ಪರಾತ್ಪರ ಗುರು ಡಾ. ಆಠವಲೆ ಇವರು ಹೇಳಿದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಿಂದ ಅನೇಕ ಸಾಧಕರು ಮತ್ತು ಜಿಜ್ಞಾಸುಗಳ ಆಧ್ಯಾತ್ಮಿಕ ಉನ್ನತಿ ಆಗುವುದು ಇದು ಆಧ್ಯಾತ್ಮಿಕ ಇತಿಹಾಸದ ಅದ್ವಿತೀಯ ಘಟನೆ !

ಪೂ. ರಮಾನಂದ ಗೌಡ

೨೫/೨೭ ರ ಸಾಪ್ತಾಹಿಕದ ಸಂಚಿಕೆಯಲ್ಲಿ ನಾವು ಸಾಧಕರ ಪ್ರಗತಿಗೆ ಸ್ವಭಾವದೋಷ ಅಹಂನಿರ್ಮೂಲನ ಪ್ರಕ್ರಿಯೆ ಹೇಗೆ ಸಹಾಯಕವಾಗಿದೆ ಎಂಬುದನ್ನು ತಿಳಿದುಕೊಂಡೆವು. ಸಾಧಕರು ಮತ್ತು ಜಿಜ್ಞಾಸುಗಳು ಅದನ್ನು ಆಚರಣೆಗೆ ತಂದು ಯಾವ ರೀತಿ ಬದಲಾವಣೆ ಮಾಡಿಕೊಂಡರು ಎಂಬುದನ್ನು ಈ ವಾರ ತಿಳಿದುಕೊಳ್ಳೋಣ. 

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/111206.html

ಭಾಗ -೨

೨. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ  ನಡೆಸಿದುದರಿಂದ ಸಾಧಕ ಮತ್ತು ಜಿಜ್ಞಾಸುಗಳಲ್ಲಾದ ಬದಲಾವಣೆ

೨ ಅ. ಸೌ. ಉರ್ಮಿಳಾ ಶೆಟ್ಟಿ, ಮಂಗಳೂರು.

೨ ಅ ೧. ಆತ್ಮವಿಶ್ವಾಸ ಹೆಚ್ಚಾಗುವುದು ಮತ್ತು ಗುರುಸ್ಮರಣೆಯಲ್ಲಿ ಹೆಚ್ಚಳವಾಗುವುದು : ಮೊದಲು ಜವಾಬ್ದಾರ ಸಾಧಕರ ದೂರವಾಣಿ ಕರೆ ಬಂದರೆ ‘ಅವರು ನನಗೆ ಸೇವೆ ಹೇಳಬಹುದು’ ಎಂದು ಅನಿಸುತ್ತಿತ್ತು. ನಾನು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ ನಡೆಸಿದ ನಂತರ ನನಗೆ ಜವಾಬ್ದಾರ ಸಾಧಕರ ಕರೆ ಬಂದಾಗ ‘ಗುರುಸೇವೆ ಮಾಡಲು ಅವಕಾಶ ಸಿಗಲಿದೆ’; ಎಂದು ಅನಿಸಿ ಆನಂದವಾಗುತ್ತದೆ. ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ. ನನ್ನಿಂದ ಗುರುಸ್ಮರಣೆಯಲ್ಲಿಯೂ ಹೆಚ್ಚಳವಾಗಿದೆ.

೨ ಆ. ಸೌ. ಅರ್ಪಣಾ ಭಟ್, ಬೆಂಗಳೂರು.

