೨೦೧೯ ರಲ್ಲಿ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨)ಇವರು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆಗಾಗಿ ಗೋವಾದ ರಾಮನಾಥಿಯ ಸನಾತನ ಆಶ್ರಮಕ್ಕೆ ಬಂದಿದ್ದರು. ಸೌ. ಸುಪ್ರಿಯಾ ಮಾಥೂರರು (ಆಧ್ಯಾತ್ಮಿಕ ಮಟ್ಟ ಶೇ. ೬೭) ಪೂರ್ಣವೇಳೆ ಸಾಧನೆ ಮಾಡುವವರಿಗೆ ಪ್ರಕ್ರಿಯೆಯನ್ನು ಮಾಡಿಸುತ್ತಾರೆ. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಶ್ರೀಮತಿ ಅಶ್ವಿನಿ ಪ್ರಭು ಹಾಗೂ ಇತರ ಸಾಧಕರಿಂದಾದ ತಪ್ಪುಗಳು ಹಾಗೂ ಮನಸ್ಸಿನ ಪ್ರಕ್ರಿಯೆಯ ಪ್ರಸಂಗಗಳನ್ನು ಅವರು ಹೇಳಿದಾಗ ಸೌ. ಸುಪ್ರಿಯಾ ಮಾಥೂರರು ಸಾಧಕರಿಗೆÉ ಮುಂದಿನ ದೃಷ್ಟಿಕೋನವನ್ನು ನೀಡಿದರು. ಶ್ರೀಮತಿ ಅಶ್ವಿನಿ ಪ್ರಭು ಇವರಿಗೆ ಪ್ರಕ್ರಿಯೆ ಯಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಮುಂದೆ ಕೊಡಲಾಗಿದೆ. ೨೫/೨೬ ನೇ ಸಂಚಿಕೆಯಲ್ಲಿ ಅದರ ಕೆಲವು ಭಾಗ ನೋಡಿದೆವು ಈ ವಾರದ ಅದರ ಮುಂದಿನ ಭಾಗ ನೋಡೋಣ.
ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/110597.html |
ಭಾಗ ೩
೭. ಪ್ರಸಂಗ- ಪರಿಪೂರ್ಣ ಸೇವೆಯನ್ನು ಮಾಡದೇ ಇರುವುದು
೭ ಅ. ದೃಷ್ಟಿಕೋನ
೧. ‘ಸೇವೆಯಲ್ಲಿ ತಮ್ಮ ಸಹಭಾಗಿತ್ವ ಎಷ್ಟಿದೆ, ಎನ್ನುವುದರ ಮೇಲೆ ‘ನಾವು ಸೇವೆಯನ್ನು ಹೇಗೆ ಮಾಡುತ್ತೇವೆ’, ಎನ್ನುವುದು ಸ್ಪಷ್ಟವಾಗುತ್ತದೆ.
೨. ಅಲ್ಪಸಂತುಷ್ಟಿಯಿಂದ ಇದ್ದರೆ ಜೀವ ಸವೆಸಿ ಸೇವೆ ಮಾಡಲು ಅಡಚಣೆ ಬರುತ್ತದೆ.
೩. ಈಶ್ವರನ ಚರಣಗಳಲ್ಲಿ ಸಮರ್ಪಿತಗೊಂಡು ಸೇವೆಯನ್ನು ಮಾಡಿದರೆ ಈಶ್ವರನ ಸಹಾಯ ಸಿಗುತ್ತದೆ. ನಾವು ಎಲ್ಲವನ್ನು ಸೇವೆಯ ನಿಯಮ, ವ್ಯಾಪ್ತಿ, ನಿರ್ದಿಷ್ಟ ಕಾರ್ಯಪದ್ಧತಿಗನುಸಾರ ಮಾಡುತ್ತಿರುತ್ತೇವೆ; ಆದರೆ ಮತ್ತಷ್ಟು ಉತ್ತಮವಾಗಿ ಸೇವೆಯಾಗಲು ಕೇಳಿ ಕೇಳಿ ಮಾಡಿದರೆ ಉತ್ತಮ ಪ್ರಕ್ರಿಯೆಯಾಗುತ್ತದೆ.
೪. ನಿರಂತರ ಕಲಿಯುವ ಆಸಕ್ತಿಯಿರುವುದು.
೫. ಸ್ವಂತ ವರದಿಯನ್ನು ಹೆಚ್ಚು ಗಾಂಭೀರ್ಯದಿಂದ ತೆಗೆದುಕೊಳ್ಳ ಬೇಕು. ಅಲ್ಪಸಂತುಷ್ಟಿ ಬರುತ್ತಿದೆ ಎಂದ ತಕ್ಷಣ ತಳಮಳ ಹೆಚ್ಚಿಸಲು ಸ್ವಯಂಸೂಚನೆ ನೀಡಬೇಕು.
