ಜ್ಯೋತಿಷ್ಯ ವಿಶ್ಲೇಷಣೆ : ಬರುವ ಹಿಂದೂ ವರ್ಷದಲ್ಲಿ ಹಿಂದೂಗಳ ರಾಜಕೀಯ, ರಾಜತಾಂತ್ರಿಕತೆ, ಹಾಗೂ ತಾಂತ್ರಿಕ ಸಶಕ್ತಿಕರಣವಾಗಲಿದೆ !

ಚೈತ್ರ ಶುಕ್ಲ ಪಾಡ್ಯ (೯ ಏಪ್ರಿಲ್‌ ೨೦೨೪) ದಿಂದ ಹಿಂದೂ ನವವರ್ಷದ (ಸಂವತ್ಸರ ೨೦೮೧) ನಿಮಿತ್ತ

ಪಾರಮಾರ್ಥಿಕ ದೃಷ್ಟಿಯಿಂದ ಕಾಲ ಅನಂತ ಮತ್ತು ಅವಿಭಾಜ್ಯವಾಗಿದೆ. ಆದರೂ ನಮ್ಮ ಹಿಂದೂ ಸನಾತನೀ ಋಷಿಗಳಿಂದ ಲೌಕಿಕ ಮತ್ತು ವ್ಯಾವಹಾರಿಕ ದೃಷ್ಟಿಯಿಂದ ಕಾಲದ ಸಮಾನಾರ್ಥಕ ‘ಸಮಯ’ವನ್ನು ವಿಭಿನ್ನ ಘಟಕಗಳಲ್ಲಿ ಮತ್ತು ಚತುರ್ಯುಗ (ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ) ಸಹಸ್ರಾಬ್ದಿ, ಶತಾಬ್ದಿ, ದಶಕ, ವರ್ಷ, ಮಾಸ, ದಿನ, ಘಟಿಕಾ, ಪಲ ಮತ್ತು ವಿಪಲ ಮುಂತಾದವುಗಳಲ್ಲಿ ವಿಂಗಡಿಸಿ ಕಾಲಗಣನೆಯ ಸರಿಯಾದ ಪದ್ಧತಿಯನ್ನು ಪ್ರತಿಪಾದಿಸಲಾಗಿದೆ. ಪ್ರಾಚ್ಯ ಮತ್ತು ಜ್ಯೋತಿಷ್ಯಶಾಸ್ತ್ರದ ಗ್ರಂಥಗಳಲ್ಲಿ ವರ್ಣಿಸಿರುವುದರ ಪ್ರಕಾರ, ಬ್ರಹ್ಮದೇವರಿಂದ ಸೃಷ್ಟಿಯ ರಚನೆ ಚೈತ್ರ ಶುಕ್ಲ ಪಾಡ್ಯದಂದು ಆರಂಭವಾಯಿತು ಮತ್ತು ಅಂದಿನಿಂದಲೇ ಕಾಲಗಣನೆಯ ಪದ್ಧತಿ ಕೂಡ ಪ್ರಾರಂಭವಾಯಿತು. ಇದಕ್ಕೆ ಮುಖ್ಯ ಕಾರಣ ಏನೆಂದರೆ ಚೈತ್ರ ಶುಕ್ಲ ಪಾಡ್ಯದಿಂದ ನವರಾತ್ರಿಯಲ್ಲಿ ಆದಿ ಶಕ್ತಿ ಭಗವತಿಯ ಪೂಜೆಯೊಂದಿಗೆ ಹಿಂದೂ ಹೊಸ ವರ್ಷ ಆರಂಭವಾಯಿತು. ಚೈತ್ರ ಶುಕ್ಲ ಪಾಡ್ಯದಿಂದ ಹಿಂದೂ ಹೊಸವರ್ಷದ ಈ ಆರಂಭ ಅತ್ಯಂತ ಶಾಸ್ತ್ರೀಯ, ನೈಸರ್ಗಿಕ, (ಪ್ರಾಕೃತಿಕ) ವೈಜ್ಞಾನಿಕ ಮತ್ತು ಸಹಜವಾಗಿದೆ ಅದನ್ನು ದೇಶದ ವಿಭಿನ್ನ ರಾಜ್ಯಗಳಲ್ಲಿ ಮತ್ತು ಹಿಂದೂ ಸಮಾಜದಲ್ಲಿ ಬೇರೆ ಬೇರೆ ಹೆಸರುಗಳಿಂದ ಉದಾ. ಗುಡಿಪಾಡ್ವಾ (ಮಹಾರಾಷ್ಟ್ರ/ಗುಜರಾತ), ಚೇತಿಚಂಡ (ಸಿಂಧಿ ಜನಾಂಗ), ಯುಗಾದಿ (ಕರ್ನಾಟಕ), ಉಗಾದಿ (ಆಂಧ್ರಪ್ರದೇಶ/ತೆಲಂಗಾಣ), ಸಂವತ್ಸರ ಪಾಡವೋ (ಕೇರಳ ಮತ್ತು ಗೋವಾದ ಕೊಂಕಣಿ ಜನಾಂಗ), ನವರೇಹ (ಜಮ್ಮು ಕಾಶ್ಮೀರ) ಸಜೀಪು  ನೊಂಗಮಾ (ಮಣಿಪುರ್‌), ವೈಶಾಖಿ (ಪಂಜಾಬ/ಹರಿಯಾಣ), ನವವರ್ಷ (ಬಂಗಾಳ), ಜ್ಯೋತಿಷ್ಯ ದಿನ ಮುಂತಾದ ಹೆಸರಿನಿಂದ ಗುರುತಿಸಿ ಆಚರಿಸುತ್ತಾರೆ. ಈ ಸಮಯದಲ್ಲಿ ಸಂಪೂರ್ಣ ಪ್ರಕೃತಿಯಲ್ಲಿ ಹೊಸ ಚೈತನ್ಯ, ಹೊಸ ಶಕ್ತಿ ಮತ್ತು ಹೊಸ ಉತ್ಸಾಹದ ಸಂಚಾರವಾಗುತ್ತದೆ.

