ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಯತ್ನಗಳನ್ನು ಮಾಡಿಸಿಕೊಂಡಿದ್ದರಿಂದ ಶೀಘ್ರವಾಗಿ ಸಾಧಕರ ಆಧ್ಯಾತ್ಮಿಕ ಉನ್ನತಿ ಆಗುವುದು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಂಚಿಕೆ ಕ್ರ. ೨೫/೨೬ ರಲ್ಲಿ ಮುದ್ರಿಸಲಾದ ಸದ್ಗುರು ರಾಜೇಂದ್ರ ಶಿಂದೆಯವರ ಲೇಖನದಲ್ಲಿ ‘ಪರಾತ್ಪರ ಗುರುದೇವರು ವಿವಿಧ ಪ್ರಸಂಗಗಳಿಂದ ‘ಆಜ್ಞಾಪಾಲನೆ’ ಮತ್ತು ‘ಕೇಳಿ ಕೊಳ್ಳುವುದು’, ಈ ಗುಣಗಳ ಮಹತ್ವವನ್ನು ಮನಸ್ಸಿನ ಮೇಲೆ ಹೇಗೆ ಬಿಂಬಿಸಿದರು’, ಇದನ್ನು ಓದಿದೆವು. ಇಂದಿನ ಲೇಖನದಲ್ಲಿ ‘ನವೆಂಬರ್‌ ೨೦೦೩ ರಿಂದ ಪ.ಪೂ ಡಾಕ್ಟರರು ಶುದ್ಧೀಕರಣ ಸತ್ಸಂಗವನ್ನು (ಟಿಪ್ಪಣಿ ೧) ತೆಗೆದುಕೊಳ್ಳುವ ಅಭಿಯಾನವನ್ನು ಪ್ರಾರಂಭಿಸಿದರು. ಈ ಸತ್ಸಂಗಗಳಲ್ಲಿ ಕಲಿಯಲು ಸಿಕ್ಕಿದ ಅಂಶಗಳು ಮತ್ತು ಅವರ ಸಾಧನೆಯಲ್ಲಿ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಲು ಆಗಿರುವ ಲಾಭಗಳನ್ನು ಇಲ್ಲಿ ಕೊಡಲಾಗಿದೆ.

ಟಿಪ್ಪಣಿ ೧ : ಸಾಧಕರ ಸ್ವಭಾವದೋಷ ಮತ್ತು ಅಹಂನ್ನು ಕಡಿಮೆ ಮಾಡಲು ಸಾಧಕರಿಂದಾದ ತಪ್ಪುಗಳನ್ನು ಸತ್ಸಂಗದಲ್ಲಿ ಹೇಳಿ ‘ಯೋಗ್ಯ ಏನಿರಬೇಕಾಗಿತ್ತು ?’, ಎಂಬುದನ್ನು ಹೇಳುವುದು.

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/109356.html

(ಭಾಗ ೮)

ಶುದ್ಧೀಕರಣ ಸತ್ಸಂಗದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಮಾರ್ಗದರ್ಶನದ ಕೆಲವು ಮಹತ್ವಪೂರ್ಣ ಅಂಶಗಳು

ಶುದ್ಧೀಕರಣ ಸತ್ಸಂಗದಲ್ಲಿ ಶ್ರೀ. ರೇಷಕ ಗಾವಕರ (ಬಲದಲ್ಲಿ) ಇವರ ತಪ್ಪುಗಳ ವಿಶ್ಲೇಷಣೆ ಮಾಡಿ ಹೇಳುವಾಗ  ಪರಾತ್ಪರ ಗುರು ಡಾ. ಆಠವಲೆ (ವರ್ಷ ೨೦೦೩)

ಅ. ಸ್ವಭಾವದೋಷ ಮತ್ತು ಅಹಂನಿಂದಾಗಿ ಸೇವೆಯಲ್ಲಿ ಸಾಧಕರಿಂದ ತಪ್ಪುಗಳಾಗುತ್ತವೆ.

ಆ. ಸ್ವಭಾವದೋಷ ಮತ್ತು ಅಹಂನಿಂದಾಗಿ ಸಾಧಕರು ಪರಿಪೂರ್ಣ ಹಾಗೂ ಭಾವಪೂರ್ಣ ಸೇವೆಯನ್ನು ಮಾಡಲಾರರು.