೨ ಆ ೧. ಮಗನಿಗೆ ಪರೀಕ್ಷೆಯಲ್ಲಿ ಮೊದಲನೆ ಸ್ಥಾನ ಸಿಗಬೇಕು ಎಂಬ ಅಪೇಕ್ಷೆ ಇಟ್ಟುಕೊಳ್ಳದಿರುವುದು ಮತ್ತು ಅವನಿಗೆ ಸಾಧನೆಯ ವಿಷಯವನ್ನು ಹೇಳುವುದು : ಮೊದಲು ನನಗೆ ನನ್ನ ಮಗನಿಗೆ ಪರೀಕ್ಷೆಯಲ್ಲಿ ಮೊದಲ ಸ್ಥಾನ ಸಿಗಬೇಕು ಎಂದು ತೀವ್ರ ಅಪೇಕ್ಷೆ ಇರುತ್ತಿತ್ತು. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ನಡೆಸಿದ ನಂತರ ನಾನು ಮಗನಿಂದ ಅಪೇಕ್ಷೆಯನ್ನು ಇಟ್ಟುಕೊಳ್ಳದೇ ಅವನಿಗೆ ಸಾಧನೆಯನ್ನು ಕಲಿಸಿದೆ. ನಾನು ಅವನಿಗೆ ಶಿಕ್ಷಣವನ್ನು ಪಡೆಯುವಾಗ ಸಾಧನೆಯ ಪ್ರಯತ್ನಗಳನ್ನು ಹೇಗೆ ಮಾಡಬಹುದು ಎಂಬ ವಿಷಯವನ್ನು ತಿಳಿಸಿದೆ. ಇದರಿಂದ ಮಗನ ಒತ್ತಡ ದೂರವಾಯಿತು ಜೊತೆಗೆ ನನ್ನ ಜೊತೆಗೆ ಅವನು ಆನಂದದಿಂದ ಇರುತ್ತಾನೆ

೨ ಇ. ಶ್ರೀಮತಿ ಪಾರ್ವತಿ ಹಡಗಲಿ (ಆಧ್ಯಾತ್ಮಿಕ ಮಟ್ಟ ಶೇ. ೬೧ ಕ್ಕಿಂತ ಹೆಚ್ಚಿದೆ, ೬೬ ವರ್ಷಗಳು), ವಿಜಯಪುರ

೨ ಇ ೧. ಸೊಸೆಯೊಂದಿಗೆ ತಾಯಿಯಂತೆ ವರ್ತಿಸುವುದು : ಮೊದಲು ನನಗೆ ಬಹಳ ಕೋಪ ಬರುತ್ತಿತ್ತು. ನಾನು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸಿದುದರಿಂದ ನನಗೆ ಶಾಂತವಾಗಿರಲು ಸಾಧ್ಯವಾಗುತ್ತಿದೆ. ಈಗ ನಾನು ಮನೆಯನ್ನು ಆಶ್ರಮವನ್ನಾಗಿಸಲು ಪ್ರಯತ್ನಿಸುತ್ತೇನೆ. ನಾನು ಸೊಸೆಗೆ ಮನೆಕೆಲಸಗಳಲ್ಲಿ ಸಹಾಯ ಮಾಡುತ್ತೇನೆ. ನಮ್ಮಲ್ಲಿ ತಾಯಿಮಗಳ ಸಂಬಂಧ ಮೂಡಿದೆ. ಸಮಾಜವೂ ನಮ್ಮತ್ತ ಆತ್ಮೀಯತೆಯಿಂದ ನೋಡುತ್ತಿದೆ.

