ಬಿಹಾರದ ಬೇತಿಯಾದ ಮಹಾರಾಜರಾದ ಹರೇಂದ್ರ ಕಿಶೋರ ಸಿಂಹ ಬಹಾದೂರ್ ಇವರು ೨೬ ಮಾರ್ಚ್ ೧೮೯೩ ರಂದು ಅಕಾಲಿಕ ಮರಣ ಹೊಂದಿದರು. ಅನಂತರ ೨೪ ಮಾರ್ಚ್ ೧೮೯೬ ರಂದು ಅವರ ವಿಧವಾ ಪತ್ನಿಯ ನಿಧನವಾಯಿತು. ೧೮೯೭ ರಲ್ಲಿ ‘ಎರಡನೇ ಮಹಾರಾಣಿ ಜಾನಕಿ ಕುಂವರ ಇವರು ತಮ್ಮ ಆಸ್ತಿಯ ರಕ್ಷಣೆ ಮಾಡಲು ಸಮರ್ಥರಿಲ್ಲ’, ಎಂದು ಹೇಳುತ್ತಾ ‘ಈಸ್ಟ್ ಇಂಡಿಯಾ ಕಂಪನಿ’ ಅವರ ಆಸ್ತಿಯ ರಕ್ಷಣೆಗಾಗಿ ‘ಕೋರ್ಟ್ ಆಫ್ ವಾರ್ಡ್’ ಕಾನೂನು ಜಾರಿಗೆ ತಂದಿತು. ೧೫೬೦ ರಿಂದ ೧೬೬೦ ರ ವರೆಗೆ ಇಂಗ್ಲೆಂಡ್‌ನಲ್ಲಿ ಅಸ್ತಿತ್ವದಲ್ಲಿದ್ದ ‘ಕೋರ್ಟ್ ಆಫ್ ವಾರ್ಡ್ಸ್ ಯಾಂಡ್ ಲಿವ್ಹರಿಜ್’ನ ಆಧಾರದ ಮೇಲೆ ‘ಈಸ್ಟ್ ಇಂಡಿಯಾ ಕಂಪನಿ’ಯು ಭಾರತದಲ್ಲಿ ‘ಕೋರ್ಟ್ ಆಫ್ ವಾರ್ಡ್ಸ್’ ಸ್ಥಾಪಿಸಿತ್ತು. ವಾರಸುದಾರರು ಇಲ್ಲದಿದ್ದರೆ ಅಥವಾ ಅವರು ಅಪ್ರಾಪ್ತವಯಸ್ಸಿನವರಾಗಿದ್ದರೆ’ ವಾರಸುದಾರರ ಆಸ್ತಿಪಾಸ್ತಿಯ ರಕ್ಷಣೆ ಮಾಡುವುದು, ಈ ಕಾನೂನಿನ ಉದ್ದೇಶವಾಗಿತ್ತು; ಆದರೆ ಈ ಕಾನೂನಿನ ಬಲದಿಂದ ಬ್ರಿಟಿಷ್‌ರು ಬೇತಿಯಾ ರಾಜನ ಭೂಮಿಯನ್ನು ವಶಪಡಿಸಿಕೊಂಡರು.