ಇ. ಸಾಧಕನಿಂದಾದ ಪ್ರತಿಯೊಂದು ತಪ್ಪು ಆತನನ್ನು ಈಶ್ವರ ನಿಂದ ದೂರ ಒಯ್ಯುತ್ತದೆ.

ಈ. ಈಶ್ವರನಲ್ಲಿ ಒಂದೇಒಂದು ದೋಷವಿಲ್ಲ. ಆದ್ದರಿಂದ ಅವನೊಂದಿಗೆ ಏಕರೂಪವಾಗಬೇಕಾದರೆ ನಾವೂ ನಮ್ಮಲ್ಲಿನ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆ ಮಾಡ ಬೇಕಾಗುವುದು, ಹೀಗೆ ಮಾಡಿದರೆ ಮಾತ್ರ ನಾವು ಈಶ್ವರನೊಂದಿಗೆ ಏಕರೂಪವಾಗಬಹುದು.

ಉ. ತನ್ನಿಂದ ಆಗಿರುವ ತಪ್ಪನ್ನು ಮುಂದೆ ಹೇಳದಿರುವವನು ದೋಷಿಯೇ ಆಗಿದ್ದಾನೆ; ಆದರೆ ತಪ್ಪು ಕಂಡರೂ ಅದನ್ನು ದುರ್ಲಕ್ಷ್ಯಿಸುವವನೂ ಅಷ್ಟೇ ದೋಷಿಯಾಗಿರುತ್ತಾನೆ. ಆದ್ದರಿಂದ ಗಮನಕ್ಕೆ ಬಂದಿರುವ ತಪ್ಪನ್ನು ತಕ್ಷಣ ಸಂಬಂಧಿತ ಸಾಧಕನಿಗೆ ಅಥವಾ ಅವಶ್ಯಕತೆಗನುಸಾರ ಜವಾಬ್ದಾರ ಸಾಧಕರಿಗೆ ಹೇಳಬೇಕು.

ಊ. ಯಾವುದೇ ಮಾರ್ಗದಿಂದ ಸಾಧನೆ ಮಾಡಿದರೂ, ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡದಿದ್ದರೆ ಆಧ್ಯಾತ್ಮಿಕ ಪ್ರಗತಿಯಾಗುವುದಿಲ್ಲ.

ಋ. ಸಾಧಕರು ತಮ್ಮಿಂದಾದ ತಪ್ಪುಗಳ ಪರಿಹಾರಕ್ಕಾಗಿ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ.

‘ಈ ಮಾರ್ಗದರ್ಶನದ ಅಂಶಗಳನ್ನು ಸಾಧಕರು ಆಚರಣೆ ಯಲ್ಲಿ ತರಬೇಕೆಂದು ಪ.ಪೂ. ಡಾಕ್ಟರರು ಜಿಲ್ಲಾಸ್ತರದಿಂದ ಹಿಡಿದು ಕೇಂದ್ರಸ್ತರದ ವರೆಗೆ ನಿಯಮಿತವಾಗಿ ತಪ್ಪುಗಳ ಸತ್ಸಂಗಗಳನ್ನು ತೆಗೆದುಕೊಳ್ಳಲು ಹೇಳಿದರು. ಇದರೊಂದಿಗೆ ‘ಗುರುಕೃಪಾಯೋಗದ ಅಷ್ಟಾಂಗ ಸಾಧನೆಯಲ್ಲಿರುವ ೮ ಅಂಗಗಳಲ್ಲಿ (೧. ಸ್ವಭಾವ ದೋಷ ನಿರ್ಮೂಲನೆ ಮತ್ತು ಗುಣಸಂವರ್ಧನೆ, ೨. ಅಹಂ ನಿರ್ಮೂಲನೆ, ೩. ನಾಮಜಪ, ೪. ಸತ್ಸಂಗ, ೫. ಸತ್ಸೇವೆ, ೬. ಭಾವಜಾಗೃತಿಯ ಪ್ರಯತ್ನ, ೭. ಸತ್‌ಗಾಗಿ ತ್ಯಾಗ ಮತ್ತು ೮. ಪ್ರೀತಿ) ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗೆ ಅತ್ಯಧಿಕ ಮಹತ್ವವಿದೆ’, ಎಂಬುದನ್ನು ಪ.ಪೂ. ಡಾಕ್ಟರರು ಸಾಧಕರ ಮನಸ್ಸಿನ ಮೇಲೆ ಬಿಂಬಿಸಿ ತಪ್ಪುಗಳ ಗಾಂಭೀರ್ಯವನ್ನು ಮೂಡಿಸಿದರು.