೨ ಈ. ಓರ್ವ ಸಾಧಕಿ, ಕರ್ನಾಟಕ

೨ ಈ ೧. ಸಾಧಕಿಗೆ ಪತಿಯಿಂದ ಸಾಧನೆಗಾಗುತ್ತಿದ್ದ ವಿರೋಧ ಕಡಿಮೆಯಾಗುವುದು : ಮೊದಲು ನನಗೆ ಮನೆಯ ವ್ಯಕ್ತಿಗಳೊಂದಿಗೆ ವಾದವಾಗುತ್ತಿತ್ತು. ಮನೆಯ ವ್ಯಕ್ತಿಗಳು ಕೋಪಗೊಂಡರೆ ನನಗೂ ಕೋಪ ಬರುತ್ತಿತ್ತು. ನಾನು ಮನೆಯಲ್ಲಿ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುತ್ತಿರಲಿಲ್ಲ. ನನ್ನ ಯಜಮಾನರು ನನಗೆ ಸಾಧನೆ ಮತ್ತು ಸೇವೆ ಮಾಡಲು ವಿರೋಧಿಸುತ್ತಿದ್ದರು. ನಾನು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡುವಾಗ ನನಗೆ ಜವಾಬ್ದಾರ ಸಾಧಕಿಯು, ‘ಎದುರಿನ ವ್ಯಕ್ತಿಯು ಹೇಗೆ ವರ್ತಿಸಿದರೂ ನಾವು ಅವರಿಗೆ ಪ್ರತ್ಯುತ್ತರ ಕೊಡಬಾರದು. ಕಡಿಮೆತನ ತೆಗೆದು ಕೊಳ್ಳಲು ಪ್ರಯತ್ನಿಸಬೇಕು’, ಎಂದು ಹೇಳಿದರು. ಅನಂತರ ನಾನು ಮನೆಯಲ್ಲಿ ವಸ್ತುಗಳನ್ನು ವ್ಯವಸ್ಥಿತವಾಗಿಡಲು ಪ್ರಯತ್ನಿಸಿದೆ. ಇದರಿಂದ ಮನಸ್ಸಿನ ಸಂಘರ್ಷ ಕಡಿಮೆಯಾಗಿ ಆನಂದ ಸಿಗತೊಡಗಿತು. ಯಜಮಾನರ ವಿರೋಧವೂ ಕಡಿಮೆ ಆಗತೊಡಗಿದೆ. ಈಗ ನನಗೆ ಕೋಪ ಬಂದರೆ ನಾನು ತಕ್ಷಣ ಶಾಂತಳಾಗುತ್ತೇನೆ. ಇದಕ್ಕಾಗಿ ಪ್ರಕ್ರಿಯೆಯ ಪ್ರಯತ್ನ ಮಾಡುತ್ತಿದ್ದೇನೆ.

೨ ಉ. ಸಾಧಕಿಯು ತನ್ನ ಯಜಮಾನರಲ್ಲಿ ಕ್ಷಮೆಯಾಚನೆ ಮಾಡಿದಾಗ ಯಜಮಾನರೂ ಅವಳಲ್ಲಿ ಕ್ಷಮೆಯಾಚನೆ ಮಾಡುವುದು : ಒಬ್ಬ ಸಾಧಕಿ ಮತ್ತು ಅವಳ ಯಜಮಾನರಲ್ಲಿ ಪ್ರತಿದಿನ ಜಗಳವಾಗುತ್ತಿತ್ತು. ಆ ಸಾಧಕಿಗೆ ಸಂತರ ಸತ್ಸಂಗ ದೊರಕಿತು. ಅದರಲ್ಲಿ ಸಂತರು ಅವರಿಂದ ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎಂಬುದರ ವರದಿ ತೆಗೆದುಕೊಂಡರು. ಆಗ ಸಂತರು ಅವರಿಗೆ ಮನೆಯಲ್ಲಿರುವಾಗ ಜಗಳ ವಾಗುವುದು, ಸಿಟ್ಟು ಬರುವುದು ಈ ದೋಷಗಳಿಗಾಗಿ ಕಡಿಮೆತನ ತೆಗೆದುಕೊಂಡು ಪ್ರಯತ್ನಿಸಬೇಕು ಹಾಗೂ ಯಜಮಾನರಲ್ಲಿ ಕ್ಷಮೆಯಾಚನೆ ಮಾಡಬೇಕು ಇಂತಹ ಪ್ರಯತ್ನಗಳನ್ನು ಮಾಡಲು ಹೇಳಿದರು. ಸಾಧಕಿಯು ಕ್ಷಮೆಯಾಚನೆ ಮಾಡಲು ೨-೩ ದಿನಗಳ ಕಾಲ ಸಂಘರ್ಷ ಮಾಡಬೇಕಾಯಿತು. ಅನಂತ ಸಂಘರ್ಷ ಮಾಡಿ ಕ್ಷಮೆಯಾಚನೆ ಮಾಡಿದರು. ಆಗ ಅವಳ ಯಜಮಾನರು ಸಹ, ‘ಇದರಲ್ಲಿ ನಿನ್ನೊಬ್ಬಳದ್ದೇ ತಪ್ಪಿಲ್ಲ. ನನ್ನದೂ ತಪ್ಪಿದೆ. ನಾನೂ ಕ್ಷಮೆಯಾಚಿಸುತ್ತೇನೆ’ ಎಂದು ಹೇಳಿ ಕ್ಷಮೆಯಾಚನೆ ಮಾಡಿದರು. ನಾನು ಕಡಿಮೆತನ ತೆಗೆದುಕೊಂಡು ಪ್ರಕ್ರಿಯೆಯನ್ನು ಅಂತರ್ಮನಸ್ಸಿನಿಂದ ಮಾಡಿದ ನಂತರ ಮನೆಯಲ್ಲಿ ಬದಲಾವಣೆ ಯಾಯಿತು. ನನಗೆ ಸಾಧನೆಯ ಆನಂದ ಸಿಕ್ಕಿತು.