ಆಚಾರ್ಯ ಡಾ.ಅಶೋಕ ಕುಮಾರ ಮಿಶ್ರಾ

ಮುಂಬರುವ ಹಿಂದೂ ನವವರ್ಷ

ಇದೇ ಬರುವ ಚೈತ್ರ ಶುಕ್ಲ ಪಾಡ್ಯ (೯ ಏಪ್ರಿಲ್‌ ೨೦೨೪) ದಿಂದ ಹಿಂದೂ ನವವರ್ಷ (ಸಂವತ್ಸರ ೨೦೮೧) ಆರಂಭವಾಗುತ್ತದೆ.

ಸಂಖ್ಯಾಶಾಸ್ತ್ರದ ದೃಷ್ಟಿಯಿಂದ ಮುಂಬರುವ ಹಿಂದೂ ನವವರ್ಷದ ಫಲ

ಸಂಖ್ಯಾಶಾಸ್ತ್ರದ ದೃಷ್ಟಿಯಿಂದ ಮುಂಬರುವ ಹಿಂದೂ ನವವರ್ಷದ ಸಂಖ್ಯೆ ೦೨ (೨+೦+೮+೧= ೧೧, ೧+೧= ೨) ಆಗುತ್ತದೆ. ಅದು ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಚಂದ್ರನಿಗೆ ಸಂಬಂಧಿತ ಸಂಖ್ಯೆ ಆಗಿದೆ. ನವಗ್ರಹದಲ್ಲಿ ಚಂದ್ರನಿಗೆ ರಾಣಿ ಎಂದು ಹೇಳುತ್ತ ಇದನ್ನು ನಮ್ಮ ಮನಸ್ಸು ಮತ್ತು ಭಾವನೆಗಳಿಗೆ ಜೋಡಿಸಿದ್ದಾರೆ. ‘ಚಂದ್ರಮ ಮನಸೋ ಜಾತಃ |’

ಚಂದ್ರನು ಜಲ, ಶಾಂತಿ, ಮಾತೃಭೂಮಿ, ನಿರಂತರ ಪರಿವರ್ತನೆಯ ಮೂಲವಾಗಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಅತಿವೃಷ್ಟಿ, ಜಲಪ್ರಳಯದ ಸಾಧ್ಯತೆಯಿದೆ. ಹಿಂದೂ ಸಮಾಜವು ಭಾವನಾಪ್ರದಾನವಾಗಿರದೆ. ಸಮಾಜ ಮತ್ತು ರಾಷ್ಟ್ರದಲ್ಲಿ ವೇಗ ವಾಗಿ ಬದಲಾವಣೆಯಾಗುವ ಸಂಕೇತವಿದೆ. ಭೂ-ರಾಜ ನೈತಿಕ ಪರಿಸ್ಥಿತಿಗಳಲ್ಲಿ ಬದಲಾವಣೆ ಮತ್ತು ಅಸ್ಥಿರತೆ ಇರಲಿದೆ, ಸನಾತನ ಹಿಂದೂ ಸಮಾಜವು ಮಾತೃಭೂಮಿಯ ಕುರಿತು ಮತ್ತು ಹೆಚ್ಚು ಭಾವದಿಂದ ಸಮರ್ಪಿತವಾಗಲಿದೆ. ರಾಷ್ಟ್ರವಾದಿ ಶಕ್ತಿಗಳು, ರಾಷ್ಟ್ರ ಪ್ರೇಮಿಗಳು ಮತ್ತು ಧರ್ಮಪ್ರೇಮಿಗಳ ಭಾವ ಶಕ್ತಿ ಮತ್ತು ಮನೋಬಲ ಹೆಚ್ಚೆಚ್ಚು ವೃದ್ಧಿಯಾಗುವುದು.