 (ಸದ್ಗುರು) ರಾಜೇಂದ್ರ ಶಿಂದೆ

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

೧. ಸಾಧಕರಿಂದಾದ ತಪ್ಪುಗಳಿಂದ ಅವರ ಸಾಧನೆ ಮತ್ತು ಗುರುಕಾರ್ಯದ ಹಾನಿಯಾಗುತ್ತಿರುವುದರಿಂದ ಪರಾತ್ಪರ ಗುರು ಡಾ. ಆಠವಲೆಯವರು ಶುದ್ಧೀಕರಣ ಸತ್ಸಂಗವನ್ನು ತೆಗೆದುಕೊಳ್ಳುವುದು

ಪ.ಪೂ. ಡಾಕ್ಟರರು ಶುದ್ಧೀಕರಣ ಸತ್ಸಂಗಗಳ ಅಭಿಯಾನವನ್ನು ಪ್ರಾರಂಭಿಸಿದರು. ಆಗ ಸಾಧಕರಲ್ಲಿ ತಪ್ಪುಗಳ ಬಗ್ಗೆ ಗಾಂಭೀರ್ಯ ಬಹಳ ಕಡಿಮೆಯಿತ್ತು. ಯಾರಿಗೆ ಇತರ ಸಾಧಕರ ತಪ್ಪುಗಳು ಕಾಣಿಸುತ್ತಿದ್ದವೋ, ಅವರು ಅದನ್ನು ಸಂಬಂಧಿತ ಸಾಧಕರಿಗೆ ಅಥವಾ ಮುಂದಿನ ಜವಾಬ್ದಾರ ಸಾಧಕರ ಬಳಿ ಆ ತಪ್ಪುಗಳನ್ನು ಹೇಳುತ್ತಿರಲಿಲ್ಲ. ಆದ್ದರಿಂದ ಸಾಧಕರ ಸಾಧನೆ ಮತ್ತು ಗುರು ಕಾರ್ಯ ಈ ಎರಡರಲ್ಲಿಯೂ ತುಂಬಾ ಹಾನಿಯಾಗುತ್ತಿತ್ತು. ಈ ವಿಷಯವು ಪ.ಪೂ. ಗುರುದೇವರಿಗೆ ತಿಳಿಯಿತು. ನವೆಂಬರ್‌ ೨೦೦೩ ರಿಂದ ಅವರು ಸ್ವತಃ ದೇವದ (ಪನವೇಲ್) ಆಶ್ರಮದ ಸಾಧಕರ ತಪ್ಪುಗಳ ಸತ್ಸಂಗವನ್ನು ತೆಗೆದುಕೊಂಡು ಶುದ್ಧೀಕರಣ ಸತ್ಸಂಗವನ್ನು ತೆಗೆದುಕೊಳ್ಳುವ ಅಭಿಯಾನವನ್ನು ಪ್ರಾರಂಭಿಸಿದರು.

ಮಾರ್ಗದರ್ಶಕರೆಂದು ಸೇವೆಯನ್ನು ಮಾಡುವ ಸಾಧಕರಿಂದಲೂ ತುಂಬಾ ಮತ್ತು ಅತ್ಯಂತ ಗಂಭೀರ ತಪ್ಪುಗಳಾಗಿದ್ದವು. ಆದ್ದರಿಂದ ಸಾಧನೆಯಲ್ಲಿ ಅವರ ತುಂಬಾ ಅಧೋಗತಿಯಾಯಿತು. ಈ ಸತ್ಸಂಗದಲ್ಲಿ ಪ.ಪೂ. ಗುರುದೇವರು ಸಾಧಕರಿಗೆ ಅವರ ತಪ್ಪುಗಳನ್ನು ತೋರಿಸಿಕೊಟ್ಟರು ಮತ್ತು ‘ಯೋಗ್ಯ ಯಾವುದು ?’, ಎಂಬುದನ್ನೂ ಅವರಿಗೆ ಹೇಳಿದರು.