೨ ಊ. ಆಧುನಿಕ ವೈದ್ಯ ಪ್ರಣವ ಮಲ್ಯ, ಎಮ್‌.ಡಿ. ಮಂಗಳೂರು

೨ ಊ ೧. ಸ್ವಯಂಸೂಚನೆಯ ಸತ್ರ ಮಾಡುವುದರಿಂದ ಒತ್ತಡ ಮತ್ತು ಮನಸ್ಸಿನಲ್ಲಿ ಪ್ರತಿಕ್ರಿಯೆ ಕಡಿಮೆಯಾಗಿ ಸಕಾರಾತ್ಮಕ ಮತ್ತು ಆನಂದಿಯಾಗಿರಲು ಸಾಧ್ಯವಾಗುವುದು : ‘ನಾನು ಆಧುನಿಕ ವೈದ್ಯನಾಗಿದ್ದೇನೆ. ಮೊದಲು ಆಸ್ಪತ್ರೆಯಲ್ಲಿ ತುಂಬಾ ರೋಗಿಗಳು ಬಂದರೆ ನನಗೆ ಒತ್ತಡವಾಗುತ್ತಿತ್ತು. ನನಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯು ತಿಳಿದ ನಂತರ, ‘ನನಗೆ ರೋಗಿಗಳಿಂದಲ್ಲ, ನನ್ನಲ್ಲಿರುವ ಸ್ವಭಾವದೋಷಗಳಿಂದ ಒತ್ತಡ ವಾಗುತ್ತಿದೆ’, ಎಂದರಿವಾಯಿತು. ಅನಂತರ ನಾನು ಸ್ವಯಂಸೂಚನೆ ನೀಡಲು ಪ್ರಾರಂಭಿಸಿದ ಒಂದು ವಾರದೊಳಗೆ ನನ್ನ ಒತ್ತಡ ಕಡಿಮೆಯಾಯಿತು. ನನಗೆ ಬಹಳ ಆಶ್ಚರ್ಯವೆನಿಸಿತು ಮತ್ತು ಈ ಪ್ರಕ್ರಿಯೆಯಲ್ಲಿ ನನ್ನ ಶ್ರದ್ಧೆ ಹೆಚ್ಚಾಯಿತು. ನಾನು ವಾಹನ ಚಾಲನೆ ಮಾಡುತ್ತಿರುವಾಗ ಇತರ ವಾಹನ ಚಾಲಕರ ಅಯೋಗ್ಯ ಕೃತಿಗಳಿಂದ ನನಗೆ ಬರುತ್ತಿರುವ ಅಯೋಗ್ಯ ಪ್ರತಿಕ್ರಿಯೆಗಳು ಕಡಿಮೆಯಾದವು. ನನಗೆ ಸಂಘರ್ಷವನ್ನು ದೂರಗೊಳಿಸಲು ಸುಲಭವಾಯಿತು. ನಾನು ಸಕಾರಾತ್ಮಕನಾಗಿರತೊಡಗಿದೆ. ನಾನು ಜನರೊಂದಿಗೆ ಆತ್ಮೀಯತೆಯಿಂದ ವರ್ತಿಸತೊಡಗಿದೆ. ನನಗೆ ಆನಂದವಾಗಿರಲು ಸಾಧ್ಯವಾಗತೊಡಗಿತು.

