾ. ಮುಕುಲ ಗಾಡಗೀಳ) ಮತ್ತು ಮಗಳು ಕು. ಸಾಯಲೀ (ಈಗಿನ ಸೌ. ಸಾಯಲೀ ಸಿದ್ಧೇಶ ಕರಂದೀಕರ) ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಆರಂಭಿಸಿದೆವು. ಪೂರ್ಣವೇಳೆ ಸಾಧನೆಗಾಗಿ ನಮ್ಮ ಕುಟುಂಬವು ಗೋವಾದ ಫೋಂಡಾದ ‘ಸುಖಸಾಗರ’ಕ್ಕೆ ಬಂತು. ನಮ್ಮ ಸಾಧನೆ ಆರಂಭವಾಯಿತು. ಪ್ರಾರಂಭದಲ್ಲಿ ನಮಗೆ ಎಲ್ಲವೂ ಹೊಸದಾಗಿತ್ತು. ಕ್ರಮೇಣ ಸಾಧನೆ ಮತ್ತು ಸೇವೆಯಿಂದ ನಮಗೆ ಆನಂದ ಸಿಗತೊಡಗಿತು.

೨. ‘ಕೆಟ್ಟ ಶಕ್ತಿಗಳಿಂದ ಹೇಗೆ ತೊಂದರೆ ಆಗುತ್ತದೆ?’, ಎಂಬ ವಿಷಯದಲ್ಲಿ ಮೊದಲಬಾರಿ ಬಂದ ಅನುಭವ

೨ ಅ. ಓರ್ವ ಸಾಧಕಿಗೆ ಅನಿರೀಕ್ಷಿತವಾಗಿ ಆಧ್ಯಾತ್ಮಿಕ ತೊಂದರೆ ಆರಂಭವಾಯಿತು ಹಾಗೂ ಸಾಧಕಿಯು ದೊಡ್ಡ ಧ್ವನಿಯಲ್ಲಿ ದತ್ತನ ನಾಮಜಪಿಸಿದಾಗ ಅವಳ ತೊಂದರೆ ಕಡಿಮೆಯಾಗುವುದು : ನಾನು ಅಡುಗೆ ಮನೆಯಲ್ಲಿ ಸೇವೆಯಲ್ಲಿರುವಾಗ ನನ್ನ ಮುಂದೆ ಒಂದು ವಿಲಕ್ಷಣ ಹಾಗೂ ಅಷ್ಟರ ವರೆಗೆ ನಾನು ಯಾವತ್ತೂ ನೋಡಿರದ ಘಟನೆಯಾಯಿತು. ನಾನು ಮತ್ತು ಓರ್ವ ಸಾಧಕಿ ಚಪಾತಿ ಲಟ್ಟಿಸುವ ಸೇವೆಯನ್ನು ನಾಮಜಪಿಸುತ್ತಾ ಮಾಡುತ್ತಿದ್ದೆವು. ನಾವು ಸೇವೆಯಲ್ಲಿ ಮಗ್ನರಾಗಿದ್ದೆವು; ಆಗ ಅನಿರೀಕ್ಷಿತವಾಗಿ ನಮ್ಮ ಜೊತೆಗೆ ಸೇವೆ ಮಾಡುತ್ತಿದ್ದ ಓರ್ವ ಸಾಧಕಿಗೆ ತುಂಬಾ ಆಧ್ಯಾತ್ಮಿಕ ತೊಂದರೆ ಆರಂಭವಾಯಿತು. ನಮ್ಮ ಜೊತೆಗೆ ಸೇವೆ ಮಾಡುತ್ತಿದ್ದ ಅಜ್ಜಿ ಜೋರಾಗಿ ‘ಶ್ರೀಗುರುದೇವ ದತ್ತ |’, ಈ ನಾಮಜಪ ಉಚ್ಚರಿಸಿದರು, ಆಗ  ಏನಾಶ್ಚರ್ಯ ! ತಕ್ಷಣ ಆ ಸಾಧಕಿಯ ತೊಂದರೆ ಕಡಿಮೆಯಾಯಿತು. ಈ ಪ್ರಸಂಗದಿಂದ ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ನಮಗೆ ನಾಮದ ಸಾಮರ್ಥ್ಯದ ಅನುಭವವಾಯಿತು. ‘ಕೆಟ್ಟ ಶಕ್ತಿಗಳು ಹೇಗೆ ತೊಂದರೆ ಕೊಡುತ್ತವೆ ?’, ಎಂಬುದು ಅರಿವಾಯಿತು.

