ಮುಸ್ಲಿಂ ಲೀಗ್‌ನ್ನು ತಿಳಿದುಕೊಳ್ಳಿರಿ !

೧. ಮುಂಬೈಯಲ್ಲಿ ಅಸುರಕ್ಷಿತ ಹಿಂದೂಗಳು !

ಮುಂಬೈನ ಮಢ ಕಡಲತೀರದ ಸಮೀಪದ ಹಿಂದೂ ಬಹು ಸಂಖ್ಯಾತ ಗ್ರಾಮವಾದ ಮಢ-ಲೋಚರ್‌ನಲ್ಲಿ ಸ್ಥಳೀಯ ಬೆಸ್ತರಿಗೆ ಹೋಲಿಕಾ ದಹನ್‌ ಮತ್ತು ಅದಕ್ಕೆ ಸಂಬಂಧಿತ ಪದ್ಧತಿಗಳನ್ನು ಪಾಲಿಸಲು ಕ್ರೈಸ್ತರು ವಿರೋಧಿಸಿದರು. ಇದರೊಂದಿಗೆ ಬೆಸ್ತ ಬಾಂಧವರಿಗೆ ಕೊಲೆ ಬೆದರಿಕೆ ಸಹ ಹಾಕಿದ್ದಾರೆ.

೨. ಮುಸ್ಲಿಂ ಲೀಗ್‌ನ್ನು ತಿಳಿದುಕೊಳ್ಳಿರಿ !

‘ಸಿಈ’ ವಿರುದ್ಧ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದೆ. ನಿರಾಶ್ರಿತ ಮುಸಲ್ಮಾನರಿಗೆ ಪೌರತ್ವವನ್ನು ನಿರಾಕರಿಸಿದ್ದರಿಂದ ಈ ಕಾನೂನನ್ನು ನಿಷೇಧಿಸಬೇಕೆಂದು ಅದು ಒತ್ತಾಯಿಸಿದೆ.

೩. ಭಾರತವೇನು ‘ಪಾಕಿಸ್ತಾನ’ವೇ ?

ಮುಸಲ್ಮಾನರ ಪವಿತ್ರ ತಿಂಗಳ ರಮಜಾನ್‌ ದೃಷ್ಟಿಯಿಂದ, ಕರ್ನಾಟಕ ರಾಜ್ಯದ ಕಾಂಗ್ರೆಸ್‌ ಸರಕಾರವು ಶಾಲೆಗಳ ಸಮಯವನ್ನು ಬದಲಾಯಿಸಿದೆ. ಇಂತಹ ಆದೇಶವನ್ನು ರಾಜ್ಯದ ಶಾಲೆಗಳಿಗೆ ನೀಡಲಾಗಿದೆ. ಆಂಧ್ರಪ್ರದೇಶದ ಶಾಲಾ ಶಿಕ್ಷಣ ಇಲಾಖೆಯು ಸಹ ಉರ್ದು ಮಾಧ್ಯಮದ ಶಾಲೆಗಳ ಸಮಯವನ್ನು ಬದಲಾಯಿಸಿದೆ.

೪. ಪಾಕಿಸ್ತಾನ ಮತ್ತು ಅಮೆರಿಕಾ ಇವರಿಗೆ ಅನಾವಶ್ಯಕ ತರಲೆ ಏಕೆ ಬೇಕು ?

ಪೌರತ್ವ ತಿದ್ದುಪಡಿ ಕಾಯ್ದೆಯು ಧಾರ್ಮಿಕ ಶ್ರದ್ಧೆಯ ಆಧಾರದ ಮೇಲೆ ಜನರ ನಡುವೆ ತಾರತಮ್ಯವನ್ನು ಮಾಡುತ್ತಿದೆ ಎಂದು ಪಾಕಿಸ್ತಾನ ಟೀಕಿಸಿದೆ. ಅಲ್ಲದೆ, ‘ಈ ಕಾಯ್ದೆ ಹೇಗೆ ಜಾರಿಯಾಗಲಿದೆ ?’ ಇದನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದು ಅಮೇರಿಕ ಹೇಳಿದೆ.

೫. ಇಂತಹವರ ವಿರುದ್ಧ ಏಕೆ ಕ್ರಮ ಕೈಗೊಳ್ಳುವುದಿಲ್ಲ ?

ಸದ್ಯ ನಾನು ಸಚಿವನಾಗಿರುವುದರಿಂದ ಶಾಂತಿ ಕಾಪಾಡಿದ್ದೇನೆ. ನಾನು ಸಚಿವನಲ್ಲದಿದ್ದರೆ ಪ್ರಧಾನಿ ಮೋದಿಯವರನ್ನು ತುಂಡು ತುಂಡಾಗಿ ಕತ್ತರಿಸುತ್ತಿದ್ದೆ’ ಎಂದು ತಮಿಳುನಾಡಿನ ಡಿಎಂಕೆ ಸರಕಾರದ ಗ್ರಾಮೀಣ ಕೈಗಾರಿಕೆ ಸಚಿವ ಟಿ.ಎಂ. ಅಂಬರ್ಸನ್‌ ಹೇಳಿದ್ದಾರೆ ಎಂಬ ವಿಡಿಯೋ ಪ್ರಸಾರವಾಗಿದೆ.

೬. ಇಂತಹ ಎಲ್ಲಾ ಸ್ಥಳಗಳನ್ನು ಹಿಂದೂಗಳಿಗೆ ಮರಳಿಸಿ !

ಜ್ಞಾನವಾಪಿ ಮಾದರಿಯಲ್ಲಿ ಧಾರ್‌ ಭೋಜಶಾಲೆಯ ಸಮೀಕ್ಷೆ ನಡೆಸುವಂತೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಪುರಾತತ್ವ ಇಲಾಖೆಗೆ ಆದೇಶಿಸಿದೆ. ಭೋಜ ರಾಜನು ನಿರ್ಮಿಸಿದ ಈ ಭೋಜಶಾಲೆಯು ವಿಶ್ವವಿದ್ಯಾನಿಲಯವಾಗಿತ್ತು. ಮುಸಲ್ಮಾನ ದಾಳಿಕೋರರು ಅದನ್ನು ಮಸೀದಿಯಾಗಿ ಪರಿವರ್ತಿಸಿದರು.

೭. ರಾಜ್ಯ ಸರಕಾರ ಈ ಬಗ್ಗೆ ಕ್ರಮಕೈಗೊಳ್ಳುವುದೇ ?

ಬೆಂಗಳೂರಿನಲ್ಲಿ ಮುಸಲ್ಮಾನರು ನಡೆಸುತ್ತಿರುವ ಅನಾಥಾ ಶ್ರಮವೊಂದರಲ್ಲಿ ೨೦ ಹುಡುಗಿಯರು ಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಪ್ರಿಯಂಕ ಕಾನೂನಗೊ ಇವರು ದಾಳಿ ನಡೆಸಿದಾಗ ತಿಳಿದುಬಂದಿದೆ. ಅವರನ್ನು ಗಲ್ಫ್ ದೇಶಗಳಿಗೆ ವಿವಾಹಕ್ಕಾಗಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಶಂಕಿಸಲಾಗಿದೆ.