೨ ಒ. ನ್ಯಾಯವಾದಿ ಕೃಷ್ಣಸ್ವಾಮಿ, ಬೆಂಗಳೂರು

೨ ಒ ೧. ಕೋಪ ಬರುವುದು ಮತ್ತು ಒತ್ತಡ ಕಡಿಮೆಯಾಗುವುದು : ‘ಮೊದಲು ನನಗೆ ವಕೀಲಿವೃತ್ತಿ ಮಾಡುವಾಗ ಬಹಳ ಕೋಪ ಬರುತ್ತಿತ್ತು. ನನ್ನೊಂದಿಗೆ ಮಾತನಾಡುವಾಗ ಎಲ್ಲರಿಗೆ ತುಂಬ ಭಯವಾಗುತ್ತಿತ್ತು. ವಕೀಲಿವೃತ್ತಿ ಮಾಡುತ್ತಿದ್ದರಿಂದ ಕೆಲಸದ ತುಂಬ ಒತ್ತಡವಿತ್ತು. ಆದರೆ ನಾನು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ ನಡೆಸಿದ ನಂತರ ನನ್ನ ಕೋಪವು ತುಂಬ ಕಡಿಮೆಯಾಯಿತು. ಕೆಲಸದ ಒತ್ತಡವೂ ಕಡಿಮೆಯಾಯಿತು. ಕೆಲಸಗಳು ಸಹಜವಾಗಿ ಆಗತೊಡಗಿತು. ನನ್ನ ಸಹೋದ್ಯೋಗಿಗಳು ಹಾಗೂ ಕಕ್ಷಿದಾರರು (ಕ್ಲೈಂಟ್ಸ್‌) ಈಗ ನನ್ನ ಮಿತ್ರರಾಗಿದ್ದಾರೆ. (ಶ್ರೀ. ಕೃಷ್ಣಸ್ವಾಮಿ ಇವರನ್ನು ನೋಡಿದಾಗ ಶಾಂತವೆನಿಸುತ್ತದೆ. ಅವರೊಂದಿಗೆ ಮಾತನಾಡುವಾಗ ಆನಂದ ವಾಗುತ್ತದೆ ಮತ್ತು ವರ್ತನೆಯಲ್ಲಿ ಸಹಜತೆಯೂ ಹೆಚ್ಚಾಗಿದೆ.)

೨ ಓ. ಆಧುನಿಕ ವೈದ್ಯ ಪ್ರಶಾಂತ ನಂಬಿಯಾರ, ಸುರತ್ಕಲ್‌

೨ ಒ ೧. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯ ವಿಷಯ ತಿಳಿದ ದಿನದಿಂದಲೇ ಪ್ರಯತ್ನ ಪ್ರಾರಂಭಿಸುವುದು ಮತ್ತು ಪತ್ನಿಗೆ ಬದಲಾವಣೆಯ ಅರಿವಾಗುವುದು : ನಾನು ಆಧುನಿಕ ವೈದ್ಯನಾಗಿದ್ದೇನೆ. ನನ್ನಲ್ಲಿ ಬಹಳ ಅವ್ಯವಸ್ಥಿತತನ ಮತ್ತು ಸಮಯ ಪಾಲನೆಯ ಅಭಾವವಿದೆ. ಇದರಿಂದ ಮನೆಯಲ್ಲಿ ಯಾವಾಗಲೂ ವಾದವಾಗುತ್ತಿತ್ತು. ನನಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಬಗ್ಗೆ ತಿಳಿದಾಗ ನಾನು ಅದೇ ದಿನದಿಂದ ಪ್ರಯತ್ನ ಪ್ರಾರಂಭಿಸಿದೆ. ಆಗ ನನ್ನ ಪತ್ನಿಯು ‘ಒಂದೇ ದಿನದಲ್ಲಿ ನಿಮ್ಮಲ್ಲಿ ಇಷ್ಟು ಬದಲಾವಣೆ ಹೇಗಾಯಿತು ? ನಾನು ಅನೇಕ ವರ್ಷಗಳಿಂದ ಹೇಳಿಯೂ ಆಗದೇ ಇದ್ದಂತಹದ್ದು ಒಂದೇ ದಿನದಲ್ಲಿ ಹೇಗಾಯಿತು ? ನನ್ನನ್ನು ಸಹ ನಿಮ್ಮೊಂದಿಗೆ ಸತ್ಸಂಗಕ್ಕೆ ಕರೆದುಕೊಂಡು ಹೋಗಿ’, ಎಂದಳು.

