೧. ಬಾಂಗ್ಲಾದೇಶದ ಅಸುರಕ್ಷಿತ ಹಿಂದೂಗಳು !
ದಿನಾಜ್‌ಪುರದ (ಬಾಂಗ್ಲಾದೇಶ) ಪುರಾತನ ಕಾಂತಜ್ಜು ಹಿಂದೂ ದೇವಾಲಯವನ್ನು ಮುಸಲ್ಮಾನರು ವಶ ಪಡಿಸಿದ್ದು ದೇವಾಲಯದ ಭೂಮಿಯಲ್ಲಿ ಮಸೀದಿ ಕಟ್ಟಲಾಗುತ್ತಿದೆ. ಈ ಕಟ್ಟಡ ಕಾಮಗಾರಿಯನ್ನು ಇಲ್ಲಿನ ಮುಸಲ್ಮಾನ ಸಂಸದ ಮುಹಮ್ಮದ್ ಝಕಾರಿಯಾ ಝಕಾ ಅವರು ಪ್ರಾರಂಭಿಸಿದರು.
೨. ನಂದೂರ್ಬಾರ್ ಭಾರತದಲ್ಲಿದೆಯೋ ಪಾಕಿಸ್ತಾನದಲ್ಲಿ ?
ರಂಜಾನ ಸಮಯದಲ್ಲಿ ಮನೆಯ ದೂರದರ್ಶನ ಚಾನೆಲ್ ಗಳು ಅಥವಾ ಇತರ ಧ್ವನಿ ಸಾಧನಗಳಿಂದ ಮುಸಲ್ಮಾನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮಹಾರಾಷ್ಟ್ರದ ನಂದೂರ್‌ಬಾರ್‌ನ ಘರಕುಲ ಬಡಾವಣೆಯ ಮಹೇಂದ್ರ ಜವೇರಿ ಅವರಿಗೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.
೩. ಭಾರತದಲ್ಲಿ ಲಜ್ಜಾಸ್ಪದ ಪರಿಸ್ಥಿತಿ !
ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ದೇಶಾದ್ಯಂತ ನೀತಿ ಸಂಹಿತೆ ಜಾರಿಯಾದ ನಂತರ ಮಹಾರಾಷ್ಟ್ರದಲ್ಲಿ ರಾಜ್ಯ ಚುನಾವಣಾ ಆಯೋಗವು ಇದುವರೆಗೆ ೨೩ ಕೋಟಿ ೭೦ ಲಕ್ಷ ಮೌಲ್ಯದ ಲೆಕ್ಕವಿಲ್ಲದ ನಗದು, ಮದ್ಯ, ಮಾದಕ ದ್ರವ್ಯ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದೆ.
೪. ಬ್ರಿಟನ್ ಇದಕ್ಕಿಂತ ಹೆಚ್ಚಿನ ವ್ಯವಸ್ಥೆಯನ್ನು ಒದಗಿಸುವುದು ಅಪೇಕ್ಷಿತವಿದೆ !
ಹಿಂದೂಗಳ ಬೇಡಿಕೆಯ ನಂತರ ದೇಶದ ೪೦೦ ದೇವಸ್ಥಾನ ಗಳ ಭದ್ರತೆಗಾಗಿ ೫೦ ಕೋಟಿ ರೂ.ಗಳನ್ನು ವಿನಿಯೋಗಿಸಲು ಬ್ರಿಟನ್ ಸರಕಾರ ನಿರ್ಧರಿಸಿದೆ. ಬ್ರಿಟನ್‌ನಲ್ಲಿ ದೇವಸ್ಥಾನಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ.
೫. ಮಹಾರಾಷ್ಟ್ರದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಸಂತಾಪಜನಕ ಸಂಗತಿ !
ಶಿರಸೋಲಿಯಲ್ಲಿ (ಜಳಗಾಂವ್ ಜಿಲ್ಲೆ), ಶಿವಾಜಿ ಜಯಂತಿಯಂದು ತೆಗೆದ ಮೆರವಣಿಗೆಯು ವರಾಡೆ ಗಲ್ಲಿಯ ಮಸೀದಿಯ ಮುಂದೆ ಸಾಗುತ್ತಿದ್ದಾಗ, ೩೫ ರಿಂದ ೪೦ ಮತಾಂಧ ಮುಸಲ್ಮಾನರು ಮೆರವಣಿಗೆಯ ಮೇಲೆ ಇದ್ದಕ್ಕಿದ್ದಂತೆ ಕಲ್ಲು ತೂರಾಟ ನಡೆಸಿದರು. ಇದರಲ್ಲಿ ಪೊಲೀಸರು ಸೇರಿದಂತೆ ೬ ಜನ ಹಿಂದುತ್ವನಿಷ್ಠರು ಗಾಯಗೊಂಡಿದ್ದಾರೆ.
೬. ಢೋಂಗಿ ಜಾತ್ಯತೀತರು ಏಕೆ ಮಾತನಾಡುವುದಿಲ್ಲ ?
ಉತ್ತರಪ್ರದೇಶದ ಕುಖ್ಯಾತ ಗೂಂಡಾ ಮುಖ್ತಾರ್ ಅನ್ಸಾರಿಯ ಸಾವಿನ ನಂತರ, ಅವನ ಶವವನ್ನು ಗಾಜಿಪುರದ ಸ್ಮಶಾನದಲ್ಲಿ ಹೂಳಲಾಯಿತು. ಈ ಸಮಯದಲ್ಲಿ ೩೦ ಸಾವಿರಕ್ಕೂ ಹೆಚ್ಚು ಮುಸಲ್ಮಾನರು ಅವನ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಮತ್ತು ಸ್ಮಶಾನದ ಹೊರಗೆ ಉಪಸ್ಥಿತರಿದ್ದರು.
೭. ಇಂತಹ ಅಭ್ಯರ್ಥಿಗಳು ದೇಶಕ್ಕೆ ಲಜ್ಜಾಸ್ಪದ !
ಚಂದ್ರಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಅಖಿಲ ಭಾರತೀಯ ಮಾನವತಾ ಪಕ್ಷದ ಅಭ್ಯರ್ಥಿ ವನಿತಾ ರಾವುತ್ ಅವರು ಮತದಾರರಿಗೆ ಪಡಿತರವಾಗಿ ವಿಸ್ಕಿ ಮತ್ತು ಬಿಯರ್ ನೀಡುವುದಾಗಿ ಭರವಸೆ ನೀಡಿದ್ದಾರೆ.