ಮುಂಬರುವ ಹಿಂದೂ ನವವರ್ಷದಲ್ಲಿ ಗ್ರಹಗಳ ಸ್ಥಿತಿ

ಹೊಸ ಸಂವತ್ಸರದಲ್ಲಿ ಹೆಚ್ಚಿನ ಸಮಯ ಗ್ರಹಗಳ ಗುರು ಬೃಹಸ್ಪತಿಯು ಕಾಲಪುರುಷನ ಕುಂಡಲಿಯ ದ್ವಿತೀಯ ಭಾವದಲ್ಲಿ ಶತ್ರು ರಾಶಿ ವೃಷಭದಲ್ಲಿ ಇರಲಿದ್ದಾನೆ. ಬೃಹಸ್ಪತಿಯ ಈ ಸ್ಥಿತಿ ಲೌಕಿಕ-ಪಾರಮಾರ್ಥಿಕ ಮಿಶ್ರಫಲವನ್ನು ಸೂಚಿಸುತ್ತದೆ. ಸಮಾಜದಲ್ಲಿ ಭೌತಿಕತೆಯ ವೃತ್ತಿ ಕೂಡ ಪ್ರತಿಫಲಿಸುತ್ತದೆ. ಹಿಂದೂ ಸಮಾಜವು ಆಧ್ಯಾತ್ಮಿಕತೆಯ ಜೊತೆಗೆ ಭೌತಿಕ ಮತ್ತು ಆರ್ಥಿಕ ಸಂಪನ್ನತೆ ಮತ್ತು ಸೌಲಭ್ಯದ ಕಡೆಗೆ ತೀವ್ರ ವೇಗದಿಂದ ಮುಂದೆ ಸಾಗುವುದು.

ಹೊಸ ಸಂವತ್ಸರದಲ್ಲಿ ಸಂಪೂರ್ಣ ವರ್ಷ ಕರ್ಮಾಧ್ಯಕ್ಷ ಶನಿಯು ಗ್ರಹಕಾಲ ಪುರುಷನ ಕುಂಡಲಿಯಲ್ಲಿ ಏಕಾದಶ ಭಾವದಲ್ಲಿ ತನ್ನ ಸ್ವರಾಶಿ ಕುಂಭದಲ್ಲಿ ಇರಲಿದ್ದಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿ ಮತ್ತು ರಾಹು ರಾಜನೀತಿ, ತಂತ್ರಗಾರಿಕೆ, ತಂತ್ರಜ್ಞಾನ ಸಶಕ್ತಿಕರಣದ ಮೂಲವೆಂದು ತಿಳಿಯಲಾಗುತ್ತದೆ. ಹಿಂದೂ ಸಮಾಜಕ್ಕೆ ನ್ಯಾಯ ಸಿಗುವುದು ಮತ್ತು ಸಮಾಜವು ಮಾನಸಿಕ ರೂಪದಿಂದ ಇನ್ನಷ್ಟು ಸಶಕ್ತ ಮತ್ತು ತನ್ನ ಶ್ರಮ ಶಕ್ತಿ ಜಾಗೃತವಾಗಿಡಲಿದೆ