೨ ಔ. ನ್ಯಾಯವಾದಿ ಕೃಷ್ಣಮೂರ್ತಿ (ಆಧ್ಯಾತ್ಮಿಕ ಮಟ್ಟ ಶೇ. ೬೧ ಕ್ಕಿಂತ ಹೆಚ್ಚಿದೆ, ವಯಸ್ಸು ೪೫), ಕೊಡಗು

೨ ಔ ೧. ಮನಸ್ಸು ಶಾಂತವಾಗುವುದು ಮತ್ತು ಆನಂದದ ಅರಿವಾಗುವುದು ಮತ್ತು ನನ್ನಲ್ಲಿನ ಬದಲಾವಣೆ ಇತರರಿಗೂ ಅರಿವಾಗುವುದು : ‘ನಾನು ಸನಾತನದ ಸಂಪರ್ಕಕ್ಕೆ ಬರುವ ಮೊದಲು ನನಗೆ ಬಹಳ ಕೋಪ ಬರುತ್ತಿತ್ತು. ನನ್ನ ಸಿಬ್ಬಂದಿಗಳು ಮತ್ತು ಸಹಕಾರಿಗಳು ನನ್ನೊಂದಿಗೆ ಸಹಜವಾಗಿ ಮಾತನಾಡುತ್ತಿರಲಿಲ್ಲ. ನಾನು ಸಾಧನೆಗೆ ಬಂದ ನಂತರ ನನಗೆ ವಿವಿಧ ಶಿಬಿರಗಳಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಅದರಲ್ಲಿ ಪ್ರಕ್ರಿಯೆ ಬಗ್ಗೆ ಮಾರ್ಗದರ್ಶನ ಸಿಕ್ಕಿತ್ತು. ಅನಂತರ ಸಂತರ ಮಾರ್ಗದರ್ಶನವೂ ಸಿಕ್ಕಿತು. ಅನಂತರ ನನ್ನ ಸಿಟ್ಟು ಕಡಿಮೆಯಾಗತೊಡಗಿತು ಮತ್ತು ಮನಸ್ಸು ಶಾಂತವಾಯಿತು. ನನಗೆ ಆನಂದದ ಅರಿವಾಗತೊಡಗಿತು. ನಾನು ಸಿಬ್ಬಂದಿಗಳನ್ನು ನನ್ನ ಮಕ್ಕಳಂತೆ ನೋಡತೊಡಗಿದೆ. ನನ್ನನ್ನು ಮೊದಲಿನಿಂದಲೂ ನೋಡಿರುವವರು ‘ನೀವು ಮೊದಲಿನ ಕೃಷ್ಣಮೂರ್ತಿಯವರೇ ಹೌದಲ್ಲ’ ಎಂದು ಆಶ್ಚರ್ಯದಿಂದ ಕೇಳುತ್ತಾರೆ. ನನ್ನಲ್ಲಾದ ಬದಲಾವಣೆ ಎಲ್ಲರಿಗೂ ಗಮನಕ್ಕೆ ಬರತೊಡಗಿತು. (ಶ್ರೀ. ಕೃಷ್ಣಮೂರ್ತಿ ಅಣ್ಣ ಇವರು ಮೊದಲಿಗಿಂತ ತುಂಬ ಹಸನ್ಮುಖರಾಗಿದ್ದಾರೆ. ಅವರ ಆಧ್ಯಾತ್ಮಿಕ ಮಟ್ಟವೂ ಶೇ. ೬೧ ಕ್ಕಿಂತ ಹೆಚ್ಚಿದೆ.)

೨ ಅಂ. ಶ್ರೀ. ಜಯರಾಮ (ಉದ್ಯಮಿ, ಆಧ್ಯಾತ್ಮಿಕ ಮಟ್ಟ ಶೇ. ೬೧ ಕ್ಕಿಂತ ಹೆಚ್ಚಿದೆ, ವಯಸ್ಸು ೬೩), ಬೆಂಗಳೂರು.