೬. ಒಂದೇ ಸೇವೆಯನ್ನು ಸತತವಾಗಿ ಮಾಡಿದ್ದರಿಂದ ನನಗೆ ಆ ಸೇವೆ ಬರುತ್ತದೆ, ಕೃತಿಯ ಸ್ತರದಲ್ಲಿಯೂ ಯೋಗ್ಯ ರೀತಿಯಲ್ಲಿ ಆಗುತ್ತದೆ. ಆದುದರಿಂದ ಮುಂದೆ ನನ್ನಲ್ಲಿ ದೈವೀ ಗುಣವನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ‘ಆ ಸೇವೆ ನನಗೆ ಬರುತ್ತದೆ, ನಾನು ಮಾಡುತ್ತಿದ್ದೇನೆ’, ಎಂದರೆ ಇದರರ್ಥ ಪರಿಪೂರ್ಣತೆಯಲ್ಲ.
೭. ದೇಹಶುದ್ಧಿಗಾಗಿ ದೇವರು ಈ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ನೀಡಿದ್ದಾನೆ. ಆದುದರಿಂದ ಅದಕ್ಕೆ ಬೇಕಾಗುವಂತಹ ಪ್ರಕ್ರಿಯೆಯಾಗಬೇಕು, ಎನ್ನುವ ಸಕಾರಾತ್ಮಕ ವಿಚಾರವನ್ನು ನಿರಂತರವಾಗಿ ಮಾಡುವುದು ಮಹತ್ವದ್ದಾಗಿದ್ದು, ಇದರ ಚಿಂತನೆಯಾಗಬೇಕು.
೮. ಪ್ರಸಂಗ- ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಲ್ಲಿ ಪ್ರಾರಂಭದಲ್ಲಿದ್ದ ಉತ್ಸಾಹ ಕಡಿಮೆಯಾಗುವುದು
೮ ಅ . ದೃಷ್ಟಿಕೋನ
೧. ನಾವು ಶಾರೀರಿಕ ದೃಷ್ಟಿಯಿಂದ ದುರ್ಬಲರಾಗಿದ್ದರೂ, ಮನಸ್ಸಿನಲ್ಲಿ ಉತ್ಸಾಹವಿದ್ದರೆ ಪ್ರಯತ್ನಗಳಾಗುತ್ತವೆ. ಪ್ರಾರಂಭದಲ್ಲಿ ಮಾಡಲೇಬೇಕು ಎನ್ನುವ ಉತ್ಸಾಹವಿರುತ್ತದೆ. ಆದರೆ ನಂತರ ‘ಸ್ವಲ್ಪ ಸ್ವಲ್ಪವೇ ಮಾಡುತ್ತ ಹೋಗೋಣ’, ಎನ್ನುವ ವಿಚಾರ ಬರುವುದು ಎಂದರೆ ‘ನಿರಂತರವಾಗಿ ಒಂದೇ ಕೃತಿಯನ್ನು ಮಾಡಲು ನಿರಾಸಕ್ತಿ ಅಥವಾ ಬೇಸರ ಬರುವುದು’, ಎಂದು ಹೇಳಬಹುದು.
೨. ವಾಸ್ತವದಲ್ಲಿ ಮನಸ್ಸಿನಲ್ಲಿ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ ಪ್ರಕ್ರಿಯೆಯ ವಿಷಯದಲ್ಲಿ ಉತ್ಸಾಹವಿದ್ದರೆ ಆಧ್ಯಾತ್ಮಿಕ ಸ್ತರದ ನಾವೀನ್ಯತೆ ಸಿಗುತ್ತದೆ; ಆದರೆ ಮನೋರಾಜ್ಯದಲ್ಲಿ ವಿಹರಿಸಿದರೆ ಕೇವಲ ವಿಚಾರಗಳೇ ಆಗುತ್ತವೆ, ಕೃತಿಯಾಗುವುದಿಲ್ಲ. ಅದನ್ನೇ ಅಂತರ್ಮುಖತೆಯಿಂದ ಮಾಡಿದರೆ ಆಧ್ಯಾತ್ಮಿಕ ಸ್ತರದ ನಾವೀನ್ಯ ದೊರಕುತ್ತದೆ.
೩. ಪ್ರಕ್ರಿಯೆಯನ್ನು ಬುದ್ಧಿಯಿಂದ ಮಾಡಿದರೆ ನಿರುತ್ಸಾಹವೆನಿಸುತ್ತದೆ. ಸ್ವಲ್ಪ ಸ್ವಲ್ಪ ಮಾಡುತ್ತ ಹೋಗೋಣ ಎನ್ನುವ ವಿಚಾರದ ವೇಗದಲ್ಲಿ ಮುಂದುವರಿದರೆ ಬಹಳ ಸಮಯ ಬೇಕಾಗುತ್ತದೆ. ನಮಗೆ ಸಿಗುವ ಊರ್ಜೆಯು ಭಗವಂತನ ಅಂಶವಾಗಿರುತ್ತದೆ; ಆದ್ದರಿಂದ ಪ್ರಕ್ರಿಯೆಯನ್ನು ಅದೇ ವೇಗದಿಂದ ಮಾಡಬೇಕು.’
– ಶ್ರೀಮತಿ ಅಶ್ವಿನಿ ಪ್ರಭು, ಮಂಗಳೂರು ಸೇವಾಕೇಂದ್ರ, ಮಂಗಳೂರು. (೧೩.೭.೨೦೧೯)