೨. ಮಾರ್ಗದರ್ಶಕ ಸಾಧಕರಿಂದ ಗಂಭೀರ ತಪ್ಪುಗಳಾದುದರಿಂದ ಸಾಧನೆಯಲ್ಲಿ ಅವರ ಅಧೋಗತಿಯಾಗುವುದು; ಆದರೆ ಯಾರು ಮಾರ್ಗದರ್ಶಕ ಸಾಧಕರ ಆಜ್ಞಾಪಾಲನೆಯನ್ನು ಮಾಡಿದರೋ ಅವರ ಸಾಧನೆಯಾಗುವುದು

ನನ್ನ ಮನಸ್ಸಿನಲ್ಲಿ, ‘ನಾನು ಎಲ್ಲ ಸೇವೆಗಳನ್ನು ಜವಾಬ್ದಾರ ಸಾಧಕರು ಹೇಳಿದಂತೆ ಮಾಡುತ್ತಾ ಹೋದೆನು. ಅವರಿಂದ ತುಂಬಾ ತಪ್ಪುಗಳಾಗಿರುವುದರಿಂದ ಅವರ ಸಾಧನೆಯಲ್ಲಿ ಹಾನಿಯಾಯಿತು, ಅಂದರೆ ನನ್ನ ಸಾಧನೆಯಲ್ಲಿಯೂ ಹಾನಿಯಾಗಿರಬಹುದು.’ ಎಂಬ ವಿಚಾರದಿಂದ ನನಗೆ ಚಿಂತೆಯಾಗತೊಡಗಿತು. ಒಮ್ಮೆ ನಾನು ಒಂದು ಶುದ್ಧೀಕರಣ ಸತ್ಸಂಗದಲ್ಲಿ ಪ.ಪೂ. ಗುರುದೇವರ ಬಳಿ, ”ನಾವು ಮಾರ್ಗದರ್ಶಕ ಸಾಧಕರು ಹೇಳಿದಂತೆ ಕೃತಿಗಳನ್ನು ಮಾಡುತ್ತಾ ಹೋದೆವು. ಅವರ ಆ ಕೃತಿಗಳಲ್ಲಿ ತಪ್ಪುಗಳಿದ್ದವು ಎಂಬುದು ಈ ಸತ್ಸಂಗಗಳಿಂದ ಗಮನಕ್ಕೆ ಬಂದಿತು; ಆದರೆ ಇದರಿಂದ ನನ್ನ ಸಾಧನೆಯಲ್ಲಿಯೂ ಅಧೋಗತಿ ಆಗಿದೆಯೇ ?” ಎಂಬ ಪ್ರಶ್ನೆಯನ್ನು ಕೇಳಿದೆನು. ಆಗ ಅವರು ”ಇಲ್ಲ. ನೀವು ಅವರ ಆಜ್ಞಾಪಾಲನೆಯನ್ನು ಮಾಡಿದ್ದೀರಿ. ಆದ್ದರಿಂದ ನಿಮ್ಮ ಸಾಧನೆ ಆಯಿತು; ಆದರೆ ಯಾರು ತಪ್ಪಾಗಿ ಹೇಳಿದ್ದಾರೆಯೋ, ಅವರ ಹಾನಿ ಆಯಿತು” ಎಂದು ಹೇಳಿದರು. ಈ ದೃಷ್ಟಿಕೋನವನ್ನು ಕೇಳಿದ ನಂತರ ನನ್ನ ಚಿಂತೆ ದೂರವಾಯಿತು; ಆದರೆ ಇದರಿಂದ ‘ಜವಾಬ್ದಾರ ಸಾಧಕರು ಯಾವುದೇ ಕೃತಿಯನ್ನು ಮಾಡುವಾಗ ವಿಚಾರಪೂರ್ವಕ ಮತ್ತು ವಿಚಾರಿಸಿಯೇ ಮಾಡಬೇಕು’, ಇದು ನನಗೆ ಕಲಿಯಲು ಸಿಕ್ಕಿತು.