ಆಶ್ಚರ್ಯದ ಸಂಗತಿಯೆಂದರೆ ಸ್ವಾತಂತ್ರ್ಯದ ನಂತರವೂ ಸಾಮ್ರಾಜ್ಯದಲ್ಲಿ ‘ಕೋರ್ಟ್ ಆಫ್ ವಾರ್ಡ್’ ಕಾನೂನು ಜಾರಿಯಲ್ಲಿದೆ. ಈ ಕಾನೂನಿಗನುಸಾರ ಬೇತಿಯಾ ಸಾಮ್ರಾಜ್ಯದ ಭೂಮಿಯ ನಿರ್ವಹಣೆಯನ್ನು ಪ್ರತಿವರ್ಷ ಹರಾಜು ಮಾಡಲಾಗುತ್ತದೆ. ಈ ಕಾನೂನಿನ ಮೂಲಕ ಆಂಗ್ಲರು ಬೇತಿಯಾ ಸಾಮ್ರಾಜ್ಯದ ಭೂಮಿಯನ್ನು ವಶಪಡಿಸಿಕೊಂಡು ರೈತರಿಗೆ ಕೃಷಿ ಮಾಡಲು ಒಪ್ಪಿಸಿದ್ದರು. ನಂತರ ಚಂಪಾರಣ ಸತ್ಯಾಗ್ರಹದ ಸಮಯದಲ್ಲಿ ಗಾಂಧೀಜಿಯವರು ರೈತರನ್ನು ಮುಕ್ತ ಗೊಳಿಸಿದರು; ಆದರೆ ದುರ್ದೈವದಿಂದ ಈ ಕಾನೂನು ಇಂದಿಗೂ ಬೇತಿಯಾದಲ್ಲಿ ಮುಂದುವರಿದಿದೆ. ಕೃಷಿಭೂಮಿಯನ್ನು ರೈತರು ಪ್ರತಿವರ್ಷ ಹರಾಜಿನಲ್ಲಿ ಪಡೆಯಬೇಕಾಗುತ್ತದೆ. ಅನೇಕ ಬಾರಿ ಅವರ ಕೃಷಿಭೂಮಿಯನ್ನು ಹೆಚ್ಚು ಬೆಲೆ ಹೇಳಿ ಇತರರು ವಶಪಡಿಸಿಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರು ನಷ್ಟ ಅನುಭವಿಸಬೇಕಾಗುತ್ತ್ತಿದೆ.
೧. ಬೇತಿಯಾ ಸಾಮ್ರಾಜ್ಯದ ದೇವಸ್ಥಾನಗಳ ದುರವಸ್ಥೆ
ಬೇತಿಯಾ ಸಾಮ್ರಾಜ್ಯದ ಅನೇಕ ದೇವಸ್ಥಾನಗಳು ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಿವೆ. ಅವುಗಳಲ್ಲಿ ಕೆಲವು ದೇವಸ್ಥಾನಗಳು ಕುಸಿಯುವ ಸ್ಥಿತಿಯಲ್ಲಿವೆ. ಸ್ಥಳೀಯರ ಹೇಳಿಕೆಗನುಸಾರ ಯಾವಾಗ ಮಹಾರಾಜರು ಅಥವಾ ರಾಣಿ ದಕ್ಷಿಣ ದಿಕ್ಕಿಗೆ ಹೋಗುತ್ತಿದ್ದರೋ, ಆಗ ಅವರು ಜಗದೀಶಪುರದಲ್ಲಿ ಕಟ್ಟಿದ ಶಿವಮಂದಿರದಲ್ಲಿ ಉಳಿದುಕೊಳ್ಳುತ್ತಿದ್ದರು ಮತ್ತು ಪ್ರಾರ್ಥನೆ ಮಾಡಿದ ನಂತರವೇ ಮುಂದಿನ ಪ್ರವಾಸ ಮುಂದುವರೆಸುತ್ತಿದ್ದರು ಹಿಂದಿರುಗಿ ಬರುವಾಗಲೂ ಅವರು ದೇವಸ್ಥಾನದಲ್ಲಿ ಪೂಜೆಯನ್ನು ಮಾಡುತ್ತಿದ್ದರು ಎಂದು ತಮ್ಮ ಪೂರ್ವಜರು ಹೇಳುತ್ತಿದ್ದರೆಂದು ತಿಳಿಸಿದರು; ಆದರೆ ಈ ದೇವಸ್ಥಾನವು ಈಗ ಭಗ್ನಾವಸ್ಥೆಯಲ್ಲಿದೆ. ಕೆಲವು ವರ್ಷಗಳ ಹಿಂದೆ ದೇವಸ್ಥಾನದ ಆವರಣದ ನವೀಕರಣಕ್ಕಾಗಿ ಸ್ಥಳೀಯ ಜನರು ನೇತೃತ್ವ ವಹಿಸಿದ್ದರು. ಉತ್ತರವಾಹಿನಿ ಶಿವಮಂದಿರದ ‘ಪ್ಲಾಸ್ಟರ್’ ಅನೇಕ ಸ್ಥಳಗಳಲ್ಲಿ ಕುಸಿದಿದೆ ಮತ್ತು ಅನೇಕ ಸ್ಥಳಗಳಲ್ಲಿ ನೆಲಹಾಸುಗಳು (ಟೈಲ್ಸ) ಕಿತ್ತು