ಕೆಲವು ಸಲ ಸಾಧಕರ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗ ಬೇಕೆಂದು ಉಪಾಯ ಎಂದು ಸಂತರು ಅಥವಾ ಜವಾಬ್ದಾರ ಸಾಧಕರು ಅವರಿಗೆ ವಿಶಿಷ್ಟ ನಾಮಜಪ ಮಾಡಲು ಹೇಳುತ್ತಾರೆ. ನಮ್ಮಿಂದ ಉಪಾಯಕ್ಕಾಗಿ ಹೇಳಿರುವ ನಾಮಜಪ ಆಗುವುದಿಲ್ಲ. ನಮ್ಮಿಂದ ‘ಪರಮ ಪೂಜ್ಯ ಡಾಕ್ಟರ’, ‘ಸಚ್ಚಿದಾನಂದ ಪರಬ್ರಹ್ಮ’ ಈ ನಾಮಜಪ ತನ್ನಿಂದತಾನೇ ಆಗುತ್ತಿರುವುದರಿಂದ ನಾವು ಅದನ್ನು ಮಾಡುತ್ತೇವೆ, ಎಂದು ಸಾಧಕರು ನಂತರ ಹೇಳುತ್ತಾರೆ.
ಇಲ್ಲಿ ಸಾಧಕರು ಇದನ್ನು ಗಮನದಲ್ಲಿಡಬೇಕೇನೆಂದರೆ, ತಮಗೆ ಉಪಾಯ ಆಗಬೇಕೆಂದು ಹೇಳಿರುವ ನಾಮಜಪವು ತಮ್ಮ ಅಧ್ಯಾತ್ಮಿಕ ತೊಂದರೆಯ ನಿವಾರಣೆಗಾಗಿ ಅವಶ್ಯಕವಾಗಿರುತ್ತದೆ. ಆದ್ದರಿಂದ ಅವರು ತನ್ನಿಂದತಾನೇ ಆಗುವ ನಾಮಜಪ ಮಾಡದೆ ಉಪಾಯಕ್ಕಾಗಿ ಹೇಳಿರುವ ನಾಮಜಪವನ್ನೇ ಮಾಡಬೇಕು.
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೬.೨.೨೦೨೪)