೨ ಅಂ ೧. ಪರಿಸ್ಥಿತಿ ಸ್ವೀಕರಿಸುವುದು ಮತ್ತು ಕಡಿಮೆ ಗಂಟೆ ಕೆಲಸ ಮಾಡಿಯೂ ಸಮಾಧಾನಿಯಾಗಿರುವುದು : ನಾನು ಉದ್ಯಮಿ ಯಾಗಿದ್ದೇನೆ. ನಾನು ಸನಾತನ ಸಂಸ್ಥೆಯ ಸಂಪರ್ಕಕ್ಕೆ ಬಂದ ನಂತರ ಸಾಧನೆಯನ್ನು ಮಾಡತೊಡಗಿದೆ. ನಾನು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ ನಡೆಸಿದ ನಂತರ ನನಗೆ ಪರಿಸ್ಥಿತಿ ಸ್ವೀಕರಿಸಲು ಸಾಧ್ಯವಾಯಿತು. ನಾನು ಮೊದಲು ೧೨ ಗಂಟೆ ಕೆಲಸ ಮಾಡಿಯೂ ನನಗೆ ಸಮಾಧಾನ ಸಿಗುತ್ತಿರಲಿಲ್ಲ. ಈಗ ನಾನು ೬ ಗಂಟೆ ಕೆಲಸ ಮಾಡಿಯೂ ಸಮಾಧಾನವಿದೆ.

೨ ಅಃ ಶ್ರೀ. ಸತೀಶ್ಚಂದ್ರ (ಲೆಕ್ಕ ಪರಿಶೋಧಕರು, ಆಧ್ಯಾತ್ಮಿಕ ಮಟ್ಟ ಶೇ. ೬೧ ಕ್ಕಿಂತ ಹೆಚ್ಚಿದೆ, ವಯಸ್ಸು ೬೨), ಮಂಗಳೂರು

೨ ಅಃ ೧. ಮನಸ್ಸಿನಲ್ಲಿರುವ ಮಾಯೆಯ ವಿಚಾರ ಕಡಿಮೆಯಾಗುವುದು ಮತ್ತು ವೈಯಕ್ತಿಕ ಮತ್ತು ವ್ಯಾವಹಾರಿಕ ಜೀವನದಲ್ಲಿ ಸಕಾರಾತ್ಮಕ ಮತ್ತು ಉತ್ತಮ ಬದಲಾವಣೆ ಆಗುವುದು : ನಾನು ಚಾರ್ಟರ್ಡ ಅಕೌಂಟೆಂಟ್‌ (ಲೆಕ್ಕಪರಿಶೋಧಕ) ಆಗಿದ್ದೇನೆ ನಾನು ಸತ್ಸಂಗಕ್ಕೆ ಹೋಗಲು ಪ್ರಾರಂಭಿಸಿದ ನಂತರ ನಿಯಮಿತವಾಗಿ ನಾಮಜಪ ಮಾಡಿದೆ ಮತ್ತು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡಿದೆ. ಇದರಿಂದ ನನ್ನ ಮನಸ್ಸು ಶುದ್ಧವಾಯಿತು. ನಾನು ಪ್ರತಿವಾರ ಸತ್ಸಂಗಕ್ಕೆ ಹೋದುದರಿಂದ ನನ್ನಲ್ಲಿ ಸಕಾರಾತ್ಮಕತೆ ಹೆಚ್ಚಾಯಿತು. ನನ್ನ ಮನಸ್ಸಿನಲ್ಲಿ ಬರುವ ಮಾಯೆಯ ವಿಚಾರಗಳು ಕಡಿಮೆಯಾದವು. ನನ್ನ ವೈಯಕ್ತಿಕ ಮತ್ತು ವ್ಯಾವಹಾರಿಕ ಜೀವನದಲ್ಲಿ ಸಕಾರಾತ್ಮಕ ಮತ್ತು ಉತ್ತಮ ಬದಲಾವಣೆಯಾಯಿತು ಮತ್ತು ನನ್ನ ಆಧ್ಯಾತ್ಮಿಕ ಉನ್ನತಿಯಾಯಿತು.