ಹೋಗಿವೆ. ವಿಧಾನಸಭೆಯ ಚುನಾವಣೆಯ ಕಾಲಾವಧಿಯಲ್ಲಿ ಮಾರುಕಟ್ಟೆ ಸಮಿತಿಯ ಪರಿಸರವು ಚುನಾವಣೆಯ ಕೆಲಸದ ನಿಮಿತ್ತ ಬಳಕೆಯಾಗಲಿತ್ತು. ಆದುದರಿಂದ ತರಕಾರಿ ಮಾರುಕಟ್ಟೆಯಾಗಿದ್ದ ಐತಿಹಾಸಿಕ ಹರಿವಾಟಿಕಾವನ್ನು ಶಿವ ದೇವಸ್ಥಾನದ ಪರಿಸರಕ್ಕೆ ಸ್ಥಳಾಂತರಿಸಲಾಯಿತು. ‘ಚುನಾವಣೆ ಮುಗಿದ ನಂತರ ಈ ಮಾರುಕಟ್ಟೆಯನ್ನು ಹಳೆಯ ಜಾಗಕ್ಕೆ ಸ್ಥಳಾಂತರಿಸಲಾಗುವುದು’, ಎಂಬ ಆಶ್ವಾಸನೆಯನ್ನು ದೇವಸ್ಥಾನದ ವ್ಯವಸ್ಥಾಪನೆ ನೀಡಿತ್ತು; ಆದರೆ ವಿಧಾನಸಭೆ ಚುನಾವಣೆಯಾಗಿ ಅನೇಕ ತಿಂಗಳುಗಳು ಕಳೆದರೂ ತರಕಾರಿ ಮಾರುಕಟ್ಟೆ ಸ್ಥಳಾಂತರಗೊಂಡಿಲ್ಲ.
೨. ರಾಜಮನೆತನದ ದೇವಸ್ಥಾನಗಳಿಗಾಗಿ ಪ್ರತಿದಿನ ಕೇವಲ ೧೦ ರೂಪಾಯಿಗಳ ಸಹಾಯ
ಬೇತಿಯಾ ಸಾಮ್ರಾಜ್ಯದ ಮಹಾರಾಜರು ಜಿಲ್ಲೆಯಲ್ಲಿ ಮತ್ತು ಜಿಲ್ಲೆಯ ಹೊರಗೆ ವಿವಿಧ ದೇವಿದೇವತೆಗಳ ೫೬ ಭವ್ಯ ದೇವಸ್ಥಾನಗಳನ್ನು ನಿರ್ಮಿಸಿದ್ದರು. ಇಂದು ಪರಿಸ್ಥಿತಿ ಹೇಗಿದೆ ಎಂದರೆ, ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಈ ದೇವಸ್ಥಾನಗಳ ನಿರ್ವಹಣೆ ಅನಿಯಂತ್ರಿತವಾಗಿದ್ದು ಇಲ್ಲಿನ ಅರ್ಚಕರನ್ನು ದುರ್ಲಕ್ಷಿಸಲಾಗುತ್ತಿದೆ.
ವಿವಿಧ ದೇವಸ್ಥಾನಗಳಲ್ಲಿ ಸ್ಥಾಪಿಸಲಾದ ದೇವತೆಗಳಿಗೆ ನೈವೇದ್ಯವನ್ನು ತೋರಿಸಲು ಪ್ರತಿದಿನ ಕೇವಲ ೧೦ ರೂಪಾಯಿಗಳ ಸಹಾಯ ಸಿಗುತ್ತದೆ. ದೇವಸ್ಥಾನದ ಅರ್ಚಕರಿಗೆ ೯೦೦ ರೂಪಾಯಿಗಳು ಮತ್ತು ಸಹಾಯಕ ಅರ್ಚಕರಿಗೆ ೬೦೦ ರೂಪಾಯಿಗಳ ಮಾಸಿಕ ವೇತನ ಸಿಗುತ್ತದೆ. ಸ್ಥಳೀಯ ಅರ್ಚಕರ ಹೇಳಿಕೆಗನುಸಾರ, ಇಂದು ಒಂದು ಲಾಡುವಿನ ಬೆಲೆ ಕನಿಷ್ಠ ೫ ರೂಪಾಯಿ ಇದೆ, ಆದರೆ ಪ್ರತಿದಿನ ನೈವೇದ್ಯಕ್ಕಾಗಿ ೧೦ ರೂಪಾಯಿಗಳು ಸಿಗುತ್ತವೆ. ಇದರಲ್ಲಿ ವಿಧಿವತ್ತಾಗಿ ಪೂಜೆ ಮಾಡುವುದು ಕಠಿಣವಾಗುತ್ತದೆ. ಆದುದರಿಂದ ಪೂಜೆಯ ಸಮಯದಲ್ಲಿ ಮನಸ್ಸಿಗೆ ದುಃಖವಾಗುತ್ತದೆ. ಅನೇಕ ಬಾರಿ ಭಕ್ತರ ಅರ್ಪಣೆಯಿಂದ ದೇವರಿಗೆ ಪ್ರಸಾದವನ್ನು ತೋರಿಸಲಾಗುತ್ತದೆ. ಹಿಂದೆ ಪ್ರಸಾದಕ್ಕಾಗಿ ಇದಕ್ಕಿಂತಲೂ ಕಡಿಮೆ ಹಣ ವನ್ನು ನೀಡಲಾಗುತ್ತಿತ್ತು. ೨೦೧೩ ರಲ್ಲಿ ಅದನ್ನು ಪ್ರತಿ ತಿಂಗಳು ೩೦೦ ರೂಪಾಯಿಗಳಷ್ಟು ಮಾಡಲಾಯಿತು.