೩. ಕೆಟ್ಟ ಶಕ್ತಿಗಳ ತೊಂದರೆಗಳ ಅಭ್ಯಾಸಕ್ಕಾಗಿ ಒಂದು ವಿಭಾಗವನ್ನೇ ತೆರೆದ ಪರಾತ್ಪರ ಗುರುಗಳು

ಅಂದಿನಿಂದ ಪರಾತ್ಪರ ಗುರು ಡಾಕ್ಟರರು ಕೆಟ್ಟ ಶಕ್ತಿಗಳ ಅಭ್ಯಾಸ ಮಾಡಲು ಒಂದು ವಿಭಾಗವನ್ನೇ ತೆರೆದು ಕೊಟ್ಟರು. ಈಗಲೂ ನಮ್ಮ ಈ ಅಭ್ಯಾಸ ಮುಂದುವರಿದಿದೆ. ಇದರಿಂದ ‘ಸೂಕ್ಷ್ಮ ದೃಷ್ಟಿ ಇರುವ’, ‘ಸೂಕ್ಷ್ಮ ಪರೀಕ್ಷಣೆ ಮಾಡುವ’ ಹಾಗೂ ‘ಸೂಕ್ಷ್ಮ ಚಿತ್ರಗಳನ್ನು ಚಿತ್ರಿಸುವ’, ‘ಸೂಕ್ಷ್ಮ ವಿಷಯವನ್ನು ತಿಳಿಯಬಲ್ಲ’ ಸಾಧಕರ ವೈಶಿಷ್ಟ್ಯಪೂರ್ಣ ಗುಣವನ್ನೂ ಪರಾತ್ಪರ ಗುರು ಡಾಕ್ಟರರು ತೋರಿಸಿಕೊಟ್ಟರು. ಮುಂದೆ ೨೦೦೧ ರಲ್ಲಿ ಈ ರೀತಿ ‘ಸೂಕ್ಷ್ಮದ ವಿಷಯವನ್ನು ಅರಿಯಬಲ್ಲ ಸಾಧಕರ’ ಒಂದು ಗುಂಪು ತಯಾರಾಯಿತು.

೪. ಈಶ್ವರನೊಂದಿಗೆ ಏಕರೂಪವಾಗಬೇಕೆಂದು ದೈವೀ ಶಕ್ತಿಗಳ ಜೊತೆಗೆ ಕೆಟ್ಟ ಶಕ್ತಿಗಳ ಮಾಹಿತಿಯನ್ನೂ ಮಾಡಿಸಿಕೊಡುವ ಪರಾತ್ಪರ ಗುರು ಡಾ. ಆಠವಲೆ !

೪ ಅ. ಸೂಕ್ಷ್ಮದ ವಿಷಯ ತಿಳಿಯಲು ಸಾಧನೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆಯೆಂದು ಪರಾತ್ಪರ ಗುರು ಡಾ. ಆಠವಲೆಯವರು ಹೇಳುವುದು : ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮದ ಜ್ಞಾನವಿರುವ ಸಾಧಕರಾದ ನಮಗೆಲ್ಲರಿಗೆ ಯಾವಾಗಲೂ ಹೇಳುತ್ತಿದ್ದರು, ‘ನಮಗೆ ಸರ್ವಶಕ್ತಿಶಾಲಿ, ಸರ್ವವ್ಯಾಪಕ ಹಾಗೂ ಸರ್ವಜ್ಞ ಈಶ್ವರನೊಂದಿಗೆ ಏಕರೂಪವಾಗಲಿಕ್ಕಿದೆ, ಆದ್ದರಿಂದ ನಮಗೆ ಒಳ್ಳೆಯ, ಅಂದರೆ ದೈವೀ ಹಾಗೂ ಕೆಟ್ಟ ಶಕ್ತಿಗಳ ಮಾಹಿತಿಯೂ ಗೊತ್ತಿರಬೇಕು. ದೇವರಿಗೆ ಎಲ್ಲವೂ ತಿಳಿದಿರುತ್ತದೆ. ನಮಗೆ ಪ್ರತ್ಯಕ್ಷ ಕಾಣಿಸುವ ಈ ಸ್ಥೂಲ ಜಗತ್ತು ಕೇವಲ ಶೇ. ೩೦ ರಷ್ಟಿದೆ; ಸೂಕ್ಷ್ಮ ಜಗತ್ತಿನ ವ್ಯಾಪ್ತಿ ಶೇ. ೭೦ ರಷ್ಟಿರುತ್ತದೆ. ಈ ಸೂಕ್ಷ್ಮ ಜಗತ್ತನ್ನು ತಿಳಿದುಕೊಳ್ಳಲು ನಮಗೆ ಸಾಧ್ಯವಾಗಬೇಕು. ಆ ಜಗತ್ತು ಕೇವಲ ಸಾಧನೆಯಿಂದಲೇ ತಿಳಿಯುತ್ತದೆ. ಅದಕ್ಕಾಗಿ ಸಾಧನೆಯನ್ನು ಹೆಚ್ಚಿಸಬೇಕು.’’