ಹೊಸ ಸಂವತ್ಸರದಲ್ಲಿ ರಾಹು ಕೂಡ ಸಂಪೂರ್ಣ ವರ್ಷ ಕಾಲ ಪುರುಷನ ಕುಂಡಲಿಯ ದ್ವಾದಶ ಭಾವದಲ್ಲಿ ಮೀನ ರಾಶಿಯಲ್ಲಿ ಇರುವನು ಮತ್ತು ಕೇತುವು ಕಾಲಪುರುಷನ ಕುಂಡಲಿಯ ಷಷ್ಠಮ್‌ (೬) ಭಾವದಲ್ಲಿ ಕನ್ಯಾ ರಾಶಿಯಲ್ಲಿ ಇರುವನು. ಮೀನ ರಾಶಿಯು ಧರ್ಮದ ಅಧಿಷ್ಟಾತ ಗ್ರಹ ಬೃಹಸ್ಪತಿಯ ರಾಶಿ ಆಗಿದೆ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲಕ್ಕಿಂತ ಶ್ರೇಷ್ಠ ರಾಶಿ ಎನ್ನಲಾಗುತ್ತಿದೆ. ರಾಹುವಿನ ಈ ಸ್ಥಿತಿ ಸ್ವಲ್ಪ ಏರಿಳಿತದ ಜೊತೆಗೆ ರಾಜನೀತಿ ಮತ್ತು ರಾಜತಾಂತ್ರಿಕತೆ ಹಿಂದೂ ಧರ್ಮದ ಪಕ್ಷದಲ್ಲಿ ಮತ್ತು ಹಿತದಲ್ಲಿ ಇರುವುದು.

ಹೊಸ ಮತ್ತು ಚಿರಕಾಲೀನ ನ್ಯಾಯಾಂಗ ವಾದ-ವಿವಾದ ಮರುಕಳಿಸುವುದು ಮತ್ತು ಹಳೆಯ ವಿವಾದದ ಪರಿಹಾರ ಹಿಂದೂಗಳ ಪಕ್ಷದಲ್ಲಿ ಆಗುವುದು ಕಾಣುತ್ತಿದೆ. ರಾಹು ತಥಾಕಥಿತ ಧಾರ್ಮಿಕ ಢೋಂಗಿತನವನ್ನು ಬೆಳಕಿಗೆ ತರುವನು. ಧಾರ್ಮಿಕ ಕ್ಷೇತ್ರದಲ್ಲಿ ಬಹಳಷ್ಟು ಏರಿಳಿತಗಳು ಪ್ರತಿಫಲಿಸುವ ಸಾಧ್ಯತೆಯಿದೆ. ಕೇತುವು ರೋಗ, ಋಣ ಮತ್ತು ಶತ್ರುತ್ವದಲ್ಲಿ ವೃದ್ಧಿ ಮಾಡಬಹುದು.

ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಇತರ ಗ್ರಹಗಳ ಸ್ಥಿತಿ ಕೂಡ ಆಪತ್ಕಾಲಿಕ ರೂಪದಿಂದ ಹಿಂದೂ ಸಮಾಜವನ್ನು ಸಕಾರಾತ್ಮಕ ರೂಪದಿಂದ ಕೂಡ ಪ್ರಭಾವಿತಗೊಳಿಸುವುದು ಏಕೆಂದರೆ ದೊಡ್ಡ ಗ್ರಹ ಬೃಹಸ್ಪತಿ, ಶನಿ ಮತ್ತು ರಾಹುವಿನ ಸ್ಥಿತಿ ಸಕಾರಾತ್ಮಕವಾಗಿದೆ.

ಹಿಂದೂಗಳಿಗೆ ಆಶಾದಾಯಕ

ಇಲ್ಲಿ ಆಶಿಸುತ್ತೇನೆ ಏನೆಂದರೆ ಹಿಂದೂ ನವ ವರ್ಷವು ಸಮಸ್ತ ಸನಾತನಿ ಹಿಂದೂಗಳ ಜೀವನದಲ್ಲಿ ಹೊಸ ಚೈತನ್ಯ, ಹೊಸ ಶಕ್ತಿ ಮತ್ತು ಹೊಸ ಉತ್ಸಾಹವನ್ನು ಸಂಚಾರಗೊಳಿಸಲಿ ಮತ್ತು ಹಿಂದೂ ಸಮಾಜವು ಪರಂಪರೆಯ ಪ್ರಕಾರ ಮಾನವೀಯತೆಗೆ ಒಂದು ಹೊಸ ದಿಶೆ ಪ್ರದಾನಿಸುತ್ತಲಿರುವುದು ಮತ್ತು ಹೆಚ್ಚು ಸಕ್ಷಮವಾಗುವುದು.

ಜಯತು ! ಮಂಗಲಂ ಭವತು  ! ಶುಭ ಮಸ್ತು !

– ಆಚಾರ್ಯ ಡಾ. ಅಶೋಕ ಕುಮಾರ ಮಿಶ್ರಾ, ಪಾಟಲೀಪುತ್ರ, ಬಿಹಾರ.