೩. ಸಾಧಕರ ತಪ್ಪುಗಳು ಗಮನಕ್ಕೆ ಬಂದರೂ ಯಾರು ಅವುಗಳನ್ನು ಮುಂದೆ ತಿಳಿಸಲಿಲ್ಲವೋ, ಅವರ ಸಾಧನೆಯಲ್ಲಿಯೂ ತುಂಬಾ ಹಾನಿ ಆಯಿತು

ಕೆಲವು ಸಾಧಕರಿಗೆ ಇತರ ಸಾಧಕರ ತಪ್ಪುಗಳು ಗಮನಕ್ಕೆ ಬಂದಿದ್ದವು; ಆದರೆ ಅವರು ಅವುಗಳನ್ನು ಮುಂದೆ ತಿಳಿಸಲಿಲ್ಲ. ಅವರ ಈ ದೃತರಾಷ್ಟ್ರ-ಗಾಂಧಾರಿ ವೃತ್ತಿಯಿಂದಾಗಿ ಅವರ ಸಾಧನೆಯಲ್ಲಿ ತುಂಬಾ ಹಾನಿ ಆಯಿತು ಮತ್ತು ಗುರುಕಾರ್ಯಕ್ಕೂ ಹಾನಿ ಆಯಿತು. ಆ ತಪ್ಪುಗಳನ್ನು ಅವರು ಆಯಾ ಸಮಯದಲ್ಲಿ ಮುಂದೆ ತಿಳಿಸಿದ್ದರೆ, ಆ ಸಾಧಕನಿಗೆ ತಪ್ಪುಗಳನ್ನು ತಡೆಗಟ್ಟಲು ಸಹಾಯವಾಗುತ್ತಿತ್ತು. ತಪ್ಪುಗಳನ್ನು ಹೇಳುವ ಸಾಧಕನ ಸಮಷ್ಟಿ ಸಾಧನೆಯಾಗಿ ಅವನ ಸಾಧನೆಯಲ್ಲಿ ಪ್ರಗತಿಯಾಗುತ್ತಿತ್ತು ಮತ್ತು ಗುರುಕಾರ್ಯಕ್ಕಾಗುತ್ತಿದ್ದ ಹಾನಿಯನ್ನೂ ತಡೆಯಬಹುದಾಗಿತ್ತು.

೪. ಪರಾತ್ಪರ ಗುರು ಡಾ. ಆಠವಲೆಯವರು ಸನಾತನದ ಎಲ್ಲ ಆಶ್ರಮಗಳು, ಸೇವಾಕೇಂದ್ರಗಳು ಮತ್ತು ಎಲ್ಲ ಜಿಲ್ಲೆಗಳಲ್ಲಿ ಶುದ್ಧೀಕರಣ ಸತ್ಸಂಗಗಳನ್ನು ತೆಗೆದುಕೊಳ್ಳುವುದು

ಪ.ಪೂ. ಗುರುದೇವರು ಶುದ್ಧೀಕರಣ ಸತ್ಸಂಗವನ್ನು ದೇವದ ಆಶ್ರಮದಲ್ಲಿ ಮತ್ತು ಆಶ್ರಮದಿಂದ ಹತ್ತಿರವಿರುವ ಠಾಣೆ, ಮುಂಬೈ ಮತ್ತು ರಾಯಗಡ ಈ ಜಿಲ್ಲೆಗಳಲ್ಲಿಯೂ ತೆಗೆದುಕೊಂಡರು. ಅನಂತರ ಅವರು ಎಲ್ಲೆಡೆಯ ಸನಾತನದ ಆಶ್ರಮಗಳಿಗೆ ಮತ್ತು ಸೇವಾಕೇಂದ್ರಗಳಿಗೆ ಹೋಗಿ ಶುದ್ಧೀಕರಣ ಸತ್ಸಂಗಗಳನ್ನು ತೆಗೆದುಕೊಂಡರು.

೫. ತಪ್ಪುಗಳ ಸತ್ಸಂಗಗಳಿಂದ ಸಾಧಕರಲ್ಲಾದ ಬದಲಾವಣೆ !