೪ ಆ. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಲ್ಲಿ ಸೂಕ್ಷ್ಮ ಜಗತ್ತಿನ ವಿಷಯದಲ್ಲಿ ಜಿಜ್ಞಾಸೆಯನ್ನು ಜಾಗೃತಗೊಳಿಸುವುದು ಹಾಗೂ ಅದರಿಂದ ಸಾಧಕರಿಗೆ ಸೂಕ್ಷ್ಮ ಪರೀಕ್ಷಣೆ ಮಾಡುವುದರಲ್ಲಿನ ಆನಂದ ಸಿಗಲು ಆರಂಭವಾದುದು : ಪರಾತ್ಪರ ಗುರು ಡಾಕ್ಟರರು ಪದೇ ಪದೇ ಮಾಡಿದ ಅಮೂಲ್ಯ ಮಾರ್ಗದರ್ಶನದಿಂದ ನಮ್ಮಲ್ಲಿ ಸೂಕ್ಷ್ಮ ಜಗತ್ತಿನ ವಿಷಯವನ್ನು ತಿಳಿದುಕೊಳ್ಳುವ ಜಿಜ್ಞಾಸೆ ಜಾಗೃತವಾಯಿತು. ಜಿಜ್ಞಾಸೆ ಜಾಗೃತವಾದ ಕಾರಣ ನಮಗೆ ಸೂಕ್ಷ್ಮ ಪರೀಕ್ಷಣೆ ಮಾಡುವಾಗ ಆನಂದ ಸಿಗಲು ಆರಂಭವಾಯಿತು. ಈ ರೀತಿ ಪರಾತ್ಪರ ಗುರು ಡಾಕ್ಟರರು ನಮ್ಮ ಬೆರಳು ಹಿಡಿದು ನಮ್ಮನ್ನು ಕೆಟ್ಟ ಶಕ್ತಿಗಳ ವಿಶ್ವದೊಳಗೆ ಇಳಿಸಿದರು ಹಾಗೂ ಕಾಲಕಾಲಕ್ಕೆ ನಮ್ಮ ರಕ್ಷಣೆಯನ್ನೂ ಮಾಡಿದರು.

‘ಈಶ್ವರೀ ಚೈತನ್ಯದ ಅನುಭೂತಿಗಳ ಜೊತೆಗೆ ಕೆಟ್ಟ ಶಕ್ತಿಗಳ ತೊಂದರೆಗೂ ಅಷ್ಟೇ ಮಹತ್ವವನ್ನು ನೀಡಿ ಈಶ್ವರನ ‘ಸರ್ವಜ್ಞತೆ’, ಈ ಗುಣದೊಂದಿಗೆ ಏಕರೂಪವಾಗಲು ಕಲಿಸುವ ಪರಾತ್ಪರ ಗುರು ಡಾಕ್ಟರರಂತಹ ಗುರು ನಮಗೆ ಲಭಿಸುವುದು’, ನಮ್ಮ ಭಾಗ್ಯವೆಂದೇ ತಿಳಿಯುತ್ತೇವೆ. ಇಂತಹ ಸರ್ವಜ್ಞ ಶ್ರೀ ಗುರುಗಳಿಗೆ ನಮ್ಮ ತ್ರಿವಾರ ವಂದನೆಗಳು !’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ ಗೋವಾ. (೧೭.೧.೨೦೨೨)

(ಮುಂದುವರಿಯುವುದು)