೩. ಬಿಹಾರದಲ್ಲಿ ನಮಾಜ್ ಓದುವವರಿಗೆ ೧೫ ಸಾವಿರ ರೂಪಾಯಿಗಳು, ಮತ್ತು ಹಿಂದೂ ಅರ್ಚಕರ ಕಡೆಗೆ ಮಾತ್ರ ದುರ್ಲಕ್ಷ !
ಅರ್ಚಕರು ಪ್ರಸಾದದ ಮೊತ್ತವನ್ನು ಹೆಚ್ಚಿಸಲು ಸರಕಾರಕ್ಕೆ ಅನೇಕ ಬಾರಿ ವಿನಂತಿಸಿಕೊಂಡಿದ್ದಾರೆ; ಆದರೆ ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ನಿರ್ದಿಷ್ಟ ಕ್ರಮಗಳನ್ನು ಕೈಗೊಂಡಿಲ್ಲ. ಇನ್ನೊಂದೆಡೆ ಬಿಹಾರದಲ್ಲಿ ನಮಾಜ್ ಓದುವವರಿಗೆ ೧೫ ಸಾವಿರ ರೂಪಾಯಿಗಳು ಮತ್ತು ಅಜಾನ್ (ಮುಸಲ್ಮಾನರನ್ನು ದೊಡ್ಡ ಧ್ವನಿಯಲ್ಲಿ ನಮಾಜ್‌ಗಾಗಿ ಆಮಂತ್ರಿಸುವುದು) ನೀಡುವವರಿಗೆ ೧೦ ಸಾವಿರ ರೂಪಾಯಿಗಳ ವೇತನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ. ಸ್ಥಳೀಯ ಮೂಲಗಳ ಪ್ರಕಾರ ೫೬ ದೇವಸ್ಥಾನಗಳಿಂದ ಸುಮಾರು ೩ ಕೋಟಿ ರೂಪಾಯಿಗಳು ಸಂಗ್ರಹವಾಗುತ್ತವೆ; ಆದರೆ ಇದರಿಂದ ದೇವಸ್ಥಾನಗಳ ಜೀರ್ಣೋದ್ಧಾರವನ್ನು ಮಾಡಲಾಗುವುದಿಲ್ಲ. ಸ್ಥಳೀಯರು ಅರ್ಪಣೆಯನ್ನು ಸಂಗ್ರಹಿಸಿ ದೇವಸ್ಥಾನಗಳ ನಿರ್ವಹಣೆ ಮಾಡುತ್ತಾರೆ. ಅನೇಕ ದೇವಸ್ಥಾನಗಳ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಮಾರಾಟ ಮಾಡಲಾಗಿದೆ. ಎಲ್ಲ ದೇವಸ್ಥಾನಗಳಿಂದ ಪ್ರತಿ ತಿಂಗಳು ತೆರಿಗೆಯನ್ನು ವಸೂಲಿ ಮಾಡಲಾಗುತ್ತದೆ.
– ಶ್ರೀ. ವಿಶ್ವನಾಥ ಕುಲಕರ್ಣಿ, ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ. (೯.೧.೨೦೨೪)