೨ ಕ. ಓರ್ವ ಸಾಧಕಿ, ಕರ್ನಾಟಕ

೨ಕ1. ಪತಿಯ ನಿಧನದ ನಂತರ ಸಾಧಕಿಯು ತಖ್ತೆಯಲ್ಲಿ ತನ್ನ ತಪ್ಪುಗಳನ್ನು ಬರೆಯುವುದು : ಓರ್ವ ಸಾಧಕಿಯ ಯಜಮಾನರು ತೀರಿಕೊಂಡರು. ಅವರು ಯಜಮಾನರ ಪಾರ್ಥಿವದ ಮುಂದೆ ಕುಳಿತಿದ್ದರು. ಆಗ ಸಾಧಕಿಯ ಮನಸ್ಸಿನಲ್ಲಿ ತುಂಬ ವಿಚಾರಗಳು ಬರುತ್ತಿತ್ತು. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಲ್ಲಿ ಮನಸ್ಸಿನಲ್ಲಿ ಬರುವ ವಿಚಾರಗಳನ್ನು ಕಡಿಮೆ ಮಾಡಲು ಯಾರ ಜೊತೆಗಾದರೂ ಮಾತನಾಡುವ ಅಥವಾ ವಿಚಾರ ಬರೆಯುವ ಪ್ರಯತ್ನ ಮಾಡಲು ಹೇಳಿದ್ದರು. ಆ ಸಮಯದಲ್ಲಿ ಮನಸ್ಸಿನ ವಿಚಾರ ಯಾರಿಗೂ ಹೇಳಲು ಆಗುತ್ತಿರಲಿಲ್ಲ. ಆಗ ಅವರು ವಿಶ್ರಾಂತಿ ಪಡೆಯುತ್ತೇನೆ ಎಂದು ಹೇಳಿ ಹೋದರು ಮತ್ತು ನಂತರ ಗುರುದೇವರಿಗೆ ಪ್ರಾರ್ಥನೆ ಮಾಡಿದರು ‘ಮನಸ್ಸಿನಲ್ಲಿ ತುಂಬ ವಿಚಾರ ಬರುತ್ತಿದೆ, ಅದನ್ನು ಬರೆದು ಮನಸ್ಸನ್ನು ಖಾಲಿ ಮಾಡಲಿಕ್ಕಿದೆ.’ ಆಗ ಅವರಿಗೆ ಒಂದು ಕಾಗದ ಸಿಕ್ಕಿತು ಮತ್ತು ಸಣ್ಣ ಹುಡುಗಿಗೆ ಒಂದು ಪೆನ್ಸಿಲ್‌ ತರಲು ಹೇಳಿದರು. ಅದರಲ್ಲಿ ಮನಸ್ಸಿನಲ್ಲಿ ಬರುವ ಎಲ್ಲ ವಿಚಾರಗಳನ್ನು ಬರೆದು ಸ್ವಯಂಸೂಚನೆ ನೀಡಿದರು. ಆಗ ಅವರ ಮನಸ್ಸು ಶಾಂತ ಮತ್ತು ಸ್ಥಿರವಾಯಿತು. ಆಗ ಉದ್ಭವಿಸಿದ ಪರಿಸ್ಥಿತಿ ಸ್ವೀಕರಿಸಲು ಆಯಿತು. ಪ್ರಕ್ರಿಯೆ ಯೋಗ್ಯವಾಗಿ ಮಾಡಿದರೆ ಯಾವುದೇ ಪರಿಸ್ಥಿತಿ ಬಂದರೂ ಅದನ್ನು ನಾವು ಸ್ವೀಕರಿಸಬಹುದು ಎಂಬುದು ಕಲಿಯಲು ಸಿಕ್ಕಿತು ಮತ್ತು ಈ ಪ್ರಕ್ರಿಯೆಯಿಂದ ತುಂಬ ಲಾಭವಾಯಿತು.

– ಪೂ. ರಮಾನಂದ ಗೌಡ, ಧರ್ಮಪ್ರಸಾರಕರು, ಸನಾತನ ಸಂಸ್ಥೆ (೨೭.೨.೨೦೨೪)