ಸ್ಥೂಲ ಮತ್ತು ಸೂಕ್ಷ್ಮದ ವ್ಯತ್ಯಾಸ

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

‘ಸೂಕ್ಷ್ಮ ಕಾಲ’ಕ್ಕೆ ಕರ್ಮದ ಬಂಧನ ಇರುವುದಿಲ್ಲ; ಆದರೆ ‘ಸ್ಥೂಲ ಕಾಲ’ಕ್ಕೆ ಕರ್ಮಬಂಧನವಿರುತ್ತದೆ. ಸ್ಥೂಲದ ಪ್ರತಿಯೊಂದು ವಿಷಯವೂ ಪ್ರತ್ಯಕ್ಷ ಕಾಣಿಸುತ್ತಿರುವುದರಿಂದ ಅದಕ್ಕೆ ಕರ್ಮದ ಎಲ್ಲ ನಿಯಮಗಳು ಅನ್ವಯವಾಗುತ್ತವೆ; ಏಕೆಂದರೆ ಈ ವಿಷಯಗಳು ಪೃಥ್ವಿತತ್ತ್ವಕ್ಕೆ ಅಂದರೆ ಜಡತ್ವಕ್ಕೆ ಸಂಬಂಧಿಸಿವೆ. ಸೂಕ್ಷ್ಮದ್ದು ಹಾಗಿರುವುದಿಲ್ಲ; ಏಕೆಂದರೆ ಸೂಕ್ಷ್ಮದಲ್ಲಿ ಎಲ್ಲ ಕೃತಿಗಳು ಮಾನಸವಾಗಿರುತ್ತವೆ. ಇದರಲ್ಲಿ ನಮ್ಮ ಭಾವ ಮಹತ್ವದ್ದಾಗಿರುತ್ತದೆ. ನಮ್ಮ ಭಾವಕ್ಕನುಸಾರ ದೇವರು ನಮಗೆ ಫಲ ನೀಡುತ್ತಾನೆ. ಸ್ಥೂಲದಲ್ಲಿ ಕರ್ಮ ಪ್ರತ್ಯಕ್ಷ ಘಟಿಸುತ್ತಿರುವುದರಿಂದ ಅದು ವಾತಾವರಣದಲ್ಲಿ ತನ್ನ ಸ್ಥೂಲ ಪರಿಣಾಮವನ್ನು ಬಿಡುತ್ತದೆ; ಆದರೆ ಸೂಕ್ಷ್ಮದಕರ್ಮ ಹೆಚ್ಚಿನಂಶ ವಾಯುತತ್ತ್ವಕ್ಕೆ ಸಂಬಂಧಿಸಿರುವುದರಿಂದ ಅದು ಘಟಿಸುತ್ತದೆ ಹಾಗೂ ವಾತಾವರಣದಲ್ಲಿ ವಿಲೀನವಾಗುತ್ತದೆ. ಅದರ ಪರಿಣಾಮ

ನಮಗೆ ತಕ್ಷಣ ಸ್ಥೂಲದಿಂದ ಕಾಣಿಸುವುದಿಲ್ಲ; ಆದರೆ ಅದು ನಡೆಯುತ್ತಾ ಇರುತ್ತದೆ; ಸೂಕ್ಷ್ಮ ಕರ್ಮವನ್ನು ಸಂತರು ಮಾತ್ರ ತಿಳಿದುಕೊಳ್ಳಲು ಸಾಧ್ಯವಿದೆ. ಸೂಕ್ಷ್ಮ ಕಾರ್ಯವನ್ನು ಸ್ಥೂಲಕ್ಕಿಂತ ಹೆಚ್ಚು ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಈ ಕಾರ್ಯವನ್ನು ದೇವತೆಗಳು, ಮಹರ್ಷಿಗಳು, ಸಿದ್ಧರು ಹಾಗೂ ಸಂತರು ಮಾಡುತ್ತಾರೆ. ಹಿಂದೆ ಸೂಕ್ಷ್ಮ ಕಾಲವಿತ್ತು; ಆದರೆ ಈಗ ಸ್ಥೂಲ ಕಾಲ ಪ್ರಾರಂಭವಾಗಿದೆ. ಈಗ ಮೂರನೇ ಮಹಾಯುದ್ಧ ಸಮೀಪಿಸಿದೆ. ಈ ಹಿಂದೆ ೧೨ ವರ್ಷಗಳ ಕಾಲ ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮದಿಂದ ಸಪ್ತಪಾತಾಳದೊಂದಿಗೆ ಯುದ್ಧ ಮಾಡಿದರು. ಈಗ ದೃಶ್ಯ ಪರಿಣಾಮವೆಂದು ಸ್ಥೂಲದ ಅಪತ್ತುಗಳು ಪ್ರಾರಂಭವಾಗುತ್ತಿವೆ. ಆದ್ದರಿಂದ ಎಲ್ಲರೂ ಜಾಗರೂಕರಾಗಿ ಸ್ಥೂಲ ಕಾಲವನ್ನು ಎದುರಿಸಬೇಕಾಗಿದೆ ಹಾಗೂ ತಮ್ಮ ಧೈರ್ಯವನ್ನು ಹೆಚ್ಚಿಸಿಕೊಳ್ಳಬೇಕು.’

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.