ಅ. ಸಾಧಕರು ತಮ್ಮಲ್ಲಿನ ಸ್ವಭಾವದೋಷ ಮತ್ತು ಅಹಂ ಬೇಗ ದೂರಗೊಳಿಸಲು ಸ್ವಭಾವದೋಷ ಮತ್ತು ಅಹಂನ ಸಂದರ್ಭದಲ್ಲಿನ ತಪ್ಪುಗಳನ್ನು ತಖ್ತೆಯಲ್ಲಿ (ಟಿಪ್ಪಣಿ ೨) ಬರೆಯತೊಡಗಿದರು.

(ಟಿಪ್ಪಣಿ ೨ : ದಿನವಿಡಿ ತನ್ನಿಂದಾದ ತಪ್ಪುಗಳನ್ನು ಮತ್ತು ಅವುಗಳ ಹಿಂದಿನ ಸ್ವಭಾವದೋಷಗಳನ್ನು ಪುಸ್ತಕದಲ್ಲಿ ಬರೆದು ಅವುಗಳ ಮುಂದೆ ಯೋಗ್ಯ ಕೃತಿಯನ್ನು ಬರೆಯುವುದು.)

ಆ. ಸಾಧಕರು ತಮ್ಮ ತಪ್ಪುಗಳನ್ನು ತಾವಾಗಿ ಸತ್ಸಂಗದಲ್ಲಿ ಹೇಳತೊಡಗಿದರು.

ಇ. ಇತರ ಸಾಧಕರಿಂದಾದ ತಪ್ಪುಗಳನ್ನೂ ಹೇಳತೊಡಗಿದರು.

ಈ. ಯಾವುದೇ ಉಪಕ್ರಮವನ್ನು ನಡೆಸಿದ ನಂತರ ಅಥವಾ ಯಾವುದಾದರೊಂದು ಸೇವೆ ಆದನಂತರ ಅದರಲ್ಲಿ ಆಗಿರುವ ತಪ್ಪುಗಳ ಅಧ್ಯಯನ ಪ್ರಾರಂಭವಾಯಿತು. ಸಾಧಕರಿಗೆ ಆ ತಪ್ಪುಗಳಿಂದ ಕಲಿಯಲು ಸಾಧ್ಯವಾಯಿತು.

ಉ. ಆ ತಪ್ಪುಗಳ ಹಿಂದಿರುವ ಸ್ವಭಾವದೋಷಗಳನ್ನು ದೂರ ಗೊಳಿಸಲು ಪ್ರಯತ್ನಗಳಾಗತೊಡಗಿದವು.

ಊ. ಆಶ್ರಮದ ಸಾಧಕರು ಆಶ್ರಮದಲ್ಲಿರುವ ಫಲಕದಲ್ಲಿ ತಪ್ಪುಗಳನ್ನು ಬರೆಯತೊಡಗಿದರು. ಅನೇಕ ಸಾಧಕರು ತಮ್ಮ ಮನೆ ಗಳಲ್ಲಿ ಚಿಕ್ಕ ಫಲಕವನ್ನಿಟ್ಟರು ಮತ್ತು ಅದರಲ್ಲಿ ಅವರು ತಮ್ಮ ತಪ್ಪುಗಳನ್ನು ಬರೆಯಲು ಪ್ರಾರಂಭಿಸಿದರು.

ಎ. ಸಾಧಕರು ತಮ್ಮ ತಪ್ಪುಗಳಿಗಾಗಿ ಪ್ರಾಯಶ್ಚಿತ್ತವನ್ನು ತೆಗೆದು ಕೊಳ್ಳತೊಡಗಿದರು ಮತ್ತು ದೇವರಲ್ಲಿ ಹಾಗೂ ಸಂಬಂಧಪಟ್ಟ ಸಾಧಕರಲ್ಲಿ ಕ್ಷಮಾಯಾಚನೆ ಮಾಡತೊಡಗಿದರು.

೬. ಪರಾತ್ಪರ ಗುರು ಡಾ. ಆಠವಲೆಯವರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯನ್ನು ಕಲಿಸಿರುವುದರಿಂದ ಶೀಘ್ರವಾಗಿ ಆಧ್ಯಾತ್ಮಿಕ ಪ್ರಗತಿ ಆಗುವುದು

ಅ. ಪ.ಪೂ. ಗುರುದೇವರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯನ್ನು ಕಲಿಸಿದುದರಿಂದ ಸಂಸ್ಥೆಯ ಸ್ತರದಲ್ಲಿ ಎಲ್ಲ ಸಾಧಕರಿಗೆ ತುಂಬಾ ಲಾಭವಾಯಿತು.

ಆ. ಸಾಧಕರಲ್ಲಿ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನಾ ಪ್ರಕ್ರಿಯೆ’ಯ ಗಾಂಭೀರ್ಯ ತುಂಬಾ ಹೆಚ್ಚಾಯಿತು.

ಇ. ಸಾಧಕರ ಸ್ವಭಾವದೋಷ ಮತ್ತು ಅಹಂ ಕಡಿಮೆಯಾದುದರಿಂದ ಸಾಧಕರ ಸಾಧನೆ ಚೆನ್ನಾಗಿ ಆಗತೊಡಗಿತು. ಇದರ ಪರಿಣಾಮವಾಗಿ ಸಾಧಕರ ಆಧ್ಯಾತ್ಮಿಕ ಪ್ರಗತಿಯು ಶೀಘ್ರವಾಗಿ ಆಗತೊಡಗಿತು. ಅದರ ದೃಶ್ಯ ಪರಿಣಾಮವೆಂದರೆ ಇಲ್ಲಿಯವರೆಗೆ (೧.೨.೨೦೨೪ ರವರೆಗೆ) ೧೨೭ ಜನ ಸಾಧಕರು ಸಂತಪದವಿಯ ವರೆಗೆ ತಲುಪಿದ್ದು ೧ ಸಾವಿರದ ೫೨ ಜನ ಸಾಧಕರು ಶೇ. ೬೦ ಕ್ಕಿಂತಲೂ ಹೆಚ್ಚು ಮಟ್ಟದವರಾಗಿರುವುದರಿಂದ ಅವರ ಮಾರ್ಗಕ್ರಮಣ ಸಂತತ್ವದ ದಿಶೆಯಲ್ಲಿ ಆಗುತ್ತಿದೆ.

ಕಲಿಯುಗದಲ್ಲಿ ಮನುಷ್ಯನಲ್ಲಿ ಸ್ವಭಾವದೋಷ ಮತ್ತು ಅಹಂ ಬಹಳಷ್ಟಿದೆ. ಆದ್ದರಿಂದ ಸಾಧನೆಯಿಂದ ಈಶ್ವರ ಪ್ರಾಪ್ತಿಯನ್ನು ಮಾಡಿಕೊಳ್ಳುವುದು ಅತ್ಯಂತ ಕಠಿಣವಾಗಿದೆ; ಆದರೆ ಪ.ಪೂ. ಡಾಕ್ಟರರು ಸಾಧಕರಿಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಕಲಿಸಿ ಸಾಧಕರಿಗೆ ಈಶ್ವರ ಪ್ರಾಪ್ತಿಯ ಮಹಾಮಂತ್ರವನ್ನೇ ನೀಡಿದ್ದಾರೆ. ಅದಕ್ಕಾಗಿ ಪ.ಪೂ. ಡಾಕ್ಟರರ ಚರಣಗಳಲ್ಲಿ ಅದೆಷ್ಟು ಕೃತಜ್ಞತೆಗಳನ್ನು ವ್ಯಕ್ತ ಪಡಿಸಿದರೂ ಅದು ಕಡಿಮೆಯೇ ಆಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದ ಪುಷ್ಪಗಳನ್ನು ಅವರ ಚರಣಗಳಲ್ಲಿ ಕೃತಜ್ಞತಾಭಾವದಿಂದ ಅರ್ಪಿಸುತ್ತೇನೆ !

(ಮುಂದುವರೆಯುವುದು)

ಇದಮ್‌ ನ ಮಮ !’

– (ಸದ್ಗುರು) ರಾಜೇಂದ್ರ ಶಿಂದೆ, ದೇವದ ಆಶ್ರಮ, ಪನವೇಲ. (೧.೮.೨೦೨೩)